Bigg Boss OTT: ಬಿಗ್ ಬಾಸ್ ಮನೆಯಲ್ಲಿ ಸೋನು ಗೌಡ ಪ್ರೀತಿ ಪಾಠ; ರಾಕೇಶ್ ಕೊಟ್ರು ಸಖತ್ ಕೌಂಟರ್

ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು. ಟೈಮ್​ಪಾಸ್​ ಇರಬಾರದು ಎಂದು ರೂಪೇಶ್​ಗೆ ಸೋನುಗೌಡ ಹೇಳಿದ್ದಾರೆ. ಲವ್​ ಟಿಪ್ಸ್​ ಕೊಟ್ಟಿರೋ ಸೋನುಗೌಡ, ಲವ್​ ಮಾಡೋದೆಲ್ಲಾ ಟೈಮ್​ ವೇಸ್ಟ್​​, ಫ್ರೆಂಡ್​ ಶಿಫ್​ ಅಷ್ಟೆ ಮುಖ್ಯ ಎಂದಿದ್ದಾರೆ.

ಸೋನು ಗೌಡ, ರಾಕೇಶ್​ ಅಡಿಗ

ಸೋನು ಗೌಡ, ರಾಕೇಶ್​ ಅಡಿಗ

  • Share this:
ಈ ಬಾರಿ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ ಬಾಸ್ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಗ್ ಬಾಸ್ ಮನೆ ಸೇರಿರೋ ಸ್ಪರ್ಧಿಗಳು ಜನರಿಗೆ ಒಳ್ಳೆ ಮನರಂಜನೆಯನ್ನೇ ನೀಡ್ತಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಈಗಾಗಲೇ ಪ್ರೇಮಕಥೆಗಳು ಶುರುವಾಗಿದೆ. ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ(Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ರೀಲ್ಸ್​ ಹಾಗೂ ಟಿಕ್​ಟಾಕ್ (Reels and Tiktok)​ ಮಾಡಿಕೊಂಡು ಫೇಮಸ್​ ಆಗಿದ್ದ ಸೋನು ಶ್ರೀನಿವಾಸ ಗೌಡ (Sonu Srinivasa Gowda) ಬಿಗ್ ಬಾಸ್ ಮನೆಯಲ್ಲೂ ಭಾರೀ ಸದ್ದು ಮಾಡ್ತಿದ್ದಾರೆ. ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗ್ತಾನೆ ಇರ್ತಾರೆ. ಇದೀಗ ಬಿಗ್​ ಬಾಸ್​ ಮನೆಯಲ್ಲಿ ಸೋನು ಗೌಡ ಪ್ರೀತಿ ಪಾಠ ಮಾಡಿದ್ದಾರೆ.

ರೂಪೇಶ್ ಶೆಟ್ಟಿಗೆ ಸೋನು ಗೌಡ ಪಾಠ

ಸೋನುಗೌಡ ಬಳಿ ರೂಪೇಶ್​ ಶೆಟ್ಟಿ ತನ್ನ ಹಳೆ ಲವ್​ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ. ಒಂದು ಹುಡುಗಿ ದಿನಾ ದೇವಸ್ಥಾನಕ್ಕೆ ಬರುತ್ತಿದ್ದಳು. ನನ್ನ ಫ್ರೆಂಡ್ಸ್ ಎಲ್ಲರೂ ಅವಳಿಗೆ ಲೈನ್ ಹೊಡೆಯುತ್ತಿದ್ದರು. ಅವಳು ನನಗೆ ಬೀಳಲ್ಲ ಎಂದು ನಾನು ಸುಮ್ಮನೆ ಇದ್ದೆ. ಹಾಗೇ ರಕ್ಷಾ ಬಂಧನದ ದಿನ ಎಲ್ಲರಿಗೂ ಆಕೆ ರಾಖಿ ಕಟ್ಟಿದಳು. ನನಗೆ ಕಟ್ಟಿಲ್ಲ ಎಂದು ಸೋನು ಗೌಡ ಬಳಿ ರೂಪೇಶ್ ಹೇಳಿದ್ದಾರೆ.

a movie based social media star sonu srinivas gowda screens pvn
ಸೋನು ಗೌಡ


ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು

ಈ ವೇಳೆ ಸೋನು ಗೌಡ ಅವರು, ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು. ಟೈಮ್​ಪಾಸ್​ ಇರಬಾರದು ಎಂದು ರೂಪೇಶ್​ಗೆ ಸೋನುಗೌಡ ಹೇಳಿದ್ದಾರೆ. ಲವ್​ ಟಿಪ್ಸ್​ ಕೊಟ್ಟಿರೋ ಸೋನುಗೌಡ, ಲವ್​ ಮಾಡೋದೆಲ್ಲಾ ಟೈಮ್​ ವೇಸ್ಟ್​​, ಫ್ರೆಂಡ್​ ಶಿಫ್​ ಅಷ್ಟೆ ಮುಖ್ಯ ಎಂದಿದ್ದಾರೆ.

ಯಾವುದೇ ರಿಲೇಶನ್​ಶಿಪ್​ನಲ್ಲಿ ರೆಸ್ಪೆಕ್ಟ್ ಮುಖ್ಯ

ಸೋನು ಹಾಗೂ ರೂಪೇಶ್​ ಚರ್ಚೆ ಕೇಳಿಸಿಕೊಂಡ ರಾಕೇಶ್​ ಕೂಡ ಮಧ್ಯ ಪ್ರವೇಶ ಮಾಡಿದ್ದಾರೆ. ಇದೇ ವೇಳೆ ಮಾತಾಡಿ ರಾಕೇಶ್, ‘ಯಾವುದೇ ರಿಲೇಶನ್​ಶಿಪ್​ನಲ್ಲಿ ರೆಸ್ಪೆಕ್ಟ್ ಮುಖ್ಯ ಎಂದರು ಹೇಳಿದ್ದಾರೆ. ರಾಕೇಶ್​, ಸೋನು ನಡುವೆ ಏನೋ ನಡೀತಿದೆ ಅನ್ನೋ ವಿಚಾರ ಕೂಡ ಸ್ಪರ್ಧಿಗಳ ನಡುವೆ ಚರ್ಚೆಯಾಗ್ತಿದೆ.

ಕಹಿ ಘಟನೆ ಹಂಚಿಕೊಂಡಿದ್ದ ಸೋನು

ಬಿಗ್​ ಬಾಸ್​ ಸ್ಪರ್ಧಿಗಳ ಎದುರು ಹಿಂದೊಮ್ಮೆ ವೈರಲ್​ ಆಗಿದ್ದ ಖಾಸಗಿ ವಿಡಿಯೋದ ಬಗ್ಗೆ ಮಾತನಾಡಿದ್ದಾರೆ. ಸೋನು ಶ್ರೀನಿವಾಸ್​ ಗೌಡ ಹುಡುಗನೊಬ್ಬನ ಪ್ರೀತಿಗೆ ಬಿದ್ದಿದ್ದರು. ಇಬ್ಬರು ಲವ್​ ಮಾಡುತ್ತಿದ್ದರು. ಅಷ್ಟೇ ಏಕೆ ಆತನು ಕೂಡ ಗೌಡ ಜಾತಿಗೆ ಸೇರಿದವನಾಗಿದ್ದು, ಮೆಸೇಜ್​, ಕಾಲ್​, ವಿಡಿಯೋ ಕಾಲ್​ ಮಾಡುತ್ತಿದ್ದರಂತೆ. ಆದರೆ ಕೊನೆಗೊಂದು ದಿನ ಆ ಬಾಯ್​ ಫ್ರೆಂಡ್​​ನಿಂದಾಗಿ​ ಸೋನು ಶ್ರೀನಿವಾಸ್​ ಗೌಡ ಅವರ ಖಾಸಗಿ ವಿಡಿಯೋ ವೈರಲ್​ ಆಗಿದೆ.

ಇದನ್ನೂ ಓದಿ: Bigg Boss OTT: ಬಿಗ್​ ಬಾಸ್​ ಮನೆಯ ಲವ್​​ ಬರ್ಡ್ಸ್​​ಗೆ ಕಿಚ್ಚನ ವಾರ್ನಿಂಗ್​! ಹೀಗೆ ಮಾಡ್ತಿದ್ರೆ ಗೇಟ್​ ಪಾಸ್​ ಫಿಕ್ಸ್!​

ಈ ಹಳೆಯ ಘಟನೆಯನ್ನು ಹೇಳುವ ಮೂಲಕ ಬಿಗ್​ ಬಾಸ್​ ಮನೆಯಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ ಸೋನು ಶ್ರೀನಿವಾಸ್​ ಗೌಡ. ಆಕೆಯ ಕಣ್ಣೀರು ಕಂಡು ಉಳಿದ ಸ್ಫರ್ಧಿಗಳು ಸಂತೈಸಿದ್ದಾರೆ. ಅವರನ್ನು ತಬ್ಬಿಕೊಂಡು ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ ನಟ ರಾಕೇಶ್​ ಅಡಿಗ.

ಆತ ಮದುವೆ ಆಗ್ತಿನಿ ಅಂದಿದ್ದ!

ಪ್ರೀತಿಗೆ ಬೀಳುವುದು ಸಹಜ. ಅದೇ ರೀತಿ ಸೋನು ಶ್ರೀನಿವಾಸ್​ ಗೌಡ ಕೂಡ ಯುವಕನೊಬ್ಬನ ಪ್ರೀತಿಗೆ ಬಿದ್ದಿದ್ದರು. ಆತನ ಮೊಲಿನಿಂದಲೂ ಆಕೆಗೆ ತಿಳಿದಿದ್ದ ಕಾರಣ ಮತ್ತು ಒಂದೇ ಜಾತಿಯವನಾಗಿದ್ದ ಕಾರಣ ಸೋನು ಕೂಡ ಆಕೆಯನ್ನು ಪ್ರೀತಿಸಿದರು. ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತಿಂದಂತೆ ಆತನನ್ನೇ ಮದುವೆ ಆಗ್ತೀನಿ ಅಂತ ಮನೆಯಲ್ಲಿ ಹೇಳಿದ್ದರಂತೆ.

ಹೀಗಿರುವಾಗ ಒಂದು ದಿನ ಪ್ರಿಯಕರ ವಿಡಿಯೋ ಕರೆ ಮಾಡು ಎಂದು ಸೋನು ಶ್ರೀನಿವಾಸ್​ ಗೌಡ ಅವರನ್ನು ಕೇಳಿಕೊಂಡಿದ್ದಾನೆ. ಆಕೆ ಕೂಡ ಆತನಿಗೆ ವಿಡಿಯೋ ಫೋನ್​ ಕರೆ ಮಾಡಿದ್ದಾರೆ. ಹೇಗೂ ಮದುವೆ ಆಗುತ್ತೇವೆ ಎಂದು ಸೋನು ಶ್ರೀನಿವಾಸ್​ ಗೌಡ ದುಡುಕುತ್ತಾರೆ. ಆತ್ತ ಕಡೆಯಿಂದ ಪ್ರಿಯಕರ ವಿಡಿಯೋ ಕರೆಯನ್ನು ರೆಕಾರ್ಡ್​ ಮಾಡತ್ತಾನೆ. ಒಂದು ವಾರದ ನಂತರ ಅವನು ಆಕೆಯ ಬಳಿ  ರೂಡ್​ ಆಗಿ ನಡೆದುಕೊಳ್ಳಲು ಶುರು ಮಾಡಿತ್ತಾನೆ ಎಂದು ಸೋನು ತನ್ನ ಬೇಸರ ಹಂಚಿಕೊಂಡಿದ್ದರು
Published by:Pavana HS
First published: