Sonu Sood: ಕೊರೋನಾ ಸೋಂಕು ತಗುಲಿದರೂ ಸಮಾಜ ಸೇವೆ ನಿಲ್ಲಿಸದ ನಟ ಸೋನು ಸೂದ್

ಕಳೆದ ವಾರ ಕೋವಿಡ್‌ ಕಾಣಿಸಿಕೊಂಡ ಹಿನ್ನೆಲೆ ಎರಡನೇ ಅಲೆಯ ವೇಳೆ ಸಹಾಯಕ್ಕೆ ಬರಲು ಸಾಧ್ಯವಾಗದಿರುವುದಕ್ಕೆ ದುಃಖ ಹೊರಹಾಕಿದ್ದರು. ಇದೇ ವೇಳೆ ವ್ಯಾಕ್ಸಿನೇಶನ್‌ ಅನ್ನು ಉಚಿತವಾಗಿ ನೀಡುವ ಅಗತ್ಯವಿದೆ ಎಂದು ಧ್ವನಿ ಎತ್ತಿದ್ದರು.

ನಟ ಸೋನು ಸೂದ್

ನಟ ಸೋನು ಸೂದ್

 • Share this:
  ಬಾಲಿವುಡ್‍ನ ಮೋಸ್ಟ್ ಪಾಪುಲರ್ ನಟ ಸೋನು ಸೂದ್ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತು ರಿಯಲ್ ಹೀರೋ ಎನಿಸಿಕೊಂಡವರು. ಇವರು ಅನೇಕ ಸಿನಿಮಾಗಳಲ್ಲಿ ಖಳನಾಯಕನಾಗಿ ನಟಿಸಿದ್ದರೂ ನಿಜವಾದ ಮಾನವೀಯ ಹೃದಯವುಳ್ಳ ಧೀಮಂತ ನಟ ಸೋನು ಸೂದ್. ಕಳೆದ ವರ್ಷ ವಲಸಿಗ ಕಾರ್ಮಿಕನ ಗರ್ಭಿಣಿ ಹೆಂಡತಿ ಊರಿನಲ್ಲಿದ್ದರು. ಆತ ಊರಿಗೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿತ್ತು. ಅದೇ ವೇಳೆ ಸರ್ಕಾರ ಲಾಕ್‍ಡೌನ್ ಘೋಷಿಸಿ ಬಸ್, ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಆಗ ಆತನ ನೆರವಿಗೆ ನಿಂತವರೇ ಸೋನು ಸೂದ್. ನಂತರ ಇವರ ಸಹಕಾರದಿಂದ ಊರು ಸೇರಿದ ಕಾರ್ಮಿಕನಿಗೆ ಗಂಡು ಮಗು ಜನಿಸಿತು. ಆತ ಸೋನು ಸೂದ್‍ನಲ್ಲಿ ನೆನೆಸಿ ಕರೆ ಮಾಡಿ ವಿಚಾರ ತಿಳಿಸಿದಾಗ ಸೂದ್ ಕಣ್ಣೀರಾಗಿದ್ದರು. ಇದೇ ರೀತಿಯಾಗಿ ಎಷ್ಟೋ ಸಾವಿರಾರು ಮಂದಿಯ ಕಣ್ಣೀರು ಒರೆಸಿದ್ದಾರೆ ಸೂದ್.

  ಆದರೆ ಕಳೆದ ವಾರ ಸೂದ್ ಅವರಿಗೆ ಕೊರೋನಾ ಕಾಣಿಸಿಕೊಂಡಿತ್ತು. ಆದರೂ ಅವರು ತಮ್ಮ ಸಮಾಜಸೇವೆ ನಿಲ್ಲಿಸಲಿಲ್ಲ. ಇಂತಹ ಸಂದರ್ಭದಲ್ಲಿ ಹಲವಾರು ಮಂದಿಗೆ ಔಷಧಿಗಳನ್ನು ತಲುಪಿಸಿದ್ದಾರೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆಗೆ ಎಳೆ ಕೂಸಿನ ಜೀವ ಉಳಿಸಿದ್ದಾರೆ ಸೋನು ಸೂದ್.

  ಬಡವರ ಕಷ್ಟಗಳನ್ನೇ ತನ್ನ ಕಷ್ಟ ಎಂದು ಬದುಕುತ್ತಿರುವ ಸೋನು ಸೂದ್ ಅವರಿಗೆ ಮಗುವಿಗೆ ಸಹಾಯ ಮಾಡುವಂತೆ ಸ್ವತಃ ತಂದೆಯಿಂದಲೇ ಟ್ವಿಟರ್‌ನಲ್ಲಿ ಮನವಿ ಬರುತ್ತದೆ. ಮಗುವಿನ ತಂದೆಯಾದ ಮಹೇಶ್‍ಬಾಬು ಪೋತು ಅವರು, ‘ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ. ನನಗೆ ಜನಿಸಿದ ಗಂಡು ಮಗುವಿಗೆ ಹೊಟ್ಟೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತೆಲಂಗಾಣದ ಕರೀಮ್‍ನಗರದಲ್ಲಿರುವ ಸ್ಟಾರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ತಕ್ಷಣವೇ ಚಿಕಿತ್ಸೆ ನೀಡಬೇಕಿದೆ. ಆದರೆ ಚಿಕಿತ್ಸೆ ನೀಡುವಷ್ಟು ಹಣ ನಮ್ಮಲ್ಲಿ ಇಲ್ಲ ಎಂದು ಹೇಳಿ ಕಾಯಿಲೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೂದ್, ಎಲ್ಲವನ್ನೂ ನಾನು ನೋಡಿಕೊಳ್ಳುತ್ತೇವೆ. ನಿಮ್ಮ ಮಗು ನನ್ನ ಜವಾಬ್ದಾರಿ’ ಎಂದು ಉತ್ತರಿಸಿದ್ದರು.

  1 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಶಿವತಾಂಡವ ಸ್ತೋತ್ರ ಪಠಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ದೆಹಲಿ ಬಾಲಕ

  ಕಳೆದ ವಾರ ಕೋವಿಡ್‌ ಕಾಣಿಸಿಕೊಂಡ ಹಿನ್ನೆಲೆ ಎರಡನೇ ಅಲೆಯ ವೇಳೆ ಸಹಾಯಕ್ಕೆ ಬರಲು ಸಾಧ್ಯವಾಗದಿರುವುದಕ್ಕೆ ದುಃಖ ಹೊರಹಾಕಿದ್ದರು. ಇದೇ ವೇಳೆ ವ್ಯಾಕ್ಸಿನೇಶನ್‌ ಅನ್ನು ಉಚಿತವಾಗಿ ನೀಡುವ ಅಗತ್ಯವಿದೆ ಎಂದು ಧ್ವನಿ ಎತ್ತಿದ್ದರು. ಈ ಸಂಬಂಧ ಟ್ವೀಟ್ ಮಾಡಿರುವ ಸೂದ್, ಪ್ರತಿಯೊಬ್ಬರಿಗೂ ವ್ಯಾಕ್ಸಿನೇಷನ್ ಉಚಿತವಾಗಿ ದೊರಕಬೇಕಾಗಿದೆ. ಮುಖ್ಯವಾಗಿ ಹಣದ ಮಾತು ಈ ವೇಳೆ ಸರಿಯಲ್ಲ. ಕಾರ್ಪೋರೇಟ್ ಕಂಪನಿಗಳು ಹಾಗೂ ಇತರೆ ಸಮಾಜ ಸೇವಕರು ಮುಂದೆ ಬಂದು ವ್ಯಾಕ್ಸಿನೇಷನ್ ಉಚಿತವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕಾಗಿದೆ. ದಯವಿಟ್ಟು ಈ ವಿಚಾರದಲ್ಲಿ ವ್ಯಾಪಾರ ಮಾಡದೇ ಮಾನವೀಯತೆಯಿಂದ ವರ್ತಿಸಿದರೆ ಒಳಿತು ಎಂಬ ಭಾವನೆ ವ್ಯಕ್ತಪಡಿಸಿದ್ದರು.

  ಇದಲ್ಲದೇ ತೆಲಂಗಾಣದ ಭುವನಗಿರಿ ಜಿಲ್ಲೆಯ ಯಾದದ್ರಿಯಲ್ಲಿ ತಂದೆ ತಾಯಿ ಕಳೆದುಕೊಂಡು ಅನಾಥರಾಗಿದ್ದ ಮೂವರು ಮಕ್ಕಳಿಗೆ ಸಹಾಯ ಮಾಡುವಂತೆ ರಾಜೇಶ್ ಕರಣಮ್ ಎಂಬುವರು ಸೋನು ಸೂದ್‍ಗೆ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದರು. ಇದನ್ನು ಕಂಡ ಸೋನು ಸೂದ್ ಇವರ ಕಷ್ಟಕ್ಕೂ ಮಿಡಿದಿದ್ದರು.
  Published by:Latha CG
  First published: