Bottle Cap Challenge: ಅಕ್ಷಯ್​ ಕುಮಾರ್​, ಗಣೇಶ್​ ನಂತರ ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಅರ್ಜುನ್ ಸರ್ಜಾ..!

BottleCapChallenge: ನಿನ್ನೆಯಷ್ಟೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿ, ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಸ್ಯಾಂಡಲ್​ವುಡ್​ ನಟ ಗಣೇಶ್​ ಸಹ ತಮ್ಮ ವಿಡಿಯೋ ಹರಿ ಬಿಟ್ಟರು. ಈಗ ಅರ್ಜುನ್​ ಸರ್ಜಾರ ಸರದಿ.

Anitha E | news18
Updated:July 4, 2019, 1:35 PM IST
Bottle Cap Challenge: ಅಕ್ಷಯ್​ ಕುಮಾರ್​, ಗಣೇಶ್​ ನಂತರ ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಅರ್ಜುನ್ ಸರ್ಜಾ..!
BottleCapChallenge: ನಿನ್ನೆಯಷ್ಟೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್ ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿ, ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಸ್ಯಾಂಡಲ್​ವುಡ್​ ನಟ ಗಣೇಶ್​ ಸಹ ತಮ್ಮ ವಿಡಿಯೋ ಹರಿ ಬಿಟ್ಟರು. ಈಗ ಅರ್ಜುನ್​ ಸರ್ಜಾರ ಸರದಿ.
  • News18
  • Last Updated: July 4, 2019, 1:35 PM IST
  • Share this:
ಖ್ಯಾತ ಹಾಲಿವುಡ್​ ನಟ ಜೇಸನ್​ ಸ್ಟ್ಯಾತಮ್​ ಮಾಡಿದ #BottleCapChallenge ವಿಡಿಯೋ ನೋಡಿದ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ ಮೊದಲು ಅದನ್ನು ಸ್ವಯಂಪ್ರೇರಿತರಾಗಿ ಸ್ವೀಕರಿಸಿದರು. ನಂತರ ನಿನ್ನೆ ಬೆಳಿಗ್ಗೆ ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದರು.

ಆದರೆ, ನಮ್ಮ ಸ್ಯಾಂಡಲ್​ವುಡ್​ ಗಣೇಶ್​ ಅವರು ತಮ್ಮ ವಿಡಿಯೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದರು. ಆದರೆ ಇಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​ ಅಕ್ಷಯ್​ ಅವರಿಗಿಂತ ಮೊದಲೇ ಈ ಚಾಲೆಂಜ್​ ಅನ್ನು ಸ್ವೀಕರಿಸಿದ್ದು, ಅದರ ವಿಡಿಯೋ ಮಾಡಿದ್ದರು. ಆದರೆ ಅದನ್ನು ಅಕ್ಷಯ್​ ಕುಮಾರ್​ ಅವರು ಪೋಸ್ಟ್​ ಮಾಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Bottle cap challenge by celebrities
ಚಾಲಟ್​ ಕ್ಯಾಪ್​ ಚಾಲೆಂಜ್​ ಸ್ವೀಕರಸಿದ ಸೆಲೆಬ್ರಿಟಿಗಳು

ಇದಾದ ನಂತರ ದಕ್ಷಿಣ ಭಾರತದ ಆ್ಯಕ್ಷನ್​ ಕಿಂಗ್​ ಅರ್ಜುನ್​ ಸರ್ಜಾ ಸಹ ಈ ಬಾಟಲ್​ ಕ್ಯಾಪ್​ ಚಾಲೆಂಜ್​ ಅನ್ನು ಸ್ವೀಕರಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಈಗ ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.ಅರ್ಜುನ್​ ತಾವು ಮಾಡಿರುವ ಸ್ಟಂಟ್​ ಅನ್ನು ತಮ್ಮ ಅಭಿಮಾನಿಗಳು ಹಾಗೂ ಗುರು ಬ್ರೂಸ್ಲಿ ಅವರಿಗೆ ಅರ್ಪಿಸಿದ್ದಾರೆ. ಈ ಚಾಲೆಂಜ್​ ಸ್ವೀಕರಿಸಿ, ಯಶಸ್ವಿಯಾಗಿ ಮಾಡುವ ಮೂಲಕ ಅರ್ಜುನ್​ ವಯಸ್ಸು ಕೇವಲ ಅಂಕಿಯಷ್ಟೆ ಎಂದು ಸಾಬೀತು ಮಾಡಿದ್ದಾರೆ.

ಇದನ್ನೂ ಓದಿ: Bottle Cap Challenge: ಬಾಟಲ್​ ಕ್ಯಾಪ್​ ಚಾಲೆಂಜ್​ ಸ್ವೀಕರಿಸಿದ ಕಿಲಾಡಿ ಅಕ್ಷಯ್​ ಕುಮಾರ್​- ಗೋಲ್ಡನ್​ ಸ್ಟಾರ್​ ಗಣೇಶ್​

Photos: ಹೊಸ ಫೋಟೋಶೂಟ್​ನಿಂದ ಮತ್ತೆ ಟಾಕ್​ ಆಫ್​ ದ ಟೌನ್​ ಆದ ದೀಪಿಕಾ ಪಡುಕೋಣೆ..!

First published:July 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading