• Home
  • »
  • News
  • »
  • entertainment
  • »
  • SP Balasubrahmanyam Funeral: ಚೆನ್ನೈನಲ್ಲಿರುವ ತೋಟದಲ್ಲೇ ನಡೆಯಲಿದೆಯಂತೆ ಎಸ್​ಪಿಬಿ ಅಂತ್ಯಕ್ರಿಯೆ

SP Balasubrahmanyam Funeral: ಚೆನ್ನೈನಲ್ಲಿರುವ ತೋಟದಲ್ಲೇ ನಡೆಯಲಿದೆಯಂತೆ ಎಸ್​ಪಿಬಿ ಅಂತ್ಯಕ್ರಿಯೆ

ಗಾಯಕ ಬಾಲಸುಬ್ರಹ್ಮಣ್ಯಂ

ಗಾಯಕ ಬಾಲಸುಬ್ರಹ್ಮಣ್ಯಂ

SPB Funeral: ಎಸ್​ಪಿಬಿ ಅವರ ಪಾರ್ಥಿವ ಶರೀರವನ್ನು ಈಗ ಮನೆಗೆ ತಂದು ಅವರ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ. ಅತ್ಯಂತ ಆಪ್ತ ಬಳಗಕ್ಕೆ ಅಂತಿಮ ದರ್ಶನ ಮಾಡುವ ವ್ಯವಸ್ಥೆಗಾಗಿ ಅನುಮತಿ ಪಡೆಯಲು ಗಾಯಕನ ಕುಟುಂಬ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸಂಜೆ 6 ಗಂಟೆಯೊಳಗೆ ಅಂತಿಮ ದರ್ಶನಕ್ಕೆ ಅನುಮತಿ ಸಿಗುತ್ತದೆಯೋ ಇಲ್ಲವೋ ಎಂದು ತಿಳಿಯಲಿದೆಯಂತೆ. 

ಮುಂದೆ ಓದಿ ...
  • Share this:

ಬಾಲಸುಬ್ರಹ್ಮಣ್ಯಂ ಅವರು ಇಂದು ಮಧ್ಯಾಹ್ನ 1.04ಕ್ಕೆ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಗಾನ ಗಂರ್ಧವನ ಅಗಲಿಕೆಯಿಂದ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ರಾಜಕೀಯ ನಾಯಕರೂ ಸಹ ಹಿರಿಯ ಗಾಯಕನ ಅಗಲಿಕೆಗೆ ಸಂತಾಪ ಸೂಚಿಸುತ್ತಿದ್ದಾರೆ. ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಸುಬ್ರಹ್ಮಣ್ಯಂ ಅವರಿಗೆ ಇತ್ತಿಚೆಗಷ್ಟೆ ಕೊರೋನಾ ಪರೀಕ್ಷೆ ನಡೆಸಿದಾಗ ನೆಗೆಟಿವ್​ ಬಂದಿತ್ತು. ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿತ್ತಾದರೂ, ನಿನ್ನೆ ಸಂಜೆಯಿಂದ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ಆಕಸ್ಮಿಕವಾಗಿ ಗಾಯಕನಾದ ಈ ದಿಗ್ಗಜನ ಅಗಲಿಕೆ ನಿಜಕ್ಕೂ ಅಭಿಮಾನಿಗಳನ್ನು ಕಂಗಾಲು ಮಾಡಿದೆ. ಈಗಷ್ಟೆ ಎಂಜಿಎಂ ಆಸ್ಪತ್ರೆಯಿಂದ ಗಾಯಕನ ಪಾರ್ಥಿವ ಶರೀರವನ್ನು ಮನೆಗೆ ತೆ್ಗೆದುಕೊಂಡು ಹೋಗಲಾಗುತ್ತಿದೆ. ಎಸ್​ಪಿಬಿ ಅವರ ಅಂತ್ಯಕ್ರಿಯೆಯನ್ನು ಚೆನ್ನೈನಲ್ಲಿರುವ ಅವರ ತೋಟದಲ್ಲೇ ಮಾಡಲು ನಿರ್ಧರಿಸಲಾಗಿದೆಯಂತೆ. ಇನ್ನು ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಕುರಿತಾಗಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.


ಎಸ್​ಪಿಬಿ ಅವರ ಪಾರ್ಥಿವ ಶರೀರವನ್ನು ಈಗ ಮನೆಗೆ ತಂದು ಅವರ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ. ಅತ್ಯಂತ ಆಪ್ತ ಬಳಗಕ್ಕೆ ಅಂತಿಮ ದರ್ಶನ ಮಾಡುವ ವ್ಯವಸ್ಥೆಗಾಗಿ ಅನುಮತಿ ಪಡೆಯಲು ಗಾಯಕನ ಕುಟುಂಬ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸಂಜೆ 6 ಗಂಟೆಯೊಳಗೆ ಅಂತಿಮ ದರ್ಶನಕ್ಕೆ ಅನುಮತಿ ಸಿಗುತ್ತದೆಯೋ ಇಲ್ಲವೋ ಎಂದು ತಿಳಿಯಲಿದೆಯಂತೆ.


SP Balasubrahmanyam death News, S P Balasubrahmanyam weight loss story, bariatric surgery, SP Balasubrahmanyam is no more, SP Balasubrahmanyam Health, SP Balasubrahmanyam Health update, SPB Health bulletin, SP Balasubrahmanyam Health Bulletin. SPB Health update, SPB Health, SPB again critical, SP Charan, SPB Son, Coronavirus, Covid 19, ಎಸ್​ಪಿ ಬಾಲಸುಬ್ರಹ್ಮಣ್ಯಂ, ಎಸ್​ಪಿ ಬಾಲಸುಬ್ರಹ್ಮಣ್ಯಂ ಹೆಲ್ತ್​, ದೇಹದ ತೂಕ ಇಳಿಸಿಕೊಂಡಿದ್ದ ಬಾಲಸುಬ್ರಹ್ಮಣ್ಯಂ, ಬ್ಯಾರಿಯಾಟ್ರಿಕ್​ ಸರ್ಜರಿ, S P Balasubrahmanyam underwent bariatric surgery for weight loss long back here is the details
 ಬಾಲಸುಬ್ರಹ್ಮಣ್ಯಂ


ಒಂದು ವೇಳೆ ಆಪ್ತ ವಲಯಕ್ಕೆ ಅಂತಿಮ ದರ್ಶನಕ್ಕೆ ಅನುಮತಿ ಸಿಕ್ಕರೆ, ಅಂತ್ಯಕ್ರಿಯೆ ನಾಳೆ ಅವರ ರೆಡ್​ ಹಿಲ್ಸ್​ ತೋಟದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅಭಿಮಾನಿಗಳಿಗೂ ಅಂತಿಮ ದರ್ಶನದ ಅನುಮತಿ ಸಿಕ್ಕಲ್ಲಿ, ಮನೆಯ ಬಳಿ ಇರುವ ಸತ್ಯಂ ಥಿಯೇಟರ್​ನಲ್ಲಿ ವ್ಯವಸ್ಥೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರಂತೆ. ಆದರೆ ಇದೆಲ್ಲ ಸರ್ಕಾರ ನೀಡುವ ಅನುಮತಿಯ ಮೇಲೆ ನಿರ್ಧಾರವಾಗಲಿದೆ.


ಇದನ್ನೂ ಓದಿ: 16 ಭಾಷೆಗಳಲ್ಲಿ ಹಾಡಿರುವ ಗಾನ ದಿಗ್ಗಜ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ


ಒಂದು ವೇಳೆ ಅಭಿಮಾನಿಗಳು ಹಾಗೂ ಕುಟುಂಬದ ಆಪ್ತ ವಲಯಕ್ಕೂ ಅಂತಿಮ ದರ್ಶನ ಮಾಡಲು ಅನುಮತಿ ಸಿಗದೇ ಹೋದಲ್ಲಿ, ಇಂದು ಸಂಜೆಯೇ ಅಂತ್ಯಕ್ರಿಯೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

Published by:Anitha E
First published: