SP balasubrahmanyam – ಎಸ್​ಪಿ ಬಾಲಸುಬ್ರಹ್ಮಣ್ಯಂ ಇನ್ನೂ ಗಂಭೀರ ಸ್ಥಿತಿಯಲ್ಲೇ; ಚಿತ್ರರಂಗಗಳ ದಿಗ್ಗಜರಿಂದ ಸಾಮೂಹಿಕ ಪ್ರಾರ್ಥನೆ

ಖ್ಯಾತ ಗಾಯಕ ಮತ್ತು ನಟ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕೃತಕ ಉಸಿರಾಟ ವ್ಯವಸ್ಥೆ ಮತ್ತು ಇಸಿಎಂಒ ನೆರವಿನಲ್ಲಿ ಜೀವನ್ಮರಣ ಹೋರಾಟ ಮುಂದುವರಿಸಿದ್ಧಾರೆ. ಅವರ ಶೀಘ್ರ ಚೇತರಿಕೆಗೆ ದೇಶಾದ್ಯಂತ ಪ್ರಾರ್ಥನೆಗಳೂ ನಡೆಯುತ್ತಿವೆ.

ಎಸ್.ಪಿ. ಬಾಲಸುಬ್ರಹ್ಮಣ್ಯಂ

ಎಸ್.ಪಿ. ಬಾಲಸುಬ್ರಹ್ಮಣ್ಯಂ

 • News18
 • Last Updated :
 • Share this:
  ಚೆನ್ನೈ(ಆ. 21): ಕೋವಿಡ್-19 ಸೋಂಕಿನಿಂದ ಬಳಲುತ್ತಿರುವ ಮೇರು ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿಲ್ಲ. ಗಂಭೀರ ಸ್ಥಿತಿಯಲ್ಲೇ ಅವರು ಮುಂದುವರಿದಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಕೃತ ಉಸಿರಾಟ ವ್ಯವಸ್ಥೆಯಲ್ಲಿ ಅವರನ್ನು ಇಡಲಾಗಿದೆ. ಅವರ ದಾಖಲಾಗಿರುವ ಎಂಜಿಎಂ ಆಸ್ಪತ್ರೆಯ ಅಧಿಕೃತ ಬುಲೆಟಿನ್​ನಲ್ಲೂ ಇದೇ ಮಾಹಿತಿ ನೀಡಲಾಗಿದೆ.

  ನಮ್ಮ ಆಸ್ಪತ್ರೆಯ ವೈದ್ಯರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರ ಜೊತೆ ನಿರಂತರ ಸಂವಹನ ನಡೆಸುತ್ತಿದ್ದು, ಅವರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಎಂಜಿಎಂ ಆಸ್ಪತ್ರೆಯ ಹೆಲ್ತ್ ಬುಲೆಟಿನ್​ನಲ್ಲಿ ತಿಳಿಸಲಾಗಿದೆ.

  ಸ್ಯಾಂಡಲ್​ವುಡ್​ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿದಂತೆ ವಿವಿಧ ಚಿತ್ರರಂಗಗಳ ದಿಗ್ಗಜರು ಬಾಲಸುಬ್ರಮಣಿಯಂಗೆ ಶುಭಹಾರೈಸಿದ್ಧಾರೆ. ತಮಿಳು ಚಿತ್ರರಂಗದ ಹಿರಿಯ ನಿರ್ದೇಶಕರು, ಸಂಗೀತ ದಿಗ್​ದರ್ಶಕರು, ಹಾಡುಗಾರರು, ಸ್ಟಾರ್​ಗಳು ಎಸ್​ಪಿಬಿ ಅವರಿಗಾಗಿ ಸಾಮೂಹಿಕ ಪ್ರಾರ್ಥನೆ ಕೈಗೊಂಡರು. ನಿರ್ದೇಶಕ ಭಾರತಿರಾಜ, ಸಂಗೀತ ನಿರ್ದೇಶಕರಾದ ಇಳಯರಾಯ, ಎ.ಆರ್. ರೆಹಮಾನ್, ಚಿತ್ರ ಸಾಹಿತಿ ವೈರಮುತ್ತು, ನಟರಾದ ರಜಿನಿಕಾಂತ್ ಮೊದಲಾದವರು ಸಂಜೆ 6ಕ್ಕೆ ಸಾಮೂಹಿಕ ಪ್ರಾರ್ಥನೆ ನಡೆಸಿದರು.  ತಮಿಳುನಾಡಿನ ತಂಜಾವೂರ್, ಮದುರೈ, ಸೇಲಂ, ಈರೋಡ್, ಕೊಯಮತ್ತೂರು ಮೊದಲಾದೆಡೆ ಎಸ್​ಪಿಬಿ ಅಭಿಮಾನಿಗಳು ಹಾಗೂ ವಿವಿಧ ಸ್ಟಾರ್​ಗಳ ಅಭಿಮಾನಿಗಳು ಸೇರಿ ಪ್ರಾರ್ಥನೆ ನಡೆಸಿದರು. ಸೋಷಿಯಲ್ ಮೀಡಿಯಾದಲ್ಲೂ #GetWellSoonSPBSIR #SPBalasubrahmanyam ಟ್ರೆಂಡಿಂಗ್ ಆಗಿದೆ.

  ಬಹುಭಾಷಾ ಗಾಯಕರಾದ ಎಸ್​ಪಿಬಿ ಅವರು ಆಗಸ್ಟ್ 5ರಂದು ಕೊರೋನಾ ಪಾಸಿಟಿವ್ ದೃಢಪಟ್ಟು ಎಂಜಿಎಂ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆ ಅವರನ್ನು ಇಸಿಎಂಒ ಸಪೋರ್ಟ್​ನಲ್ಲಿ ಇರಿಸಲಾಗಿದೆ.
  Published by:Vijayasarthy SN
  First published: