Kabhi Eid Kabhi Diwali: ಸೌತ್ ಕಲಾವಿದರತ್ತ ಸಲ್ಮಾನ್ ಚಿತ್ತ, ಸಲ್ಲುಗೆ ವಿಲನ್ ಆಗ್ತಾರಾ ದಕ್ಷಿಣದ ಸ್ಟಾರ್​?

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ಸೌತ್ ಸ್ಟಾರ್ ಗಳನ್ನು ಬಳಸಿಕೊಂಡು ಮತ್ತೆ ಗೆಲುವಿನ ದಾರಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

  • Share this:
ಸದ್ಯ ಭಾರತೀಯ ಚಿತ್ರರಂಗ ಎಂದಾಕ್ಷಣ ಎಲ್ಲರೂ ಸೌತ್ ಸಿನಿರಂಗದತ್ತ ಬೊಟ್ಟು ಮಾಡು ತೋರಿಸುವಂತಾಗಿದೆ. ಹೌದು, ಸೌತ್ ಇಂಡಸ್ಟ್ರಿಯ ಆರ್​ಆರ್​ಆರ್ (RRR)​, ಕೆಜಿಎಫ್ 2 (KGF 2), ಪುಷ್ಪ ಸೇರಿದಂತೆ ಸಾಲು ಸಾಲು ಸಿನಿಮಾಗಳು ಬಾಲಿವುಡ್​ ನಲ್ಲಿ ಸಖತ್ ಹಿಟ್ ಆಗುತ್ತಿದ್ದು, ದಕ್ಷಿಣದ ಸಿನಿಮಾಗಳ ಎದುರು ಬಾಲಿವುಡ್ (Bollywood) ಸೋತು ಕೈ ಕಟ್ಟಿ ನಿಂತಿದೆ ಎಂದರೂ ತಪ್ಪಾಗಲಾರದು. ಹೀಗಾಗಿ ಇದಿಗ ಬಾಲಿವುಡ್​ ನ ಹಳೆಯ ವೈಭವವನ್ನು ಮರಳಿ ತರಲು ಸ್ಟಾರ್ ನಟರುಗಳು ಪ್ರಯತ್ನಪಡುತ್ತಿದ್ದಾರೆ. ಅದರಲ್ಲಿಯೂ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ಸೌತ್ ಸ್ಟಾರ್ ಗಳನ್ನು ಬಳಸಿಕೊಂಡು ಮತ್ತೆ ಗೆಲುವಿನ ದಾರಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.

ಹೌದು, ಸಲ್ಲು ಭಾಯ್ ಅಭಿನಯದ ಬಹು ನಿರೀಕ್ಷಿತ ಹೊಸ ಸಿನಿಮಾ 'ಕಬಿ ಈದ್ ಕಬಿ ದಿವಾಲಿ' (Kabhi Eid Kabhi Diwali) ಚಿತ್ರವು ಒಂದಲ್ಲಾ ಒಂದು ಕಾರಣದಿಂದ ಸದ್ದು ಮಾಡುತ್ತಿದೆ. ಇದಿಗ ಚಿತ್ರದ್ಲಲಿ ಸೌತ್ ಕಲಾವಿದರುಗಳನ್ನು ಸೇರಿಸಿಕೊಲ್ಳುತ್ತಿದ್ದು, ಮತ್ತೆ ಸುದ್ದಿಯಲ್ಲಿದೆ.

ಸಲ್ಲು ಚಿತ್ರದಲ್ಲಿ ಸೌತ್ ಸ್ಟಾರ್​ ಗಳು:

ನಟ ಸಲ್ಮಾನ್ ಖಾನ್ ಕಬಿ ಈದ್ ಕಬಿ ದಿವಾಲಿ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ. ಸಾಲು ಸಾಲು ಸನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಸಲ್ಲು ಈ ಚಿತ್ರದ ಮೂಲಕ ಕಂಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಜನರು ಸೌತ್ ಇಂಡಸ್ಟ್ರಿಯ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಚಿತ್ರದಲ್ಲಿ ಸೌತ್ ಸ್ಟಾರ್ ಗಳನ್ನು ಹಾಕಿಕೊಳ್ಳುವುದರತ್ತ ಸಲ್ಲು ಹೆಚ್ಚು ಆಸಕ್ತಿ ತೋರುತ್ತಿದ್ದಂತೆ ಕಾಣುತ್ತಿದೆ.

ಇದನ್ನೂ ಓದಿ: Casting Couch: ಗೀತಕೃಷ್ಣಗೆ ಬಿಸಿ ಮುಟ್ಟಿಸಿದ ಬಿಗ್ ಬಾಸ್ ಖ್ಯಾತಿಯ ಕೃತಿಕಾ, ನನ್ನ ಹೇಳಿಕೆ ತಿರುಚಲಾಗಿದೆ ಎಂದ ನಿರ್ದೇಶಕ

ಈಗಾಗಲೇ ಚಿತ್ರದಲ್ಲಿ ಸಲ್ಮಾನ್ ಖಾನ್​ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ. ಅದಲ್ಲದೇ ನಂತರದಲ್ಲಿ ತೆಲುಗಿನ ನಟ ವೆಂಕಟೇಶ್ ಚಿತತಂಡವನ್ನುಸೇರಿಕೊಂಡಿದ್ದು, ಇದೀಗ ಈ ಸಾಲಿಗೆ ಮತ್ತೊಬ್ಬ ದಕ್ಷಿಣದ ನಟನ ಎಂಟ್ರಿ ಅಗುವ ಸೂಚನೆ ಸಿಕ್ಕಿದೆ. ಸಲ್ಮಾನ್ ಖಾನ್​ ಗೆ ಚಿತ್ರದಲ್ಲಿ ವಿಲನ್ ಆಗಿ ದಕ್ಷಿಣ ಭಾರತದ ಖ್ಯಾತ ಖಳನಟ ಜಗಪತಿ ಬಾಬು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಿಟ್ಟುಕೊಟ್ಟಿಲ್ಲ.

ಚಿತ್ರತಂಡ ತೊರೆದ ಸ್ಟಾರ್ ಕಲಾವಿದರುಗಳು:

ಇನ್ನು, ಸಲ್ಲು ಬಾಯ್ ಅಭಿನಯದ ಕಬಿ ಈದ್ ಕಬಿ ದಿವಾಲಿ ಚಿತ್ರ ಅನೇಕ ಕಾರಣಗಳಿಂದ ಮುನ್ನಲೆಯಲ್ಲಿತ್ತು. ಅದರಲ್ಲಿಯೂ ಮೊದ ಮೊದಲು ಚಿತ್ರತಮಡ ಸೇರಿಕೊಂಡ ಅನೇಕ ನಟ, ನಟಿಯರು ಚಿತ್ದಿಂದ ಹೊರ ನಡೆದಿದ್ದರು. ಹೌದು, ಚಿತ್ರದ ನಿರ್ದೇಶಕ ಫರ್ಹಾದ್ ಸಾಮ್ಜಿ, ನಿರ್ಮಾಪಕ ಸಾಜಿದ್ ನಾದಿಯಾವಾಲಾ ಹಾಗೂ ಸಲ್ಮಾನ್ ಖಾನ್ ತಂಗಿಯ ಪತಿ ಆಯುಷ್ ಶರ್ಮಾ ಚಿತ್ರದಿಂದ ಹೊರ ನಡೆಯುವುದರ ಮೂಲಕ ದೊಡ್ಡ ಮಟ್ಟದಲ್ಲಿ ಬಾಲಿವುಡ್ ಅಂಗಳದಲ್ಲಿ ಚಿತ್ರ ಸದ್ದು ಮಾಡಿತ್ತು. ಆದರೆ ಇದೀಗ, ಚಿತ್ಕ್ಕೆ ದಕ್ಷಿಣದ ಅನೇಖ ಕಲಾವಿದರುಗಳು ಸೇರಿಕೊಳ್ಳುತ್ತಿರುವುದು ಮತ್ತೆ ಹೊಸ ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: Veera Kambala: ಅಕ್ಟೋಬರ್ ವೇಳೆಗೆ ‘ವೀರ ಕಂಬಳ‘ ಬಿಡುಗಡೆ, ಚಿತ್ರದ ಕುರಿತು ಮಾಹಿತಿ ಬಿಚ್ಚಿಟ್ಟ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು

ಹೊಸ ಸ್ಟ್ಯಾಟರ್ಜಿಯಲ್ಲಿ ಸಲ್ಲು ಬಾಯ್:

ಸಲ್ಮಾನ್ ಖಾನ್ ಈ ಬಾರಿ ದಕ್ಷಿಣದ ಕಲಾವಿದರುಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಸೌತ್ ಬೆಲ್ಟ್ ನಲ್ಲಿನ ಪ್ರೇಕಕರನ್ನು ಸೆಳೆಯುವ ನಿಟ್ಟಿನಲ್ಲಿ ಸಲ್ಮಾನ್ ಖಾನ್ ಮುಂದಿನ ಚಿತ್ರದ್ಲಲಿ ಅನೇಕ ಸೌತ್ ಸ್ಟಾರ್​ ಗಳನ್ನು ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಪೂಜಾ ಹೆಗ್ಡೆ, ನಟ ವೆಂಕಟೇಶ್, ಶೆಹನಾಜ್ ಗಿಲ್, ರಾಘವೇಂದ್ರ ಸಿದ್ಧರ್ಥ್, ಮಾಳವಿಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವು ಡಿಸೆಂಬರ್‌ 2022ರಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.
Published by:shrikrishna bhat
First published: