'ದಂಗಲ್' ಸಿನಿಮಾ ಮೆಚ್ಚಿದ ಕೊರಿಯಾ ಪ್ರಥಮ ಮಹಿಳೆ: ಪೋಗಟ್​​​ ಕುಟುಂಬಕ್ಕೆ ಚಹಾಕೂಟದ ಆಹ್ವಾನ

news18
Updated:July 11, 2018, 6:44 PM IST
'ದಂಗಲ್' ಸಿನಿಮಾ ಮೆಚ್ಚಿದ ಕೊರಿಯಾ ಪ್ರಥಮ ಮಹಿಳೆ: ಪೋಗಟ್​​​ ಕುಟುಂಬಕ್ಕೆ ಚಹಾಕೂಟದ ಆಹ್ವಾನ
news18
Updated: July 11, 2018, 6:44 PM IST
ನ್ಯೂಸ್ 18 ಕನ್ನಡ

ನವದೆಹಲಿ (ಜುಲೈ. 09): ಭಾರತದ ಖ್ಯಾತ ಕುಸ್ತಿ ಹಿನ್ನಲೆಯುಳ್ಳ ಪೋಗಟ್​​​ ಕುಟುಂಬ ಸದಸ್ಯರನ್ನು ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್​​ ಜಂಗ್ ಸೂಕ್​​ ಅವರು ಚಹಾ ಕೂಟಕ್ಕೆ ಆಹ್ವಾನಿಸಿದ್ದಾರೆ.

4 ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ದಂಪತಿ ಅಮೀರ್ ಖಾನ್ ಅವರ ‘ದಂಗಲ್​’ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಸಿನಿಮಾ ವೀಕ್ಷಿಸಿದ ಬಳಿಕ, ಇವರು ಪೋಗಟ್​​ ಕುಟುಂಬಕ್ಕೆ ಚಹಾಕೂಟದ ಆಹ್ವಾನ ನೀಡಿದ್ದಾರೆ. ಈ ಕುರಿತು ಸ್ವತಃ ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗಟ್ ಅವರೇ​ ತಿಳಿಸಿದ್ದಾರೆ.

2016 ರಲ್ಲಿ ಬಿಡುಗಡೆಯಾದ ಅಮಿರ್​​ ಖಾನ್​​​ರ ಸಿನಿಮಾ ‘ದಂಗಲ್’, ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಭರ್ಜರಿಯಾಗಿ ಪ್ರದರ್ಶನ ಕಂಡು, ​​ಬಾಕ್ಸ್​ ಆಫೀಸ್​ನಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆಕಂಡ ಸಿನಿಮಾಗಳ ಪೈಕಿ 'ದಂಗಲ್' ಮೊದಲ ಸ್ಥಾನದಲ್ಲಿದೆ. ಈ ಸಿನಿಮಾದಲ್ಲಿ ಮಹಾವೀರ್ ಸಿಂಗ್ ಪೋಗಟ್​ ಹಾಗೂ ಪುತ್ರೀಯರಾದ ಗೀತಾ ಮತ್ತು ಬಬಿತಾರ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡಲಾಗಿತ್ತು.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...