ಈ ಕೋವಿಡ್-19 (Covid 19) ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅನೇಕ ಜನರು ದೇಶದ ಅನೇಕ ಭಾಗಗಳಲ್ಲಿ ಕೆಲಸಕ್ಕೆ ಅಂತ ಹೋಗಿ ಅಲ್ಲಿಂದ ತಿರುಗಿ ತಮ್ಮ ಊರಿಗೆ ಬರಲಾಗದೆ ಇದ್ದಂತಹ ಸಂದರ್ಭದಲ್ಲಿ ಸೋನು ಸೂದ್ ನೆರವಿಗೆ ಧಾವಿಸಿದ್ದರು. ಜನರಿಗೆ ತುಂಬಾನೇ ಸಹಾಯ ಮಾಡಿದ್ದವರನ್ನು ನೆನಪಿಸಿಕೊಳ್ಳುವಾಗ, ಬಹುತೇಕರಿಗೆ ಮೊದಲು ನೆನಪಿಗೆ ಬರುವ ಒಬ್ಬ ನಟ ಎಂದರೆ ಸೋನು ಸೂದ್. ಕೋವಿಡ್-19 ಸಮಯದಲ್ಲಿ ನಟ ಸೋನು ಸೂದ್ (Sonu Sood) ಅವರು ಸಾವಿರಾರು ವಲಸಿಗರನ್ನು ಅವರ ಗ್ರಾಮಗಳಿಗೆ ಕಳುಹಿಸಿದ್ದರು. ಬೇರೆ ಬೇರೆ ದೇಶಗಳಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು (Indian Students) ದೇಶಕ್ಕೆ ಕರೆತರುವಲ್ಲಿ ಮಾಡಿದ ಯಶಸ್ವಿ ಪ್ರಯತ್ನಗಳಿಗಾಗಿ ಇವರನ್ನು ನಿಜವಾದ 'ಹೀರೋ' ಅಂತ ಸಾಮಾಜಿಕ ಮಾಧ್ಯಮದಲ್ಲಿ (Social Media) ಜನರು ಶ್ಲಾಘಿಸಿದ್ದರು.
ಇದರ ನಂತರವೂ ಸಹ ಇವರು ಅನೇಕರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿ ಜನರ ಪ್ರೀತಿಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಸೋನು ವೀಡಿಯೋ ನೋಡಿ ಅಸಮಾಧಾನಗೊಂಡ ನೆಟ್ಟಿಗರು!
ಆದರೆ ಈಗ ಸೋನು ಸೂದ್ ಅವರು ತಮ್ಮ ಟ್ವಿಟ್ಟರ್ (Twitter) ಖಾತೆಯ ಪುಟದಲ್ಲಿ ಒಂದು ವೀಡಿಯೋವನ್ನು ಹಂಚಿಕೊಂಡಿದ್ದು ಸಾಮಾಜಿಕ ಮಾಧ್ಯಮ ಬಳಕೆದಾರರು ನಟನನ್ನು ಟೀಕಿಸಿದ್ದಾರೆ. ಅವರು ಆ ವೀಡಿಯೋದಲ್ಲಿ ಮಾಡಿದ ಕೃತ್ಯವನ್ನು 'ಅಪಾಯಕಾರಿ' ಮತ್ತು 'ಬೇಜವಾಬ್ದಾರಿತನ' ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ನವೆಂಬರ್ 13 ರಂದು ಹಂಚಿಕೊಳ್ಳಲಾದ 22 ಸೆಕೆಂಡುಗಳ ಒಂದು ವೀಡಿಯೋದಲ್ಲಿ, ನಟ ಸೋನು ಸೂದ್ ಅವರು ಚಲಿಸುತ್ತಿರುವ ರೈಲಿನ ಬಾಗಿಲ ಬಳಿ ಕುಳಿತು ಗಾಳಿಯನ್ನು ಆನಂದಿಸುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ: Sonu Sood: ರೈಲ್ವೇ ಸ್ಟೇಷನ್ ನಲ್ಲಿ ನೀರು ಯಾವ ಬಿಸ್ಲೇರಿ ನೀರಿಗೂ ಕಡಿಮೆ ಇಲ್ಲ! ಎಂದ ಸೋನು ಸೂದ್
ರೈಲು ವೇಗವಾಗಿ ಚಲಿಸುತ್ತಿರುವಂತೆ, ಸೂದ್ ಹ್ಯಾಂಡ್ ರೇಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡಿರುವುದನ್ನು ಮತ್ತು ಹೊರಗೆ ನೋಡುತ್ತಿರುವುದನ್ನು ಕಾಣಬಹುದು.
ವೀಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?
ಇದು ಸೋನು ಸೂದ್ ಅವರಿಗೆ ತುಂಬಾನೇ ಮಜಾ ಕೊಟ್ಟಿರಬಹುದು, ಆದರೆ ನೆಟ್ಟಿಗರು ಮಾತ್ರ ಈ ವೀಡಿಯೋ ನೋಡಿ ಅಸಮಾಧಾನಗೊಂಡಿದ್ದರು.
ಈ ಬಗ್ಗೆ ಹಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು 'ಅಪಾಯಕಾರಿ' ಮತ್ತು 'ಬೇಜವಾಬ್ದಾರಿತನದ' ಕೃತ್ಯ ಎಂದು ಕರೆದಿದ್ದಾರೆ. ಇಂತಹ ಕೃತ್ಯವನ್ನು ಉತ್ತೇಜಿಸಿದ್ದಕ್ಕಾಗಿ ನಟನನ್ನು ಅನೇಕರು ಟೀಕಿಸಿದ್ದಾರೆ. ಈ ವೀಡಿಯೋ ಅವರ ಅಭಿಮಾನಿಗಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಅನೇಕರು ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಜೀವನವು ಸಿಗರೇಟಿಗಿಂತ ಅಗ್ಗವಾಗಿದೆ. ಯುವಕರು ನಿಮ್ಮಂತೆ ಇಂತಹ ಕೃತ್ಯಗಳನ್ನು ಮಾಡಲು ಹೋಗುತ್ತಾರೆ. ಆದ್ದರಿಂದ ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಿ. ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ.
ಮೂರನೆಯ ಬಳಕೆದಾರರು ಮುಂಬೈ ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿ, "ದಯವಿಟ್ಟು ಆ ರೀತಿ ಪ್ರಯಾಣಿಸಿದ್ದಕ್ಕಾಗಿ ಅವರ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಿ! ಇದು ಅಪಾಯಕಾರಿ. ಜನರು ಇದನ್ನು ಫಾಲೋ ಮಾಡಬಹುದು. ಇವರಿಗೆ ಶಿಕ್ಷೆ ನೀಡಿದರೆ ಬೇರೆಯವರಿಗೆ ಒಂದು ಉದಾಹರಣೆಯಾಗುತ್ತದೆ" ಎಂದು ಹೇಳಿದ್ದಾರೆ.
ಮುಂಬೈ ರೈಲ್ವೆ ಪೊಲೀಸ್ ಕಮಿಷನರೇಟ್ ನ ಅಧಿಕೃತ ಹ್ಯಾಂಡಲ್ ಜಿಆರ್ಪಿ ಮುಂಬೈ ಕೂಡ ವೀಡಿಯೋಗೆ ಉತ್ತರಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಅವರು "ಫುಟ್ಬೋರ್ಡ್ ನಲ್ಲಿ ಸೋನು ಸೂದ್ ಪ್ರಯಾಣಿಸುವುದು ಚಲನಚಿತ್ರಗಳಲ್ಲಿ 'ಮನರಂಜನೆ'ಯ ಮೂಲವಾಗಿರಬಹುದು, ಆದರೆ ನಿಜ ಜೀವನದಲ್ಲಲ್ಲ! ನಾವು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸೋಣ” ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ