• Home
  • »
  • News
  • »
  • entertainment
  • »
  • HBD Rishab Shetty: ರಿಷಭ್​ ಶೆಟ್ಟಿ ಹುಟ್ಟುಹಬ್ಬಕ್ಕೆ ರಿಲೀಸ್​ ಆಯ್ತು ವಿಶೇಷ ಕಾಮನ್​ ಡಿಪಿ..!

HBD Rishab Shetty: ರಿಷಭ್​ ಶೆಟ್ಟಿ ಹುಟ್ಟುಹಬ್ಬಕ್ಕೆ ರಿಲೀಸ್​ ಆಯ್ತು ವಿಶೇಷ ಕಾಮನ್​ ಡಿಪಿ..!

ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಷಭ್​ ಶೆಟ್ಟಿ

ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಷಭ್​ ಶೆಟ್ಟಿ

Rishab Shetty Birthday CDP: ರಿಷಭ್​ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆಂದೇ ಮಾಡಲಾಗಿರುವ ವಿಶೇಷ ಕಾಮನ್​ ಡಿಸ್​ಪ್ಲೇ ಪಿಕ್ಚರ್​ ಅನ್ನು ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಕೃಷ್ಣ ಅವರು ಎರಡು ದಿನ ಮೊದಲೇ ಅದನ್ನು ರಿಲೀಸ್ ಮಾಡಿದ್ದು, ಜೊತೆಗೆ ಹುಟ್ಟುಹಬ್ಬದ ಶುಭವನ್ನೂ ಕೋರಿದ್ದಾರೆ.

ಮುಂದೆ ಓದಿ ...
  • Share this:

ಸ್ಯಾಂಡಲ್​ವುಡ್​ ನಟ ಪ್ರತಿಭಾವಂತ ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 37ನೇ ವಸಂತಕ್ಕೆ ಕಾಲಿಟ್ಟಿರುವ ರಿಷಭ್​ ಶೆಟ್ಟಿ ಅವರಿಗೆ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. 


ಸ್ಟಾರ್​ಗಳ ಹುಟ್ಟುಹಬ್ಬಕ್ಕೆ ಕಾಮನ್​ ಡಿಪಿ ಸಿದ್ಧಗೊಳಿಸಿ ರಿಲೀಸ್​ ಮಾಡುವುದು ಈಗ ಸಾಮಾನ್ಯ. ಇತ್ತೀಚೆಗಷ್ಟೆ ಕಿಚ್ಚ ಸುದೀಪ್​ ಶಿವಣ್ಣನ ಹುಟ್ಟುಹಬ್ಬಕ್ಕೆ ಸಿದ್ಧಗೊಂಡಿರುವ ಡಿಸ್​ಪ್ಲೇ ಪಿಕ್ಚರ್ ಸಹ ಬಿಡುಗಡೆ ಮಾಡಿದ್ದಾರೆ.


Rishab shetty
ರಿಷಭ್​ ಶೆಟ್ಟಿ


ಈಗ  ರಿಷಭ್​ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆಂದೇ ಮಾಡಲಾಗಿರುವ ವಿಶೇಷ ಕಾಮನ್​ ಡಿಸ್​ಪ್ಲೇ ಪಿಕ್ಚರ್​ ಅನ್ನು ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ಕೃಷ್ಣ ಅವರು ಎರಡು ದಿನ ಮೊದಲೇ ಅದನ್ನು ರಿಲೀಸ್ ಮಾಡಿದ್ದು, ಜೊತೆಗೆ ಹುಟ್ಟುಹಬ್ಬದ ಶುಭವನ್ನೂ ಕೋರಿದ್ದಾರೆ.



ವಿಶೇಷ ಎಂದರೆ ಕಿಚ್ಚ ಸುದೀಪ್​, ದರ್ಶನ್​, ರಶ್ಮಿಕಾ, ಪುನೀತ್​, ಉಪೇಂದ್ರ ಸೇರಿದಂತೆ ಇತರೆ ನಟರ ಅಭಿಮಾನಿಗಳೂ ರಿಷಭ್​ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಿದ್ದಾರೆ.







ಇನ್ನು ರಿಷಭ್​ ಶೆಟ್ಟಿ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕಾಗಿ ಸಂದೇಶ್​ ನಾಗರಾಜ್​ ಅವರೊಂದಿಗೆ ಕೈ ಜೋಡಿಸಿದ್ದಾರೆ. ಈ ಸಿನಿಮಾದ  ಮುಹೂರ್ತ ಸಹ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ರಿಷಭ್​ ಶೆಟ್ಟಿ ಅವರ ಕಚೇರಿಯಲ್ಲಿ ನೆರವೇರಿಸಲಾಗಿತ್ತು. ಈ ಚಿತ್ರಕ್ಕೆ ನಾಯಕಿಯಾಗಿ ಹೊಸ ಪ್ರತಿಭೆಯ ಹುಡುಕಾಟದಲ್ಲಿದ್ದಾರೆ ರಿಷಭ್​. ಅದಕ್ಕಾಗಿಯೇ ಒಂದು ಪ್ರಕಟಣೆ ಸಹ ನೀಡಿದ್ದರು.

Rakul Preet Singh: ರಾಕುಲ್​ ಪ್ರೀತ್​ ಸಿಂಗ್ ಕ್ಲಾಸಿ ಲುಕ್​ಗೆ ಅಭಿಮಾನಿಗಳು ಫಿದಾ..!




ಇದನ್ನೂ ಓದಿ: ದರ್ಶನ್​ ಚಿನ್ನದಂತ ಮನಸ್ಸಿರುವ ಮನುಷ್ಯ ಎಂದ ಪ್ರಣೀತಾ ಸುಭಾಷ್​..!

Published by:Anitha E
First published: