Amar Movie: ರಾಜ್ಯಾದ್ಯಂತ ಬಿಡುಗಡೆಯಾಗಿದೆ ಅಮರ್​: ಯಂಗ್​ ರೆಬೆಲ್​ ಸ್ಟಾರ್​ಗೆ ಶುಭಹಾರೈಕೆಯ ಸುರಿಮಳೆ

ಅಭಿಷೇಕ್​ ಅಭಿನಯದ ಅಮರ್ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಶುಭಹಾರೈಕೆಯ ಸುರಿಮಳೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು ಚಿತ್ರರಂಗದ ತಾರೆಯರು ಅಭಿಯ ಮೊಲದ ಪ್ರಯತ್ನಕ್ಕೆ ವಿಶ್​ ಮಾಡುತ್ತಿದ್ದಾರೆ.

Anitha E | news18
Updated:May 31, 2019, 3:38 PM IST
Amar Movie: ರಾಜ್ಯಾದ್ಯಂತ ಬಿಡುಗಡೆಯಾಗಿದೆ ಅಮರ್​: ಯಂಗ್​ ರೆಬೆಲ್​ ಸ್ಟಾರ್​ಗೆ ಶುಭಹಾರೈಕೆಯ ಸುರಿಮಳೆ
ಅಮರ್​ ಸಿನಿಮಾದಲ್ಲಿ ಅಭಿಷೇಕ್​ ಹಾಗೂ ತಾನ್ಯಾ ಹೋಪ್​
Anitha E | news18
Updated: May 31, 2019, 3:38 PM IST
ಅಂಬಿ ಕೊನೆ ಆಸೆ, ಕೊನೆ ಕನಸು ಇಂದು ತೆರೆಮೇಲೆ ನನಸಾಗ್ತಿದೆ. ಕಲಿಯುಗ ಕರ್ಣನ ಕುಡಿ ಬೆಳ್ಳಿತೆರೆಮೇಲೆ ಅಂಬೆಗಾಲಿಟ್ಟು ಹೆಜ್ಜೆ ಇಟ್ಟಿದ್ದಾನೆ. ಹೌದು, ಯಂಗ್​ ರೆಬೆಲ್​ ಸ್ಟಾರ್​ನ  'ಅಮರ್' ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗಿದೆ.

ತಮ್ಮ ಮಗನನ್ನು ನಾಯಕನಾಗಿ ನೋಡಬೇಕು ಎಂಬುದು ಅಂಬಿಯ ಕೊನೆ ಆಸೆ, ಕೊನೆಯ ಕನಸಾಗಿತ್ತಂತೆ. ಅದು ನನಸಾಗುವ ವೇಳೆ ಅವರೇ ಇಲ್ಲ. ಆದರೇನಂತೆ ಇಡೀ ಚಿತ್ರರಂಗವೇ ಅಂಬಿ ಮಗನ `ಅಮರ್' ಅವತಾರಕ್ಕೆ ಬೆಂಬಲವಾಗಿ ನಿಂತಿದೆ.

ಇದನ್ನೂ ಓದಿ: Amar Movie: ಅಮರ್​ ಸಿನಿಮಾ ಬಿಗುಡೆಗೂ ಮುನ್ನ ಲಕ್ಷ ರೂಪಾಯಿ ಕೊಟ್ಟು ಮೊದಲ ಶೋ ಟಿಕೆಟ್​ ಖರೀದಿಸಿದ ಅಭಿಮಾನಿ

ಅಭಿಷೇಕ್​ ಅಭಿನಯದ 'ಅಮರ್' ಸಿನಿಮಾಗೆ ಶುಭಹಾರೈಕೆಯ ಸುರಿಮಳೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು ಚಿತ್ರರಂಗದ ತಾರೆಯರು ಅಭಿಯ ಮೊಲದ ಪ್ರಯತ್ನಕ್ಕೆ ವಿಶ್​ ಮಾಡುತ್ತಿದ್ದಾರೆ. ಅಭಿಯ ಹಿರಿಯಣ್ಣನಂತಿರುವ ದರ್ಶನ್, ರಕ್ಷಿತ್​ ಶೆಟ್ಟಿ​ ಸಹ 'ಅಮರ್​'ಗೆ ವಿಶ್​ ಮಾಡಿದ್ದಾರೆ.  ಕನ್ನಡ ಚಿತ್ರರಂಗವಲ್ಲದೆ, ಅಂಬಿ ಆಪ್ತ ಸ್ನೇಹಿತ ತಮಿಳು ಸೂಪರ್​ಸ್ಟಾರ್​ ರಜಿನಿ,  ಚಿರಂಜೀವಿ, ಶ್ರೀಮುರಳಿ, ರವಿಶಂಕರ್​ ಸಹ 'ಅಮರ್​'ಗೆ ಹೃದಯದಿಂದ ಶುಭ ಕೋರಿದ್ದಾರೆ.

Loading...











 







ಇನ್ನು ಮಂಡ್ಯ ರಣಕಣದಲ್ಲಿ ರಾಜಕೀಯ ವೈರಿಯಾಗಿದ್ದ ನಿಖಿಲ್‍ಕುಮಾರ್ ರಾಜಕೀಯ ವೈರತ್ವವನ್ನ ಬದಿಗೊತ್ತಿ ಅಭಿಗೆ ಶುಭ ಕೋರಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ 'ಅಮರ್' ಚಿತ್ರದ ಗೆಲುವಿಗೆ ಹಾರೈಸಿದ್ದಾರೆ.

ಅಂದಹಾಗೆ 'ಅಮರ್' ಚಿತ್ರವನ್ನ ಅಂಬಿ ಆಪ್ತ ಗೆಳೆಯ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ  ಮೈನಾ ಖ್ಯಾತಿಯ ನಾಗಶೇಖರ್ ಅಂಬಿ ಮಗನಿಗೆ ನಿರ್ದೇಶನ ಮಾಡಿದ್ದಾರೆ. ಒಟ್ಟಾರೆ ಅಂಬಿ ಹಾದಿಯಲ್ಲೇ ಸಾಗಲಿದ್ದಾರೆ ಎಂದು ಹೇಳಲಾಗ್ತಿರೋ ಅವr ಮಗ ಈಗ ಮೊದಲ ಹೆಜ್ಜೆ ಇಟ್ಟಿದ್ದು, ಯಶಸ್ಸು ಅವರನ್ನ ಯಾವ ರೀತಿ ಕೈ ಹಿಡಿದು ನಡೆಸುತ್ತೆ ಅಂತ ಕಾದು ನೋಡಬೇಕು.

PHOTOS: ಗೌನ್​ನಲ್ಲಿ ಮಿಂಚುತ್ತಿರುವ ಟಾಲಿವುಡ್​ ಲಿಲ್ಲಿ ರಶ್ಮಿಕಾ ಮಂದಣ್ಣ..!

First published:May 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...