• Home
 • »
 • News
 • »
 • entertainment
 • »
 • SPB Funeral: ಇಂದು ಚೆನ್ನೈನ ರೆಡ್​ಹಿಲ್ಸ್​ ತೋಟದಲ್ಲಿ ಎಸ್​ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ

SPB Funeral: ಇಂದು ಚೆನ್ನೈನ ರೆಡ್​ಹಿಲ್ಸ್​ ತೋಟದಲ್ಲಿ ಎಸ್​ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ

SP Balasubrahmanyam: ಗಾನ ಗಂಧರ್ವ ಎಸ್​.ಪಿ. ಬಾಲಸುಬ್ರಹ್ಮಣ್ಯಂ.

SP Balasubrahmanyam: ಗಾನ ಗಂಧರ್ವ ಎಸ್​.ಪಿ. ಬಾಲಸುಬ್ರಹ್ಮಣ್ಯಂ.

ಇಂದು 1 ಗಂಟೆಗೆ ಮಧ್ಯಾಹ್ನ ಕುಟುಂಬಸ್ಥರು, ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರದ್ದೇ ತೋಟದ ಮನೆಯಲ್ಲಿ 1 ಗಂಟೆಗೆ ಅಂತ್ಯ ಸಂಸ್ಕಾರ  ನಡೆಯಲಿದೆ.

 • Share this:

  ಚೆನ್ನೈ (ಸೆ.26): ಶಾಸ್ವಕೋಶ ವೈಫಲ್ಯದಿಂಂದಾಗಿ ಇಹಲೋಕ ತ್ಯಜಿಸಿದ  ಸಂಗೀತ ದಿಗ್ಗಜ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರ ಅಂತಿಮ ಸಂಸ್ಕಾರ ಇಂದು ನೆರವೇರಲಿದೆ. ಚೆನ್ನೈನ ಹೊರ ಹೊಲಯದ ರೆಡ್​ ಹಿಲ್ಸ್​ನಲ್ಲಿರುವ  ಅವರ ತೋಟದ ಮನೆಯಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿದೆ. ಎಸ್​ಪಿಬಿ ಅಗಲಿಕೆ ಬಗ್ಗೆ ಶುಕ್ರವಾರ ಮಧ್ಯಾಹ್ನ ಅವರ ಮಗ ಚರಣ್​ ತಿಳಿಸಿದರು. ನಿನ್ನೆ ಮಧ್ಯಾಹ್ನ 1.04 ನಿಮಿಷಕ್ಕೆ ತಂದೆ ಇಹಲೋಕ ತ್ಯಜಿಸಿದರು. ಅವರ ಬದುಕುಳಿಯಲು ಅಭಿಮಾನಿಗಳು ಸಾಕಷ್ಟು ಪ್ರಾರ್ಥಿಸಿದರು. ಆದರೆ, ವಿಧಿ ಬೇರೆ ಇತ್ತು ಎಂದಿದ್ದರು. ಸಂಜೆ ಪಾರ್ಥಿವ ಶರೀರವನ್ನು ಮನೆಗೆ ತರಲಾಗಿದ್ದು, ಇಂದು ಅಂತ್ಯಕ್ರಿಯೆ ನೆರವೇರಲಿದೆ. ಅಂತ್ಯ ಸಂಸ್ಕಾರದ ವೇಳೆ ಶೃಂಗೇರಿ ಮಠದ ಶ್ರೀ ಗಳು ಅಥವಾ ಕಂಚಿ ಮಠದ ಶ್ರೀಗಳು ಪಾಲ್ಗೊಳುವ ಸಾಧ್ಯತೆ ಇದೆ ಎನ್ನಲಾಗಿದೆ.


  ಶುಕ್ರವಾರ ಮಧ್ಯಾಹ್ನ ನುಂಗಬಾಕಂನಲ್ಲಿರುವ ಕಮ್ದರ್​ ನಗರದ ಅವರ ಮನೆಗೆ ಪಾರ್ಥಿವ ಶರೀರವನ್ನು ತರಲಾಗಿತ್ತು. ಈ ವೇಳೆ ಚಿತ್ರರಂಗದ ಗಣ್ಯರು ಅವರ ಅಂತಿಮ ದರ್ಶನ ಪಡೆದಿದ್ದಾರೆ. ಎಸ್​ಪಿಗೆ ಕೊರೋನಾ ನೆಗಟಿವ್​ ಬಂದ ಹಿನ್ನಲೆ ಈ ಅವಕಾಶ ಮಾಡಿಕೊಡಲಾಗಿತ್ತು. ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಕೂಡ ನೆಚ್ಚಿನ ಗಾಯಕನ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ದಾರೆ.


  ಇಂದು ಮಧ್ಯಾಹ್ನ ಕುಟುಂಬಸ್ಥರು, ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಅವರ ತೋಟದ ಮನೆಯಲ್ಲಿ 1 ಗಂಟೆಗೆ ಅಂತ್ಯ ಸಂಸ್ಕಾರ  ನಡೆಯಲಿದೆ. ರೆಡ್​ಹಿಲ್ಸ್​ನ ಈ ತೋಟದ ಮನೆ ಎಸ್​ಬಿಪಿ ನೆಚ್ಚಿನ ಸ್ಥಳ. ಕುಟುಂಬ, ಸ್ನೇಹಿತರು ಇಲ್ಲಿ ಆಗಾಗ ಸೇರುತ್ತಿದ್ದರು. ಅದೇ ತೋಟದಲ್ಲಿ ಎಸ್​ಪಿಬಿ ಶಾಶ್ವತವಾಗಲಿದ್ದಾರೆ.


  ಕಳೆದ ಒಂದೂವರೆ ತಿಂಗಳಿನಿಂದ ಶ್ವಾಸಕೋಶದ ಸಮಸ್ಯೆ ಅನುಭವಿಸುತ್ತಿದ್ದ ಎಸ್​ಪಿ ಬಾಲಸುಬ್ರಹ್ಮಣ್ಯಂ ಇಂದು ಮಧ್ಯಾಹ್ನ 1.04ಕ್ಕೆ ಕೊನೆಯುಸಿರೆಳೆದಿದ್ದರು. ಎಸ್​ಪಿಬಿ ನಾಲ್ಕು ಭಾಷೆಗಳಲ್ಲಿ 6 ರಾಷ್ಟ್ರ ಪ್ರಶಸ್ತಿ ಪಡೆದ ಕೆಲವೇ ಕೆಲವು ಗಾಯಕರಲ್ಲಿ ಒಬ್ಬರು. ತೆಲುಗಿನ ಸಾಗರ ಸಂಗಮಂ, ರುದ್ರವೀಣಾ ಹಾಗೂ ಶಂಕರಾಭರಣಂ, ತಮಿಳಿನ ಮಿನ್ಸಾರೆ ಕನವು, ಕನ್ನಡದ ಸಂಗೀತ ಸಾಗರ ಪಂಚಾಕ್ಷರಿ ಗವಾಯಿ ಸಿನಿಮಾಗಳಿಗೆ ಒಟ್ಟು 6 ರಾಷ್ಟ್ರೀಯ ಪ್ರಶಸ್ತರಿ ಪಡೆದಿದ್ದಾರೆ. ಉಳಿದಂತೆ ಬಾಲಿವುಡ್​ನ ಫಿಲ್ಮ್​ಫೇರ್ ಪ್ರಶಸ್ತಿ, 25 ನಂದಿ ಅವಾರ್ಡ್​, ಪದ್ಮಶ್ರೀ (2001), ಪದ್ಮಭೂಷಣ(2011) ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

  Published by:Seema R
  First published: