Sonu Sood: ಕೇರಳದಲ್ಲಿ ಸಿಲುಕಿದ್ದ 167 ಹೆಣ್ಣು ಮಕ್ಕಳಿಗೆ ಮನೆ ಸೇರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿದ ಸೋನು ಸೂದ್​..!

ಸೋನು ಸೂದ್​ ಮಾಡುತ್ತಿರುವ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅಭಿಮಾನಿಗಳು ಸೇರಿದಂತೆ ಸಾಮಾನ್ಯ ಜನರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗಲೇ ಸೂನು ಸೂದ್​ ಈಗ ಮಾಡಿರುವ ಮತ್ತೊಂದು ಕೆಲಸ, ಅವರ ಮೇಲಿನ ಗೌರವ ಹಾಗೂ ಪ್ರೀತಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ನಟ ಸೋನು ಸೂದ್​

ನಟ ಸೋನು ಸೂದ್​

  • Share this:
ಸೋನು ಸೂದ್​ ಲಾಕ್​ಡೌನ್​ನಲ್ಲಿ ವಲಸೆ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುತ್ತಿರುವ ವಿಷಯ ಗೊತ್ತೇ ಇದೆ. ಮುಂಬೈನಲ್ಲಿದ್ದ ವಲಸೆ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವುದರೊಂದಿಗೆ ಅವರನ್ನು ತಮ್ಮ ತಮ್ಮ ರಾಜ್ಯಗಳಿಗೆ ಕಳುಹಿಸಿಕೊಡುವ ಕೆಲಸವನ್ನೂ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಗುವ ವಲಸೆ ಕಾರ್ಮಿಕರಿಗೆ ಬಸ್ಸುಗಳ ವ್ಯವಸ್ಥೆ ಜೊತೆಗೆ ಆಯಾ ರಾಜ್ಯಗಳಿಂದ ಅನುಮತಿಯನ್ನೂ ಪಡೆದಿದ್ದರು.  

ಸೋನು ಸೂದ್​ ಮಾಡುತ್ತಿರುವ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಅಭಿಮಾನಿಗಳು ಸೇರಿದಂತೆ ಸಾಮಾನ್ಯ ಜನರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗಲೇ ಸೂನು ಸೂದ್​ ಈಗ ಮಾಡಿರುವ ಮತ್ತೊಂದು ಕೆಲಸ, ಅವರ ಮೇಲಿನ ಗೌರವ ಹಾಗೂ ಪ್ರೀತಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

Sonu Sood has been arranging buses for migrant workers so that they can reach their homes safely
ಸೋನು ಸೂದ್​


ಸೋನು 167 ಹೆಣ್ಣು ಮಕ್ಕಳನ್ನು ಕೇರಳದಿಂದ ಏರ್​ ಲಿಫ್ಟ್​ ಮಾಡಿಸಿ, ಅವರವರ ಮನೆಗಳಿಗೆ ತಲುಪಿಸಿದ್ದಾರಂತೆ. ಇಂಡಿಯಾ ಟುಡೆ ವರದಿ ಪ್ರಕಾರ, ಲಾಕ್​ಡೌನ್​ ಆದಾಗಿನಿಂದ ಕೇರಳದ ಫ್ಯಾಕ್ಟರಿಯೊಂದರಲ್ಲಿ ಸಿಲುಕಿದ್ದ 167 ಹೆಣ್ಣು ಮಕ್ಕಳಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿ, ಮನೆ ಸೇರುವಂತೆ ಮಾಡಿದ್ದಾರೆ. ಈ ಬಗ್ಗೆ ಸೂನು ಸೂದ್ ಅವರ ಆಪ್ತ ವಲಯದಿಂದಲೇ ಮಾಹಿತಿ ಲಭ್ಯವಾಗಿದೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Rashmika Mandanna: ಮತ್ತೊಮ್ಮೆ ಟ್ರೋಲಿಗರಿಗೆ ಪರೋಕ್ಷವಾಗಿ ಚಾಟಿ ಬೀಸಿದ ಕಿರಿಕ್​ ಬೆಡಗಿ ರಶ್ಮಿಕಾ ಮಂದಣ್ಣ..!

ಸೋನು ಸೂದ್​ ಅವರಿಗೆ ಭುವನೇಶ್ವರ್​ನಲ್ಲಿರುವ ತಮ್ಮ ಸ್ನೇಹಿತರೊಬ್ಬರಿಂದ ಈ ವಲಸೆ ಕಾರ್ಮಿಕರ ವಿಷಯ ತಿಳಿಯಿತಂತೆ. ಕೂಡಲೇ ಸೋನು ಕೇಂದ್ರ ಸರ್ಕಾರದಿಂದ ನಾನಾ ರೀತಿಯ ಅನುಮತಿ ಪಡೆದು, ಕೊಚ್ಚಿಯಿಂದ ಭುವನೇಶ್ವರ್​ಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿಸಿದರಂತೆ.



ಆ ವರದಿಯ ಪ್ರಕಾರ, ಬೆಂಗಳೂರಿನಿಂದ ವಿಶೇಷವಾಗಿ ಕೊಚ್ಚಿಗೆ ವಿಮಾನವನ್ನು ತರಿಸಿ, ಅದರಲ್ಲಿ ವಲಸೆ ಕಾರ್ಮಿಕರನ್ನು ಭುವನೇಶ್ವರ್​​ಗೆ ಕಳುಹಿಸಲಾಯಿತಂತೆ. ನಂತರ ಅಲ್ಲಿಂದ ಅವರನ್ನು ಅವರ ಮನೆಗಳಿಗೆ ಕಳುಹಿಸುವ ಜವಾಬ್ದಾರಿಯನ್ನೂ ಸೋನು  ಅವರೇ ವಹಿಸಿಕೊಂಡಿದ್ದರಂತೆ. ಸೋನು ಮಾಡಿರುವ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 Kareena Kapoor: ಕರೀನಾರ ಇನ್​ಸ್ಟಾಗ್ರಾಂನಲ್ಲೂ ಸ್ಟಾರ್ ಕಿಡ್​ ತೈಮೂರ್​ನದ್ದೇ ದರ್ಬಾರ್​..!

First published: