ಸಖತ್ತಾಗೆ ಸೌಂಡ್​ ಮಾಡುತ್ತಿದೆ ರಾಕಿ ಭಾಯ್ ರ‍್ಯಾಪ್ ​ಸಾಂಗ್​

KGF Song: ಕೆಜಿಎಫ್​ ಚಿತ್ರದ ಕೆಲ ಡೈಲಾಗ್​ಗಳನ್ನ ಬಳಸಿ ಅದಕ್ಕೆ ರ‍್ಯಾಪ್​ ಟಚ್​ ಕೊಟ್ಟಿರುವ ಡಿಟ್ಟೊ ತಮ್ಮ ಪದಬಳಕೆಯ ಮೂಲಕ ಮತ್ತೊಮ್ಮೆ ಕೇಳುಗರನ್ನು ಮೋಡಿ ಮಾಡಿದ್ದಾರೆ.

zahir | news18
Updated:July 13, 2019, 7:23 PM IST
ಸಖತ್ತಾಗೆ ಸೌಂಡ್​ ಮಾಡುತ್ತಿದೆ ರಾಕಿ ಭಾಯ್ ರ‍್ಯಾಪ್ ​ಸಾಂಗ್​
Rocky Bahi
zahir | news18
Updated: July 13, 2019, 7:23 PM IST
ಸ್ಯಾಂಡಲ್​ವುಡ್​ನಲ್ಲಿ​ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕಿಂಗ್ ಆಗಿ ಮೆರೆಸಿದ್ದ 'ಕೆ.ಜಿ.ಎಫ್' ಹವಾ ಇನ್ನೂ ಮುಗಿದಂತೆ ಕಾಣಿಸುತ್ತಿಲ್ಲ. ಅದ್ಭುತ ಮೇಕಿಂಗ್ ಅತ್ಯದ್ಭುತ ಮ್ಯೂಸಿಕ್ ಮೂಲಕ ಮಿಂಚಿದ್ದ 'ರಾಕಿ ಭಾಯ್' ಈಗ ಮತ್ತೆ ಬಂದಿದ್ದಾರೆ. ಅಂದರೆ 'ಕೆ.ಜಿ.ಎಫ್ 2' ರೆಡಿಯಾಯ್ತಾ ಅಂತ ಕೇಳಿದ್ರೆ ಉತ್ತರ ಇಲ್ಲ. ಆದರೆ ಈ ಬಾರಿ 'ರಾಕಿ ಭಾಯ್​'ಯನ್ನು ಕರೆ ತಂದಿರುವುದು ಕನ್ನಡದ ಯುವ ರ‍್ಯಾಪರ್ಗಳು.

ಹೌದು, 'ರಾಕಿ ಭಾಯ್' ಎನ್ನುವ ಕನ್ನಡ ರ‍್ಯಾಪ್​ ಸಾಂಗ್ ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ಸಾಕಷ್ಟು ರ‍್ಯಾಪ್​​​ ಸಾಂಗ್​ಗಳನ್ನ ಹಾಡಿರುವ ರಾಹುಲ್ ಡಿಟೋ ಅಂಡ್ ಟೀಂ ಇದೀಗ ಯಶ್​ಗಾಗಿ ಒಂದು ಹಾಡು ರಚಿಸಿದ್ದಾರೆ. 'ಕೆ.ಜಿ.ಎಫ್' ಚಿತ್ರವನ್ನು ಮತ್ತೆ ನೆನಪಿಸುವಂತಹ ಗೀತೆಯನ್ನು ಅಭಿಮಾನಿಗಳ  'ರಾಕಿ ಭಾಯ್'​ಗೆ ಸಮರ್ಪಿಸಲಾಗಿದೆ.

ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿರುವ ಈ ಗೀತೆಯನ್ನು ಬಿಡುಗಡೆ ಮಾಡಿರುವುದು ಖುದ್ದು ರಾಕಿಂಗ್ ಸ್ಟಾರ್ ಯಶ್ ಎಂಬುದು ಮತ್ತೊಂದು ವಿಶೇಷ. ಗೀತೆಯನ್ನು ನೋಡಿದ ರಾಕಿ ಭಾಯ್ ರ‍್ಯಾಪರ್ಗಳ 'ರಾಕಿ ಭಾಯ್'​ಗೆ ಬಹುಪರಾಕ್ ಅಂದಿದ್ದಾರೆ. ಅಲ್ಲದೇ ಮುಂದೆ ನೀವು ಹೊಸ ಹವಾ ಸೃಷ್ಟಿಸಲಿದ್ದೀರಾ ಎಂದು ಬೆನ್ನ ತಟ್ಟುತ್ತಿದ್ದಾರೆ.

'ಕೆಜಿಎಫ್'​ ಚಿತ್ರದ ಕೆಲ ಡೈಲಾಗ್​ಗಳನ್ನ ಬಳಸಿ ಅದಕ್ಕೆ ರ‍್ಯಾಪ್​ ಟಚ್​ ಕೊಟ್ಟಿರುವ ಡಿಟ್ಟೊ ತಮ್ಮ ಪದಬಳಕೆಯ ಮೂಲಕ ಮತ್ತೊಮ್ಮೆ ಕೇಳುಗರನ್ನು ಮೋಡಿ ಮಾಡಿದ್ದಾರೆ. ಈ ಹಿಂದೆ ರಘು ದೀಕ್ಷಿತ್ ಸಂಗೀತ ನಿರ್ದೇಶನದಲ್ಲಿ ಪದಬಳಕೆ ಮಾಡಿ ಸುದ್ದಿ ಮಾಡಿದ್ದ ರಾಹುಲ್​ ಈ ಬಾರಿ ತಮ್ಮದೇ ತಂಡದೊಂದಿಗೆ ಸದ್ದು ಮಾಡಿದ್ದಾರೆ.

ಅಂದಹಾಗೆ ಗ್ಯಾಂಗ್​ಸ್ಟರ್​ ಅಲ್ಲ ಇವನೇ ನಿಜವಾದ ಮೋನ್​ಸ್ಟರ್ ಎಂದೇಳಿರುವ ಈ 'ರಾಕಿ ಭಾಯ್'​ ಗೀತೆಯನ್ನು ಅಷ್ಟೇ ಅದ್ದೂರಿಯಾಗಿ ನಿರ್ದೇಶನ ಮಾಡಿರುವುದು ಪ್ರಖ್ಯಾತ್ ನಾರಾಯಣ್. ಹಾಗೆಯೇ ಸಮೀರ್ ಕುಲಕರ್ಣಿ ಸಂಗೀತ, ತೌಸೀಫ್ ಅವರ ಬೀಟ್ಸ್ ರಾಹುಲ್​ರ ರ‍್ಯಾಪ್​ ಸಾಂಗ್​ನ ಮಜವನ್ನು ಹೆಚ್ಚಿಸಿದೆ ಎನ್ನಬಹುದು.

ಒಟ್ಟಿನಲ್ಲಿ ಯುವ ತಂಡವೊಂದು ಮಾಡಿರುವ ವಿಭಿನ್ನ ಪ್ರಯೋಗವು ಸ್ಯಾಂಡಲ್​ವುಡ್​ನಲ್ಲಿ ಸಖತ್ತಾಗೆ ಸೌಂಡ್​ ಮಾಡುತ್ತಿದ್ದು, ಇಂತಹ ಪ್ರತಿಭೆಗಳಿಗೆ ಸರಿಯಾದ ಅವಕಾಶ ಸಿಕ್ಕರೆ ಮುಂದೊಂದು ಕನ್ನಡದಲ್ಲೂ 'ಗಲ್ಲಿ ಬಾಯ್'​ಯಂತಹ ಸಿನಿಮಾಗಳು ಮೂಡಿ ಬರಲಿವೆ ಎಂಬ ಮಾತುಗಳು ಕೇಳಿ ಬಂದಿವೆ.
First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...