• Home
  • »
  • News
  • »
  • entertainment
  • »
  • SP Balasubrahmanyam Health: ಚೆನ್ನೈನ ಎಂಜಿಎಂ ಆಸ್ಪತ್ರೆ ಬಳಿ ಆತಂಕದ ವಾತಾವರಣ

SP Balasubrahmanyam Health: ಚೆನ್ನೈನ ಎಂಜಿಎಂ ಆಸ್ಪತ್ರೆ ಬಳಿ ಆತಂಕದ ವಾತಾವರಣ

ಕಮಲ್​ ಹಾಸನ್​

ಕಮಲ್​ ಹಾಸನ್​

ಕಮಲ್​ ಹಾಸನ್​ ಸೇರಿದಂತೆ ಹಲವು ಕಲಾವಿದರು, ಎಂಜಿಎಂ ಆಸ್ಪತ್ರೆಗೆ ದಾಂಗುಡಿ ಇಡುತ್ತಿದ್ದಾರೆ. ಇವರ ಜೊತೆ ಅವರ ಕುಟುಂಬಸ್ಥರು, ಸ್ನೇಹಿತರು ಕೂಡ ಭೇಟಿ ನೀಡುತ್ತಿದ್ದಾರೆ

  • Share this:

    ಚೆನ್ನೈ (ಸೆ.24): ಕಳೆದ ಒಂದೂವರೆ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಗಾಯಕ ಎಸ್​ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಇಂದು ಹೆಚ್ಚು ಗಂಭೀರಗೊಂಡಿದೆ. ಈ ಕುರಿತು ಅವರು ದಾಖಲಾಗಿರುವ ಎಂಜಿಎಂ ಆಸ್ಪತ್ರೆ ಪ್ರಕಟಣೆ ಹೊರಡಿಸಿದೆ. ಈ ವಿಷಯ ಅವರ ಅಭಿಮಾನಿಗಳಲ್ಲಿ ಆತಂಕಕ್ಕೂ ಕಾರಣವಾಗಿದೆ. ತಮ್ಮ ನೆಚ್ಚಿನ ಗಾಯಕ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ ಎಂಜಿಆರ್​ ಆಸ್ಪತ್ರೆ ಬಳಿ ನಡೆಯುತ್ತಿರುವ ಘಟನೆಗಳು ಮತ್ತಷ್ಟು ಆತಂಕ ಮೂಡಿಸಿದೆ. ಬಾಲಸುಬ್ರಹ್ಮಣ್ಯಂ ಆರೋಗ್ಯ ಬಿಗಾಡಾಯಿಸಿದ ಸುದ್ದಿ ತಿಳಿಯುತ್ತಿದ್ದಂತೆ  ಆಸ್ಪತ್ರೆಯತ್ತ ಸೆಲೆಬ್ರಿಟಿಗಳ ದಂಡು ಹರಿದು ಬರುತ್ತಿದೆ. ಇದು ಅವರ ಅಭಿಮಾನಿಗಳಲ್ಲಿ ಸ್ವರ ಮಾಂತ್ರಿಕನಿಗೆ ಏನಾಯಿತು ಎಂಬ ದುಗುಡಕ್ಕೆ ಕಾರಣವಾಗಿದೆ.


    ಕಮಲ್​ ಹಾಸನ್​ ಸೇರಿದಂತೆ ಹಲವು  ಕಲಾವಿದರು, ಎಂಜಿಎಂ ಆಸ್ಪತ್ರೆಗೆ ದಾಂಗುಡಿ ಇಡುತ್ತಿದ್ದಾರೆ. ಇವರ ಜೊತೆ ಅವರ ಕುಟುಂಬಸ್ಥರು, ಸ್ನೇಹಿತರು ಕೂಡ ಭೇಟಿ ನೀಡುತ್ತಿದ್ದಾರೆ. ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರ ಮಗ ಚರಣ್​ ಆಸ್ಪತ್ರೆಯಲ್ಲಿಯೇ ಇದ್ದಾರೆ. ಆಸ್ಪತ್ರೆಗೆ ಮಾಧ್ಯಮಕ್ಕೆ ಪ್ರವೇಶ ನಿರಾಕರಿಸಿದ್ದು, ಸದ್ಯ ಎಸ್​ಪಿಬಿ ಆರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಆದರೆ, ಶೀಘ್ರದಲ್ಲಿಯೇ ಈ ಕುರಿತು ತಿಳಿಸುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೇ ಎಸ್​ಪಿಬಿ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸದಾ ಮಾಹಿತಿ ನೀಡುತ್ತಿದ್ದ ಚರಣ್​ ಅವರಿಂದ ಕೂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.


    ಇಂದು ಸಂಜೆ ಎಸ್​ಪಿ ಬಿ ಅವರ ಆರೋಗ್ಯದ ಕುರಿತು ಪ್ರಕಟಣೆ ಹೊರಡಿಸಿದ ಆಸ್ಪತ್ರೆ,  ಬಾಲಸುಬ್ರಹ್ಮಣ್ಯಂ ಆರೋಗ್ಯ ಅತಿ ಗಂಭೀರವಾಗಿದೆ.  ಕಳೆದ 24 ಗಂಟೆ ಅವಧಿಯಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಅವರ ಚಿಕಿತ್ಸೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    Published by:Seema R
    First published: