• Home
 • »
 • News
 • »
 • entertainment
 • »
 • SPB’s Last Song- ಸಂಚಲನ ಮೂಡಿಸುತ್ತಿದೆ ಎಸ್​ಪಿಬಿ ಕಂಠಸಿರಿಯ ಕೊನೆಯ ಹಾಡು ಅಣ್ಣಾತೆ ಅಣ್ಣಾತೆ

SPB’s Last Song- ಸಂಚಲನ ಮೂಡಿಸುತ್ತಿದೆ ಎಸ್​ಪಿಬಿ ಕಂಠಸಿರಿಯ ಕೊನೆಯ ಹಾಡು ಅಣ್ಣಾತೆ ಅಣ್ಣಾತೆ

ಎಸ್ ಪಿ ಬಾಲಸುಬ್ರಹ್ಮಣ್ಯಂ

ಎಸ್ ಪಿ ಬಾಲಸುಬ್ರಹ್ಮಣ್ಯಂ

Annathe Annathe Song- ವರ್ಷದ ಹಿಂದೆ ಇಹಲೋಕ ತ್ಯಜಿಸಿದ ಗಾಯನ ಲೋಕದ ಸಾಮ್ರಾಟ ಎಸ್ ಪಿ ಸುಬ್ರಹ್ಮಣ್ಯಂ ಅವರ ಕಂಠಸಿರಿಯಲ್ಲಿ ಬಂದಿರುವ ಅವರ ಕೊನೆಯ ಹಾಡು ಅಣ್ಣಾತೆ ಅಣ್ಣಾತೆ ಈಗ ಜೋರು ಶಬ್ದ ಮಾಡುತ್ತಿದೆ.

 • News18
 • Last Updated :
 • Share this:

  80 ಮತ್ತು 90ರ ದಶಕದಲ್ಲಿ ಹೀರೋ ಇಂಟ್ರೊಡೆಕ್ಷನ್​ನ ಎನರ್ಜೆಟಿಕ್ ಹಾಡುಗಳಿಗೆ ಲೆಜೆಂಡರಿ ಸಿಂಗರ್ ಎಸ್. ಪಿ. ಬಾಲಸುಬ್ರಹ್ಮಣ್ಯಂ (SP Balasubrahmanyam) ಅವರ ಧ್ವನಿಯೇ ಬೇಕಿತ್ತು. ಎಷ್ಟೋ ಹೀರೋಗಳು ತಮ್ಮ ಪಾತ್ರ ಪರಿಚಯದ ಹಾಡುಗಳಿಗೆ ಎಸ್‍ಪಿಬಿ ಧ್ವನಿಯೇ ಇರಬೇಕೆಂದು ಷರತ್ತು ಹಾಕುತ್ತಿದ್ದರಂತೆ. ಆದ್ರೆ ಎಸ್‍ಪಿಬಿ ನಮ್ಮನ್ನಗಲಿ ವರ್ಷ ಕಳೆದಿದೆ. ಇದೀಗ ಎಸ್‍ಪಿಬಿ ಅವರು ರಜಿನಿಕಾಂತ್ (Rajinikant) ಅವರಿಗಾಗಿ ಹಾಡಿದ ಕೊನೆಯ ಹಾಡು (Annaatthe Annaatthe -Official Lyrical Video) ಇವತ್ತು ರಿಲೀಸ್ ಆಗಿದೆ. ಹಾಡು ಬಿಡುಗಡೆಯಾಗುತ್ತಲೇ ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸಿದೆ. ಎಸ್‍ಪಿಬಿ ಧ್ವನಿ ಕೇಳುತ್ತಲೇ ರೋಮಾಂಚನವಾದ ಅದ್ಭುತ ಅನುಭವವನ್ನು ನೀಡುತ್ತದೆ. ಎಸ್‍ಪಿಬಿ ಅವರ ಪವರ್ ಫುಲ್ ಧ್ವನಿ ಘರ್ಜಿಸಲು ಆರಂಭಿಸಿದೆ. ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಅಧಿಕ ಜನರು ಯೂಟ್ಯೂಬ್​ನಲ್ಲಿ ಈ ಹಾಡನ್ನ ವೀಕ್ಷಿಸಿದ್ದಾರೆ.


  ಹಲವು ಚಿತ್ರಗಳಲ್ಲಿ ರಜಿನಿಕಾಂತ್ ಧ್ವನಿಯಾದ ಎಸ್‍ಪಿಬಿ: ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಚಿತ್ರದ ಮಾಸ್ ಹಾಡುಗಳಿಗೆ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೇ ಧ್ವನಿ ನೀಡಿದ್ದಾರೆ. ಮುತ್ತು (1995), ಅಣ್ಣಾಮಲೈ (1992), ದಳಪತಿ (1991), ಬಾಶಾ (1995), ಪಡೆಯಪ್ಪ (1999), ಅರುಣಾಚಲಂ (1997), ಚಂದ್ರಮುಕಿ (2005), ಶಿವಾಜಿ (2007), ಪೇಟ್ಟಾ (2019), ದರ್ಬಾರ್ (2020) ಚಿತ್ರಗಳ ಹೀರೋ ಇಂಟ್ರೋಡೆಕ್ಷನ್ ಹಾಡುಗಳನ್ನು ಎಸ್‍ಪಿಬಿ ಹಾಡಿದ್ದಾರೆ.  ಅಭಿಮಾನಿಗಳಿಗೆ ಡಬಲ್ ಖುಷಿ:


  ರಜಿನಿಕಾಂತ್ ನಟಿಸುತ್ತಿರುವ ಅಣ್ಣಾತ್ತೆ ಚಿತ್ರದ ಟೈಟಲ್ ಲಿರಿಕಲ್ ಟ್ರ್ಯಾಕ್ ರಿಲೀಸ್ ಆಗಿದೆ. ಸೂಪರ್ ಸ್ಟಾರ್ ದರ್ಶನದ ಜೊತೆ ಅಭಿಮಾನಿಗಳಿಗೆ ಪವರ್ ಫುಲ್ ವಾಯ್ಸ್ ಕೇಳುವ ಸುದವಕಾಶ ದೊರೆತಿದೆ. ಚಿತ್ರದಲ್ಲಿ ನಟಿಯರಾದ ನಯನತಾರಾ (Nayanthara) ಮತ್ತು ಕೀರ್ತಿ ಸುರೇಶ್ (Keerthy Suresh) ಲೀಡ್ ರೋಲ್ ನಲ್ಲಿ ನಟಿಸಿದ್ದಾರೆ. ಖುಷ್ಬೂ, ಸೂರಿ, ಪ್ರಕಾಶ್ ರೈ, ಜಗಪತಿ ಬಾಬು, ಅಭಿಮನ್ಯು ಸಿಂಗ್ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಚಿತ್ರ ಹೊಂದಿದೆ. ಚಿತ್ರಕ್ಕೆ ಶಿವ ಆ್ಯಕ್ಷನ್ ಕಟ್ ಹೇಳಿದ್ರೆ, ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಚಿತ್ರಕ್ಕೆ ಡಿ. ಇಮ್ಮನ್ (D Imman) ಅವರ ಸಂಗೀತವಿದೆ.


  ಇದನ್ನೂ ಓದಿ: ಹೊಸ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದ Ram Pothineni: ಕುತ್ತಿಗೆಗೆ ಪೆಟ್ಟು ಮಾಡಿಕೊಂಡ ಟಾಲಿವುಡ್​ ನಟ


  ಸೆಪ್ಟೆಂಬರ್ 25, 2020ರಂದು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನದ ಸುದ್ದಿಯಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿತ್ತು. ಕೊರೊನಾ ಸೋಂಕು ತಗುಲಿದ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಎಸ್‍ಪಿಬಿ ಮಹಾಮಾರಿಯನ್ನು ಸೋಲಿಸಿದ್ದರು. ನಂತರ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾದ ಎಸ್‍ಪಿಬಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದರು. ಜೂನ್ 4, 1946ರಂದು ಆಂದ್ರಪ್ರದೇಶದ ಚಿತ್ತೂರಿನ ಕೊನೇಟಮ್ಮಪೇಟಾದಲ್ಲಿ ಜನಿಸಿದ ಎಸ್‍ಪಿಬಿ ಅವರು ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳ ಹಾಡುಗಳನ್ನು ಹಾಡಿದ್ದಾರೆ.


  ಇದನ್ನೂ ಓದಿ: ಮಗ Aarav ಜತೆ ಫೋಟೋ ತೆಗೆಸಿಕೊಂಡ ನಟಿ Twinkle Khanna: ಆ ಚಿತ್ರದಲ್ಲಿ ನೆಟ್ಟಿಗರು ಇಷ್ಟಪಟ್ಟಿದ್ದೇನು ಗೊತ್ತೇ..?


  ಒಂದೇ ದಿನ ಕನ್ನಡದಲ್ಲಿ 17 ಮತ್ತು ಹಿಂದಿಯಲ್ಲಿ 14 ಹಾಡುಗಳನ್ನು ಹಾಡುವ ಮೂಲಕ ದಾಖಲೆ ಬರೆದಿದ್ದರು. ರಾಷ್ಟ್ರ ಪ್ರಶಸ್ತಿ, 24 ಬಾರಿ ಆಂಧ್ರ ಪ್ರದೇಶ ಸರ್ಕಾರ ನೀಡುವ ನಂದಿ ಪ್ರಶಸ್ತಿ, ನಾಲ್ಕು ಭಾಷೆಗಳು ರಾಷ್ಟ್ರ ಪ್ರಶಸ್ತಿ, ಪದ್ಮಭೂಷಣ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿ ಗೌರವಗಳು ಎಸ್‍ಪಿಬಿ ಅವರನ್ನ ಅರಸಿ ಬಂದಿದ್ದವು. ಇದರ ಜೊತೆಗೆ ಹಲವು ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿ ನೀಡಿ ಎಸ್‍ಪಿಬಿ ಅವರನ್ನು ಗೌರವಿಸಿವೆ. ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಎಸ್‍ಪಿಬಿ ಕನ್ನಡದ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದರು.


  - ಮಹಮ್ಮದ್ ರಫೀಕ್ ಕೆ.

  Published by:Vijayasarthy SN
  First published: