ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ (Baahubali 2 complete 6 Years) ಎಬ್ಬಿಸಿದ್ದ ಬಾಹುಬಲಿ ಸಿನಿಮಾ ಇನ್ನಿಲ್ಲದಂತೆ ಕಿಚ್ಚು ಹಚ್ಚಿತ್ತು. ಚಿತ್ರದ ಪ್ರತಿ ದೃಶ್ಯವೂ ಅಷ್ಟೇ ಇಂಟ್ರಸ್ಟಿಂಗ್ ಆಗಿದ್ದವು. ಸಿನಿಮಾ ಬಂದ್ಮೇಲೆ ಅನೇಕ ನಿರ್ದೇಶಕರು (Biggest Hit Baahubali-2 Movie) ಎಸ್.ಎಸ್. ರಾಜಮೌಳಿ ರೀತಿಯ ಸಿನಿಮಾ ಮಾಡಬೇಕು ಅಂತ ಹಂಬಲಿಸಿದರು. ಇದರ ಬೆನ್ನಲ್ಲಿಯೇ ಬಾಹುಬಲಿ-2 ಸಿನಿಮಾ ಯಾವಾಗ ಬರುತ್ತದೆ ಅನ್ನುವ ಕುತೂಹಲದಲ್ಲೂ ಇದ್ದರು. ಹಾಗೆ ಬಾಹುಬಲಿ-2 ತಯಾರಾಗಲು ಬರೋಬ್ಬರಿ ಎರಡು ವರ್ಷಗಳೇ ಬೇಕಾದವು (S. S. Rajamouli Baahubali-2 Movie) ನೋಡ್ರಿ, ಬಾಹುಬಲಿ-1, 2015 ರಲ್ಲಿ ರಿಲೀಸ್ ಆಗಿತ್ತು. ಬಾಹುಬಲಿ-2, 2017 ರಂದು ಏಪ್ರಿಲ್-28 ಕ್ಕೆ ರಿಲೀಸ್ ಆಗಿತ್ತು. ಹಾಗೆ ಈ ಸಿನಿಮಾ ಬಂದು ಇವತ್ತಿಗೆ 6 ವರ್ಷಗಳೇ (Baahubali 2: The Conclusion Movie) ಕಳೆದಿವೆ.
ಏಪ್ರಿಲ್-28 ಕ್ಕೆ ಬಂದ ಎಲ್ಲ ಸಿನಿಮಾಗಳು ಹಿಟ್ ಆಗುತ್ತವೆಯೇ? ಗೊತ್ತಿಲ್ಲ. ಈ ಸಲ ಕೂಡ ಒಂದಷ್ಟು ಸಿನಿಮಾ ಬಂದಿವೆ.
6 ವರ್ಷ ಹಿಂದೆ ಇದೇ ದಿನ ಬಾಬಹುಲಿ-2 ರಿಲೀಸ್
ಬಾಬಹುಲಿ ಸಿನಿಮಾ ಬಂದ್ಮೇಲೆ ದಕ್ಷಿಣದ ಭಾರತದ ಸಿನಿಮಾಗಳ ಬಗ್ಗೆ ಒಂದು ಕುತೂಹಲ ಎಲ್ಲೆಡೆ ಮೂಡಿತ್ತು. ಅದಕ್ಕೂ ಮೊದಲು 2012 ರಲ್ಲಿ ಬಂದಿದ್ದ 'ಈಗ' ಒಂದು ಭರವಸೆ ಮೂಡಿಸಿತ್ತು. ಆದರೆ ಬಾಹುಬಲಿ ಆ ಎಲ್ಲ ಭರವಸೆಯನ್ನ ಬೇರೆ ಲೆವಲ್‌ಗೆ ತೆಗೆದುಕೊಂಡು ಹೋಯಿತು.
2015 ರಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ-1 ತೆರೆಗೆ ಬಂದಿತ್ತು. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿಯೇ ಸಿನಿಮಾ ಇತ್ತು. ಹಾಗಾಗಿಯೇ ಎಲ್ಲಿ ನೋಡಿದ್ರೂ ಅಲ್ಲಿ ಬಾಹುಬಲಿ ಮಾತು ಕೇಳಿ ಬಂತು. ಸಿನಿಮಾದ ಕೊನೆಯಲ್ಲಿ ಬಾಹುಬಲಿ-2 ಬರುತ್ತದೆ ಅಂದಾಗ ಜನರಲ್ಲಿ ಇನ್ನೂ ಒಂದಷ್ಟು ಕುತೂಹಲ ಹುಟ್ಟಿತ್ತು.
ಬಾಹುಬಲಿ-2 ನೋಡಲು ಬರೋಬ್ಬರಿ 2 ವರ್ಷ ಕಾದರು ಸಿನಿ ಪ್ರೇಮಿಗಳು
ಇದರ ಬೆನ್ನಲ್ಲಿಯೇ ಬಾಹುಬಲಿ-2 ಸಿನಿಮಾ ನೋಡಲು ಜನ ಹೆಚ್ಚು ಕಡಿಮೆ ಎರಡು ವರ್ಷವೇ ಕಾದುಕುಳಿತಿದ್ದರು. ಅದು ಬರೋವರೆಗೂ ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ ಅನ್ನೋ ಕುತೂಹಲದ ಪ್ರಶ್ನೆ ಎಲ್ಲೆಡೆ ಕೇಳಲ್ಪಟ್ಟಿತ್ತು.
ಬಾಹುಬಲಿ-2 ಬಂದ್ಮೇಲೆ ಎಲ್ಲ ಪ್ರಶ್ನೆಗೂ ಉತ್ತರ ಸಿಕ್ಕಿತ್ತು. ಹಾಗೆ 2017 ಏಪ್ರಿಲ್-28 ರಂದು ಬಾಹುಬಲಿ-2 ಸಿನಿಮಾ ತೆರೆಗೆ ಬಂತು. ಮೊದಲ ದಿನದ ಶೋದಲ್ಲಿಯೇ ಬಾಹುಬಲಿಯನ್ನ ಕಟ್ಟಪ್ಪ ಯಾಕೆ ಕೊಂದ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿ ಬಿಡ್ತು. ಎರಡು ವರ್ಷ ಕಾದಿದ್ದ ಜನಕ್ಕೆ ಇನ್ನಿಲ್ಲದಂತ ಖುಷಿನೂ ಆಗಿತ್ತು.
ಬಾಹುಬಲಿ-2 ಸಿನಿಮಾ ಬಂದಾಗ ಏನೆಲ್ಲ ಆಗಿತ್ತು ಗೊತ್ತೇ?
ಅಯ್ಯೋ ಇಷ್ಟೇನಾ ಅನ್ನುವ ಭಾವನೆ ಕೂಡ ಮೂಡಿತ್ತು. ಹಾಗೆ ಮಿಕ್ಸ್ ರೆಸ್ಪಾನ್ಸ್ ಪಡೆದಿದ್ದ ಬಾಹುಬಲಿ-2 ಸಿನಿಮಾ ಬಂದು ಇವತ್ತಿಗೆ ಅಂದ್ರೆ, 2023 ಏಪ್ರಿಲ್-28 ಕ್ಕೆ 6 ವರ್ಷ ಪೂರ್ಣಗೊಳ್ಳುತ್ತವೆ. ಇಡೀ ಇಂಡಿಯನ್ ಸಿನಿಮಾದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಾಹುಬಲಿ ಸರಣಿ ಸಿನಿಮಾ ಡೈರೆಕ್ಟರ್ ರಾಜಮೌಳಿ ಅವರ ಸಿನಿ ಬದುಕಿನ ಮಹತ್ವದ ಸಿನಿಮಾನೇ ಆಗಿದೆ.
ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರೆದ ಈ ಕಥೆಗೆ ಇಡೀ ಸಿನಿಮಾರಂಗ ಬೆಕ್ಕಸ ಬೆರಗಾಗಿಯೇ ನೋಡಿತ್ತು. ಹಾಗೆ ರಾಜಮೌಳಿ ಅವರಿಂದ ಮತ್ತಷ್ಟು ಒಳ್ಳೆ ಸಿನಿಮಾಗಳನ್ನ ನಿರೀಕ್ಷೆ ಕೂಡ ಮಾಡಿತ್ತು. ಅದೇ ರೀತಿ ರಾಜಮೌಳಿ ತಮ್ಮ ಚಿತ್ರ ಬದುಕಿನಲ್ಲಿ ಟ್ರಿಪಲ್ ಆರ್ ದಂತಹ ಸಿನಿಮಾ ಮಾಡಿ ಗೆದ್ದರು.
ಬಾಹುಬಲಿ-2 ಬಂದು ಈ ಏಪ್ರಿಲ್-28 ಕ್ಕೆ 6 ವರ್ಷ ಪೂರ್ಣ
ಬಾಹುಬಲಿ ಸಿನಿಮಾದಿಂದ ಕೇವಲ ಇಂಡಿಯನ್ ಸಿನಿಮಾದಲ್ಲಿ ಹೊಸ ಅಲೆ ಎಬ್ಬಿಸಿದ್ದರು. ಆದರೆ ಟ್ರಿಪಲ್ ಆರ್ ಸಿನಿಮಾ ಆಸ್ಕರ್ ಅಂಗಳದಲ್ಲೂ ಸದ್ದು ಮಾಡಿತ್ತು. ಮುಂದೇ ಯಾವ ಸಿನಿಮಾ ಮಾಡ್ತೋ ಸದ್ಯಕ್ಕೆ ಯಾವುದೇ ಸುಳಿವಿಲ್ಲ. ಆದರೆ ಈ ಏಪ್ರಿಲ್-28 ರಂದು ಬಾಹುಬಲಿ-2 ಬಂದು ೬ ವರ್ಷ ಪೂರ್ಣಗೊಳಿಸಿದೆ.
ಏಪ್ರಿಲ್-28 ಸ್ಪೆಷಲ್ ಡೇನೆ ಅನಿಸುತ್ತದೆ. ಈ ದಿನ ಪೊನ್ನಿಯನ್ ಸೆಲ್ವನ್-2 ಸಿನಿಮಾ ಬಂದಿದೆ. ಡೈರೆಕ್ಟರ್ ಮಣಿರತ್ನಂ ನಿರ್ದೇಶನದ ಈ ಚಿತ್ರ ಭಾರೀ ನಿರೀಕ್ಷೆ ಹುಟ್ಟಿಸಿದೆ. ಪೊನ್ನಿಯನ್ ಸೆಲ್ವನ್-1 ಬಂದು ಹಂಗಾಮ ಮಾಡಿದೆ. ಇದೀಗ ಪೊನ್ನಿಯನ್ ಸೆಲ್ವನ್-2 ಸರದಿ ಇದೆ.
ಇದನ್ನೂ ಓದಿ: Sanya Iyer: ಬಾಲಿವುಡ್ ಸ್ಟಾರ್ ಫೋಟೋಗ್ರಾಫರ್ ಡಬ್ಬು ರತ್ನಾನಿ ಕ್ಯಾಮೆರಾದಲ್ಲಿ ಸೆರೆಯಾದ್ರು ಸಾನ್ಯ!
ಇದೇ ದಿನ ಕನ್ನಡದ ರಾಘವೇಂದ್ರ ಸ್ಟೋರ್ಸ್ ರಿಲೀಸ್ ಆಗುತ್ತಿದೆ. ಜಗ್ಗೇಶ್ ಅವರ ಈ ಚಿತ್ರಕ್ಕೆ ಪ್ರಿಮಿಯರ್ ಶೋದಲ್ಲಿಯೇ ಭಾರೀ ರೆಸ್ಪಾನ್ಸ್ ಬಂದಿದೆ. ವಿಜಯ್ ರಾಘವೇಂದ್ರ ಒಬ್ಬರೇ ಅಭಿನಯದ ರಾಘು ಚಿತ್ರ ಕೂಡ ಇದೇ ಏಪ್ರಿಲ್-28 ರಂದು ರಿಲೀಸ್ ಆಗುತ್ತಿದೆ.
ಇದರ ಜೊತೆಗೆ ಟಾಲಿವುಡ್‌ನ ಅಕ್ಕಿನೇನಿ ಫ್ಯಾಮಿಲಿಯ ಹುಡುಗ ಅಖಿಲ್ ಅಕ್ಕಿನೇನಿ ಅಭಿನಯದ ಏಜೆಂಟ್ ಚಿತ್ರವೂ ಇದೇ ಏಪ್ರಿಲ್-28 ರಂದು ರಿಲೀಸ್ ಆಗುತ್ತಿದೆ. ಒಟ್ಟಾರೆ, ಗೆಲುವ ಯಾರಿಗೆ ಅನ್ನುವ ಕುತೂಹಲ ಕೂಡ ಈಗಲೇ ಮೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ