• Home
 • »
 • News
 • »
 • entertainment
 • »
 • ಲೀಕ್ ಆಯ್ತು ಟಾಪ್ ಹೀರೋಯಿನ್​ಗಳ ಸಂಭಾವನೆ ಪಟ್ಟಿ: ಒಂದು ಸಿನಿಮಾಕ್ಕೆ ಎಷ್ಟು ಕೇಳಿದ್ರೆ ಶಾಕ್ ಆಗ್ತೀರಾ!

ಲೀಕ್ ಆಯ್ತು ಟಾಪ್ ಹೀರೋಯಿನ್​ಗಳ ಸಂಭಾವನೆ ಪಟ್ಟಿ: ಒಂದು ಸಿನಿಮಾಕ್ಕೆ ಎಷ್ಟು ಕೇಳಿದ್ರೆ ಶಾಕ್ ಆಗ್ತೀರಾ!

ಲೀಕ್ ಆಯ್ತು ಟಾಪ್ ಹೀರೋಯಿನ್​ಗಳ ಸಂಭಾವನೆ ಪಟ್ಟಿ

ಲೀಕ್ ಆಯ್ತು ಟಾಪ್ ಹೀರೋಯಿನ್​ಗಳ ಸಂಭಾವನೆ ಪಟ್ಟಿ

ಅತಿಹೆಚ್ಚು ಸಂಭಾವನೆ ಪಡೆಯುವ ನಟ- ನಟಿಯರ ಬಗ್ಗೆ ತಿಳಿದುಕೊಳ್ಳುವ ಹಂಬಲ ಅವರ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಇರೋದು ಸಹಜ. ಸದ್ಯ ನಟಿಯರ ಸಂಭಾವನೆ ಪಟ್ಟಿಯೊಂದು ಸೋರಿಕೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 • Share this:

  ರಂಗು ರಂಗಿನ ಸಿನಿಮಾ ಜಗತ್ತಿನಲ್ಲಿ ಸ್ಟಾರ್ ನಟರ ಸಂಭಾವನೆ, ಆ ಸಿನಿಮಾದ ಬಜೆಟ್, ಲಾಭ ಎಲ್ಲವೂ ಚರ್ಚೆಯಾಗುತ್ತಾ ಇರುತ್ತದೆ. ಆದರೆ, ನಟಿಯರ ಸಂಭಾವನೆ ಕುರಿತು ಸಿನಿ ಅಭಿಮಾನಿಗಳು ಅಷ್ಟಾಗಿ ಗಮನ ಹರಿಸಲ್ಲ. ಸಾಮಾನ್ಯವಾಗಿ ಎಲ್ಲಾ ಸಿನಿಮಾ ಇಂಡಸ್ಟ್ರಿಗಳಲ್ಲೂ ನಟಿಯರಿಗಿಂತ ನಟರ ಸಂಭಾವನೆ ಹೆಚ್ಚಾಗಿರುತ್ತದೆ. ಏಕೆಂದರೆ ಅವರು ಆ್ಯಕ್ಟಿಂಗ್ ಜೊತೆಗೆ ಫೈಟಿಂಗ್, ರೊಮ್ಯಾನ್ಸ್, ಡ್ಯಾನ್ಸ್ ಎಲ್ಲಾ ಮಾಡಬೇಕು. ಅದೇನೆ ಇದ್ದರು ಬೇಡಿಕೆ ಇದ್ದವರಿಗೆ ಮಾತ್ರ ಇಂಡಸ್ಟ್ರಿಯಲ್ಲಿ ಒಳ್ಳೆಯ ಸಂಭಾವನೆ ಕೊಡಲಾಗುತ್ತೆ ಎನ್ನುವುದು ವಾಸ್ತವ. ಒಂದೇ ಸಿನಿಮಾ ಮಾಡಿ ಸ್ಟಾರ್ ಆದವರು, ಸಂಭಾವನೆಯನ್ನು ಕೂಡ ಡಬಲ್, ತ್ರಿಬಲ್ ಮಾಡಿಕೊಂಡಿದ್ದಾರೆ.


  ಆದರೆ, ಎಷ್ಟೇ ದೊಡ್ಡ ನಟಿಯಾದರೂ ಬೇಡಿಕೆ ಕುಸಿದರೆ ಸಂಭಾವನೆಯೂ ಸಹಜವಾಗಿ ಕಮ್ಮಿಯಾಗುತ್ತೆ. ಸಿನಿಮಾಗಳು ಕಮ್ಮಿಯಾಗುತ್ತೆ. ಒಂದು ಕಾಲದಲ್ಲಿ ಟಾಪ್ ನಟಿಯರಾಗಿ ಮಿಂಚಿದ್ದ ತಾರೆಯರು ಇಂದು ಕಡಿಮೆ ಸಂಭಾವನೆ ಪಡೆದು ನಟಿಸುತ್ತಿರುವ ಸುದ್ದಿ ನಾವು ಕೇಳಿಯೇ ಇರುತ್ತೇವೆ.


  Mayuri: ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಮಯೂರಿ: ಬೇಬಿ ಬಂಪ್​ ಫೋಟೋ ಹಂಚಿಕೊಂಡ ನಟಿ..!


  ಅತಿಹೆಚ್ಚು ಸಂಭಾವನೆ ಪಡೆಯುವ ನಟ- ನಟಿಯರ ಬಗ್ಗೆ ತಿಳಿದುಕೊಳ್ಳುವ ಹಂಬಲ ಅವರ ಅಭಿಮಾನಿಗಳಿಗೆ ಹಾಗೂ ಸಿನಿಪ್ರಿಯರಿಗೆ ಇರೋದು ಸಹಜ. ಅದರಂತೆ ಸದ್ಯ ನಟಿಯರ ಸಂಭಾವನೆ ಪಟ್ಟಿಯೊಂದು ಸೋರಿಕೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿದೆ. ಇದು ತಮಿಳು ಚಿತ್ರರಂಗದ ನಾಯಕಿಯರ ಸಂಭಾವನೆ ಪಟ್ಟಿಯಾಗಿದೆ. ಟಾಲಿವುಡ್.ನೆಟ್ ಈ ಸುದ್ದಿ ಪ್ರಕಟಮಾಡಿದೆ.


  ಇದರಲ್ಲಿ ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರ ಒಂದು ಸಿನಿಮಾಕ್ಕೆ ಬರೋಬ್ಬರಿ 4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ಹೇಳಲಾಗಿದೆ. ಅಲ್ಲದೆ ಕಾಲಿವುಡ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಟಾಪ್ ನಟಿ ಆಗಿದ್ದಾರೆ.


  ಎರಡನೇ ಸ್ಥಾನದಲ್ಲಿ ಇತ್ತಿಚೆಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಕಾಜಲ್ ಅಗರ್ವಾಲ್ ಇದ್ದು, ಇವರು ಒಂದು ಸಿನಿಮಾಕ್ಕೆ 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ತ್ರಿಶಾ ಕೃಷ್ಣನ್ ಹಾಗೂ ಮಿಲ್ಕ್ ಬ್ಯೂಟಿ ತಮನ್ನಾ ಭಾಟಿಯಾ ಒಂದು ಸಿನಿಮಾಕ್ಕೆ ತಲಾ 1.5 ಕೋಟಿ ರೂ. ಹೇಳುತ್ತಾರಂತೆ.


  Akshay Kumar: ಹೊಸ ಸಿನಿಮಾಗೆ ಅಕ್ಷಯ್​ ಕುಮಾರ್​ ಪಡೆಯಲಿರುವ ಸಂಭಾವನೆ ನೂರು ಕೋಟಿಯಂತೆ..!


  ಉಳಿದಂತೆ ಶ್ರುತಿ ಹಾಸನ್​- 1 ಕೋಟಿ ರೂ., ಕೀರ್ತಿ ಸುರೇಶ್​- 80 ಲಕ್ಷ ರೂ., ಅಂಜಲಿ- 70 ಲಕ್ಷ ರೂ., ರೆಜಿನಾ ಕ್ಯಾಸಂದ್ರ- 60 ಲಕ್ಷ ರೂ., ಶ್ರೀಯಾ ಸರಣ್​- 50 ಲಕ್ಷ ರೂ., ಐಶ್ವರ್ಯಾ ರಾಜೇಶ್​, ಪ್ರಿಯಾ ಆನಂದ್, ನಿವೇದಿತಾ ಪೆತುರಾಜ್​, ಶ್ರೀ ದಿವ್ಯಾ- 40 ಲಕ್ಷ ರೂ., ನಿವೇದಿತಾ ಥಾಮಸ್​, ಮಂಜಿಮಾ ಮೋಹನ್​- 30 ಲಕ್ಷ ರೂ. ಹಾಗೂ ತಮಿಳು ಚಿತ್ರರಂಗದಲ್ಲಿ ಹೆಚ್ಚು ಮಿಂಚುತ್ತಿರುವ ಕನ್ನಡತಿ ಶ್ರದ್ಧಾ ಶ್ರೀನಾಥ್​- 10 ಲಕ್ಷ ರೂ. ಒಂದು ಸಿನಿಮಾಕ್ಕೆ ಸಂಭಾವನೆಯಾಗಿ ಪಡೆಯುತ್ತಿದ್ದಾರಂತೆ.

  Published by:Vinay Bhat
  First published: