ಕನ್ನಡಿಗ ಕೆಎಲ್ ರಾಹುಲ್ (KL Rahul) ಸದ್ಯ ಐಪಿಎಲ್ (IPL) ಟೂರ್ನಿಯಿಂದ ಹೊರಬಂದಿದ್ದು, ಮುಂದಿನ ದಕ್ಷಿಣ ಆಫ್ರಿಕಾ ಸರಣಿಗೆ ಸಿದ್ದರಾಗುತ್ತಿದ್ದಾರೆ. ರಾಹುಲ್ ಈ ಬಾರಿ ಐಪಿಎಲ್ ನ ಹೊಸ ತಂಡವಾದ ಲಕ್ನೋ ಸೂಪರ್ ಜೈಂಟ್ಸ್ (GT) ತಂಡದ ನಾಯಕರಾಗಿ ಉತ್ತಮ ಪ್ರದರ್ಶನ ತೋರಿಸಿದ್ದಾರೆ. ಇದೀಗ ಮುಂದಿನ ಟೀಂ ಇಂಡಿಯಾ ಸರಣಿಗಾಗಿ ಸಿದ್ದರಾಗುತ್ತಿರವ ಅವರು, ಟಿ20 ಸರಣಿಗೆ ನಾಯಕರಾಗಿ ಆಯ್ಕೆ ಆಗಿದ್ದಾರೆ. ಇನ್ನೇನು ಕೆಲ ದಿನಗಳಲ್ಲಿಯೇ ಸರಣಿ ಆರಂಭವಾಗಲಿದ್ದು, ಇದರ ನಡುವೆ ರಾಹುಲ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು, ರಾಹುಲ್ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜಾಹೀರಾತಿಗೆ ಬಹುಭಾಷಾ ನಟಿ ಕಸ್ತೂರಿ (Kasturi) ಅವರು ಮಾಡಿರುವ ಕಾಮೆಂಟ್ ಸಖತ್ ವೈರಲ್ ಆಗಿದೆ.
ಒಳುಡುಪಿನ ಜಾಹೀರಾತಿನಲ್ಲಿ ರಾಹುಲ್:
ಭಾರತೀಯ ಕ್ರಿಕೆಟಿಗರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಒಳಉಡುಪಿನ ಜಾಹೀರಾತುಗಳಲ್ಲಿ ನಟಿಸಿದ್ದು, ತೀರಾ ಕಡಿಮೆ ಎಂದೆನ್ನಬಹುದು. ಆದರೆ ಇದೀಗ ಕೆಎಲ್ ರಾಹುಲ್ ಒಂದು ಒಳುಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರಿದಿದ್ದಾರೆ. ಹೀಗಾಗಿ ಹೊಸ ಜಾಹೀರಾತು ಶೂಟ್ ಆಗಿದ್ದು, ಎಲ್ಲಡೆ ಪ್ರಸಾರವಾಗುತ್ತಿದೆ. ಇದಕ್ಕೆ ಬಹುಭಾಷಾ ನಟಿ ಕಸ್ತೂರಿ ಅವರು ರಾಹುಲ್ ಅವರ ಒಳಉಡುಪಿನ ಜಾಹೀರಾತಿನ ಬಗ್ಗೆ ಸಖತ್ ಕಾಮೆಂಟ್ ಮಾಡಿದ್ದು, ಎಲ್ಲಡೆ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ರಾಹುಲ್ ಅವರ ಈ ಪ್ರಯತ್ನಕ್ಕೆ ಕಸ್ತೂರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Akshay Kumar: ಗಂಗೆಯಲ್ಲಿ ಮುಳುಗೆದ್ದ ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್ ಜೊತೆ ವಾರಣಾಸಿಯಲ್ಲಿ ಕಿಲಾಡಿ
ಬಾಕ್ಸರ್ಗಳಲ್ಲಿ ರಾಹುಲ್ ನೋಡಿದ್ದು ಸಂತೋಷವಾಯಿತು:
ಇನ್ನು,ಕ್ರಿಕೆಟಿಗ ಕೆಎಲ್ ರಾಹುಲ್ ಅವರು ಒಳುಡುಪಿನ ಜಾಹೀರಾತಿನ ಕಂಪನಿಯೊಂದಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಒಪ್ಪಿಕೊಂಡಿದ್ದಾರೆ. ಇದರ ಕುರಿತು ನಟಿ ಕಸ್ತೂರಿ ಅವರು ಟ್ವೀಟ್ ಮಾಡಿದ್ದು, ‘ಕ್ರಿಕೆಟಿಗರು ಸಾಮಾನ್ಯವಾಗಿ ಕೂಲ್ ಡ್ರಿಂಕ್ಸ್, ಚಿಪ್ಸ್, ಆನ್ಲೈನ್ ಗೇಮ್ಗಳು ಮತ್ತು ಜನಪ್ರಿಯ ಬಟ್ಟೆ ಬ್ರ್ಯಾಂಡ್ಗಳ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಕ್ರಿಕೆಟಿಗರು ಒಳ ಉಡುಪಿನ ಜಾಹೀರಾತು ಹಾಗೂ ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಲು ನಾಚಿಕೆಪಡುತ್ತಾರೆ.
We see cricketers plug colas ,chips & online games. Many Indian sportsmen have endorsed clothing brands, but have shied away from undergarment labels.
So it's nice to see @klrahul looking buff in boxers.
Hope this brings menswear out of the closet. Pun intended :)) #PostIPL_Post pic.twitter.com/MFA0Glc9kt
— Kasturi Shankar (@KasthuriShankar) May 30, 2022
ಇದನ್ನೂ ಓದಿ: Rohit Sharma: ಐಪಿಎಲ್ ನಂತರ ಮಾಲ್ಡೀವ್ಸ್ಗೆ ಹಾರಿದ ರೋಹಿತ್, ರಿತಿಕಾ ಜೊತೆಗಿನ ಕ್ಯೂಟ್ ಫೋಟೋ ಹಂಚಿಕೊಂಡ ಹಿಟ್ಮ್ಯಾನ್
ಕನ್ನಡದಲ್ಲಿಯೂ ನಟಿಸಿದ್ದಾರೆ ಬಹುಭಾಷಾ ನಟಿ ಕಸ್ತೂರಿ:
ಇನ್ನು, ಬಹುಭಾಷಾ ನಟಿ ಕಸ್ತೂರಿ ಅವರು, 90ರ ದಶಕದಲ್ಲಿ ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇವರು ಕನ್ನಡದಲ್ಲಿ ಜಾಣ, ಹಬ್ಬ, ತುತ್ತಾಮುತ್ತಾ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅದರಲ್ಲಿಯೂ ಕಸ್ತೂರಿ ಅವರು ಕಿರುತೆರೆಯ ಜನಪ್ರಿಯ ಗೃಹಲಕ್ಷ್ಮಿ ಧಾರಾವಾಹಿ ಮೂಲಕ ಹೆಚ್ಚು ಪ್ರಸಿದ್ಧರಾಗಿದ್ದರು. ಕಸ್ತೂರಿ ಸದ್ಯ ವಿಜಯ್ ಆಂಟೋನಿ ತಮಿಳರಸನ್, ಉನ್ ಕಾದಲ್ ಇರುಂದಾಲ್ ಸೇರಿದಂತೆ ಹಲವು ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ರಾಜಕೀಯದಲ್ಲಿಯೂ ಹೆಚ್ಚು ಸಕ್ರೀಯರಾಗಿದ್ದರು. ಆದರೆ ಇದೀಗ ರಾಹುಲ್ ಅವರ ಒಳುಡುಪಿನ ಜಾಹೀರಾತಿಗೆ ಕಾಮೆಂಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ