Seema.RSeema.R
|
news18-kannada Updated:September 25, 2020, 4:03 PM IST
ಎಸ್ಪಿ ಬಾಲಸುಬ್ರಹ್ಮಣ್ಯಂ
ಇಂಜಿನಿಯರಿಂಗ್ ಓದುತ್ತಿದ್ದ ಎಸ್ಪಿ ಬಾಲಸುಬ್ರಹ್ಮಣ್ಯಂ ಅನಿರೀಕ್ಷಿತವಾಗಿ ಗಾಯಕರಾದವರು. ತಂದೆ ಹರಿಕಥೆ ಹೇಳುತ್ತಿದ್ದರಿಂದ ಅವರು ಹಾರ್ಮೋನಿಯಂ, ಕೊಳಲುಗಳನ್ನು ನುಡಿಸುತ್ತಿದ್ದರು. ಆದರೆ, ಶಾಸ್ತ್ರಿವಾಗಿ ಗಾಯನ ಕಲಿತಿರಲಿಲ್ಲ. ಆದರೂ ಅವರ ಸ್ವರ, ತಾಳಕ್ಕೆ ಮನಸೋಲದವರಿಲ್ಲ. ಆಕಸ್ಮಿಕವಾಗಿ ಗಾಯಕರಾದರೂ ಅವರು ಸಂಗೀತ ಕಲಿತವರಲ್ಲ ಎಂದೆನಿಸದಷ್ಟು ಮಟ್ಟಿಗೆ ಅವರ ಸ್ವರ ಮಾಧರ್ಯವಿತ್ತು. ಈ ವೇಳೆ ಅವರಿಗೆ ಶಾಸ್ತ್ರೀಯ ಸಂಗೀತ ಕಲಿಯಬೇಕು ಎಂದು ಅನಿಸಿಸುವಂತೆ ಮಾಡಿದ್ದು ತೆಲುಗಿನ ಶಂಕರಾಭರಣಂ ಸಿನಿಮಾ. ತೆಲುಗಿನ 'ಶಂಕರಾಭರಣಂ' ಸಿನಿಮಾ ಅವರಿಗೆ ಶಾಸ್ತ್ರಿಯ ಸಂಗೀತ ಕಲಿಯಲು ಪ್ರೇರೆಪಿಸಿತು. ಅಚ್ಚರಿಯಾದರೂ ಹೌದು. ಈ ಚಿತ್ರದ ಹಾಡುಗಳಿಗೆ ನ್ಯಾಯ ಒದಗಿಸಬೇಕು ಎಂದರೇ ನಾನು ಶಾಸ್ತ್ರೀಯ ಸಂಗೀತ ಕಲಿತೇ ಹಾಡುತ್ತೇನೆ ಎಂದು ನಿರ್ದೇಶಕರಿಗೆ ತಿಳಿಸಿದ್ದರು.
ಕೆ ವಿಶ್ವನಾಥ್ ನಿರ್ಮಾಣದ ಈ ಸಿನಿಮಾಕ್ಕೆ ಎಸ್ಪಿಬಿ ಕೈಯಲ್ಲೇ ಹಾಡಬೇಕು ಎಂದು ನಿರ್ಧರಿಸಲಾಗಿತ್ತು. ಇದೇ ಕಾರಣಕ್ಕೆ ವಿಶ್ವನಾಥ್ ಅವರನ್ನು ಹುಡುಕಿಕೊಂಡು ಹೋದರು. ಆದರೆ, ಸಂಗೀತವೇ ಜೀವಾಳವಾಗಿದ್ದ ಈ ಸಿನಿಮಾಗೆ ನನ್ನಿಂದ ಹಾಡಲು ಸಾಧ್ಯವಿಲ್ಲ ಎಂದಿದ್ದರು ಎಸ್ಪಿಬಿ. ಆದರೆ, ವಿಶ್ವನಾಥ್ ಮಾತ್ರ ಪಟ್ಟು ಬಿಡಲಿಲ್ಲ. ಕಡೆಗೆ ಹಾಡುವುದಾದರೆ ಸಂಗೀತ ಕಲಿತೆ ಹಾಡುತ್ತೇನೆ. ಇಲ್ಲವಾದರೆ ಈ ಹಾಡುಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದರಂತೆ ಎಸ್ಪಿಬಿ.
ಕಡೆಗೆ ವಿಶ್ವನಾಥ್ ಸಹಾಯಕ ಪಂಗಸೆಂಠಿ ಬಾಲಸುಬ್ರಹ್ಮಣ್ಯಂ ಅವರಿಗೆ ಶಾಸ್ತ್ರೀಯ ಸಂಗೀತ ಪಾಠ ಹೇಳಿಕೊಟ್ಟರಂತೆ. ವಿಶೇಷವೆಂದರೆ, ಮೊದಲ ಬಾರಿ ರಾಷ್ಟ್ರೀಯ ಪ್ರಶಸ್ತ್ರಿ ಪಡೆದಿದ್ದು, ಇದೇ ಸಿನಿಮಾದ ಗಾಯನಕ್ಕೆ.
ತಮಿಳು ಸಿನಿಮಾವನ್ನು ತೆಲುಗಿನಲ್ಲಿ ನಿರ್ಮಾಣ ಮಾಡಲಾಗಿದ್ದ ಈ ಸಿನಿಮಾ ತೆಲುಗಿನಲ್ಲಿ ಶಾಸ್ತ್ರೀಯ ಸಂಗೀತ ಅಳವಡಿಕೆಗೆ ನಾಂದಿಯಾಯಿತು. ಇದರ ಬಳಿಕ ಹೆಚ್ಚು ಚಿತ್ರಗಳು ಶಾಸ್ತ್ರೀಯ ಸಂಗೀತ ಪ್ರಧಾಕ್ಕೆ ಒತ್ತುಕೊಟ್ಟವು. ತಮಿಳಿನ ರುದ್ರವೀಣ ಕನ್ನಡದ ಮಲಯ ಮಾರುತಗಳು ಕೂಡ ಸಂಗೀತ ಪ್ರಧಾನ ಸಿನಿಮಾಗಳಾಗಿದ್ದು, ಈ ಚಿತ್ರದ ಹಾಡಿಗೂ ದನಿಯಾದವರು ಎಸ್ಪಿ ಬಾಲಸುಬ್ರಹ್ಮಣ್ಯಂ. ಸಿನಿಮಾ ಸೇರಿದಂತೆ ಅವರು ಅನೇಕ ಭಕ್ತಿಗೀತೆಗಳನ್ನು ಹಾಡಿದ್ದಾರೆ. 12 ಗಂಟೆಯೊಳಗೆ 21 ಹಾಡುಗಳನ್ನು ಹಾಡಿದ ಖ್ಯಾತಿ ಅವರಿಗೆ ಇದೆ.
Published by:
Seema R
First published:
September 25, 2020, 1:28 PM IST