Bigg Boss OTT: ಮನೆಯೊಳಗೆ ಫ್ಲರ್ಟ್ ಮಾಡೋ ರಾಕೇಶ್, 7 ವರ್ಷ ಮದ್ವೆಯಾಗಲ್ಲ ಎಂದ ಸೋನು ಶ್ರೀನಿವಾಸ್ ಗೌಡ

ಇದೀಗ ಕನ್ನಡ ಬಿಗ್​ಬಾಸ್ ಒಟಿಟಿ ಸಖತ್ ಇಂಟ್ರೆಸ್ಟಿಂಗ್ ವೇನಲ್ಲಿ ಸಾಗುತ್ತದೆ. ರಾಕೇಶ್ ಅಡಿಗ ಅವರು ಮನೆಯೊಳಗೆ ಎಲ್ಲರೊಂದಿಗೆ ಫ್ಲರ್ಟ್​ ಮಾಡಿ ಸುದ್ದಿಯಾಗುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ ಅವರೊಂದಿಗಂತೂ ಸ್ವಲ್ಪ ಹೆಚ್ಚೇ ಕ್ಲೋಸ್ ಆಗಿದ್ದಾರೆ.

ಸೋನು ಶ್ರೀನಿವಾಸ್​ ಗೌಡ

ಸೋನು ಶ್ರೀನಿವಾಸ್​ ಗೌಡ

  • Share this:
ಬಿಗ್​ಬಾಸ್ ಮನೆಯೊಳಗೆ ಲವ್​ಸ್ಟೋರಿಗಳು (Love Story) ತುಂಬಾ ಕಾಮನ್. ಕನ್ನಡ ಮಾತ್ರವಲ್ಲ, ಹಿಂದಿ, ತೆಲುಗು, ಮಲಯಾಳಂ ಎಲ್ಲಾ ಭಾಷೆಗಳ ಬಿಗ್​ಬಾಸ್ ಮನೆಯಲ್ಲಿಯೂ ಪ್ರೀತಿ ಅರಳುತ್ತದೆ. ಕೆಲವೊಮ್ಮೆ ಅದು ಸಕ್ಸಸ್ ಆಗುತ್ತದೆ. ಕೆಲವೊಮ್ಮೆ ಮನೆಯೊಳಗೆಯೇ ಮುಗಿದುಹೋಗುತ್ತದೆ. ಬಿಗ್​ಬಾಸ್ ಒಟಿಟಿ (Bigg Boss OTT) ಮನೆಯೊಳಗೂ ಇದು ಕಾಮನ್. ಹಿಂದಿ ಬಿಗ್​ಬಾಸ್ ಒಟಿಟಿಯಲ್ಲಿ ಕಳೆದ ಬಾರಿ ರಾಕೇಶ್ ಬಪತ್ ಹಾಗೂ ಶಮಿತಾ ಪ್ರೀತಿಯಲ್ಲಿ ಬಿದ್ದಿದ್ದರು. ಇತ್ತೀಚಿನವರೆಗೂ ಸುಂದರವಾಗಿ ಬಂದ ಅವರ ಸಂಬಂಧ ಇತ್ತೀಚೆಗೆ ಕೊನೆಗೊಂಡಿತ್ತು. ಹಾಗಾಗಿ ಬಿಗ್​ಬಾಸ್ ಒಟಿಟಿಯಲ್ಲೂ ಪ್ರೀತಿ-ಪ್ರೇಮ-ಪ್ರಯಣವೇನು ಹೊಸದಲ್ಲ. ಇದೀಗ ಕನ್ನಡ ಬಿಗ್​ಬಾಸ್ ಒಟಿಟಿ ಸಖತ್ ಇಂಟ್ರೆಸ್ಟಿಂಗ್ ವೇನಲ್ಲಿ ಸಾಗುತ್ತದೆ. ರಾಕೇಶ್ ಅಡಿಗ (Rakesh Adiga) ಅವರು ಮನೆಯೊಳಗೆ ಎಲ್ಲರೊಂದಿಗೆ ಫ್ಲರ್ಟ್​ ಮಾಡಿ ಸುದ್ದಿಯಾಗುತ್ತಿದ್ದಾರೆ. ಸೋನು ಶ್ರೀನಿವಾಸ್ ಗೌಡ (Sonu Srinivas Gowda) ಅವರೊಂದಿಗಂತೂ ಸ್ವಲ್ಪ ಹೆಚ್ಚೇ ಕ್ಲೋಸ್ ಆಗಿದ್ದಾರೆ.

ಸೋನು ಶ್ರೀನಿವಾಸ್ ​ಗೌಡ ಬಿಗ್ ಬಾಸ್ ಮನೆಯಲ್ಲಿ ಸಖತ್ ಹೈಲೈಟ್ ಆಗುತ್ತಿದ್ದಾರೆ. ಅವರು ಕೆಲ ವಿಚಾರಕ್ಕೆ ಈಗಲೂ ಟ್ರೋಲ್ ಆಗುತ್ತಿದ್ದಾರೆ. ರಾಕೇಶ್ ಜೊತೆ ಫ್ರೆಂಡ್ಲೀಯಾಗಿ ಜಾಲಿಯಾಗಿದ್ದಾರೆ. ಅವರು ಸಣ್ಣ ಮಕ್ಕಳಂತೆ ಆಡುತ್ತಾರೆ ಎಂಬುದು ಹಲವರ ಆರೋಪ.

ಆದರೆ ಇದನ್ನು ಸಾಮಾನ್ಯವಾಗಿ ಸ್ವೀಕರಿಸಿದ ಕೆಲವರಿಂದ ಅವರಿಗೆ ಬೆಂಬಲ ಕೂಡಾ ಸಿಗುತ್ತಿದೆ. ಈಗ ಸೋನು ಅವರು ಮದುವೆ ವಿಚಾರ ಮಾತನಾಡಿದ್ದಾರೆ. ಮುಂದಿನ ಆರೇಳು ವರ್ಷ ಮದುವೆ ಆಗುವುದಿಲ್ಲ ಎಂಬುದನ್ನು ಸೋನು ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಈ ವಿಚಾರ ಕೇಳಿ ಸ್ಫೂರ್ತಿ ಗೌಡ ಅವರು ನಕ್ಕಿದ್ದಾರೆ.

ಸೋನು ಫ್ರೆಂಡ್ ರೀತಿಯೇ ಇದ್ದಾರಂತೆ ರಾಕೇಶ್

‘ನಿನಗೆ ರಾಕೇಶ್ ಮೇಲೆ ಪ್ರೀತಿ ಇದೆಯಾ’ ಎಂದು ಸೋನುಗೆ ಸ್ಫೂರ್ತಿ ಪ್ರಶ್ನೆ ಮಾಡಿದರು. ಇದಕ್ಕೆ ಸೋನು ನೇರವಾಗಿ ಉತ್ತರಿಸಿದರು. ‘ರಾಕೇಶ್ ಒಳ್ಳೆಯ ಗೆಳೆಯ. ಹಾಗಂತ ನಾನು ಅವನ ಜತೆ ಟೈಮ್​ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಫ್ರೆಂಡ್ ಇದ್ದಾನೆ. ಅವನ ರೀತಿಯೇ ರಾಕೇಶ್​ ಕಾಣುತ್ತಿದ್ದಾನೆ. ಹೀಗಾಗಿ ಅವನ ಜತೆ ಕ್ಲೋಸ್ ಆಗಿದ್ದೀನಿ. ನಾನು ಇಷ್ಟು ಬೇಗ ಮದುವೆ ಆಗಲ್ಲ. ಇನ್ನೂ ಏಳು ವರ್ಷ ವಿವಾಹ ಆಗಲ್ಲ. ನಾನು ಇಂಡಸ್ಟ್ರೀಲಿ ಬೆಳೆಯಬೇಕು’ ಎಂದರು ಸೋನು.

ಇದನ್ನೂ ಓದಿ: Bigg Boss OTT Kannada: ಕರುನಾಡ ವಾರಿಯರ್ಸ್​ನಿಂದ ರೂಪೇಶ್ ಔಟ್! ಗುರೂಜಿಗೆ ಲಕ್

ಚಿತ್ರರಂಗದಲ್ಲಿ ಮಿಂಚುವ ಆಸೆ

ಸೋನುಗೆ ಹೀರೋಯಿನ್ ಆಗಬೇಕು ಎಂಬ ಕನಸಿದೆ. ಈ ಮೊದಲು ಶಾರ್ಟ್​ಮೂವಿಗಳಲ್ಲಿ ಅವರು ನಟಿಸಿದ್ದರು. ಬಿಗ್ ಬಾಸ್ ವೇದಿಕೆ ಏರಿದಾಗಲೂ ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದರು. ಬಿಗ್ ಬಾಸ್​ನಿಂದ ಒಂದಷ್ಟು ಜನಪ್ರಿಯತೆ ಸಿಕ್ಕರೆ ಅದರಿಂದ ಒಂದಷ್ಟು ಆಫರ್​ಗಳು ಬರಬಹುದು ಎಂಬುದು ಅವರ ನಂಬಿಕೆ.

ಸ್ನಾನ ಮಾಡಲ್ವಾ ಸೋನು ಗೌಡ

ಮನೆಯನ್ನು ಕೊಳಕಾಗಿ ಇಟ್ಟುಕೊಳ್ಳುವವರು ಯಾರು, ತಮ್ಮ ವಸ್ತುಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ ಗಲೀಜು ಮಾಡೋದು ಯಾರು ಎಂದು ಕಿಚ್ಚ ಸುದೀಪ್​ ಅವರು ಬಿಗ್​ ಸ್ಪರ್ಧಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಪರ್ಧಿಗಳು ಅನೇಕ ಹೆಸರು ಹೇಳಿದ್ದಾರೆ. ಬಳಿಕ ಸ್ನಾನದ ಬಗ್ಗೆಯೂ ಚರ್ಚೆ ನಡೆದ ವೇಳೆ, ಸೋನು ಗೌಡ ಸ್ನಾನ ಮಾಡುವುದಿಲ್ಲ ಎಂದು ಸಾನ್ಯಾ ಅಯ್ಯರ್​ ಆರೋಪಿಸಿದರು. ನಾನು ಇವತ್ತು ಸ್ನಾನ ಮಾಡಿಲ್ಲ ಎಂದು ಸುದೀಪ್​ ಎದುರು ಸೋನು ಗೌಡ ಒಪ್ಪಿಕೊಂಡಿದ್ದಾರೆ.

Social Media Sensation Sonu Srinivas Gowda What s her monthly income
ಸೋನು ಶ್ರೀನಿವಾಸ್ ಗೌಡ


ಇಲ್ಲಿ ಎಷ್ಟೋ ಜನರು ಸ್ನಾನದ ವಿಚಾರದಲ್ಲಿ ಡ್ರಾಮಾ ಮಾಡುತ್ತಾರೆ. ಎಲ್ಲರೂ ಪ್ರತಿ ದಿನ ಸ್ನಾನ ಮಾಡ್ತಾರೆ. ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಮೂಡ್​ ಇಲ್ಲ ಅಂದರೆ ಮೂರು ದಿನಕ್ಕೊಮ್ಮೆ ಸ್ನಾನ ಮಾಡ್ತೀನಿ ಎಂದು ಸೋನು ಹೇಳಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
Published by:Divya D
First published: