ಎಸ್ಎಸ್ ರಾಜಮೌಳಿ (SS Rajamouli) ನಿರ್ದೇಶನದ ಆರ್ಆರ್ಆರ್ (RRR) ಸಿನಿಮಾದ ನಾಟು ನಾಟು ಸಾಂಗ್ ಸಖತ್ ಫೇಮಸ್ ಆಗಿದೆ. ಈ ಹಾಡಿನ ಮ್ಯಾಜಿಕ್ ಯಾರೊಬ್ಬರನ್ನೂ ಬಿಟ್ಟಿಲ್ಲ. ಅವಾರ್ಡ್ಗಳ (Awards) ಮೇಲೆ ಅವಾರ್ಡ್ಗಳನ್ನು ಪಡೆಯುತ್ತಿರುವ ಈ ಹಾಡಿಗೆ ದಕ್ಷಿಣ ಕೊರಿಯಾದ ಜನ ಕೂಡಾ ಮರುಳಾಗಿದ್ದಾರೆ. ಸೌತ್ ಕೊರಿಯಾ (South Korea) ರಾಯಭಾರಿ ನಾಟು ನಾಟು (Natu Natu) ಆರ್ಆರ್ಆರ್ ಡ್ಯಾನ್ಸ್ ಕವರ್-ಭಾರತದಲ್ಲಿ ಕೊರಿಯನ್ ರಾಯಭಾರಿ. ನಿಮಗೆ ನಾಟು ಗೊತ್ತಾ? ಸೌತ್ ಕೊರಿಯಾದ ರಾಯಭಾರಿ ಚಂಗ್ ಜಾಯ್ ಬೊಕ್ ತಮ್ಮ ಸಿಬ್ಬಂದಿಯೊಂದಿಗೆ (Staff) ನಾಟು ನಾಟು ಮಾಡಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.
53 ಸೆಕುಂಡುಗಳ ಈ ವಿಡಿಯೋದಲ್ಲಿ ಕೊರಿಯಾ ಹಾಗೂ ಭಾರತೀಯ ಉದ್ಯೋಗಿಗಳು ನಾಟು ನಾಟು ಹಾಡಿಗೆ ಹೆಜ್ಜೆ ಹಾಕುವುದನ್ನು ಕಾಣಬಹುದು. ಚಂಗ್ ಅವರು ಸೌತ್ ಕೊರಿಯಾದ ಭಾರತದ ರಾಯಭಾರಿ. ಅವರು ರಾಮ್ ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಡ್ಯಾನ್ಸ್ ಮಾಡಿದ ಹಾಡಿಗೆ ಹೆಜ್ಜೆ ಹಾಕಿದ್ದು ವಿಶೇಷ.
ವಿಡಿಯೋ ನೋಡಿ ನೆಟ್ಟಿಗರು ಖುಷ್
ನೆಟ್ಟಿಗರು ವಿಡಿಯೋವನ್ನು ಎಂಜಾಯ್ ಮಾಡಿದ್ದು ಕಮೆಂಟ್ ಸೆಕ್ಷನ್ನಲ್ಲಿ ಹೊಗಳಿದ್ದಾರೆ. ತಾರಕ್ ಅವರಿಗೆ ಕಠಿಣ ಸ್ಪರ್ಧೆ ಕೊಟ್ಟಿದ್ದಕ್ಕೆ ಆಸ್ಕರ್ ಚಂಗ್ ಅವರಿಗೆ ಹೋಗುತ್ತದೆ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ. ಎಂಎಂ ಕೀರವಾಣಿ ಕಂಪೋಸ್ ಮಾಡಿದ ಈ ಹಾಡು 2022ರಲ್ಲಿ ಹಿಟ್ ಹಾಡಾಗಿ ಹೊರಹೊಮ್ಮಿದೆ.
𝐍𝐚𝐚𝐭𝐮 𝐍𝐚𝐚𝐭𝐮 𝐑𝐑𝐑 𝐃𝐚𝐧𝐜𝐞 𝐂𝐨𝐯𝐞𝐫 - 𝐊𝐨𝐫𝐞𝐚𝐧 𝐄𝐦𝐛𝐚𝐬𝐬𝐲 𝐢𝐧 𝐈𝐧𝐝𝐢𝐚
Do you know Naatu?
We are happy to share with you the Korean Embassy's Naatu Naatu dance cover. See the Korean Ambassador Chang Jae-bok along with the embassy staff Naatu Naatu!! pic.twitter.com/r2GQgN9fwC
— Korea Embassy India (@RokEmbIndia) February 25, 2023
ನಾಟು ನಾಟು ಹಾಡು ಮತ್ತು ಡ್ಯಾನ್ಸ್ ಬರೀ ನಮ್ಮ ದೇಶದಲ್ಲಿ ಅಷ್ಟೇ ತನ್ನ ಹವಾ ಸೃಷ್ಟಿಸಿಲ್ಲ, ನೆರೆಯ ದೇಶ ಪಾಕಿಸ್ತಾನದಲ್ಲಿಯೂ ಸಹ ಈ ಹಾಡಿಗೆ ಫ್ಯಾನ್ಸ್ ಫಿದಾ ಆಗಿ ಸ್ಟೆಪ್ ಹಾಕಿದ್ದಾರೆ.
ಮದುವೆಯಲ್ಲಿ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ ಪಾಕ್ ನಟಿ
ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಕೂಡ ಈ ಹಾಡಿಗೆ ಮತ್ತು ಡ್ಯಾನ್ಸ್ ಗೆ ದೊಡ್ಡ ಫ್ಯಾನ್ ಅಂತ ಹೇಳಬಹುದು. ಇದು ನಿಮಗೆ ಹೇಗೆ ಗೊತ್ತು ಅಂತ ನೀವು ಕೇಳಬಹುದು. ಮದುವೆ ಸಮಾರಂಭವೊಂದರಲ್ಲಿ ನಟಿ ‘ನಾಟು ನಾಟು’ ಹಾಡಿಗೆ ಸಖತ್ತಾಗಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ಆನ್ಲೈನ್ ನಲ್ಲಿ ಕಾಣಿಸಿಕೊಂಡಿದೆ.
View this post on Instagram
ವೈರಲ್ ಆಗುತ್ತಿದೆ ಈ ಡ್ಯಾನ್ಸ್ ವೀಡಿಯೋ
ಈ ವೀಡಿಯೋವನ್ನು ಒಂದು ದಿನದ ಹಿಂದೆಯಷ್ಟೆ ಹಂಚಿಕೊಂಡಿದ್ದು, ಇದುವರೆಗೂ 3,900 ಕ್ಕಿಂತಲೂ ಹೆಚ್ಚು ಲೈಕ್ ಗಳು ಬಂದಿವೆ. ಇದನ್ನು ನೋಡಿದ ನೆಟ್ಟಿಗರು ತಾ ಮುಂದು ನಾ ಮುಂದು ಅಂತ ಕಾಮೆಂಟ್ ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಅಂತ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ