RRR: ಜೂನಿಯರ್​ NTR ಮದ್ವೆಗೆ ಖರ್ಚಾಗಿದ್ದೆಷ್ಟು? ಈಗ್ಯಾಕೆ ಈ ಮ್ಯಾಟರ್​ ಅಂತೀರಾ? ಕಾರಣ ಇದೆ ನೋಡಿ..

ತಾನೊಬ್ಬ ದಕ್ಷಿಣ ಭಾರತದ ಸೂಪರ್ ಸ್ಟಾರ್(Super Star) ಎಂದು ಸಾಬೀತು ಪಡಿಸಿಕೊಂಡ ನಟ ಜೂನಿಯರ್ ಎನ್‌ಟಿಆರ್(Junior NTR) ಎಂದರೆ ತಪ್ಪಾಗುವುದಿಲ್ಲ. ಇದಷ್ಟೇ ಅಲ್ಲದೆ ಇವರ 20 ವರ್ಷಗಳ ವೃತ್ತಿ ಜೀವನದಲ್ಲಿ, ಜೂನಿಯರ್ ಎನ್‌ಟಿಆರ್ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಜೂನಿಯರ್​ ಎನ್​ಟಿಆರ್​, ಲಕ್ಷ್ಮೀ ರಾವ್

ಜೂನಿಯರ್​ ಎನ್​ಟಿಆರ್​, ಲಕ್ಷ್ಮೀ ರಾವ್

  • Share this:
ಇತ್ತೀಚೆಗೆ ಬಿಡುಗಡೆಯಾದ ಎಸ್. ಎಸ್. ರಾಜಮೌಳಿ(SS Rajamouli) ಅವರ ‘ಆರ್‌ಆರ್‌ಆರ್’(RRR) ಚಿತ್ರದಲ್ಲಿ ನಟಿಸಿ ಮತ್ತೊಮ್ಮೆ ತಾನೊಬ್ಬ ದಕ್ಷಿಣ ಭಾರತದ ಸೂಪರ್ ಸ್ಟಾರ್(Super Star) ಎಂದು ಸಾಬೀತು ಪಡಿಸಿಕೊಂಡ ನಟ ಜೂನಿಯರ್ ಎನ್‌ಟಿಆರ್(Junior NTR) ಎಂದರೆ ತಪ್ಪಾಗುವುದಿಲ್ಲ. ಇದಷ್ಟೇ ಅಲ್ಲದೆ ಇವರ 20 ವರ್ಷಗಳ ವೃತ್ತಿ ಜೀವನದಲ್ಲಿ, ಜೂನಿಯರ್ ಎನ್‌ಟಿಆರ್ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದಾಗ್ಯೂ, ಅವರ ಹೊಸದಾಗಿ ಬಿಡುಗಡೆಯಾದ ‘ಆರ್‌ಆರ್‌ಆರ್’ ಚಿತ್ರವು ಕಾಣುತ್ತಿರುವ ಭಾರಿ ಯಶಸ್ಸು ಅವರನ್ನು ಒಬ್ಬ ಪ್ಯಾನ್ ಇಂಡಿಯಾ(Pan India) ಸೂಪರ್‌ಸ್ಟಾರ್ ಆಗಿ ಮಾಡಿದೆ ಎಂದು ಹೇಳಬಹುದು. ಸಿನಿಮಾಗಳಲ್ಲಿನ ನಟನೆಯನ್ನು ಮತ್ತು ಯಶಸ್ಸನ್ನು ಹೊರತುಪಡಿಸಿ, ಜೂನಿಯರ್ ಎನ್‌ಟಿಆರ್ ಅವರ ವಿನಮ್ರ ಸ್ವಭಾವ ಮತ್ತು ಸೆಲೆಬ್ರಿಟಿ ಸಂಸ್ಕೃತಿಯಿಂದ ದೂರವಿರುವ ಜೀವನಕ್ಕಾಗಿ ಅಭಿಮಾನಿಗಳು ತುಂಬಾನೇ ಇಷ್ಟ ಪಡುತ್ತಾರೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಈ ನಟನ ಬಗ್ಗೆ ನಿಮಗೆ ಗೊತ್ತಿರದ ಕೆಲವು ವಿವರ ಇಲ್ಲಿದೆ ನೋಡಿ.

ಎಲ್ಲೂ ಕಾಣಿಸಿಕೊಳ್ಳದ  ಜೂ.ಎನ್​ಟಿಆರ್​ ಪತ್ನಿ!

ದಕ್ಷಿಣ ಭಾರತದ ನಟ ಜೂನಿಯರ್ ಎನ್‌ಟಿಆರ್ ತಮ್ಮ ಪತ್ನಿ ಲಕ್ಷ್ಮೀ ರಾವ್ ಮತ್ತು ಅವರ ಮಕ್ಕಳಾದ ನಂದಮೂರಿ ಭಾರ್ಗವ್ ರಾಮ್ ಹಾಗೂ ನಂದಮೂರಿ ಅಭಯ್ ರಾಮ್ ಅವರೊಂದಿಗೆ ಸಾರ್ವಜನಿಕವಾಗಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ನಟ ತನ್ನ ಸುಂದರವಾದ ವೈಯಕ್ತಿಕ ಜೀವನವನ್ನು ಈ ಸ್ಟಾರ್‌ಡಮ್‌ನಿಂದ ದೂರವಿಡುತ್ತಾರೆ ಮತ್ತು ಯಾವಾಗಲೂ ತನ್ನ ಕುಟುಂಬಕ್ಕೆ ಎಲ್ಲದಕ್ಕಿಂತ ಹೆಚ್ಚು ಆದ್ಯತೆ ನೀಡಲು ಬಯಸುತ್ತಾರೆ.

100 ಕೋಟಿ ರೂಪಾಯಿಯಲ್ಲಿ ನಡೆದಿತ್ತು ಅದ್ಧೂರಿ ಮದುವೆ!

ಜೂನಿಯರ್ ಎನ್‌ಟಿಆರ್ ಅವರು ಮೇ 5, 2011 ರಂದು ಲಕ್ಷ್ಮೀ ರಾವ್ ಅವರನ್ನು ವಿವಾಹವಾಗಿದ್ದರು. ಅವರ ವಿವಾಹವು ಸಾರ್ವಕಾಲಿಕ ಅತ್ಯಂತ ದುಬಾರಿ ವಿವಾಹಗಳಲ್ಲಿ ಒಂದಾಗಿತ್ತು. ಏಕೆಂದರೆ ವರದಿಗಳ ಪ್ರಕಾರ, ಅದ್ದೂರಿ ವಿವಾಹದ ಒಟ್ಟು ಬಜೆಟ್ 100 ಕೋಟಿ ರೂಪಾಯಿ ಆಗಿತ್ತು ಎಂದು ಹೇಳಲಾಗಿತ್ತು. ಹೌದು.. ಇವರ ವಿವಾಹದ ಬಗ್ಗೆ ಮತ್ತೊಂದು ಆಸಕ್ತಿದಾಯಕ ಸಂಗತಿಯೆಂದರೆ, ಅವರ ಪತ್ನಿ ಲಕ್ಷ್ಮೀ ಅವರು ಮದುವೆಗೆ ಉಟ್ಟ ಸೀರೆಯ ಬೆಲೆ ಬರೋಬ್ಬರಿ 1 ಕೋಟಿ ರೂಪಾಯಿ ಅಂತೆ.

ಇದನ್ನೂ ಓದಿ: ಕುಕ್ಕೆ ಸುಬ್ರಮಣ್ಯಕ್ಕೆ ಪವನ್​ ಕಲ್ಯಾಣ್​ ಭೇಟಿ​​.. ಯಾವ ದೋಷಕ್ಕೆ ಪೂಜೆ ಮಾಡಿಸಿದ್ರು ನೀವೇ ನೋಡಿ

ಕೇವಲ ಮಂಟಪಕ್ಕೆ 18 ಕೋಟಿ ರೂಪಾಯಿ!

ಇನ್ನು, ಮಂಟಪವನ್ನು ಅಲಂಕರಿಸಲು 18 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿತ್ತು ಮತ್ತು ಈ ಅದ್ದೂರಿ ಮದುವೆಗೆ ಖರ್ಚು ಮಾಡಿದ ಎಲ್ಲಾ ಹಣವನ್ನು ಹೊರತುಪಡಿಸಿ, ಜೂನಿಯರ್ ಎನ್‌ಟಿಆರ್ ಅವರ ವಿವಾಹಕ್ಕೆ ಸುಮಾರು 3000 ಜನ ಸೆಲೆಬ್ರಿಟಿ ಅತಿಥಿಗಳು ಬಂದಿದ್ದರು ಮತ್ತು 12,000 ಅಭಿಮಾನಿಗಳು ಸಹ ಮದುವೆಗೆ ಬಂದಿದ್ದರು. ಇದು ನಿಜವಾಗಿಯೂ ಒಬ್ಬ ಸೂಪರ್ ಸ್ಟಾರ್‌ನ ಮದುವೆಯಾಗಿತ್ತು ಎಂದು ಹೇಳಿದರೆ ತಪ್ಪಾಗುವುದಿಲ್ಲ.

2011ರ ಅತಿದೊಡ್ಡ ವಿವಾಹಗಳಲ್ಲಿ ಒಂದು!

ಇವರ ವಿವಾಹವು ಹೈದರಾಬಾದ್‌ನಲ್ಲಿರುವ ಮಾದಾಪುರದ ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ನಡೆದಿದ್ದು, ಇದು 2011 ರ ಅತಿದೊಡ್ಡ ವಿವಾಹಗಳಲ್ಲಿ ಒಂದಾಗಿತ್ತು. ತಮ್ಮ ಜೀವನವನ್ನು ಸಮತೋಲನಗೊಳಿಸಿದ್ದಕ್ಕಾಗಿ ಮತ್ತು ಆಗಾಗ್ಗೆ ಅವರನ್ನು ಬೆಂಬಲಿಸಿದ್ದಕ್ಕಾಗಿ ಜೂನಿಯರ್ ಎನ್‌ಟಿಆರ್ ತಮ್ಮ ಅನೇಕ ಸಂದರ್ಶನಗಳಲ್ಲಿ ತಮ್ಮ ಹೆಂಡತಿಯ ಬಗ್ಗೆ ಅಪಾರ ಪ್ರೀತಿ ಮತ್ತು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಸ್ಟಾರ್​​​ ವಾರ್​ ಯಾಕೆ, ನಾವೂ ಒಂದೇ ಇಲ್ಲಿ ಎಂಬ ಸಂದೇಶ! ಕೆಜಿಎಫ್​ 2 vs ಬೀಸ್ಟ್​​ ಗುದ್ದಾಟ ಅಂತ್ಯ

"ಈಗ ನಾನು ಏನು ಆಗಿದ್ದೆನೋ, ಹಾಗೆ ಬದಲಾಯಿಸುವಲ್ಲಿ ಲಕ್ಷ್ಮೀ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಈ ಅದ್ಭುತ ಮಹಿಳೆಯನ್ನು ಮದುವೆಯಾಗಿರುವುದು ನನಗೆ ನಿಜವಾಗಿಯೂ ವಿಶೇಷವೆನಿಸುತ್ತದೆ. ಅವಳು ನನಗಾಗಿ ಸಾಕಷ್ಟು ಕೆಲಸ ಮಾಡಿದ್ದಾಳೆ ಮತ್ತು ಅವಳು ನನ್ನ ಮನೆಯಲ್ಲಿ ನನ್ನ ಅಮ್ಮನ ನಂತರ ನನ್ನ ನಿರೂಪಕಿಯಾಗಿದ್ದಾಳೆ. ನಾನು ಮನೆಯಲ್ಲಿ ತುಂಬಾ ಆರಾಮದಾಯಕವಾಗಿದ್ದೇನೆ ಮತ್ತು ನನಗೆ ಹೊರಗೆ ಹೋಗಬೇಕು ಎಂದೆನಿಸುವುದಿಲ್ಲ" ಎಂದು ಹೇಳಿದ್ದಾರೆ.
Published by:Vasudeva M
First published: