ಇನ್ನು ಮೂರ್ನಾಲ್ಕು ತಿಂಗಳು ಸಿನಿ ಜಾತ್ರೆ: ಸ್ಟಾರ್ಸ್​ಗಳದ್ದೇ ದರ್ಬಾರು..!

ಏಪ್ರಿಲ್ 1ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನನಾಗಿ ತೆರೆಮೇಲೆ ಅಬ್ಬರಿಸಲಿದ್ದಾರೆ. ರಾಜಕುಮಾರ ನಂತರ ಸಂತೋಷ್ ಆನಂದ್ ರಾಮ್ ಹಾಗೂ ಅಪ್ಪು ಕಾಂಬಿನೇಷನ್ ಚಿತ್ರ ಇದಾಗಿದ್ದು, ಸ್ಯಾಂಡಲ್ ವುಡ್ ಅಲ್ಲದೇ ಸೌತ್ ಸಿನಿ ದುನಿಯಾದಲ್ಲೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ ಹೊಡೆತದಿಂದ ತತ್ತರಿಸಿದ್ದ ಚಿತ್ರರಂಗ ಮತ್ತೆ ಚೇತರಿಸಿಕೊಳ್ಳುತ್ತಿದೆ. ಸ್ಟಾರ್ ನಟರ ಸಿನಿಮಾಗಳು ಒಂದೊಂದಾಗಿಯೇ ತೆರೆಗೆ ಬರುತ್ತಿವೆ. ತಕ್ಕ ಮಟ್ಟಿಗೆ ಪ್ರೇಕ್ಷಕರನ್ನ ಸೆಳೆಯುತ್ತಿವೆ. ಈಗ ಟಾಲಿವುಡ್ ಮಾಸ್ ಮಹಾರಾಜ ಖಾಕಿ ತೊಟ್ಟು ಚಿತ್ರಮಂದಿರಕ್ಕೆ ಬಂದಿದ್ದಾರೆ. ಕ್ರ್ಯಾಕ್ ಎಂಬ ಸಿನಿಮಾ ಮೂಲಕ ಅಬ್ಬರಿಸುತ್ತಿದ್ದಾರೆ. ಕ್ರ್ಯಾಕ್ ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು ಚಿತ್ರಪ್ರೇಮಿಗಳನ್ನ ಸೆಳೀತಾ ಇದೆ.
ಇನ್ನು ಮುಂದಿನ ವಾರ ವಿಜಯ್ ದಳಪತಿ ನಟನೆಯ ಮಾಸ್ಟರ್ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಲಿದೆ.

ಲೋಕೇಶ್ ಕನಗಾರಾಜ್ ನಿರ್ದೇಶನದ ಈ ಸಿನಿಮಾ ಟೀಸರ್ ನಿಂದಲೇ ಸೌಂಡ್ ಮಾಡುತ್ತಿದೆ. ಕಳೆದ ಮಾರ್ಚ್ ನಲ್ಲಿಯೇ ರಿಲೀಸ್ ಆಗಬೇಕಿದ್ದ ಈ ಸಿನಿಮಾ ಕೊರೋನಾ ಕಾರಣದಿಂದ ತಡವಾಗಿತ್ತು. ಈಗ ಪ್ರೇಕ್ಷಕರನ್ನ ಥಿಯೇಟರ್ ನತ್ತ ಸೆಳೆಯೋಕೆ ಸಂಕ್ರಾಂತಿ ಹಬ್ಬದಂದು ತೆರೆಗೆ ಬರುತ್ತಿದೆ. ತಮಿಳು ನಾಡಿನಲ್ಲಿ ರಜಿನಿಕಾಂತ್ ಬಿಟ್ರೆ ಅತಿಹೆಚ್ಚು ಅಭಿಮಾನಿಗಳನ್ನ ಹೊಂದಿದ ನಟ ವಿಜಯ್. ಹೀಗಾಗಿ ಕೊರೋನಾ ಕೂಡ ವಿಜಯ್ ಆರ್ಭಟಕ್ಕೆ ಹೆದರೋದ್ರಲ್ಲಿ ಡೌಟೇ‌ ಇಲ್ಲ.

ಬಾಕ್ಸಾಫಿಸ್ ನಲ್ಲಿ ಹೊಸ ಅಲೆ ಸುನಾಮಿ, ಸುಂಟರಗಾಳಿ ಕ್ರಿಯೇಟ್ ಆಗೋದ್ರಲ್ಲಿ ಎರಡು ಮಾತೇ ಇಲ್ಲ ಎನ್ನಲಾಗುತ್ತಿದೆ. ಇದರ ನಡುವೆ ಮಾಸ್ಟರ್ ಗಾಗಿಯೇ ಶೇಕಡಾ 50 ರಷ್ಟು ಮಾತ್ರ ಇದ್ದ ಸೀಟುಗಳ ಭರ್ತಿಯನ್ನ 100% ಗೆ ಮಾಡಿತ್ತು ತಮಿಳುನಾಡು ಸರ್ಕಾರ. ಆದರೆ ಇದರ ವಿರುದ್ಧ ಕೇಂದ್ರದ ಕೆಂಗಣ್ಣು ಬೀರಿದ್ದು, ಕೇವಲ 50% ಸೀಟಿಂಗ್ ಕೆಪಾಸಿಟಿಯ ನಡುವೆಯೇ ಮಾಸ್ಟರ್ ಪ್ರದರ್ಶನ ಕಾಣಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

ಹೀಗಿದ್ದು ಸಹ ಬಾಕ್ಸಾಫಿಸ್ ನಲ್ಲಿ ಮಾಸ್ಟರ್ ಸ್ಟ್ರೋಕ್ ಕೊಡೋ ಉತ್ಸಾಹದಲ್ಲಿದ್ದಾರೆ. ವಿಜಯ್ ಸಿನಿಮಾದ ಫಲಿತಾಂಶ ಮುಂದಿನ ಸಿನಿಮಾಗಳಿಗೂ ಎಕ್ಸಾಂಪಲ್ ಆಗಿದ್ದು, ಬೇರೆ ಬೇರೆ ಭಾಷೆಯ ದೊಡ್ಡ ದೊಡ್ಡ ಚಿತ್ರಗಳು ಚಿತ್ರಮಂದಿರಕ್ಕೆ ಬರಲು ಕ್ಯೂ ನಲ್ಲಿವೆ.

ಕನ್ನಡದಲ್ಲಿ ಫೆಬ್ರವರಿ ‌ಮೊದಲ ವಾರ ಪೊಗರು ಸಿನಿಮಾ ತೆರೆ ಕಾಣುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಆಕ್ಷನ್ ಪ್ರಿನ್ಸ್ ಧ್ರುವ ನಟನೆಯ ‌ನಾಲ್ಕನೆ ಸಿನಿಮಾ ಇದಾಗಿದೆ. ಈಗಾಗಲೇ ಟೀಸರ್ ಹಾಗೂ ಸಾಂಗ್ಸ್ ಗಳಿಂದ್ಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.  ಧ್ರುವ ಕೆರಿಯರ್ ನ ಮತ್ತೊಂದು ಮೈಲಿಗಲ್ಲಾಗೋ ನಿರೀಕ್ಷೆ ಹುಟ್ಟಿಸಿದೆ.

ಪೊಗರು ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ರಿಲೀಸ್ ಆಗಲಿದೆ. ಶಿವರಾತ್ರಿ ಪ್ರಯುಕ್ತ ಮಾರ್ಚ್ 11 ಕ್ಕೆ ರಾಬರ್ಟ್‌ ಶೆಡ್ಯೂಲ್ ಆಗಿದೆ. ಡಿ-ಬಾಸ್ ಕರಿಯರ್ ನ ಮೈಲಿಗಲ್ಲಾಗೋ ಭರವಸೆ ರಾಬರ್ಟ್ ಮೇಲಿದೆ. ಏನಿಲ್ಲವೆಂದರೂ 150 ಕೋಟಿ ಬ್ಯುಸಿನೆಸ್ ಮಾಡೋ ನಿರೀಕ್ಷೆ ಹುಟ್ಟಿಸಿದೆ‌.

ಇನ್ನು ಏಪ್ರಿಲ್ 1ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನನಾಗಿ ತೆರೆಮೇಲೆ ಅಬ್ಬರಿಸಲಿದ್ದಾರೆ. ರಾಜಕುಮಾರ ನಂತರ ಸಂತೋಷ್ ಆನಂದ್ ರಾಮ್ ಹಾಗೂ ಅಪ್ಪು ಕಾಂಬಿನೇಷನ್ ಚಿತ್ರ ಇದಾಗಿದ್ದು, ಸ್ಯಾಂಡಲ್ ವುಡ್ ಅಲ್ಲದೇ ಸೌತ್ ಸಿನಿ ದುನಿಯಾದಲ್ಲೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಇದೆಲ್ಲದರ ಜೊತೆ ಏಪ್ರಿಲ್ 5 ರಂದು ಟಾಲಿವುಡ್ ಪವರ್ ಸ್ಟಾರ್ ವಕೀಲ್ ಸಾಬ್ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ವಾದ ಮಾಡೋಕೆ ಬರಲು ರೆಡಿಯಾಗ್ತಿದ್ದಾರೆ. ೨೦೧೮ ರಲ್ಲಿ ಅಜ್ಞಾತವಾಸಿ ಅವತಾರ ತಾಳಿದ ನಂತರ ಬೆಳ್ಳಿತೆರೆ ಮೇಲೆ ಪವನ್ ಕಾಣಿಸಿಕೊಂಡಿಲ್ಲ. ಹೀಗಾಗಿ ಅಭಿಮಾನಿಗಳಿಗೆ ಪವನ್ ರನ್ನ ಥಿಯೇಟರ್ ನಲ್ಲಿ ನೋಡೋ ಕಾತುರ ಅತುರ ಈಗಿನಿಂದಲೇ ಸ್ಟಾರ್ಟ್ ಆಗಿದೆ. ಒಟ್ಟಾರೆ ಇನ್ನು ಮೂರ್ನಾಲ್ಕು ತಿಂಗಳುಗಳ ಕಾಲ ಸ್ಟಾರ್ಸ್ ಜಾತ್ರೆಯೇ ನಡೆಯಲಿದ್ದು, ಚಿತ್ರಪ್ರೇಮಿಗಳಿಗಂತೂ ಹಬ್ಬವೋ ಹಬ್ಬ ಎನ್ನಬಹುದು.
Published by:zahir
First published: