Classic Movie: ಮಾನಸ ಸರೋವರ-ಸದ್ಮಾ ಎರಡೂ ಒಂದೇ ಕಥೆನಾ? ಎರಡರಲ್ಲೂ ಇತ್ತು ಪ್ರೀತಿಯ ಹುಚ್ಚು

ಒಂದು ಗಾಢವಾದ ಪ್ರೇಮ ಕಥೆಯ ದುರಂತ ಅಂತ್ಯ

ಒಂದು ಗಾಢವಾದ ಪ್ರೇಮ ಕಥೆಯ ದುರಂತ ಅಂತ್ಯ

1982 ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಒಳ್ಳೆ ರೆಸ್ಪಾನ್ಸ್ ಪಡೆಯಿತು. ವಿಜಯ್ ಭಾಸ್ಕರ್ ಅವರ ಸಂಗೀತದ ಹಾಡುಗಳೂ ಸೂಪರ್ ಹಿಟ್ ಆದವು. ಆದರೆ 1983 ರಲ್ಲಿ ಇನ್ನೂ ಒಂದು ಸಿನಿಮಾ ಬಂತು. ಇದು ಕನ್ನಡ ಸಿನಿಮಾ ಅಲ್ಲ ಅನ್ನೋದು ಕೂಡ ಅಷ್ಟೇ ಸತ್ಯ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಒಂದು ಕಾಲದಲ್ಲಿ ಒಳ್ಳೆ ಸಿನಿಮಾ (Classci Movie) ಯಾವುದು? ಕೆಟ್ಟ ಸಿನಿಮಾ ಯಾವುದು? ಇದನ್ನ ಹೇಳೋದು ಕಷ್ಟ ಅನಿಸುತ್ತಿತ್ತು. ಅದಕ್ಕೆ ಕಾರಣ ಅಂದು ಬಹುತೇಕ (Sadma Movie) ಸಮಾಜ ಮುಖಿ ಮತ್ತು ಸಂದೇಶ ಇರೋ ಚಿತ್ರಗಳೇ ಬರುತ್ತಿದ್ದವು. ಕಾಲ ಬದಲಾಗಿದೆ. ಪ್ರೇಕ್ಷಕರ ಅಭಿರುಚಿ ಕೂಡ ಚೇಂಜ್ ಆಗಿದೆ. ಇದರ (Maanasa Sarovara) ಆಧಾರದ ಮೇಲೆ ಕನ್ನಡದಲ್ಲಿ ಕೆಲವು ನಿರ್ದೇಶಕರು ಸಿನಿಮಾ ಮಾಡ್ತಾ ಇದ್ದರು. ಆ ಗ್ಯಾಪ್​ಲ್ಲಿಯೇ ರಿಮೇಕ್ (Kannada Super Hit Cinema) ಹಾವಳಿ ಶುರು ಆಗಿತ್ತು. ಅದರಿಂದ ಲಾಭ ಏನೂ ಇಲ್ಲ ಅಂದುಕೊಂಡು ಕುಳಿತಿದ್ದ ಟೈಮ್​​ನಲ್ಲಿ ಕಂಟೆಂಟ್​ ಆಧರಿಸಿದ ಚಿತ್ರಗಳನನ್ನ ನೋಡುವ ಜನರ ಸಂಖ್ಯೆ ಜಾಸ್ತಿ ಆಯಿತು.


ಇದರಿಂದ ಕನ್ನಡದಲ್ಲಿ ವಿಷಯ ಆಧಾರಿತ ಕಮರ್ಷಿಯಲ್ ಸಿನಿಮಾಗಳು ಬರುತ್ತಿವೆ. ಇವುಗಳನ್ನ ನೋಡಿದ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಗೆ ಬರ್ತಿರೋ ಈ ಚಿತ್ರಗಳಲ್ಲಿ ಕಲಾತ್ಮಕ ಚಿತ್ರಗಳ ಸ್ಪರ್ಶ ಕೂಡ ಇರುತ್ತದೆ.


South Indian Classic Movie Unknow Facts
ಡೈರೆಕ್ಟರ್ ಬಾಲು ಮಹೇಂದರ್ ಕಲ್ಪನೆಯಲ್ಲಿ ಸದ್ಮಾ ಸಿನಿಮಾ


ಒಂದು ಗಾಢವಾದ ಪ್ರೇಮ ಕಥೆಯ ದುರಂತ ಅಂತ್ಯ
ಅದೇ ರೀತಿನೇ ಒಂದು ಕಾಲದಲ್ಲಿ ಪುಟ್ಟಣ್ಣ ಕಣಗಾಲ್ ಅವರು ಮಾನಸ ಸರೋವರ ಅನ್ನುವ ಸಿನಿಮಾ ಮಾಡಿದ್ದರು. ಇದರಲ್ಲಿ ಅದ್ಭುತ ಕತೆ ಇತ್ತು. ಪ್ರಣಯ ರಾಜ ಶ್ರೀನಾಥ್ ಅವರು ವೈದ್ಯ ಆನಂದ್​ ಪಾತ್ರದಲ್ಲಿ ಅಭಿನಯಿಸಿದ್ದರು.
ಪದ್ಮಾ ವಾಸಂತಿ ಅವರು ವಾಸಂತಿ ಪಾತ್ರದಲ್ಲಿ ನಟಿಸಿದ್ದರು. ಇವರಿಗೆ ಇರೋ ಸಮಸ್ಯೆಯನ್ನ ಸರಿ ಪಡಿಸಲು ಡಾಕ್ಟರ್ ಆನಂದ್ ಸಾಕಷ್ಟು ಕಷ್ಟಪಡ್ತಾರೆ. ಕೊನೆಗೆ ವಾಸಂತಿಯನ್ನ ಗುಣಪಡಿಸುತ್ತಾರೆ.


ಪ್ರೀತಿಯ ವಿಭಿನ್ನ ನಿರೂಪಣೆಯ-ಮಾನಸ ಸರೋವರ!
ಆದರೆ ರಾಮಕೃಷ್ಣ ಅವರು ನಿರ್ವಹಿಸಿದ್ದ ಸಂತೋಷ್ ಅನ್ನುವ ಪಾತ್ರ ಇಲ್ಲಿ ಎಂಟ್ರಿ ಆಗುತ್ತದೆ. ಈ ರೋಲ್​​ ವಾಸಂತಿ ಮತ್ತು ಡಾಕ್ಟರ್ ಆನಂದ್ ನಡುವಿನ ಸಂಬಂಧವನ್ನ ಡೈವರ್ಟ್ ಮಾಡುತ್ತದೆ.


ಅಲ್ಲಿಗೆ ವಾಸಂತಿ ಮೇಲೆ ಪ್ರೀತಿ ಇಟ್ಟುಕೊಂಡಿದ್ದ ಡಾಕ್ಟರ್ ಆನಂದ್ ಹುಚ್ಚರಾಗುತ್ತಾರೆ. ಇದು ಒಟ್ಟು ಕಥೆ ಸಂಕ್ಷಿಪ್ತ ಎಳೆ ಆಗಿತ್ತು. ಇದನ್ನ ಪುಟ್ಟಣ್ಣ ಕಣಗಾಲ್ ಅವರು ಅದ್ಭುತವಾಗಿಯೇ ತೆಗೆದಿದ್ದರು.


ಮಾನಸ ಸರೋವರ ಸೂಪರ್ ಹಿಟ್ ಸಿನಿಮಾ
1982 ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಒಳ್ಳೆ ರೆಸ್ಪಾನ್ಸ್ ಪಡೆಯಿತು. ವಿಜಯ್ ಭಾಸ್ಕರ್ ಅವರ ಸಂಗೀತದ ಹಾಡುಗಳೂ ಸೂಪರ್ ಹಿಟ್ ಆದವು. ಆದರೆ 1983 ರಲ್ಲಿ ಇನ್ನೂ ಒಂದು ಸಿನಿಮಾ ಬಂತು. ಇದು ಕನ್ನಡ ಸಿನಿಮಾ ಅಲ್ಲ.


ಇದರಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರ ಮಾಡಿದ್ದರು. ನಟಿ ಶ್ರೀದೇವಿ ಇಲ್ಲಿ ತುಂಬಾ ಅದ್ಭುತ ಪಾತ್ರಕ್ಕೆ ಜೀವ ತುಂಬಿದ್ದರು. ಇಲ್ಲೂ ಒಂದು ಅಮರ ಪ್ರೇಮ ಕಥೆ ಇತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ ಕೂಡ ಕಾಡಿತ್ತು.


ಸದ್ಮಾ ಸಿನಿಮಾದ ಶಾಕಿಂಗ್ ಕ್ಲೈಮ್ಯಾಕ್ಸ್
ಈ ಚಿತ್ರವನ್ನ ಅಂದು ಬಾಲು ಮಹೇಂದರ್​ ಡೈರೆಕ್ಟ್ ಮಾಡಿದ್ದರು. ಹಾಗೆ ಇವರ ನಿರ್ದೇಶನದಲ್ಲಿ ಬಂದ ಆ ಚಿತ್ರದ ಹೆಸರು ಸದ್ಮಾ, ಈ ಚಿತ್ರ ಈಗಲೂ ಕಾಡುತ್ತದೆ. ಇದನ್ನ ನೋಡಿದ ಪ್ರತಿಯೊಬ್ಬ ಪ್ರೇಕ್ಷಕ ಕಟ್ಟ ಕಡೆಯ ಕ್ಲೈಮ್ಯಾಕ್ಸ್ ಕುರಿತು ಚರ್ಚೆ ಮಾಡುತ್ತಾರೆ.


ಅಷ್ಟು ಪರಿಣಾಮ ಬೀರೋ ಕ್ಲೈಮ್ಯಾಕ್ಸ್ ಈ ಚಿತ್ರದಲ್ಲಿತ್ತು. ಬಾಲಿವುಡ್​ ಮಂದಿಗಷ್ಟೇ ಅಲ್ಲದೆ, ತಮಿಳು ಪ್ರೇಕ್ಷಕರಲ್ಲೂ ಈ ಒಂದು ಚಿತ್ರ ಗಾಢವಾಗಿಯೇ ಇಳಿದು ಬಿಟ್ಟಿತ್ತು.


ಡೈರೆಕ್ಟರ್ ಬಾಲು ಮಹೇಂದರ್ ಕಲ್ಪನೆಯಲ್ಲಿ ಸದ್ಮಾ ಸಿನಿಮಾ
ನಿಜ, ಬಾಲು ಮಹೇಂದರ್ ಈ ಚಿತ್ರವನ್ನ ಮೂಂಡ್ರಮ್ ಪಿರೈ ಅಂತ ತಮಿಳಿನಲ್ಲೂ ಮಾಡಿದ್ದರು. ಇದು 1982 ರಲ್ಲಿ ರಿಲೀಸ್ ಆಗಿತ್ತು. ಹಿಟ್ ಕೂಡ ಆಯಿತು.


ಇದೇ ಚಿತ್ರವನ್ನೆ ಬಾಲು ಮಹೇಂದ್ರ ಹಿಂದಿಯಲ್ಲಿ ಸದ್ಮಾ ಹೆಸರಿನಲ್ಲಿ ಮಾಡಿದ್ದರು. ಇದು 1983 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಮುಗ್ದ ಹುಡುಗಿ ರೇಷ್ಮಿ ಪಾತ್ರದಲ್ಲಿ ಶ್ರೀದೇವಿ ನಟಿಸಿದ್ದರು. ಸೋಮು ಪಾತ್ರದಲ್ಲಿ ಕಮಲ್ ಹಾಸನ್ ಅಭಿನಯಿಸಿದ್ದರು.


ಹಾಗೆ ಅಚಾನಕ್ಕಾಗಿಯೇ ಸಿಗುವ ರೇಷ್ಮಿ ಇಲ್ಲಿ ಸೋಮು ಲೈಫ್ ಅಲ್ಲಿ ಹೊಸ ಉತ್ಸಾಹ ತುಂಬುತ್ತಾಳೆ. ಸೋಮು ಮನದಲ್ಲಿ ಪ್ರೀತಿಯನ್ನೂ ಹುಟ್ಟಿಸುತ್ತಾಳೆ. ಆದರೆ ಈ ಹುಡುಗಿಗೆ ಸೋಮು ಸೂಕ್ತ ಟ್ರೀಟ್​ಮೆಂಟ್ ಕೊಡಿಸುತ್ತಾನೆ.


South Indian Classic Movie Unknow Facts
ಕಮಲ್-ಶ್ರೀದೇವಿ ಸದ್ಮಾ ಎಲ್ಲರನ್ನ ಕಾಡುವ ಸಿನಿಮಾ


ಕಮಲ್-ಶ್ರೀದೇವಿ ಸದ್ಮಾ ಎಲ್ಲರನ್ನ ಕಾಡುವ ಸಿನಿಮಾ
ಆಗ ಈ ರೇಷ್ಮಿ ಗುಣ ಆಗುತ್ತಾಳೆ. ದುರಂತ ಅಂದ್ರೆ ಈ ಹುಡುಗಿ ಸೋಮುವನ್ನ ಗುರುತಿಸೋದೇ ಇಲ್ಲ. ಅಲ್ಲಿಗೆ ಮತ್ತೊಂದು ಹಾರ್ಟ್​ ಬ್ರೇಕಿಂಗ್ ಸ್ಟೋರಿ ಸದ್ಮಾ ಆಗಿ ಎಂಡ್ ಆಗುತ್ತದೆ. ಇಲ್ಲಿ ಒಂದು ಗಮನಿಸೋ ವಿಷಯ ಇದೆ. ಮಾನಸ ಸರೋವರಾ ಮತ್ತು ಸದ್ಮಾ 80ರ ದಶಕದಲ್ಲಿಯೇ ಬಂದಿವೆ.


ಇದನ್ನೂ ಓದಿ: Aalemane Movie: ಪತ್ನಿಯನ್ನು ನೆನಪಿಸಿಕೊಂಡು ನಮ್ಮೂರ ಮಂದಾರ ಹೂವೇ ಅಂದ್ರು! ಸೂಪರ್ ಹಿಟ್ ಹಾಡು ಹುಟ್ಟಿದ್ದು ಹೇಗೆ?


1982 ರಲ್ಲಿ ಮಾಸನ ಸರೋವರ ಚಿತ್ರ ರಿಲೀಸ್ ಆಗಿತ್ತು. 1983 ರಲ್ಲಿ ಕಮಲ್ ಹಾಸನ್ ಸದ್ಮಾ ಬಂದಿತ್ತು. ಎರಡರ ಮೂಲ ಎಳೆ ಪ್ರೀತಿಯನ್ನ ಕಳೆದುಕೊಳ್ಳುವುದೇ ಆಗಿತ್ತು. ಆದರೂ ಎರಡೂ ಸಿನಿಮಾಗಳು ಜನಕ್ಕೆ ಇಷ್ಟ ಆದವು. ಹಾಗಂತ ಎರಡೂ ಕಥೆ ಒಂದೇ ಅಂತ ಹೇಳೋಕೆ ಸಾಧ್ಯವೇ ಇಲ್ಲ ಬಿಡಿ.

First published: