Sonu Sood: ತನ್ನ ನೆಚ್ಚಿನ ನಟನ ಹೆಸರನ್ನು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿಗೆ ಸೋನು ಸೂದ್ ಹೇಳಿದ್ದೇನು?

ಈ ವಿಡಿಯೋವನ್ನು ಶೇರ್ ಮಾಡಿರುವ ನಟ ಸೋನು ಸೂದ್, ಬ್ರದರ್, ಈ ರೀತಿ ಟ್ಯಾಟೂ ಹಾಕಿಸಿಕೊಳ್ಳಬೇಡ. ನೀನು ನನ್ನನ್ನು ಪ್ರೀತಿಸುತ್ತಿಯಾ ಎಂದು ನನಗೆ ಗೊತ್ತಿದೆ. ಆದರೆ ಆ ಪ್ರೀತಿಯನ್ನು ನೋವಿನ ಮೂಲಕ ಈ ರೀತಿಯಾಗಿ ತೋರಿಸಬೇಡ ಎಂದು ಮನವಿ ಮಾಡಿದ್ದಾರೆ.

ನಟ ಸೋನು ಸೂದ್​

ನಟ ಸೋನು ಸೂದ್​

  • Share this:
    ಮುಂಬೈ(ಜ.12): ಕೊರೋನಾದಂತಹ ಮಹಾಮಾರಿ ವೈರಸ್​ ದೇಶಕ್ಕೆ ವಕ್ಕರಿಸಿ ಜನರ ಬದುಕು ಮೂರಾಬಟ್ಟೆಯಾದಾಗ, ಅವರ ಪಾಲಿಗೆ ದೇವರಂತೆ ಬಂದು ಕೈಹಿಡಿದಿದ್ದು ಬಾಲಿವುಡ್ ನಟ ಸೂನು ಸೂದ್. ಇದರಿಂದಾಗಿ ಸೋನು ಸೂದ್ ರಿಯಲ್ ಲೈಫ್ ಹೀರೋ ಎಂದೇ ಜನರ ಮೆಚ್ಚುಗೆ ಗಳಿಸಿದರು. ಅಂದಿನಿಂದ ಅವರ ಅಭಿಮಾನಿ ಬಳಗವೂ ಬೆಳೆಯುತ್ತಾ ಹೋಯಿತು. ತೆರೆ ಮೇಲೆ ಮಾತ್ರ ಮಿಂಚದೆ ನಿಜ ಜೀವನದಲ್ಲಿಯೂ ಬಡವರ ಪಾಲಿನ ಹೀರೋ ಆಗಿ ಮಿಂಚಿದರು ಸೋನು ಸೂದ್.

    ನಟ ಸೋನು ಸೂದ್ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನ ಮೇಲಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಒಂದು ಅತ್ಯದ್ಭುತ ಉಡುಗೊರೆಯನ್ನು ನೀಡಿದ್ದಾನೆ. ಈ ಬಗ್ಗೆ ಸೋನು ಸೂದ್​ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯು ತನ್ನ ನೆಚ್ಚಿನ ನಟ ಸೋನು ಸೂದ್ ಅವರ ಹೆಸರನ್ನು ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಆತ ಸೋನು ಸೂದ್​ ಹೆಸರನ್ನು ತನ್ನ ಕೈ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂವನ್ನು ತೋರಿಸುವ ವಿಡಿಯೋ ಇದಾಗಿದೆ. ವಿಡಿಯೋ ಜೊತೆಗೆ ತೆಲುಗು ಭಾಷೆಯಲ್ಲಿ 'ನಮ್ಮ ಹೃದಯದ ಗುಡಿಯಲ್ಲಿ ಇರುವುದು ನೀನೇ' ಎಂದು ಬರೆದು ಪೋಸ್ಟ್ ಹಾಕಿದ್ದಾರೆ.





    ಈ ವಿಡಿಯೋವನ್ನು ಶೇರ್ ಮಾಡಿರುವ ನಟ ಸೋನು ಸೂದ್, ಬ್ರದರ್, ಈ ರೀತಿ ಟ್ಯಾಟೂ ಹಾಕಿಸಿಕೊಳ್ಳಬೇಡ. ನೀನು ನನ್ನನ್ನು ಪ್ರೀತಿಸುತ್ತಿಯಾ ಎಂದು ನನಗೆ ಗೊತ್ತಿದೆ. ಆದರೆ ಆ ಪ್ರೀತಿಯನ್ನು ನೋವಿನ ಮೂಲಕ ಈ ರೀತಿಯಾಗಿ ತೋರಿಸಬೇಡ ಎಂದು ಮನವಿ ಮಾಡಿದ್ದಾರೆ. ದಯವಿಟ್ಟು ಯಾರೂ ಸಹ ಪ್ರೀತಿಯನ್ನು ವ್ಯಕ್ತಪಡಿಸಲು ತನ್ನ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳದಂತೆ ತಮ್ಮೆಲ್ಲಾ ಅಭಿಮಾನಿಗಳಲ್ಲಿ ಸೋನು ಸೂದ್ ಕೇಳಿಕೊಂಡಿದ್ದಾರೆ.

    National Youth Day 2021: ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ: ರಾಷ್ಟ್ರೀಯ ಯುವ ದಿನದ ಮಹತ್ವ ತಿಳಿಯಿರಿ

    ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್​ ಹಾವಳಿ ಪ್ರಾರಂಭವಾದಾಗ ಸಂತ್ರಸ್ತರ ಬಾಳಿಗೆ ಬೆಳಕಾದವರು ಬಾಲಿವುಡ್ ನಟ ಸೂನು ಸೂದ್. ಅಸಂಖ್ಯಾತ ವಲಸೆ ಕಾರ್ಮಿಕರಿಗೆ ವಿಮಾನದ ಮೂಲಕ ಭಾರತಕ್ಕೆ ವಾಪಸ್ ಕರೆತರುವ ಕೆಲಸ ಮಾಡಿದರು. ಕೋವಿಡ್ ಬಿಕ್ಕಟ್ಟಿನಿಂದಾಗಿ ಉದ್ಯೋಗದಿಂದ ವಂಚಿತರಾದವರಿಗೆ ಇ-ರಿಕ್ಷಾ ಒದಗಿಸಿ ನೆರವಾಗಿದ್ದರು. ಲಾಕ್​ಡೌನ್​ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ವಾಪಸ್ಸಾಗಲು ಪರಿತಪಿಸುತ್ತಿದ್ದ ಜನರಿಗೆ ಸ್ವಂತ ಹಣದಲ್ಲಿ ಬಸ್​ಗಳ ವ್ಯವಸ್ಥೆ ಮಾಡಿ ತಮ್ಮೂರಿಗೆ ಹೋಗಲು ನೆರವಾದರು. ಆನ್​ಲೈನ್​ ತರಗತಿಗಳು ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್​ ಫೋನ್​ಗಳ ಸೌಲಭ್ಯ ಒದಗಿಸಿದ್ದರು.

    ಹೀಗೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸೋನು ಸೂದ್ ಬಡವರ ಪಾಲಿನ ಹೀರೋ ಆಗಿ ಪರಿವರ್ತಿತರಾದರು. ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ಅಭಿಮಾನಿಗಳು ಸೋನು ಸೂದ್​​ಗೆ ಒಂದು ದೇವಾಲಯನ್ನೂ ಸಹ ಕಟ್ಟಿಸಿದ್ದಾರೆ.
    Published by:Latha CG
    First published: