Spider Man: ಓ ಮೈ ಗಾಡ್​.. ಪುಷ್ಪ ಚಿತ್ರದ ಹಾಡಿಗೆ ಸ್ಪೈಡರ್​ ಮ್ಯಾನ್​ ಮಸ್ತ್​ ಡ್ಯಾನ್ಸ್​: ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಇತ್ತೀಚೆಗೆ ಈ ಚಿತ್ರದ ಹಾಡಿಗೆ ಸ್ಪೈಡರ್ ಮ್ಯಾನ್ ಹೆಜ್ಜೆ ಹಾಕಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಹೇಳಬಹುದು. ಸ್ಪೈಡರ್ ಮ್ಯಾನ್ ಎಂದ ತಕ್ಷಣ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು. ಬನ್ನಿ ಹಾಗಾದರೆ ಈ ವಿಡಿಯೋದಲ್ಲಿ ಏನಿದೆ ನೋಡೋಣ.

ಸ್ಪೈಡರ್​ ಮ್ಯಾನ್​, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ

ಸ್ಪೈಡರ್​ ಮ್ಯಾನ್​, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ

  • Share this:
ಕೆಲವು ವಾರಗಳ ಹಿಂದೆಯಷ್ಟೇ ಬಿಡುಗಡೆಯಾದ ತೆಲುಗಿನ ನಟ ಅಲ್ಲು ಅರ್ಜುನ್(Allu Arjun) ಮತ್ತು ನಟಿ ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಚಿತ್ರ ‘ಪುಷ್ಪ: ದಿ ರೈಸ್’(Pushpa The Raise) ಗಲ್ಲಾ ಪೆಟ್ಟಿಗೆಯಲ್ಲಿ ವಿಶ್ವಾದ್ಯಂತ ದೊಡ್ಡ ಮಟ್ಟದ ವ್ಯವಹಾರ ಮಾಡಿದೆ ಎಂದರೆ ತಪ್ಪಾಗುವುದಿಲ್ಲ.ಈ ಚಿತ್ರವು ಚಿತ್ರ ಮಂದಿರಗಳಲ್ಲಿ ಅಲ್ಲದೆ ಒಟಿಟಿ(OTT) ಮಾಧ್ಯಮದಲ್ಲೂ ದೊಡ್ಡ ಮಟ್ಟದ ಹೆಸರು ಮಾಡಿದೆ.ಯಾರೇ ಕೇಳಿದರೂ ಬರೀ ಈ ಚಿತ್ರದ ಬಗ್ಗೆಯೇ ಮಾತಾಡುತ್ತಿದ್ದಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ.ಈ ಚಿತ್ರ ಬಿಡುಗಡೆಯಾದ ನಾಲ್ಕನೇ ವಾರದಲ್ಲೂ ಸಹ ಹಿಂದಿ(Hindi) ಮಾತಾಡುವ ರಾಜ್ಯಗಳಲ್ಲಿ ಇನ್ನೂ ಓಡುತ್ತಿದೆ.ಬಹುತೇಕ ಚಿತ್ರವು ತೆರೆಕಂಡ ರಾಜ್ಯಗಳಲ್ಲಿ 'ಸೂಪರ್ ಹಿಟ್'(Super Hit) ಆಗಿರುವುದಂತೂ ನಿಜವಾದ ಸಂಗತಿಯಾಗಿದೆ. ಸುಕುಮಾರ್(Sukumar) ನಿರ್ದೇಶನದ ಪುಷ್ಪ ಬಹುತೇಕವಾಗಿ ಎಲ್ಲಾ ವಿಭಾಗದಲ್ಲೂ ಸೈ ಎನಿಸಿಕೊಂಡಿರುವ ಚಿತ್ರವಾಗಿ ಹೊರ ಹೊಮ್ಮಿದೆ.

ಸಖತ್ ಸೌಂಡ್ ಮಾಡುತ್ತಿದೆ ‘ಪುಷ್ಪ’ ಸಿನಿಮಾ!

ಈ ಚಿತ್ರದ ಕ್ರೇಜ್ ಬರೀ ತೆಲುಗು ಮಾತನಾಡುವ ರಾಜ್ಯಗಳಲ್ಲಿ ಅಥವಾ ದಕ್ಷಿಣ ರಾಜ್ಯಗಳಲ್ಲಿ ಮಾತ್ರವಲ್ಲದೇ, ದೇಶದ ಪ್ರತಿಯೊಂದು ಮೂಲೆ ಮೂಲೆಯಲ್ಲಿಯೂ ಇದರ ಬಗ್ಗೆ ಜನರು ಮಾತನಾಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಹಾಡಿಗೆ ಸ್ಪೈಡರ್ ಮ್ಯಾನ್ ಹೆಜ್ಜೆ ಹಾಕಿದ್ದು, ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎಂದು ಹೇಳಬಹುದು. ಸ್ಪೈಡರ್ ಮ್ಯಾನ್ ಎಂದ ತಕ್ಷಣ ನಿಮಗೆ ಒಂದು ಕ್ಷಣ ಆಶ್ಚರ್ಯವಾಗಬಹುದು. ಬನ್ನಿ ಹಾಗಾದರೆ ಈ ವಿಡಿಯೋದಲ್ಲಿ ಏನಿದೆ ನೋಡೋಣ.


ಸಾಮಿ ಹಾಡಿಗೆ ಸ್ಟೆಪ್​ ಹಾಕಿದ  ‘ಸ್ಫೈಡರ್​ ಮ್ಯಾನ್​’!

ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಚಿತ್ರದ ಹಾಡಿಗೆ ಸ್ಪೈಡರ್ ಮ್ಯಾನ್ ವೇಷ ಧರಿಸಿದ ವ್ಯಕ್ತಿಯು ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಅವರ ‘ರಾರಾ ಸಾಮಿ ಸಾಮಿ’ ಹಾಡಿಗೆ ಹೆಜ್ಜೆ ಹಾಕಿರುವುದನ್ನು ಈ ವೈರಲ್ ವಿಡಿಯೋದಲ್ಲಿ ನಾವು ಕಾಣಬಹುದಾಗಿದೆ.ಈ ವ್ಯಕ್ತಿಯು ಸ್ಪೈಡರ್ ಮ್ಯಾನ್ ವೇಷ ಧರಿಸಿದ್ದು, ಅವರ ಜೊತೆಗೆ ಸಾಂತಾ ಕ್ಲಾಸ್ ಉಡುಗೆಗಳಲ್ಲಿ ಅನೇಕ ಪ್ರೇಕ್ಷಕರು ಸೇರಿಕೊಂಡು ಹೆಜ್ಜೆ ಹಾಕಿದರು. ಈ 15 ಸೆಕೆಂಡುಗಳ ವಿಡಿಯೋ ತುಣುಕಿನಲ್ಲಿ ಒಂದು ಗೋಡೆಯ ಮೇಲೆ ಸ್ಪೈಡರ್ ಮ್ಯಾನ್ ನಿಂತುಕೊಂಡು ಹಾಡಿಗೆ ಡ್ಯಾನ್ಸ್ ಮಾಡಿದರೆ, ಪ್ರೇಕ್ಷಕರು ಕೆಳಗೆ ನಿಂತು ಡ್ಯಾನ್ಸ್ ಮಾಡಿದ್ದನ್ನು ಇಲ್ಲಿ ನೋಡಬಹುದಾಗಿದೆ.

ಇದನ್ನು ಓದಿ : ಅಲೆಲೆಲೇ...ದೇವಸ್ಥಾನದಲ್ಲೂ `ಪುಷ್ಪ’ ಸಿನಿಮಾದ ಸಾಮಿ ಸಾಮಿ ಹಾಡು.. ವಿಡಿಯೋ ಸಿಕ್ಕಾಪಟ್ಟೆ ವೈರಲ್​!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್​ ವೈರಲ್​!

ಈ ವಿಡಿಯೋವನ್ನು ಈಗಾಗಲೇ 40,000ಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದು, 3,900 ಜನರು ಇದನ್ನು ಇಷ್ಟ ಪಟ್ಟಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ಎಂದು ಹೇಳಬಹುದು. ಅಲ್ಲು ಅರ್ಜುನ್ ಅವರ ಕಿರಿಯ ಸಹೋದರ ಅಲ್ಲು ಶಿರೀಶ್ ತಮ್ಮ ಅಧಿಕೃತ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು ಅದಕ್ಕೆ "ಪುಷ್ಪಾ ಚಿತ್ರದ 'ರಾರಾ ಸಾಮಿ'ಗೆ ನೃತ್ಯ ಮಾಡುವ ಮೂಲಕ ಸ್ಪೈಡರ್ ಮ್ಯಾನ್ ತನ್ನ ಯಶಸ್ಸನ್ನು ಆಚರಿಸುತ್ತಿದ್ದಾರೆ! ಅಲ್ಲು ಅರ್ಜುನ್ ಮತ್ತು ಸ್ಪೈಡರ್ ಮ್ಯಾನ್ ಅಭಿಮಾನಿಯಾಗಿ.. ವಾಹ್! ಇದೇ ಇಂಡಿಯಾ ಬಾಸ್. ಸ್ಪೈಡರ್ ಮ್ಯಾನ್ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ಸ್ನೇಹಿತರೇ" ಎಂದು ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.

ಇದನ್ನು ಓದಿ : ಅಯ್ಯೋ ಇದೇನ್​ ಹಿಂಗಿದೆ.. ರಸ್ಮಿಕಾ ಮಾಡೋಣ ಅಂತೆ.. ಒಂದ್​ ಹೆಸ್ರು ಬರೆಯೋಕೂ ಬರಲ್ವಾ?

ಸುಕುಮಾರ್ ಅವರ ನಿರ್ದೇಶನದ ಪುಷ್ಪಾ: ದಿ ರೈಸ್ ಚಿತ್ರವು ಒಬ್ಬ ಕೂಲಿ ಕಾರ್ಮಿಕನ ಜೀವನದ ಸುತ್ತಲೂ ಹೆಣೆದ ಕಥೆಯ ಹಂದರವನ್ನು ಇದು ಹೊಂದಿದ್ದು, ವಿಶ್ವದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದು, ವಿಶೇಷವಾಗಿ ಹಿಂದಿ ಮಾತನಾಡುವ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ತುಂಬಾನೇ ಯಶಸ್ಸು ಕಾಣುತ್ತಿದೆ.
First published: