Prabhas: ಬಾಹುಬಲಿ ಸಿನಿಮಾ ನನ್ನ ವೃತ್ತಿ ಜೀವನದ ಗೇಮ್ ಚೇಂಜರ್ ಎಂದ ಸೌತ್ ಸೂಪರ್ ಸ್ಟಾರ್..!

ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಹುಬಲಿ ಚಿತ್ರದ ಬಗ್ಗೆ ಮಾತನಾಡಿದ ಪ್ರಭಾಸ್ 'ಬಾಹುಬಲಿ' ಸಿನಿಮಾ ನನ್ನ ವೃತ್ತಿಜೀವನದ ಗೇಮ್ ಚೇಂಜರ್ ಎಂದು ಹೇಳಿದ್ದಾರೆ.

ನಟ ಪ್ರಭಾಸ್

ನಟ ಪ್ರಭಾಸ್

  • Share this:
ಟಾಲಿವುಡ್ ನಟ ಪ್ರಭಾಸ್‌ಗೆ ವಿಶ್ವಾದ್ಯಂತ ಜನಪ್ರಿಯತೆ ತಂದುಕೊಟ್ಟ ‘ಬಾಹುಬಲಿ’ (Bahubali) ಸಿನಿಮಾ ಎರಡು ಭಾಗಗಳಾಗಿ ಬಂದ ಚಿತ್ರವು ದೊಡ್ಡ ಯಶಸ್ಸು ಗಳಿಸಿದ್ದಲ್ಲದೇ ಪ್ರಭಾಸ್‌ಗೆ (Prabhas) ಪ್ಯಾನ್ ಇಂಡಿಯಾ (Pan India) ಸ್ಟಾರ್ ಎಂಬ ಬಿರುದು ತಂದುಕೊಟ್ಟಿತು. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಹುಬಲಿ ಚಿತ್ರದ ಬಗ್ಗೆ ಮಾತನಾಡಿದ ಪ್ರಭಾಸ್ 'ಬಾಹುಬಲಿ' ಸಿನಿಮಾ ನನ್ನ ವೃತ್ತಿಜೀವನದ ಗೇಮ್ ಚೇಂಜರ್ ಎಂದು ಹೇಳಿದ್ದಾರೆ. ವಿಶ್ವವೇ ತೆಲುಗು ರಂಗದತ್ತ ತಿರುಗಿ ನೋಡುವಂತೆ ಮಾಡಿದ ನಿರ್ದೇಶಕ ರಾಜಮೌಳಿ ಅವರ ಬಾಹುಬಲಿ ಚಿತ್ರ ಹೊಸ ಇತಿಹಾಸವನ್ನೇ ಬರೆದಿತ್ತು. ಬಾಹುಬಲಿ: ದಿ ಬಿಗಿನಿಂಗ್ 2015ರಲ್ಲಿ ಬಿಡುಗಡೆಯಾಗಿತ್ತು. ಭಾರತೀಯ ಮಹಾಕಾವ್ಯ ಆ್ಯಕ್ಷನ್ ಡ್ರಾಮಾ ಚಲನಚಿತ್ರವನ್ನು ಎಸ್.ಎಸ್. ರಾಜಮೌಳಿ (S. S. Rajamouli) ನಿರ್ದೇಶಿಸಿದ್ದರು. ಇದರಲ್ಲಿ ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯ ಕೃಷ್ಣ, ಸತ್ಯರಾಜ್ ಮತ್ತು ನಾಸರ್ ಸೇರಿ ಕಲಾವಿದರ ದಂಡೇ ಇತ್ತು. ಬಾಹುಬಲಿಯಲ್ಲಿ ಅಮರೇಂದ್ರ ಬಾಹುಬಲಿಯನ್ನು, ಮಾಹಿಷ್ಮತಿ ಸಾಮ್ರಾಜ್ಯವನ್ನು ಕಟ್ಟಿಕೊಟ್ಟ ರಾಜಮೌಳಿಯ ಈ ಸಿನಿಮಾ ಎರಡು ಭಾಗಗಳಲ್ಲಿ ಬಂದಿತ್ತು.

ಮೊದಲನೆಯದು, ಶಿವುಡು / ಶಿವ, ತನ್ನ ಪ್ರೀತಿಯ ಅವಂತಿಕಾಗೆ ಸಹಾಯ ಮಾಡುವ ಸಾಹಸಿ ಯುವಕನ ಕಥೆ ಹೆಣೆದರೆ, ಮಾಹಿಷ್ಮತಿಯ ಮಾಜಿ ರಾಣಿ ದೇವಸೇನಾ, ರಾಜ ಭಲ್ಲಾಳದೇವನ ದಬ್ಬಾಳಿಕೆಯ ಆಳ್ವಿಕೆಯಲ್ಲಿ ಸೆರೆಯಾಳು. ಈ ಕಥೆಯು 2017ರ ಏಪ್ರಿಲ್‌ನಲ್ಲಿ ತೆರೆಕಂಡ ಬಾಹುಬಲಿಯ ಎರಡನೇ ಭಾಗ ‘ಬಾಹುಬಲಿ 2: ದಿ ಕನ್ಕ್ಲೂಶನ್’ ನಲ್ಲಿ ಮುಕ್ತಾಯಗೊಳ್ಳುತ್ತದೆ. ಬಾಹುಬಲಿ ಚಿತ್ರವು ಪ್ರಭಾಸ್ ಮತ್ತು ರಾಜಮೌಳಿ ಇಬ್ಬರಿಗೂ ಪ್ಯಾನ್ ಇಂಡಿಯಾ ನಾಯಕ ಮತ್ತು ನಿರ್ದೇಶಕ ಪಟ್ಟವನ್ನು ನೀಡಿತ್ತು.

ಬಾಹುಬಲಿ ಸಿನಿಮಾ ನನ್ನ ವೃತ್ತಿ ಜೀವನದ ಗೇಮ್ ಚೇಂಜರ್:

ಇತ್ತೀಚೆಗೆ ಸುದ್ದಿಮಾಧ್ಯಮ ಜೊತೆಗಿನ ಸಂವಾದದಲ್ಲಿ, ಪ್ರಭಾಸ್, ‘ಬಾಹುಬಲಿ ಸಿನಿಮಾ ಖಂಡಿತವಾಗಿಯೂ ನನ್ನ ಜೀವನಕ್ಕೆ ಬಾಹುಬಲಿ. ಇದು ನನ್ನ ವೃತ್ತಿ ಜೀವನದ ಗೇಮ್ ಚೇಂಜರ್ ಆಗಿದೆ. ಮತ್ತು ಇದು ನನಗೆ ತುಂಬಾ ರೋಮಾಂಚನಕಾರಿಯಾಗಿದೆ. ನಾನು ಎಲ್ಲಿಗೆ ಹೋದರೂ ಜನರು ನನ್ನನ್ನು ಗುರುತಿಸುತ್ತಾರೆ. ಇದೆಲ್ಲಾ ನಡೆದದ್ದು ಬಾಹುಬಲಿಯಿಂದ. ಅದೃಷ್ಟ ಮತ್ತು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಹಾಗೂ ನನ್ನ ಜೀವನದಲ್ಲಿ ಎಲ್ಲವೂ ಬಾಹುಬಲಿಯಿಂದ ಆಗಿದೆ ಎಂದು ಪ್ರಭಾಸ್ ಬಾಹುಬಲಿ ಚಿತ್ರವನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ: Breaking: ಮಕಾಡೆ ಮಲಗಿದ ರಾಧೆ-ಶ್ಯಾಮ್​ ಸಿನಿಮಾ.. ಇದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ರವಿ ತೇಜ

ಅಷ್ಟಾಗಿ ಸದ್ದು ಮಾಡದ 'ರಾಧೆ ಶ್ಯಾಮ್‘:

ಇನ್ನು ಪ್ರಭಾಸ್‌ ಅವರ ಇತ್ತೀಚಿಗೆ ಬಿಡುಗಡೆಯಾದ 'ರಾಧೆ ಶ್ಯಾಮ್' ಅಷ್ಟೇನೂ ಸುದ್ದಿ ಮಾಡಿಲ್ಲ. ಒಬ್ಬ ವ್ಯಕ್ತಿಯ ಭೂತಕಾಲ ಮತ್ತು ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಹಸ್ತಸಾಮುದ್ರಿಕ ಕಥೆಯಾಗಿತ್ತು. ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆಯು ಭವಿಷ್ಯ ಹೇಳುವವರು ಮತ್ತು ರಾಜಕುಮಾರಿಯ ಸುತ್ತ ಸುತ್ತುತ್ತದೆ. ಯೂರೋಪ್ ಹಿನ್ನೆಲೆಯಾಗಿಟ್ಟುಕೊಂಡು ರೆಟ್ರೋ ಲವ್ ಸ್ಟೋರಿಯೊಂದನ್ನು ನಿರ್ದೇಶಕ ರಾಧಾಕೃಷ್ಣ ಕುಮಾರ್ 'ರಾಧೆ ಶ್ಯಾಮ್' ಮೂಲಕ ಹೇಳಿದ್ದಾರೆ. ಒಂದೂ ಫೈಟ್ ಇಲ್ಲದ ಪ್ರಭಾಸ್ ಅವರ ಮೊದಲ ಸಿನಿಮಾ ಇದಾಗಿದೆ.

ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿಯಾಗಿರುವ ಪ್ರಭಾಸ್:

ಪ್ರಭಾಸ್ ಅವರ ಬತ್ತಳಿಕೆಯಲ್ಲಿ ಹಲವಾರು ಚಿತ್ರಗಳಿದ್ದು, ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಬಹುಭಾಷಾ ಪೌರಾಣಿಕ ಚಿತ್ರ ಆದಿಪುರುಷ, ಸಾಲಾರ್, ಪ್ರಾಜೆಕ್ಟ್-ಕೆ, ಸ್ಪಿರಿಟ್ ಮತ್ತು ನಿರ್ದೇಶಕ ಮಾರುತಿ ಅವರೊಂದಿಗೆ ಮತ್ತೊಂದು ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣ ಶುರುವಾಗಿದೆ. ಪ್ರಭಾಸ್ ಗೆ ಜೋಡಿಯಾಗಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: Radhe Shyam Review: ಆಕಳಿಕೆ ಹುಟ್ಟಿಸುವ ರಾಧೆ ಶ್ಯಾಮ್, ಬಹುನಿರೀಕ್ಷಿತ ಸಿನಿಮಾ ಎಡವಿದ್ದೆಲ್ಲಿ?

ಇನ್ನು ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿ ದೊಡ್ಡ ತಾರಾ ಬಳಗವೇ ಇದೆ. ಅತ್ಯಂತ ದುಬಾರಿ ಭಾರತೀಯ ಸಿನಿಮಾಗಳನ್ನು ಮಾಡಿದ ಹೆಸರಾಂತ ನಿರ್ದೇಶಕ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. 'ಪ್ರಾಜೆಕ್ಟ್ ಕೆ' ಚಿತ್ರ ಅಂದಾಜು 450 ರಿಂದ 500 ಕೋಟಿ ರೂಪಾಯಿಯ ಬಜೆಟ್‌ನಲ್ಲಿ ತಯಾರಾಗುತ್ತಿದೆ.
Published by:shrikrishna bhat
First published: