• Home
 • »
 • News
 • »
 • entertainment
 • »
 • SPB - ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೇರಿ ಇಡೀ ಭಾರತ ಚಿತ್ರರಂಗವೇ ಎಸ್​ಪಿಬಿ ನಿಧನಕ್ಕೆ ಕಣ್ಣೀರು

SPB - ಸ್ಯಾಂಡಲ್ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಸೇರಿ ಇಡೀ ಭಾರತ ಚಿತ್ರರಂಗವೇ ಎಸ್​ಪಿಬಿ ನಿಧನಕ್ಕೆ ಕಣ್ಣೀರು

ಎಸ್ ಪಿ ಬಾಲಸುಬ್ರಹ್ಮಣ್ಯಂ

ಎಸ್ ಪಿ ಬಾಲಸುಬ್ರಹ್ಮಣ್ಯಂ

ಮಹೇಶ್ ಬಾಬು, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಗೋಲ್ಡನ್ ಸ್ಟಾರ್ ಗಣೇಶ್, ಕಮಲಹಾಸನ್ ಮೊದಲಾದವರು ಎಸ್​ಪಿಬಿ ನಿಧನಕ್ಕೆ ದಿಗ್ಬ್ರಮೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಅನಂತನಾಗ್, ವಿಜಯಪ್ರಕಾಶ್, ದ್ವಾರಕೀಶ್, ದೊಡ್ಡಣ್ಣ, ಭಾರತಿ ವಿಷ್ಣುವರ್ಧನ್ ಮೊದಲಾದವರು ಎಸ್ಪಿಬಿಯೊಂದಿಗಿನ ಒಡನಾಟವನ್ನು ಮೆಲುಕು ಹಾಕಿದ್ದಾರೆ.

ಮುಂದೆ ಓದಿ ...
 • Share this:

  ಬೆಂಗಳೂರು(ಸೆ. 25): ಇವತ್ತು ಮಧ್ಯಾಹ್ನ ಇಹಲೋಕ ತ್ಯಜಿಸಿದ ಗಾಯನ ಸಾಮ್ರಾಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಭಾರತದ ಸಿನಿಮಾ ಲೋಕ ಸಂತಾಪದಿಂದ ಕಣ್ಣೀರಿಟ್ಟಿದೆ. ಬಹುತೇಕ ಎಲ್ಲಾ ಚಿತ್ರರಂಗಗಳ ದಿಗ್ಗಜರು ಶೋಕ ವ್ಯಕ್ತಪಡಿಸಿದ್ಧಾರೆ. ದೇಶದ 16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನ ಹಾಡಿರುವ ಎಸ್.ಪಿ.ಬಿ. ಅವರು ಅಕ್ಷರಶಃ ಗಾಯನ ಸಾಮ್ರಾಟರಾಗಿದ್ದರು. ಸ್ಯಾಂಡಲ್ವುಡ್ ಸೆಲಬ್ರಿಟಿಗಳಷ್ಟೇ ಅಲ್ಲ, ಬಾಲಿವುಡ್, ಕಾಲಿವುಡ್, ಟಾಲಿವುಡ್​ನ ಅನೇಕ ಮಂದಿ ಸಂತಾಪ ಸೂಚಿಸಿದ್ದಾರೆ.


  ಎಸ್​ಪಿಬಿ ನಿಧನವಾರ್ತೆ ಬಂದ ಬೆನ್ನಲ್ಲೇ ನ್ಯೂಸ್18 ಜೊತೆ ಮಾತನಾಡಿದ ಅನಂತನಾಗ್, ದೊಡ್ಡಣ್ಣ, ಭಾರತಿ ವಿಷ್ಣುವರ್ಧನ್, ಶೃತಿ, ವಿ ಮನೋಹರ್ ಮೊದಲಾದ ಗಣ್ಯರು ಎಸ್​ಪಿಬಿ ಜೊತೆಗಿನ ತಮ್ಮ ಒಡನಾಟದ ಅನುಭವ ಹಂಚಿಕೊಂಡರು. ಮಹೇಶ್ ಬಾಬು, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್, ಗೋಲ್ಡನ್ ಸ್ಟಾರ್ ಗಣೇಶ್, ಕಮಲಹಾಸನ್ ಮೊದಲಾದವರು ಎಸ್​ಪಿಬಿ ನಿಧನಕ್ಕೆ ದಿಗ್ಬ್ರಮೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

  ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್ ಅವರ ಅಭಿನಯದ ಹಾಡುಗಳಿಗೆ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರೇ ಧ್ವನಿಯಾಗಿದ್ದಾರೆ. ಎಸ್​ಪಿಬಿ ತೆಲುಗಿನವಾದರೂ ಎಲ್ಲಾ ಭಾಷೆಯನ್ನೂ ಪ್ರೀತಿಸುತ್ತಿದ್ದರು. ಅದರಲ್ಲೂ ಕನ್ನಡವನ್ನು ಬಹಳ ಆಪ್ಯಾಯಮಾನವಾಗಿ ಪ್ರೀತಿ ಮಾಡುತ್ತಿದ್ದರು. ಕನ್ನಡ ಹಾಡುಗಳ ವಿಚಾರಕ್ಕೆ ಬಂದರೆ ಅವರು ಎದೆ ತುಂಬಿ ಹಾಡುತ್ತಿದ್ದರು, ಮಾತನಾಡುತ್ತಿದ್ದರು. ಅವರ ಇಷ್ಟದ ಹಾಡುಗಳಲ್ಲಿ ಕನ್ನಡವೂ ಇತ್ತು.

  Published by:Vijayasarthy SN
  First published: