Anitha EAnitha E
|
news18-kannada Updated:May 9, 2020, 11:58 AM IST
ರೀಮಾ ಸೇನ್
ಸಿನಿಮಾಗಳಲ್ಲಿ ಕತೆಗೆ ಅಗತ್ಯವಿದ್ದಲ್ಲಿ ಕಲಾವಿದರು ಹಸಿಬಿಸಿ ದೃಶ್ಯಗಳಲ್ಲಿ ನಟಿಸೋದು ಸಾಮಾನ್ಯ. ಕೆಲವೊಮ್ಮೆ ಅವು ಅತಿಯಾದಾಗ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದೂ ಇದೆ. ಅಂತೆಯೇ ದಕ್ಷಿಣ ಭಾರತದ ನಟಿಯೊಬ್ಬರು ಸಿನಿಮಾಗಾಗಿ ಮಾಡಿದ್ದ ಬೋಲ್ಡ್ ಫೋಟೋಶೂಟ್ನಿಂದಾಗಿ ಬಂಧನ ಭೀತಿಯಲ್ಲಿದ್ದರು. ಸಿನಿಮಾಗಳಿಗಾಗಿ ಫೋಟೋಶೂಟ್ ನಡೆಸುವ ವಿಷಯ ಹೊಸದೇನಲ್ಲ. ಹೀಗೆ ನಡೆಸುವ ಫೋಟೋಶೂಟ್ಗಳಿಗೂ ಕೆಲವೊಂದು ಮಿತಿ ಇರುತ್ತದೆ. ಅವುಗಳನ್ನು ಚಿತ್ರತಂಡ ಮೀರಿದಾಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುತ್ತದೆ. ಆ ನಟಿಯ ವಿಷಯದಲ್ಲಿ ಆಗಿದ್ದೂ ಅದೇ.

ರೀಮಾ ಸೇನ್
ದಕ್ಷಿಣ ಭಾರತದ ಖ್ಯಾತ ನಟಿ ರೀಮಾ ಸೇನ್ ಟಾಲಿವುಡ್ನಲ್ಲಿ ಚಿತ್ರಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟವರು. ಈಕೆ ಚಿತ್ರರಂಗಕ್ಕೆ ಬರುವ ಮೊದಲೇ ಜಾಹೀರಾತುಗಳಲ್ಲಿ ಅಭಿನಯಿಸಿದ್ದರು. ನಂತರ ಮೆಲ್ಲನೆ ಬಾಲಿವುಡ್ನಲ್ಲೂ ಮಿಂಚ ತೊಡಗಿದ್ದರು.
ಇದನ್ನೂ ಓದಿ: Shilpa Shetty: ಶಿಲ್ಪಾ ಶೆಟ್ಟಿಗೆ ಹಣ ಕೊಟ್ಟು ತವರಿಗೆ ಹೋಗೆಂದ ರಾಜ್ ಕುಂದ್ರಾ: ಅಷ್ಟಕ್ಕೂ ಆಗಿದ್ದೇನು..!
ಬಾಲಿವುಡ್ನಲ್ಲಿ ಮಾಲಾಮಾಲ್ ವೀಕ್ಲಿ, ಗ್ಯಾಂಗ್ಸ್ ಆಫ್ ವಾಸೆಪುರ್ ಸಿನಿಮಾಗಳಲ್ಲಿನ ಆಭಿನಯಕ್ಕೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೆ ರೀಮಾ. ಹಮ್ ಹೋಗಯೆ ಆಪ್ ಕೆ ಬಾಲಿವುಡ್ನಲ್ಲಿ ಇವರ ಮೊದಲ ಸಿನಿಮಾ. ಆದರೆ ಗ್ಯಾಂಗ್ಸ್ ಆಫ್ ವಾಸೆಪುರ್ ಸಿನಿಮಾದಲ್ಲೂ ಕೊಂಚ ಬೋಲ್ಡ್ ಆಗಿಯೇ ನಟಿಸಿದ್ದಾರೆ.

ರೀಮಾ ಸೇನ್
ರೀಮಾ ಸಾಮಾನ್ಯವಾಗಿ ತಮ್ಮ ಬೋಲ್ಡ್ ದೃಶ್ಯಗಳಲ್ಲಿನ ಅಭಿನಯದಿಂದಲೇ ಖ್ಯಾತಿ ಪಡೆದವರು. ತಮಗಿಂತ 9 ವರ್ಷ ದೊಡ್ಡವರಾದ ಉದ್ಯಮಿ ಶಿವ್ ಕರಣ್ ಎಮಬುವರನ್ನು ವಿವಾಹವಾದ ನಂತರ ಸಿನಿ ರಂಗದಿಂದ ದೂರ ಉಳಿದಿದ್ದಾರೆ.

ಗಂಡನೊಂದಿಗೆ ರೀಮಾ ಸೇನ್
ತೆಲುಗು ಹಾಗೂ ತಮಿಳಿನಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ರೀಮಾ 2011ರಲ್ಲಿ ತೆರೆಕಂಡ ತಮಿಳಿನ ಇಳವರಸಿ ಸಿನಿಮಾದಲ್ಲಿ ಸಾಕಷ್ಟು ಬೋಲ್ಡ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಿದ್ದರು. ಈ ಸಿನಿಮಾಗಾಗಿ ನಡೆಸಿದ ಹಾಟ್ ಹಾಗೂ ಬೋಲ್ಡ್ ಫೋಟೋಶೂಟ್ನಿಂದಾಗಿ ರೀಮಾಗೆ ಮಧುರೈ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿತ್ತು. ಆಗ ರೀಮಾ ಬಂಧನದ ಭೀತಿಯಲ್ಲಿದ್ದರು.
ಖುಷಿಯ ವಿಷಯ ಹಂಚಿಕೊಂಡ ಕರಾವಳಿ ಸುಂದರಿ ಅನುಷ್ಕಾ ಶೆಟ್ಟಿ..!
First published:
May 6, 2020, 5:39 PM IST