• Home
  • »
  • News
  • »
  • entertainment
  • »
  • SPB Funeral: ಭೂಮಿ ತಾಯಿಯ ಮಡಿಲು ಸೇರಿದ ಎಸ್​ ಪಿ ಬಾಲಸುಬ್ರಹ್ಮಣ್ಯಂ: ಗಾನ ಚಕ್ರವರ್ತಿಗೆ ಕಣ್ಣೀರಿನ ಬೀಳ್ಕೊಡುಗೆ

SPB Funeral: ಭೂಮಿ ತಾಯಿಯ ಮಡಿಲು ಸೇರಿದ ಎಸ್​ ಪಿ ಬಾಲಸುಬ್ರಹ್ಮಣ್ಯಂ: ಗಾನ ಚಕ್ರವರ್ತಿಗೆ ಕಣ್ಣೀರಿನ ಬೀಳ್ಕೊಡುಗೆ

ಎಸ್​ ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ

ಎಸ್​ ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ

SP Balasubrahmanyam Funeral: ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್​ಪಿಬಿ ಅಂತ್ಯಸಂಸ್ಕಾರ ನಡೆಸಲಾಯಿತು. ಪೊಲೀಸರು ಕುಶಾಲ ತೋಪು ಸಿಡಿಸಿ ಎಸ್​ಪಿಬಿ ಅಂತಿಮ ಗೌರವ ಸಲ್ಲಿಸಲಾಯಿತು. ಎಸ್​ಪಿಬಿ ಅವರ ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರ ಜೊತೆಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಭಾಗಿಯಾದ್ದರು.

ಮುಂದೆ ಓದಿ ...
  • Share this:

ಸಾಮಂತನಾಗಿ ಬಂದು ಗಾನ ಚಕ್ರವರ್ತಿಯಾದ ಎಸ್​ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ತಾಮರೈಪಾಕಂನಲ್ಲಿರುವ ಎಸ್​ಪಿಬಿ ಅವರ ತೋಟದಲ್ಲೇ ನೆರವೇರಿತು. ಶೈವ ಆರಾಧ್ಯ ಸಂಪ್ರದಾಯದಂತೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ನಡೆಯಿತು. ಅವರ ಮಗ ಎಸ್​ ಪಿ ಚರಣ್​ ಅಂತಿಮ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರ ನಡೆಸಲಾಯಿತು. ಪೊಲೀಸರು ಕುಶಾಲ ತೋಪು ಸಿಡಿಸಿ ಎಸ್​ಪಿಬಿ ಅಂತಿಮ ಗೌರವ ಸಲ್ಲಿಸಲಾಯಿತು. ಎಸ್​ಪಿಬಿ ಅವರ ಅಂತ್ಯಸಂಸ್ಕಾರದಲ್ಲಿ ಕುಟುಂಬಸ್ಥರ ಜೊತೆಗೆ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಭಾಗಿಯಾದ್ದರು. ತಮ್ಮ ಇಂಪಾದ  ಹಾಡುಗಳ ಮೂಲಕ ರಂಜಿಸಿದ್ದ ಸ್ವರ ಸಾಮ್ರಾಟನಿಗೆ ಕಣ್ಣೀರಿನ ಬೀಳ್ಕೊಡುಗೆ ನೀಡಲಾಯಿತು. ನಿನ್ನೆ ಮಧ್ಯಾಹ್ನ 1.04ಕ್ಕೆ ಎಸ್​ ಪಿ ಬಾಲಸುಬ್ರಹ್ಮಣ್ಯಂ ಅವರು ಎಂಜಿಎಂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಈ ವಿಷಯವನ್ನು ಮಗ ಚರಣ್​ ತಿಳಿಸಿದ್ದರು. 


ಗಾನ ಗಾರುಡಿಗ ಇನ್ನು ನೆನಪು ಮಾತ್ರ. ಆದರೆ ಎಸ್​ ಪಿ ಬಾಲಸುಬ್ರಹ್ಮಣ್ಯಂ ಅವರು ಹಾಡುಗಳ ಮೂಲಕ ಅಭಿಮಾನಿಗಳ ನೆನಪಿನಲ್ಲಿ ಸದಾ ಜೀವಂತವಾಗಿರುತ್ತಾರೆ. ಇಂತಹ ಕಲಾವಿದನ ಅಗಲಿಕೆಗೆ ಕೋಟ್ಯಂತ ಮಂದಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಅಭಿಮಾನಿಗಳು ಬಾಲು ಅವರು ಮತ್ತೆ ಹುಟ್ಟಿ ಬನ್ನಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.


SP Balasubrahmanyam, SP Balasubrahmanyam Funeral, SP Balasubramaniyam, SPB Funeral in Chennai, SPB Funeral in Redhills, SPB Funeral in Thamaraipakkam, SPB Funeral, S p bala subramanyam, SP Balasubramaniyam funeral, SPB Latest news, SPB Photo, SPB Son SP Charan, SPB Family, ಎಸ್​ಪಿ ಬಾಲಸುಬ್ರಹ್ಮಣ್ಯಂ, ಎಸ್​ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ, ರೆಡ್​ಹಿಲ್ಸ್​, ತಾಮರೈಪಾಕಂ, ಚೆನ್ನೈ,, SP Balasubrahmanyam funeral held at Thamaraipakkam farm house redhills chennai by his son SP Charan
ಎಸ್​ ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ


ಎಸ್​ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆಯಲ್ಲಿ ಕಾಲಿವುಡ್​ ನಟ ವಿಜಯ್​ನಿರ್ದೇಶಕ ಭಾರತಿ ರಾಜ್​, ಸಂಗೀತ ನಿರ್ದೇಶ ದೇವಿಶ್ರೀಪ್ರಸಾದ್ ಸೇರಿದಂತೆ ಹಲವಾರು ಮಂದಿ ಗಣ್ಯರು ಭಾಗಿಯಾಗಿದ್ದರು.
ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಸ್​.ಪಿ.ಬಾಲಸುಬ್ರಹ್ಮಣಂ ಅವರನ್ನು ಆಗಸ್ಟ್​ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗಸ್ಟ್ 13ರಂದು ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ತಜ್ಞ ವೈದ್ಯರ ಸಲಹೆಯಂತೆ ಅವರನ್ನು ಐಸಿಯುನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಆಸ್ಪತ್ರೆಯ ಬೆಡ್​ ಮೇಲೆ ಮಲಗಿಯೇ ಹೆಬ್ಬೆರಳು​ ತೋರಿದ್ದ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ ಮತ್ತೆ ಆ.20ರಂದು ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿ, ತಜ್ಞ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡುತ್ತಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ಮೊನ್ನೆ ಸಂಜೆ ಇದ್ದಕ್ಕಿದ್ದಂತೆ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ಇನ್ನೇನು ಆಸ್ಪತ್ರೆಯಿಂದ ಮನೆಗೆ ತೆರೆಳಲಿದ್ದಾರೆ ಎನ್ನುವಾಗಲೇ ವಿಧಿ ಬೇರೆಯದ್ದೇ ಆಟ ಆಡಿತು.


SP Balasubrahmanyam, SP Balasubrahmanyam Funeral, SP Balasubramaniyam, SPB Funeral in Chennai, SPB Funeral in Redhills, SPB Funeral in Thamaraipakkam, SPB Funeral, S p bala subramanyam, SP Balasubramaniyam funeral, SPB Latest news, SPB Photo, SPB Son SP Charan, SPB Family, ಎಸ್​ಪಿ ಬಾಲಸುಬ್ರಹ್ಮಣ್ಯಂ, ಎಸ್​ಪಿ ಬಾಲಸುಬ್ರಹ್ಮಣ್ಯಂ ಅಂತ್ಯಕ್ರಿಯೆ, ರೆಡ್​ಹಿಲ್ಸ್​, ತಾಮರೈಪಾಕಂ, ಚೆನ್ನೈ,sp balasubrahmanyam funeral S P Charan performed the final rites for spbs body
ಅಂತಿಮ ವಿಧಿ ವಿಧಾನ ನೆರವೇರಿಸಿದ ಚರಣ್​


ಕನ್ನಡದ ಸಾಹಿತಿ ಉಪೇಂದ್ರ ಕುಮಾರ್ ಅವರಿಗಾಗಿ 12 ಗಂಟೆಗಳಲ್ಲಿ ಎಸ್​ಪಿಬಿ 21 ಕನ್ನಡ ಹಾಡುಗಳನ್ನು ಹಾಡಿ ರೆಕಾರ್ಡ್​ ಮಾಡಿದ್ದರು. ಒಂದೇ ದಿನದಲ್ಲಿ ತಮಿಳು ಹಾಗೂ ತೆಲುಗಿನಲ್ಲಿ 19 ಹಾಡುಗಳನ್ನೂ ರೆಕಾರ್ಡ್​ ಮಾಡಿದ್ದರು. ಅಂತೆಯೇ ಹಿಂದಿಯಲ್ಲಿ 16 ಹಾಡುಗಳನ್ನು ಧ್ವನಿ ಮುದ್ರಿಸಿದ್ದರಂತೆ. ಇದು ಎಸ್ ಪಿ ಬಿ ಅವರ ಸಾಮರ್ಥ್ಯ ಹಾಗೂ ಅವರಿಗಿದ್ದ ಬೇಡಿಕೆಗೆ ನಿದರ್ಶನ.


ಇದನ್ನೂ ಓದಿ: S P Balasubrahmanyam: 16 ಭಾಷೆಗಳಲ್ಲಿ ಹಾಡಿರುವ ಗಾನ ದಿಗ್ಗಜ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ


ವಿವಿಧ ಭಾಷೆಗಳಲ್ಲಿ 45 ಸಾವಿರಕ್ಕೂ ಹೆಚ್ಚು ಹಾಡಿರುವ ಗಾಯಕ ಬಾಲಸುಬ್ರಹ್ಮಣ್ಯಂ. ಅತಿ ಹೆಚ್ಚು ಹಾಡು ಹಾಡಿರುವ ಕಾರಣದಿಂದಲೇ ಅವರ ಹೆಸರು ಗಿನ್ನೆಸ್​ ರೆಕಾರ್ಡ್​ ಪುಸ್ತಕ ಸೇರಿದೆ. ವರ್ಷದಲ್ಲಿ 930 ಹಾಡುಗಳು ಅಂದರೆ, ದಿನಕ್ಕೆ ಅಂದಾಜು 3 ಹಾಡುಗಳು ಎಂದರೂ 2018ರ ಹೊತ್ತಿಗೆ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಖಾಸಗಿ ಆಲ್ಬಂಗಳೂ ಎಸ್​ ಪಿ ಬಾಲಸುಬ್ರಹ್ಮಣ್ಯಂ ಅವರ ಖಾತೆಯಲ್ಲಿವೆ.

Published by:Anitha E
First published: