aನಟಿ ಅಪರ್ಣಾ ಬಾಲಮುರಳಿ (Aparna Balamurali) ಅವರು ಸೌತ್ನ ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು. ಕೆಲವೇ ಸಿನಿಮಾಗಳನ್ನು
(Cinema) ಮಾಡಿದ್ದರೂ ಬಹಳ ಬೇಗನೆ ಖ್ಯಾತಿ ಪಡೆದವರು. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಅವರು ತೀವ್ರ ಮುಜುಗರಕ್ಕೊಳಗಾಗುವ ಘಟನೆ ನಡೆದಿದೆ. ಇತ್ತೀಚೆಗೆ ಅವರಿಗೆ ಇರಿಸುಮುರಿಸಾಗುವಂತಹ ಘಟನೆ ನಡೆದಿದ್ದು ಆ ಘಟನೆ ವಿಡಿಯೋ ಎಲ್ಲೆಡೆ ವೈರಲ್ (Video Viral) ಆಗಿದೆ.
ನಟಿ ತಮ್ಮ ತಂಡ ಮತ್ತು ಸಹನಟ ವಿನೀತ್ ಶ್ರೀನಿವಾಸನ್ ಅವರೊಂದಿಗೆ ಮುಂಬರುವ ಚಿತ್ರ ತಂಗಂ ಅನ್ನು ಪ್ರಚಾರ ಮಾಡಲು ಎರ್ನಾಕುಳಂನ ಸರ್ಕಾರಿ ಕಾನೂನು ಕಾಲೇಜಿಗೆ ಭೇಟಿ ನೀಡಿದ್ದರು.
ಆ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಯು ಒಪ್ಪಿಗೆಯಿಲ್ಲದೆ ಅವರನ್ನು ಮುಟ್ಟಿದ್ದಷ್ಟೇ ಅಲ್ಲದೆ ತೋಳಿನ ಮೇಲೆ ಕೈಹಾಕಿ ಫೋಟೋಗೆ ಪೋಸ್ ಕೊಡಲು ಪ್ರಯತ್ನಿಸಿದ್ದಾರೆ. ವಿದ್ಯಾರ್ಥಿ ತೀರ ಕ್ಲೋಸ್ ಆಗಿ ಬರ್ತಿಸುತ್ತಿದ್ದಂತೆ ನಟಿ ದೂರ ಸರಿದಿದ್ದಾರೆ. ಇಲ್ಲಿ ಅಪರ್ಣಾ ಅವರಿಗೆ ವಿದ್ಯಾರ್ಥಿ ನಡೆ ಇಷ್ಟವಾಗದಿರುವುದು ಸ್ಪಷ್ಟವಾಗಿ ಕಂಡುಬಂದಿದೆ.
ಆಗಿದ್ದೇನು?
ವೇದಿಕೆಯಲ್ಲಿದ್ದ ಕಾನೂನು ವಿದ್ಯಾರ್ಥಿಯೊಬ್ಬ ನಟಿಯನ್ನು ಸ್ಪರ್ಶಿಸಿ ಫೋಟೋಗೆ ಪೋಸ್ ಕೊಡಲು ಯತ್ನಿಸಿದ ವಿಡಿಯೋ ವೈರಲ್ ಆಗಿದೆ. ನಟಿ ದೂರ ಸರಿದು ಈ ಬಗ್ಗೆ ತಮ್ಮ ಅಸಮಾಧಾನ ತೋರಿದರು. ನಂತರ ವಿದ್ಯಾರ್ಥಿಯು ತನ್ನ ವರ್ತನೆಗೆ ಕ್ಷಮೆಯಾಚಿಸಿದ್ದಾನೆ. ಹಾಗೆಯೇ ತಾನು ಅವರ ದೊಡ್ಡ ಅಭಿಮಾನಿ ಎಂದು ವಿವರಿಸಿದ್ದಾನೆ.
A college student misbehaved with actress Aparna Balamurali during the promotion function of Thangam movie. @Vineeth_Sree I'm surprised about your silence 🙏 What the hell #Thankam film crew doing there.
@Aparnabala2 #AparnaBalamurali pic.twitter.com/icGvn4wVS8
— Mollywood Exclusive (@Mollywoodfilms) January 18, 2023
ಇದನ್ನೂ ಓದಿ: Actress Bhamaa: ಗಣೇಶ್ಗೆ ಜೋಡಿಯಾದ ಮಲಯಾಳಿ ಚೆಲುವೆ ದಾಂಪತ್ಯದಲ್ಲಿ ಬಿರುಕು
ಅಭಿಮಾನಿಗಳು ಕೆಲವೊಮ್ಮೆ ತೀರಾ ತುಂಬಾ ಹತ್ತಿರವಾಗುವುದರಿಂದ, ಎಕ್ಸೈಟ್ಮೆಂಟ್ನಲ್ಲಿ ವರ್ತಿಸುವುದರಿಂದ ಸೆಲೆಬ್ರಿಟಿಗಳಿಗೆ ತೊಂದರೆಯಾಗುವುದು ಇದೇ ಮೊದಲಲ್ಲ. ವಿದ್ಯಾರ್ಥಿ ವರ್ತನೆಗೆ ಕೋಪಗೊಂಡ ಅನೇಕ ನೆಟ್ಟಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ.
ಈ ಹಿಂದೆಯೂ ನಡೆದಿದ್ದವು ಇಂಥಹ ಘಟನೆ
ಕಳೆದ ವರ್ಷ, ಕೊಚ್ಚಿಯ ಮಾಲ್ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಇಬ್ಬರು ಸೌತ್ ನಟಿಯರು ಸಹ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದರು. ಜಯನ್ ಶಿವಪುರಂ ನಿರ್ದೇಶನದ ಲಕ್ಷ್ಮಿ ಗೋಪಾಲಸ್ವಾಮಿ ಜೊತೆಗೆ ಮಲಯಾಳಂ ಚಿತ್ರ ಯಾತ್ರಾ ತುದಾರುನ್ನು (2013) ನಲ್ಲಿ ಅಪರ್ಣಾ ಮೊದಲ ಬಾರಿ ತೆರೆ ಮೇಲೆ ಕಾಣಿಸಿಕೊಂಡರು. ನಟಿ ಕೊನೆಯದಾಗಿ ಮಲಯಾಳಂ ಚಿತ್ರ ಕಪ್ಪಾದಲ್ಲಿ ಪೃಥ್ವಿರಾಜ್ ಜೊತೆ ನಟಿಸಿದ್ದಾರೆ.
ಸೂರರೈ ಪೊಟ್ರು ಸಿನಿಮಾಗಾಗಿ ರಾಷ್ಟ್ರಪ್ರಶಸ್ತಿ
ಸೂರ್ಯ ಅಭಿನಯದ ಸೂರರೈ ಪೊಟ್ರು ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದ ದಕ್ಷಿಣ ಚೆಲುವೆ ಅಪರ್ಣಾ ಬಾಲಮುರಳಿ ಅವರು ಅತ್ಯುತ್ತಮ ನಟಿಗಾಗಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು. ಅವರ ಇತ್ತೀಚಿನ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಚಿತ್ರದಲ್ಲಿ ತಮ್ಮ ಪಾತ್ರವನ್ನು ಅವರು ಪ್ರಭಾವಶಾಲಿಯಾಗಿ ನಿರ್ವಹಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ