ದಕ್ಷಿಣದ ಸಿನಿಮಾಗಳು ಉತ್ತರ (North India) ಭಾರತದಲ್ಲಿ ಕಮಾಲ್ ಮಾಡುತ್ತಿವೆ. ಸಿನಿಮಾ ಪ್ರೇಮಿಗಳು ಅಲ್ಲಿಯ ಸಿನಿಮಾ ಬಿಟ್ಟು, ಇಲ್ಲಿಯ ಕಥೆಗಳಿಗೆ ಮನಸೋತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣದ ಸಿನಿಮಾಗಳು ಬಾಲಿವುಡ್ ನಲ್ಲಿ ಭಾರೀ ಸೌಂಡ್ ಮಾಡುತ್ತಿವೆ. ಇದರಿಂದ ಹಿಂದಿ (Bollywood Cinema) ಭಾಷೆಯ ಸಿನಿಮಾಗಳಲ್ಲಿ ಒಂದು ರೀತಿ ದ್ವಂದ್ವವೂ ಶುರು ಆಗಿದೆ. ಆದರೆ, ದಕ್ಷಿಣದ ಸಿನಿಮಾಗಳು ಈಗ ಕೇವಲ ಉತ್ತರ ಭಾರತದಲ್ಲಿ ರಿಲೀಸ್ ಆಗುತ್ತಿಲ್ಲ. ದೂರದ ವಿದೇಶದಲ್ಲೂ ತಮ್ಮ ಸೆಳೆತವನ್ನ ಇಟ್ಟುಕೊಂಡಿವೆ. ಅದರಂತೆ ಥೈಲ್ಯಾಂಡ್ (Thailand) ದೇಶದಲ್ಲೂ ದಕ್ಷಿಣದ ಅನೇಕ ಸಿನಿಮಾಗಳು ಮೋಡಿ ಮಾಡಿವೆ. ಇಲ್ಲಿಯ ಒಬ್ಬ ಬಟ್ಟೆ ಅಂಗಡಿಯ ಮಾಲೀಕನನ್ನ ಕೇಳಿದ್ರು ಸಾಕು. ರಾಕಿ ಭಾಯ್ ಅಂತಾರೆ. ಟ್ರಿಪಲ್ ಆರ್ ಅಂತಲೂ ಹೇಳ್ತಾರೆ. ಈಗೀಗ ಅಂತೂ ಕಾಂತಾರ (Kantara) ಅಂತಲೇ ಉಚ್ಚರಿಸುತ್ತಿದ್ದಾರೆ.
ಥೈಲ್ಯಾಂಡ್ ನಲ್ಲಿ ಯಾಕೆ ದಕ್ಷಿಣದ ಸಿನಿಮಾ ರಿಲೀಸ್ ಆಗ್ತಿವೆ.?
ದಕ್ಷಿಣದ ಸಿನಿಮಾಗಳಿಗೆ ಈ ಮೊದಲು ಸೀಮಿತ ಜಾಗ ಇತ್ತು. ಆಯಾ ರಾಜ್ಯದಲ್ಲಿಯೇ ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಅವುಗಳನ್ನ ಉತ್ತರದ ಜನ ನೋಡ್ತಾನೇ ಇರಲಿಲ್ಲ. ಟಿವಿಯಲ್ಲಿ ಹಿಂದಿ ಡಬ್ಬಿಂಗ್ ಬಂದ್ರೆ ಮಾತ್ರ ಅದನ್ನ ನೋಡಿ ಇಷ್ಟ ಪಡ್ತಾಯಿದ್ದರು.
ಆದರೆ ಈಗ ಆ ಸಮಸ್ಯೆ ಇಲ್ಲ ಬಿಡಿ. ದಕ್ಷಿಣದಲ್ಲೂ ಒಳ್ಳೆ ಕಂಟೆಂಟ್ ಸಿನಿಮಾ ಬರುತ್ತಿವೆ. ಇವುಗಳನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತಯಾರಿ ಮಾಡುತ್ತಿದ್ದಾರೆ. ಹಾಗಾಗಿಯೇ ದಕ್ಷಿಣದ ಬಹುತೇಕ ಸಿನಿಮಾಗಳು ನೇರವಾಗಿಯೇ ಹಿಂದಿಯಲ್ಲಿ ರಿಲೀಸ್ ಆಗುತ್ತಿವೆ.
Now I understand why #777Charlie got released in Thailand. A guy from Thai is well aware of our movies. He says,"#KGFChapter2 Rocky Bhai is my hero❤️ and he relates #Kantara to his Thailand old tradition🙏". @TheNameIsYash @shetty_rishabpic.twitter.com/mTj5D1qV7W
— MNV Gowda (@MNVGowda) December 1, 2022
ಥೈಲ್ಯಾಂಡ್ನಲ್ಲೂ ದಕ್ಷಿಣದ ಸಿನಿಮಾಗಳ ಭಾರೀ ಕ್ರೇಜ್!
ಥೈಲ್ಯಾಂಡ್ ನಲ್ಲಿ ದಕ್ಷಿಣದ ಬಹುತೇಕ ಸಿನಿಮಾಗಳು ಈಗ ರಿಲೀಸ್ ಆಗುತ್ತಿವೆ. ತೆಲುಗು, ತಮಿಳು, ಹಿಂದಿ ಹೀಗೆ ಎಲ್ಲ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಕನ್ನಡದ ಸಿನಿಮಾಗಳು ಇಲ್ಲಿ ಭಾರೀ ಕ್ರೇಜ್ ಹುಟ್ಟಿಸಿವೆ. ಇದರಿಂದ ಇಲ್ಲಿಯ ಜನಕ್ಕೆ ರಾಕಿ ಭಾಯ್ ಗೊತ್ತಿದೆ. ಕಾಂತಾರ ಸಿನಿಮಾದ ಪರಿಚಯ ಕೂಡ ಇದೆ.
ಥೈಲ್ಯಾಂಡ್ನ ಒಬ್ಬ ಬಟ್ಟೆ ಅಂಗಡಿಯ ಮಾಲೀಕನಿಗೂ ರಾಕಿ ಭಾಯ್ ಗೊತ್ತಿದ್ದಾರೆ. ಪುಷ್ಪ ಚಿತ್ರದ "ಜುಕೆಗಾ ನಹೀ" ಡೈಲಾಗ್ ಗೊತ್ತಿದೆ. ಅಷ್ಟೇ ಯಾಕೆ? ಟ್ರಿಪಲ್ ಆರ್ ಸಿನಿಮಾ ಕೂಡ ನೋಡಿದ್ದಾರೆ. ಈ ಒಂದು ಸತ್ಯವನ್ನ ಕನ್ನಡದ ಯುವ ನಟ ವಿನಾಯಕ್ ಜೋಶಿ ಈಗ ಎಲ್ಲರಿಗೂ ತಿಳಿಸೋ ಪ್ರಯತ್ನ ಮಾಡಿದ್ದಾರೆ.
ಕನ್ನಡದ ನಟ ವಿನಾಯ ಜೋಶಿ ಥೈಲ್ಯಾಂಡ್ ವೀಡಿಯೋ ವೈರಲ್!
ಹಾಗೆ ವಿನಾಯಕ್ ಜೋಶಿ ಥೈಲ್ಯಾಂಡ್ ನಲ್ಲಿ ಮಾಡಿರೋ ವೀಡಿಯೋ ವೈರಲ್ ಆಗಿದೆ. ಆ ವೀಡಿಯೋದಲ್ಲಿ ಬಟ್ಟೆ ಅಂಗಡಿಯ ಒಬ್ಬ ಮಾಲೀಕ ತಮ್ಮ ಸಿನಿಮಾ ಕ್ರೇಜ್ ಬಗ್ಗೆ ಹೇಳಿಕೊಂಡಿದ್ದಾರೆ. ದಕ್ಷಿಣದ ಟ್ರಿಪಲ್ ಆರ್, ರಾಕಿ ಭಾಯ್, ಕಾಂತಾರ ಹೀಗೆ ಎಲ್ಲ ಸಿನಿಮಾಗಳ ಕುರಿತು ಮಾತನಾಡಿದ್ದಾರೆ.
ಹೀಗೆ ದಕ್ಷಿಣದ ಅನೇಕ ಸಿನಿಮಾಗಳು ಈಗ ಎಲ್ಲೆಡೆ ಮೋಡಿ ಮಾಡುತ್ತಲೇ ಇವೆ. ದೇಶ-ವಿದೇಶದಲ್ಲೂ ದಕ್ಷಿಣದ ಚಿತ್ರಗಳ ಜೋಶ್ ಜಾಸ್ತಿನೇ ಇದೆ. ಇದನ್ನ ನೋಡಿದ್ರೆ, ಇದು ಈಗಲೇ ನಿಲ್ಲೋದಿಲ್ಲ ಅನಿಸುತ್ತದೆ. ಕಾಂತಾರ ಸಿನಿಮಾ ಆದ್ಮೇಲೆ ಕನ್ನಡದ ಸಿನಿಮಾ ನಿರ್ಮಾಪಕರಿಗೆ ಕಾನ್ಫಿಡೆನ್ಸ್ ಜಾಸ್ತಿ ಬಂದಿದೆ.
ಇದನ್ನೂ ಓದಿ: Rishab Shetty: ತುಳುವಿನಲ್ಲಿ ಕಾಂತಾರ ರಿಲೀಸ್, ಕರಾವಳಿ ಜನರಿಗೆ ಸಂಭ್ರಮ: ಮಹತ್ವದ ಸಂದೇಶ ಕೊಟ್ಟ ರಿಷಬ್ ಶೆಟ್ಟಿ!
ಈ ಕಾರಣಕ್ಕೇನೆ ದಕ್ಷಿಣದಿಂದ ಒಳ್ಳೆ ಸಿನಿಮಾಗಳು ಮತ್ತಷ್ಟು ಇನ್ನಷ್ಟು ಅನ್ನೋ ಹಾಗೆ ಅತಿ ಹೆಚ್ಚು ಉತ್ತರದಲ್ಲಿ ರಿಲೀಸ್ ಆಗೋ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೆವಲ್ಗೇನೆ ರಿಲೀಸ್ ಆಗುತ್ತಿದೆ. ಇದು ಕೂಡ ಭಾರೀ ಕ್ರೇಜ್ ಹುಟ್ಟಿಸೋ ಕ್ರೇಜ್ ಕೂಡ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ