Bigg Boss OTT: ಸೋನು ಗೌಡ ಹುಚ್ಚಾಟಕ್ಕೆ ಬಾತ್ ರೂಂನಲ್ಲಿ ಕುಸಿದು ಬಿದ್ದ ಆರ್ಯವರ್ಧನ್; ಟ್ರೋಲ್ ರಾಣಿಗೆ ಮತ್ತೆ ಕಿಚ್ಚನ ವಾರ್ನಿಂಗ್!

ಆರ್ಯವರ್ಧನ್​ ಅವರು ಬಾತ್​ ರೂಮ್​ಗೆ ಹೋಗಿದ್ದರು. ಈ ವೇಳೆ ಸೋನು ಗೌಡ ಅವರು ತಮ್ಮ ಮುಖಕ್ಕೆ ಪೌಡರ್​ ಬಳಿದುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಹಚ್ಚಿಕೊಂಡು, ಕೂದಲು ಕೆದರಿಕೊಂಡು ಬಾತ್​ ರೂಮ್​ ಹೊರಗೆ ನಿಂತಿದ್ದರು. ಬಾತ್​ ರೂಮ್​ ಬಾಗಿಲು ತೆಗೆಯುತ್ತಿದ್ದಂತೆಯೇ ಸೋನು ಗೌಡ ಮುಖ ನೋಡಿ ಗುರೂಜಿ ಬೆಚ್ಚಿ ಬಿದ್ದಿದ್ದಾರೆ.

ಸೋನು ಗೌಡ, ಕಿಚ್ಚ ಸುದೀಪ್​

ಸೋನು ಗೌಡ, ಕಿಚ್ಚ ಸುದೀಪ್​

  • Share this:
ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ (Bigg Boss OTT)​ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿದೆ. ಎಲ್ಲೆಲ್ಲೂ ಬಿಗ್​​ ಬಾಸ್​ ಚರ್ಚೆಗಳು ಶುರುವಾಗಿದೆ.  3ನೇ ವಾರದ (2nd Week) ಎಲಿಮಿನೇಷನ್​ನಲ್ಲಿ (Elimination) ಉದಯ್​ ಸೂರ್ಯ ಹೊರ ಹೋಗಿದ್ದಾರೆ. ದೊಡ್ಮನೆಯಲ್ಲಿ ಕಾಂಪಿಟೇಷನ್​ ಮತ್ತಷ್ಟು ಹೆಚ್ಚಾಗಿದೆ. ಬಿಗ್​ ಬಾಸ್​ ಒಟಿಟಿ (Bigg Boss Kannada OTT) ಶೋ ಹಲವು ಇಂಟರೆಸ್ಟಿಂಗ್​ ಘಟನೆಗಳಿಗೆ ಸಾಕ್ಷಿ ಆಗುತ್ತಿದೆ. ಸೋನು ಗೌಡ ಕಂಡು ಆರ್ಯವರ್ಧನ್​ ಗುರೂಜಿ ಕೆಳಗೆ ಬಿದ್ದಿದ್ದಾರೆ. ಸೋನು ಮಾಡಿದ ಚೇಷ್ಠೆಗೆ ಆರ್ಯವರ್ಧನ್​ ಗುರೂಜಿ ಪೇಚಿಗೆ ಸಿಲುಕಿದ್ದಾರೆ. ವಾರದ ಕಥೆ ಕಿಚ್ಚನ ಜೊತೆಯಲಿ ಚರ್ಚೆ ವೇಳೆ ಈ ವಿಷಯ ಪ್ರಸ್ತಾಪ ಮಾಡಲಾಗಿದೆ.

ಆರ್ಯವರ್ಧನ್​ ಗುರೂಜಿ ಅವರಿಗೆ ದೆವ್ವ ಅಂದ್ರೆ ಸಿಕ್ಕಾಪಟ್ಟೆ ಭಯ ಅಂತೆ, ಹೀಗೆಂದು ಅವರೇ ತುಂಬಾ ಸಹ ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಈ ದೆವ್ವದ ವಿಚಾರ ಬಳಸಿಕೊಂಡ ಇತರ ಸ್ಪರ್ಧಿಗಳು ಆರ್ಯವರ್ಧನ್​ ಗುರೂಜಿಗೆ ಭಯ ಪಡಿಸಲು ಮುಂದಾಗಿದ್ದಾರೆ. ಸೋನು ಶ್ರೀನಿವಾಸ್​ ಗೌಡ (Sonu Srinivas Gowda) ಅವರು ದೆವ್ವದ ರೀತಿಯಲ್ಲಿ ಮೇಕಪ್​ ಮಾಡಿಕೊಂಡು ಹೆದರಿಸಿದ್ದಾರೆ.

ಇದು ಸೋನು ಗೌಡ ಹಾಗೂ ಅಕ್ಷತಾ ಪ್ಲ್ಯಾನ್​

ಆರ್ಯವರ್ಧನ್​ ಗುರೂಜಿ ಅವರನ್ನು ಹೆದರಿಸಬೇಕು ಎಂದು ಸೋನು ಶ್ರೀನಿವಾಸ್​ ಗೌಡ ಹಾಗೂ ಅಕ್ಷತಾ ಕುಕ್ಕಿ ಅವರು ಪ್ಲ್ಯಾನ್​ ಮಾಡಿದ್ದರು. ಈ ವೇಳೆ ಜೊತೆಯಲ್ಲೇ ಇದ್ದ ರಾಕೇಶ್​, ಗುರೂಜಿ ಬಳಿ ಸೋನು ಮಾಡಿರೋ ಪ್ಲ್ಯಾನ್​ ಬಗ್ಗೆ ಬಾಯ್ಬಿಟ್ಟಿದ್ದರು. ಇದಕ್ಕೆ ಸೋನು , ಅಕ್ಷತಾ ಸಹ ರಾಕೇಶ್​ ಮೇಲೆ ಸಿಟ್ಟಾಗಿದ್ರು. ಆದ್ರೂ ಪ್ಲ್ಯಾನ್​ ಪ್ರಕಾರ ಸೋನು ದೆವ್ವದ ವೇಷ ಹಾಕಿದ್ದಾರೆ.

aryavardhan guruji always wrong predict says somanna in Bigg Boss House
ಆರ್ಯವರ್ಧನ್​ ಗುರೂಜಿ


ದೆವ್ವದಂತೆ ಮೇಕಪ್​ ಮಾಡಿಕೊಂಡ ಸೋನು

ಆರ್ಯವರ್ಧನ್​ ಅವರು ಬಾತ್​ ರೂಮ್​ಗೆ ಹೋಗಿದ್ದರು. ಈ ವೇಳೆ ಸೋನು ಗೌಡ ಅವರು ತಮ್ಮ ಮುಖಕ್ಕೆ ಪೌಡರ್​ ಬಳಿದುಕೊಂಡು, ಹಣೆಗೆ ದೊಡ್ಡದಾಗಿ ಕುಂಕುಮ ಹಚ್ಚಿಕೊಂಡು, ಕೂದಲು ಕೆದರಿಕೊಂಡು ಬಾತ್​ ರೂಮ್​ ಹೊರಗೆ ನಿಂತಿದ್ದರು. ಬಾತ್​ ರೂಮ್​ ಬಾಗಿಲು ತೆಗೆಯುತ್ತಿದ್ದಂತೆಯೇ ಸೋನು ಗೌಡ ಮುಖ ನೋಡಿ ಗುರೂಜಿ ನಿಜವಾಗಿಯೂ ಬೆಚ್ಚಿ ಬಿದ್ದರು. ಕೆಳಗಿ ಬಿದ್ದು ಪ್ರಜ್ಞೆ ತಪ್ಪಿದ ಅವರನ್ನು ರೂಪೇಶ್​ ಮತ್ತು ರಾಕೇಶ್​ ಸೇರಿ ಎತ್ತಿಕೊಂಡು ಬಂದರು. ಬಿಗ್​ ಬಾಸ್​ ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಪರ್ಧಿಗಳು ಗುರೂಜಿಗೆ ಏನಾಯ್ತು ಅನ್ನೋ ಭಯದಲ್ಲಿದ್ರು.

ಇದನ್ನೂ ಓದಿ: Bigg Boss OTT: ಬಿಗ್ ಬಾಸ್​ ಮನೆಯಿಂದ ಉದಯ್​ ಸೂರ್ಯ ಔಟ್!

ಕಣ್ಣೀರು ಹಾಕಿದ ಆರ್ಯವರ್ಧನ್​ ಗುರೂಜಿ

ಆರ್ಯವರ್ಧನ್​ ಅವರಿಗೆ ಹಾರ್ಟ್​ ಅಟ್ಯಾಕ್​ ಆಗಿರಬಹುದು ಎಂದು ಎಲ್ಲರೂ ಭಯಪಟ್ಟರು. ಸೋನು ಗೌಡ ಮಾಡಿದ ಚೇಷ್ಠೆಯಿಂದ ಗುರೂಜಿ ಪ್ರಜ್ಞೆ ತಪ್ಪಿಬಿದ್ದರು. ಬಳಿಕ ಎಲ್ಲರೂ ಸೇರಿ ಗುರೂಜಿಗೆ ಸಮಾಧಾನ ಮಾಡಿದ್ರು. ನಿಜಕ್ಕೂ ನಾನು ದೆವ್ವ ಅಂತ ಹೆದರಿಕೊಂಡೆ ಎಂದು ಗುರೂಜಿ ಕಣ್ಣೀರು ಹಾಕಿದ್ದಾರೆ. ಬಾತ್​ ರೂಮ್​ನಲ್ಲಿ ಅವರು ಬಿದ್ದಿದ್ದ ರೀತಿಯನ್ನು ನೆನಪಿಸಿಕೊಂಡು ಅಕ್ಷತಾ ಕುಕ್ಕಿ ಕೂಡ ಅಳುತ್ತಿದ್ದರು.

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಯ ಲವ್​​ ಬರ್ಡ್ಸ್​​ಗೆ ಕಿಚ್ಚನ ವಾರ್ನಿಂಗ್​! ಹೀಗೆ ಮಾಡ್ತಿದ್ರೆ ಗೇಟ್​ ಪಾಸ್​ ಫಿಕ್ಸ್!​

ಆರ್ಯವರ್ಧನ್​ ಗುರೂಜಿಗೆ ಧೈರ್ಯ ತುಂಬಿದ ಕಿಚ್ಚ 

ಈ ಎಲ್ಲ ವಿಚಾರ ಸೂಪರ್​ ಸಂಡೇ ವಿತ್​ ಸುದೀಪ್​ ಎಪಿಸೋಡ್​ನಲ್ಲಿ ಚರ್ಚೆಗೆ ಬಂದಿದೆ. ಆರ್ಯವರ್ಧನ್​ ಗುರೂಜಿಗೆ ಕಿಚ್ಚ ಸುದೀಪ್​ ಸಮಾಧಾನ ಮಾಡಿದ್ದಾರೆ. ಬಾತ್​ ರೂಮ್​ನಲ್ಲಿ ದೆವ್ವ ಇಲ್ಲ. ನಿಮ್ಮ ಸುತ್ತ-ಮುತ್ತ 300 ತಂತ್ರಜ್ಞರು ಇದ್ದಾರೆ. ನಿಮಗೆ ತೊಂದರೆ ಆದ್ರೆ ತಕ್ಷಣ ಸಹಾಯಕ್ಕೆ ಬರುತ್ತಾರೆ ಎಂದು ಸುದೀಪ್​ ಭರವಸೆ ನೀಡಿದ್ದಾರೆ. ನಾನು ದೆವ್ವಕ್ಕೆ ಹೆದರುತ್ತೇನೆ. ರಾತ್ರಿ ಸಿನಿಮಾ ನೋಡಿಕೊಂಡು ಬಂದಾಗ ನಮ್ಮ ಮನೆಯಲ್ಲಿ ಯಾರಾದರೂ ನನ್ನನ್ನು ಲಿಫ್ಟ್​ವರೆಗೆ ಬಿಟ್ಟು ಹೋಗಬೇಕು. ಅಷ್ಟು ಹೆದರುತ್ತೇನೆ’ ಎಂದು ಗುರೂಜಿ ಅವರು ಹೇಳಿದ್ದಾರೆ. ಇದೇ ವೇಳೆ ಬಿಗ್​ ಬಾಸ್​ ಮನೆಯಲ್ಲಿ ಪ್ರ್ಯಾಂಕ್​ ಮಾಡುವವರಿಗೆ ಸುದೀಪ್​ ಎಚ್ಚರಿಕೆ ನೀಡಿದ್ದಾರೆ.
Published by:Pavana HS
First published: