ಭಾರತದಲ್ಲಿ ಎಲ್ಲ ಭಾಷೆಯ ಸಿನಿಮಾ(Movie)ಗಳನ್ನು ನೋಡುತ್ತಾರೆ. ಅದರಲ್ಲೂ ಕೆಲ ಹಾಲಿವುಡ್(Hollywood) ಸಿನಿಮಾಗಳಂತೂ ಭಾರತೀಯರು ಮನಸ್ಸಿನಲ್ಲಿ ಅಚ್ಚಳಿದೆ ಕೂತಿದೆ. ಅದರಲ್ಲಿ ಹೆಸರಾಂತ ಮಾರ್ವೆಲ್ಸ್(Marvels)ನ ಸ್ಪೈಡರ್ ಮ್ಯಾನ್(Spider Man) ಸಿನಿಮಾಗಳು ಎಂದರೆ ನಮ್ಮ ಜನರಿಗೂ ಅಚ್ಚುಮೆಚ್ಚು. ಇದೊಂದು ಕಾಲ್ಪನಿಕ ಪಾತ್ರವಾದರೂ ಜನರಿಗೆ ಸಖತ್ ಇಷ್ಟ. ಇದೀಗ ಈ ಸ್ಪೈಡರ್ ಮ್ಯಾನ್ ಹೊಸ ಪಾರ್ಟ್ ಬಿಡುಗಡೆಯಾಗಿದೆ. ಆದರೆ ಈ ಸಿನಿಮಾ ಭಾರತದಲ್ಲಿ ಡಿಸೆಂಬರ್ 16ರಂದು ಬಿಡುಗಡೆಯಾಗಲಿದೆ. ಆದರೆ ರಿಲೀಸ್(Release)ಗೂ ಮುನ್ನವೇ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’(Spider Man No Way Home) ಹೊಸ ದಾಖಲೆಯೊಂದನ್ನು ಬರೆದಿದೆ. ಅತಿ ಹೆಚ್ಚು ಪ್ರೀ ಬುಕಿಂಗ್(Pre Booking) ಆದ ಹಾಲಿವುಡ್(Hollywood) ಸಿನಿಮಾ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಈ ಸಿನಿಮಾ ಪಡೆದುಕೊಂಡಿದೆ. ಟಿಕೆಟ್ ಮುಂಗಡ ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಬಹುತೇಕ ಕಡೆ ಟಿಕೆಟ್ ಸೋಲ್ಡ್ಔಟ್(Sold Out) ಆಗಿದೆ. ಇದಕ್ಕೆ ಕಾರಣವೂ ಇದೆ. ಈ ಹಿಂದೆ ಬಿಡುಗಡೆಯಾಗಿದ್ದ ‘ಸ್ಪೈಡರ್ ಮ್ಯಾನ್’ ಸಿನಿಮಾಗಳ ಎಲ್ಲ ವಿಲನ್(Villain)ಗಳ ಪಾತ್ರವೂ, ಈ ಸಿನಿಮಾದಲ್ಲಿ ಮತ್ತೆ ವಾಪಸ್ ಬರಲಿವೆ. ಹೀಗಾಗಿ ಮಾರ್ವೆಲ್ಸ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಭಾರತದಲ್ಲೂ ಮಾರ್ವೆಲ್ಸ್ ಸಿನಿಮಾಗಳಿಗೆ ಹೆಚ್ಚಿನ ಫ್ಯಾನ್ಸ್ ಇದ್ದಾರೆ. ಇದೀಗ ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್’ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.
24 ಗಂಟೆಯಲ್ಲಿ 5 ಲಕ್ಷ ಟಿಕೆಟ್ ಸೋಲ್ಡ್ ಔಟ್!
ಡಿಸೆಂಬರ್ 16 ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಮೊನ್ನೆಯಿಂದಲೇ ಸಿನಿಮಾದ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಈಗಾಗಲೇ ಹಲವು ಶೋಗಳು ಬುಕ್ ಆಗಿಬಿಟ್ಟಿವೆ. ಅದರಲ್ಲಿಯೂ 3ಡಿ, ಐಮ್ಯಾಕ್ಸ್ 3ಡಿ, 4ಎಕ್ಸ್ 3ಡಿ ತಂತ್ರಜ್ಞಾನದಲ್ಲಿ ಸಿನಿಮಾ ವೀಕ್ಷಿಸಲು ಹೆಚ್ಚಿನ ಜನ ಬುಕಿಂಗ್ ಮಾಡಿಕೊಂಡಿದ್ದಾರೆ. 2ಡಿಗೆ ಬುಕಿಂಗ್ ಕಡಿಮೆ ಆಗಿದೆ.ಕೇವಲ 24 ಗಂಟೆಯಲ್ಲಿ 'ಸ್ಪೈಡರ್ಮ್ಯಾನ್; ನೋ ವೇ ಹೋಮ್' ಸಿನಿಮಾದ 5 ಲಕ್ಷಕ್ಕೂ ಹೆಚ್ಚು ಟಿಕೆಟ್ಗಳು ಮಾರಾಟವಾಗಿವೆ. 24 ಗಂಟೆಯಲ್ಲಿ ಮಾರಾಟವಾಗಿರುವ ಟಿಕೆಟ್ನಿಂದ ಸುಮಾರು 10 ಕೋಟಿ ಹಣ ಕಲೆಕ್ಷನ್ ಆಗಿದೆ.
ಒಂದೇ ಸಿನಿಮಾದಲ್ಲಿ ಎಲ್ಲ ವಿಲನ್ಗಳ ಆ್ಯಕ್ಷನ್ !
‘ಸ್ಪೈಡರ್ಮ್ಯಾನ್ ನೋ ವೇ ಹೋಮ್' ಸಿನಿಮಾವು ಟಾಮ್ ಹಾಲೆಂಡ್ನ ಕೊನೆಯ ಸ್ಪೈಡರ್ಮ್ಯಾನ್ ಸಿನಿಮಾ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ 'ಸ್ಪೈಡರ್ಮ್ಯಾನ್' ಸಿನಿಮಾ ಸರಣಿಯಲ್ಲಿ ಈವರೆಗೆ ಬಂದಿದ್ದ ಎಲ್ಲ ವಿಲನ್ಗಳು ಬರಲಿದ್ದಾರೆ. ಈ ಹಿಂದೆ 'ಸ್ಪೈಡರ್ಮ್ಯಾನ್' ಆಗಿ ನಟಿಸಿದ್ದ ಎಲ್ಲ ನಟರೂ ಮತ್ತೆ 'ಸ್ಪೈಡರ್ಮ್ಯಾನ್' ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಡಾಕ್ಟರ್ ಸ್ಟ್ರೇಂಜ್ ಪಾತ್ರ ಸಹ ಇರಲಿದೆ. ಸಿನೆಪೊಲೀಸ್ ಸೇರಿದಂತೆ ಕೆಲವು ಸಿನಿಮಾ ಸಂಸ್ಥೆಗಳು ಟಿಕೆಟ್ ಬುಕಿಂಗ್ ಇನ್ನೂ ತೆರೆದಿಲ್ಲ ಹಾಗಾಗಿ ಇನ್ನಷ್ಟು ಟಿಕೆಟ್ ಮಾರಾಟವಾಗುವ ಸಾಧ್ಯತೆ ಇದೆ.
ಇದನ್ನು ಓದಿ : ಕತ್ರಿನಾ ಮತ್ತು ವಿಕ್ಕಿ ಪ್ರಿ-ವೆಡ್ಡಿಂಗ್ ಫೋಟೋ ಶೂಟ್ನಲ್ಲಿ ಏನೇನಿದೆ ಗೊತ್ತೇ?
ದಾಖಲೆ ಬರೆದಿದ್ದ ‘ಅವೆಂಜರ್ಸ್ ಎಂಡ್ ಗೇಮ್’
2019 ರಲ್ಲಿ ಬಿಡುಗಡೆ ಆಗಿದ್ದ ಮಾರ್ವೆಲ್ನ 'ಅವೆಂಜರ್ಸ್ ಎಂಡ್ ಗೇಮ್' ಸಿನಿಮಾ ಭಾರತದಲ್ಲಿ ಅತಿ ಹೆಚ್ಚು ಪ್ರೀ ಬುಕಿಂಗ್ ಆಗಿದ್ದ ಹಾಲಿವುಡ್ ಸಿನಿಮಾ ಎನಿಸಿಕೊಂಡಿತ್ತು. ಅದರ ಬಳಿಕ ಇದೀಗ 'ಸ್ಪೈಡರ್ಮ್ಯಾನ್ ನೋ ವೇ ಹೋಮ್' ಸಿನಿಮಾ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.2019 ರಲ್ಲಿ ಬಿಡುಗಡೆ ಆಗಿದ್ದ ಮಾರ್ವೆಲ್ನ 'ಅವೇಂಜರ್ಸ್; ಎಂಡ್ ಗೇಮ್' ಸಿನಿಮಾದ 14 ಲಕ್ಷ ಟಿಕೆಟ್ಗಳು ಮೊದಲ 24 ಗಂಟೆಯಲ್ಲಿ ಮಾರಾಟವಾತ್ತು. ಪಿವಿಆರ್ ಒಂದೇ 'ಸ್ಪೈಡರ್ಮ್ಯಾನ್, ನೋ ವೇ ಹೋಮ್' ಸಿನಿಮಾದ 1.60 ಲಕ್ಷ ಟಿಕೆಟ್ ಅನ್ನು ಮೊದಲ 24 ಗಂಟೆಯಲ್ಲಿ ಮಾರಾಟ ಮಾಡಿದೆ.
ಇದನ್ನು ಓದಿ : ಅಬ್ಬಬ್ಬಾ.. ನಟ ರಣವೀರ್ ಸಿಂಗ್ ಸೆಕ್ಸಿ ಶರ್ಟ್ಲೆಸ್ ಫೋಟೋ ನೋಡಿ ಹೇಗಿದೆ..!
ಸಿನಿಮಾವು ಭಾರತದಲ್ಲಿ ನಾಳೆ ಬಿಡುಗಡೆ ಆಗಲಿದ್ದು, ಮೊದಲ ದಿನವೇ ಸುಮಾರು 30 ಕೋಟಿ ಹಣವನ್ನು ಈ ಸಿನಿಮಾ ಗಳಿಸಬಹುದು ಎಂಬ ಲೆಕ್ಕಾಚಾರವನ್ನು ಪರಿಣಿತರು ಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ