DBoss Darshan: ಫೇಸ್​ಬುಕ್​ನಲ್ಲಿ ಲೈವ್​ ಬರಲಿದ್ದಾರೆ ದರ್ಶನ್​: ಸಿಗಲಿದೆಯಾ ರಾಬರ್ಟ್​ ಕುರಿತಾದ ಸಿಹಿ ಸುದ್ದಿ..!

ದರ್ಶನ್​ ಬಹಳ ಸಮಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬರಲಿದ್ದಾರೆ. ಜನವರಿ 10ರಂದು ಬೆಳಿಗ್ಗೆ 11ಕ್ಕೆ ತಮ್ಮ ಫೇಸ್​ಬುಕ್​ ಖಾತೆಯಿಂದ ಲೈವ್​ ಬರಲಿದ್ದಾರೆ. ಆದರೆ ದರ್ಶನ್​ ಲೈವ್​ ಬರಲಿರುವ ಕಾರಣ ಮಾತ್ರ ಇನ್ನೂ ಬಹಿರಂಗವಾಗಿಲ್ಲ.

ದರ್ಶನ್​

ದರ್ಶನ್​

  • Share this:
ಕೊರೋನಾ ಲಾಕ್​ಡೌನ್​ ಆದರೂ ಅಭಿಮಾನಿಗಳ ದಾಸ ದರ್ಶನ್​ ತಮ್ಮ ಸೆಲೆಬ್ರಿಟಿಗಳಿಗಾಗಿ ಪ್ರತಿ ಹಬ್ಬಕ್ಕೂ ಒಂದೊಂದು ಹೊಸ ಪೋಸ್ಟರ್ ಹಾಗೂ ರಾಬರ್ಟ್​ ಚಿತ್ರದ ಹಾಡನ್ನು ರಿಲೀಸ್ ಮಾಡಿದ್ದರು. ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸ ಹಾಗೂ ಸಿನಿಮಾ ಕುರಿತಾದ ಅಪ್ಡೇಟ್​ ಕೊಡುವ ಡಿಬಾಸ್​ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದರು. ತಮ್ಮ ಬೈಕ್​ ಟ್ರಿಪ್​ನ ಅಪ್ಡೇಟ್ಸ್​​ ಮೂಲಕ ಫ್ಯಾನ್ಸ್​ಗೆ ರಸದೌತಣ ನೀಡಿದ್ದರು. ಇನ್ನು ಚಿತ್ರಮಂದಿರಗಳು ಆರಂಭವಾದಾಗಿನಿಂದ ಯಾವ ಸ್ಟಾರ್ ನಟನ ಸಿನಿಮಾಗಳೂ ರಿಲೀಸ್​ ಆಗಿಲ್ಲ. ಆದರೆ ಈಗ ಒಂದೊಂದೇ ಚಿತ್ರತಂಡಗಳು ರಿಲೀಸ್ ದಿನಾಂಕ ಪ್ರಕಟಿಸುತ್ತಿದೆ. ಆದರೆ ರಾಬರ್ಟ್​ ಸಿನಿಮಾದ ರಿಲೀಸ್​ ದಿನಾಂಕ ಇನ್ನೂ ನಿಗದಯಾಗಿಲ್ಲ. ಆದರೆ ಈ ಚಿತ್ರ ಏಪ್ರಿಲ್​ನಲ್ಲಿ ರಿಲೀಸ್​ ಆಗಬಹುದು ಎನ್ನಲಾಗುತ್ತಿದೆ. ಹೀಗಿರುವಾಗಲೇ ದರ್ಶನ್​ ತಮ್ಮ ಸೆಲೆಬ್ರಿಟಿಗಳಿಗೆ ಒಂದು ಸಿಹಿ ಸುದ್ದಿ ಕೊಟ್ಟಿದ್ದಾರೆ. 

ಹೌದು, ದರ್ಶನ್​ ಬಹಳ ಸಮಯದ ನಂತರ ಸಾಮಾಜಿಕ ಜಾಲತಾಣದಲ್ಲಿ ಲೈವ್​ ಬರಲಿದ್ದಾರೆ. ಜನವರಿ 10ರಂದು ಬೆಳಿಗ್ಗೆ 11ಕ್ಕೆ ತಮ್ಮ ಫೇಸ್​ಬುಕ್​ ಖಾತೆಯಿಂದ ಲೈವ್​ ಬರಲಿದ್ದಾರೆ. ಆದರೆ ದರ್ಶನ್​ ಲೈವ್​ ಬರಲಿರುವ ಕಾರಣ ಮಾತ್ರ ಇನ್ನೂ ಬಹಿರಂಗವಾಗಿಲ್ಲ.ದರ್ಶನ್​ ಅವರ ಲೈವ್​ಗಾಗಿ ಕಾತರದಿಂಧ ಕಾಯುತ್ತಿರುವ ಅಭಿಮಾನಿಗಳು, ಡಿಬಾಸ್​ ರಾಬರ್ಟ್​ ಸಿನಿಮಾ ಕುರಿತಾಗಿ ಏನಾದರೂ ಪ್ರಕಟಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ದರ್ಶನ್​ ಲೈವ್​ ಬರುವ ಸುದ್ದಿ ದರ್ಶನ್​ ಅವರ ಅಭಿಮಾನಿಗಳ ಪುಟಗಳಲ್ಲಿ ಹರಿದಾಡುತ್ತಿದೆ.


ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್​ ಸಿನಿಮಾದ ಚಿತ್ರೀಕರಣ ಮುಗಿದಿದೆ. ಉಮಾಪತಿ ನಿರ್ಮಾಣದ ಸಿನಿಮಾ ಇನ್ನೇನು ರಿಲೀಸ್​ ಹಂತದಲ್ಲಿದೆ. ಈ ಸಿನಿಮಾದಲ್ಲಿ ದರ್ಶನ್ ಜೊತೆ ಆಶಾ ಭಟ್​, ಜಗಪತಿ ಬಾಬು ನಟಿಸಿದ್ದಾರೆ. ಗಂಡುಗಲಿ ವೀರ ಮದಕರಿ ನಾಯಕ ಸಿನಿಮಾವನ್ನು ರಾಜೇಂದ್ರ ಸಿಂಗ್​ ಬಾಬು ನಿರ್ದೇಶಿಸುತ್ತಿದ್ದು, ರಾಕ್​ಲೈನ್​ ವೆಂಕಟೇಶ್​ ಹಣ ಹೂಡಿದ್ದಾರೆ.
Published by:Anitha E
First published: