'ಸೂರ್ಮಾ' ಸಿನಿಮಾದ ಈ ಹಾಡನ್ನು ರಿಯಲ್​ ಹೀರೊಗಳಿಗೆ ಸಮರ್ಪಿಸಿದ ದಿಲ್​ಜಿತ್ ದೋಸಾಂಜ್​

news18
Updated:June 26, 2018, 5:27 PM IST
'ಸೂರ್ಮಾ' ಸಿನಿಮಾದ ಈ ಹಾಡನ್ನು ರಿಯಲ್​ ಹೀರೊಗಳಿಗೆ ಸಮರ್ಪಿಸಿದ ದಿಲ್​ಜಿತ್ ದೋಸಾಂಜ್​
news18
Updated: June 26, 2018, 5:27 PM IST
ನ್ಯೂಸ್​ 18 ಕನ್ನಡ 

ಬಹು ನಿರೀಕ್ಷಿತ 'ಸೂರ್ಮಾ' ಸಿನಿಮಾದ ಚಿತ್ರತಂಡ ಕಡೆಗೂ ಟೈಟಲ್​ ಟ್ರ್ಯಾಕ್​ ಅನ್ನು ಬಿಡುಗಡೆ ಮಾಡಿದೆ. ಹಾಕಿ ಆಟಗಾರನ ಕಥೆಯುಳ್ಳು ಈ ಸಿನಿಮಾ ನೈಜ ಘಟನೆಯಿಂದ ಪ್ರೇರಿತವಾಗಿದೆ.

ಪಂಜಾಬಿ ಗಾಯಕ/ನಟ ದಿಲ್​ಜಿತ್ ದೋಸಾಂಜ್​, ತಾಪ್ಸಿ ಪನ್ನು ಹಾಗೂ ಅಂಗದ್​ ಬೇಡಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾದ ಟೈಟಲ್​ ಟ್ರ್ಯಾಕ್​ ಅನ್ನು ಶಂಕರ್​ ಮಹದೇವನ್​ ಹಾಡಿದ್ದಾರೆ. ಈ ಹಾಡಿಗೆ ಗುಲ್ಜಾರ್​ ಅವರು ಸಾಹಿತ್ಯ ಬರೆದಿದ್ದಾರೆ.

ಹಾಡಿನ ಕುರಿತು ಮಾತನಾಡಿರುವ ಶಂಕರ್​ ಮಹದೇವನ್​ ಈ ಹಾಡು ಎಲ್ಲ ರಿಯಲ್​ ಹಿರೋಗಳ ಗೀತೆಯಾಗಲಿದೆ ಎಂದಿದ್ದಾರೆ.

ಈ ಸಿನಿಮಾದಲ್ಲಿ ಹಾಕಿ ಆಟಗಾರ ಸಂದೀಪ್ ಸಿಂಗ್​ ಪಾತ್ರದಲ್ಲಿ ದಿಲ್​ಜಿತ್​ ದೋಸಾಂಜ್​ ಅಭಿನಯಿಸಲಿದ್ದಾರೆ. ಈ ಹಾಡನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿರುವ ದೋಸಾಂಜ್​, ಇದನ್ನು ಎಲ್ಲ ರಿಯಲ್​ ಹೀರೊಗಳಿಗೆ ಸಮರ್ಪಿಸಿದ್ದಾರೆ.

ಭಾರತ ಹಾಕಿ ತಂಡದ ಮಾಜಿ ನಾಯಕ ಸಂದೀಪ್​ ಸಿಂಗ್​ ಅವರ ಜೀವನಾಧಾರಿತ ಕಥೆಯೇ ಈ 'ಸೂರ್ಮಾ'. ಆಕಸ್ಮಿಕವಾಗಿ ಆಗುವ ಅಪಘಾತದಿಂದ ಚೇತರಿಸಿಕೊಂಡು ಮತ್ತೆ ಯಾರೂ ಊಹಿಸದ ರೀತಿಯಲ್ಲಿ ತಂಡಕ್ಕೆ ಮರಳುವ ಸಂದೀಪ್​ ಸಿಂಗ್​ ಅವರು ವಿಶ್ವದಲ್ಲೇ ಅತ್ಯಂತ ಭಯಾನಕ 'ಡ್ರ್ಯಾಗ್​ ಫ್ಲಿಕ್ಕರ್'​ ಆಗಿದ್ದರಂತೆ. ಗಂಟೆಗೆ 145 ಕಿ.ಮೀ ವೇಗದಲ್ಲಿ ಫ್ಲಿಕ್​ ಮಾಡುತ್ತಿದ್ದ ಕಾರಣ ಇವರನ್ನು 'ಫ್ಲಿಕ್ಕರ್​ ಸಿಂಗ್'​ ಎಂದೇ ಕರೆಯಲಾಗುತ್ತಿತ್ತು.

ಶಾದ್​ ಅಲಿ ಬರೆದು ನಿರ್ದೇಶಿಸುತ್ತಿರುಯವ ಈ ಸಿನಿಮಾವನ್ನು ಸೋನಿ ಪಿಕ್ಚರ್ಸ್​ ನೆಟ್​ವರ್ಕ್ಸ್​ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಜುಲೈ 13ರಂದು ಈ ಸಿನಿಮಾ ತೆರೆಗಪ್ಪಳಿಸಲಿದೆ.​

 
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...