• Home
  • »
  • News
  • »
  • entertainment
  • »
  • Shankar Nag: ಶಂಕರ್​ ನಾಗ್ ಅಭಿನಯದ ಎಸ್​ಪಿ ಸಾಂಗ್ಲಿಯಾನ-2 ಸಿನಿಮಾ ರಿ-ರಿಲೀಸ್!

Shankar Nag: ಶಂಕರ್​ ನಾಗ್ ಅಭಿನಯದ ಎಸ್​ಪಿ ಸಾಂಗ್ಲಿಯಾನ-2 ಸಿನಿಮಾ ರಿ-ರಿಲೀಸ್!

ಎಸ್​​ಪಿ ಸಾಂಗ್ಲಿಯಾನ

ಎಸ್​​ಪಿ ಸಾಂಗ್ಲಿಯಾನ

ಎಸ್​​ಪಿ ಸಾಂಗ್ಲಿಯಾನ ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಶಂಕರ್ ನಾಗ್ ಅಭಿನಯದ ಈ ಸಿನಿಮಾ ಮತ್ತೊಮ್ಮೆ ರಿಲೀಸ್ ಆಗುತ್ತಿದ್ದು ಸಿನಿ ಪ್ರೇಮಿಗಳಿಗೆ ಸಂತಸ ತಂದಿದೆ.

  • News18 Kannada
  • Last Updated :
  • Bangalore, India
  • Share this:

ಇದೀಗ ಭಾರತೀಯ ಚಿತ್ರರಂಗದ ಗತಿಯೇ ಬದಲಾಗಿದೆ. ಹೊಸ ಸೌತ್ ಸಿನಿಮಾಗಳು  (South Cinema) ನಾರ್ತ್​ನಲ್ಲಿ ಸುದ್ದಿಯಾಗುತ್ತಿದೆ. ದಕ್ಷಿಣ ಭಾರತದ ಲೋ ಬಜೆಟ್ ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತಿದೆ. ಅದೇ ರೀತಿ ಸಿನಿಮಾಗಳ ರಿ ರಿಲೀಸ್ ಜೋರಾಗಿದೆ. ಹಳೆಯ ಸಿನಿಮಾಗಳು ಮತ್ತೊಮ್ಮೆ ರಿ ರಿಲೀಸ್ (Re-Release) ಆಗುತ್ತಿದ್ದು ಇದು ಸಿನಿಪ್ರಿಯರಿಗೆ ಹೊಸತನ. ಬಹಳಷ್ಟು ಸಿನಿ ಪ್ರೇಕ್ಷಕರು ಹಳೆ ಸಿನಿಮಾಗಳು ರಿ-ರಿಲೀಸ್ ಆದಾಗ ಅದನ್ನು ಸಂಭ್ರಮಿಸಿ ಕೊಂಡಾಡುತ್ತಾರೆ. ಇದೀಗ ಶಂಕರ್​ ನಾಗ್ (Shankar Nag) ಅವರ ಎಸ್​ಪಿ ಸಾಂಗ್ಲಿಯಾನ (SP Sangaliyana) ಸಿನಿಮಾ ರಿ ರಿಲೀಸ್ ಆಗಿದೆ. ನವೆಂಬರ್ 18ರಂದು ಚಿತ್ರಮಂದಿರಗಳಲ್ಲಿ ಎಸ್​ಪಿ ಸಾಂಗ್ಲಿಯಾನ ಸಿನಿಮಾ ಬಿಡುಗಡೆಯಾಗಿದ್ದು ಸಿನಿಪ್ರಿಯರಲ್ಲಿ ಸಂತಸ ತುಂಬಿದೆ.


ಎಸ್​​ಪಿ ಸಾಂಗ್ಲಿಯಾನ 2 1990 ರಲ್ಲಿ ರಿಲೀಸ್ ಆದ ಕನ್ನಡ  ಸಿನಿಮಾ ಆಗಿದ್ದು P. ನಂಜುಂಡಪ್ಪ ಅವರು ಕಥೆ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾ 1988 ರ ಸಾಂಗ್ಲಿಯಾನ ಚಿತ್ರದ ಸೀಕ್ವೆಲ್ ಸಿನಿಮಾ ಆಗಿದ್ದು ಅಂದಿನ ಕಾಲದಲ್ಲಿ ಬಾಕ್ಸ್ ಆಫೀಸ್​ನಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡಿತು.


ಇದನ್ನೂ ಓದಿ: Anchor Anushree: ಇದ್ಯಾವ ಜಾಗ ಹೇಳ್ತೀರಾ? ಪ್ರಕೃತಿ ಮಡಿಲಲ್ಲಿ ರಿಲ್ಯಾಕ್ಸ್ ಆದ ಅನುಶ್ರೀ


ಚಿತ್ರದಲ್ಲಿ ಶಂಕರ್ ನಾಗ್, ಭವ್ಯ ಮತ್ತು ಶಿವರಂಜನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಲಭ್ಯವಾಗಿತ್ತು. ಚಿತ್ರವನ್ನು ಸ್ವರ್ಣಗಿರಿ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿತ್ತು. ಹಂಸಲೇಖ ಅವರು ಸಂಗೀತ ಸಂಯೋಜಿಸಿದ್ದಾರೆ. ಅಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದಾಗ ಇದನ್ನು ತೆಲುಗಿನಲ್ಲಿ ಪೊಲೀಸ್ ಬೆಲ್ಟ್ ಎಂದು ಡಬ್ ಮಾಡಲಾಯಿತು.


ಬಾಕ್ಸ್ ಆಫೀಸ್ ಹಿಟ್ ಆದ ಸಿನಿಮಾ


ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿತು. ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊನೆಯ ಯಶಸ್ವಿ ಸಿನಿಮಾ ಆಗಿತ್ತು. ಅಂದಿನ ಪ್ರಮುಖ ಚಿತ್ರಮಂದಿರ ಕಪಾಲಿಯಲ್ಲಿಯೇ ಈ ಸಿನಿಮಾವನ್ನು 9 ವಾರಗಳಲ್ಲಿ 1,84,150 ಜನರು ವೀಕ್ಷಿಸಿದ್ದರು ಎಂದು ಹೇಳಲಾಗುತ್ತದೆ.


Actor Shankar Nag Birthday we remember his memories he Karnataka legend
ಶಂಕರ್ ನಾಗ್


ಈ ಸಿನಿಮಾ ಅದರ ಮೊದಲ ಭಾಗಕ್ಕಿಂತ ಹೆಚ್ಚು ಸಕ್ಸಸ್ ಆಗಿದ್ದು ಮತ್ತೊಂದು ವಿಶೇಷ. ಸಿನಿಮಾ ಸುಮಾರು ರೂ. 8 ಲಕ್ಷ ಗಳಿಸಿತ್ತು. ಶಂಕರ್ ನಾಗ್ ಅವರ ವೃತ್ತಿಜೀವನದಲ್ಲಿ ಅತಿ ಎಸ್​ಪಿ ಸಾಂಗ್ಲಿಯಾನ ಅತಿ  ಹೆಚ್ಚು ಹಣ ಗಳಿಸಿದ ಸಿನಿಮಾ ಆಗಿ ಹೊರ ಹೊಮ್ಮಿತ್ತು.ಇದು 1990 ರಲ್ಲಿ ಶಂಕರ್ ನಾಗ್ ಅವರ ಸಾವಿನ ಮೊದಲು ಬಿಡುಗಡೆಯಾದ ಕೊನೆಯ ಚಲನಚಿತ್ರಗಳಲ್ಲಿ ಒಂದಾಗಿದೆ.


ಕರಾಟೆ ಕಿಂಗ್​ ಶಂಕರ್​ ನಾಗ್​


12 ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದ ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣ ನಟ ಶಂಕರ್ ನಾಗ್ ಸುಮಾರು 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಜೊತೆಗೆ  ಹಲವಾರು ಹಿಟ್ ಸಿನಿಮಾಗಳ ನಿರ್ದೇಶನ ಸಹ ಮಾಡಿದ್ದಾರೆ. 1990 ಸೆಪ್ಟೆಂಬರ್ 30 ಕನ್ನಡ ಸಿನಿರಂಗದ ಪಾಲಿಗೆ ಕರಾಳ ದಿನವಾಗಿತ್ತು. ಮುಂಜಾನೆ ಶಂಕರ್​ ನಾಗ್ ಅವರು ಇನ್ನಿಲ್ಲ ಅನ್ನೋ ಸುದ್ದಿ ಬರ ಸಿಡಿಲಿನಂತೆ ಬಡಿದಿತ್ತು. 35 ವರ್ಷದ ಯುವ ನಟನ ಮಿಂಚಿನ ಓಟಕ್ಕೆ ಬ್ರೇಕ್​ ಬಿದ್ದಿತ್ತು.


ತಮ್ಮ ಸಿನಿಮಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದ ನಟ ಬಹಳಷ್ಟು ಹಿಟ್ ಸಿನಿಮಾಗಳನ್ನು ಕೊಟ್ಟ ಕನ್ನಡಿಗರನ್ನು ರಂಜಿಸಿದರು. ಅವರ ಅಗಲಿಕೆ ಸಿನಿಪ್ರೇಮಿಗಳನ್ನು ಶೋಕಕ್ಕೆ ತಳ್ಳಿತ್ತು. ಇಂದಿಗೂ ಶಂಕರ್ ನಾಗ್ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ಇಂದಿಗೂ ಕನ್ನಡ ಸಿನಿಪ್ರೇಕ್ಷಕರಿಗೆ ಅಚ್ಚುಮೆಚ್ಚು ಎನ್ನುವುದರಲ್ಲಿ ಎರಡು ಮಾತಿಲ್ಲ.

Published by:Divya D
First published: