• Home
  • »
  • News
  • »
  • entertainment
  • »
  • Sonu Sood: ಸಿಪಿಆರ್ ಕೊಟ್ಟು ವ್ಯಕ್ತಿಯ ಪ್ರಾಣ ಉಳಿಸಿದ ಸೋನು ಸೂದ್

Sonu Sood: ಸಿಪಿಆರ್ ಕೊಟ್ಟು ವ್ಯಕ್ತಿಯ ಪ್ರಾಣ ಉಳಿಸಿದ ಸೋನು ಸೂದ್

ಸೋನು ಸೂದ್

ಸೋನು ಸೂದ್

ಬಹುಭಾಷಾ ನಟ ಸೋನು ಸೂದ್ ಅವರು ವ್ಯಕ್ತಿಯೊಬ್ಬರ ಜೀವ ಉಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರ ಈ ಕಾರ್ಯವನ್ನು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಬಹುಭಾಷಾ ನಟ ಸೋನು ಸೂದ್ (Sonu Sood) ಅವರ ಬಗ್ಗೆ ಜನರಿಗೆ ಭಾರೀ ಗೌರವವಿದೆ. ಬಾಲಿವುಡ್ ನಟ (Bollywood Actor) ಸೋನು ಸೂದ್ ಅವರು ಲಾಕ್​ಡೌನ್ (Lockdown) ಸಮಯದಲ್ಲಿ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದರು. ಜನರು ತಮ್ಮ ಊರುಗಳನ್ನು ಸೇರಿಕೊಳ್ಳಲು, ಯುವಕರು ಉದ್ಯೋಗ ಕಂಡುಕೊಳ್ಳಲು, ವಿದ್ಯಾರ್ಥಿಗಳಿಗೆ ಶಿಕ್ಷಣದ ನೆರವು, ಬಡ ಜನರಿಗೆ ಆರೋಗ್ಯದ ಸುರಕ್ಷೆಯನ್ನೂ ಒದಗಿಸಿದ್ದರು. ಕೊರೋನಾ (Covid19) ಆರಂಭವಾದ ನಂತರ ನಟ ಮಾಡಿದ ನೆರವಿಗೆ ಲೆಕ್ಕವಿಲ್ಲ. ಅಸಂಖ್ಯಾತ ಜನರಿಗೆ ಸೋನು ಸೂದ್ ಸಹಾಯ ಮಾಡಿದ್ದಾರೆ. ಇದೀಗ ನಟ ಮತ್ತೊಮ್ಮೆ ಎಲ್ಲಎ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಇಟೈಮ್ಸ್ ವರದಿ ಪ್ರಕಾರ ನಟ ಇತ್ತೀಚೆಗೆ ದುಬೈನಿಂದ ಮರಳುತ್ತಿದ್ದರು. ಇಮ್ಮಿಗ್ರೇಷನ್ ಸೆಂಟರ್​ನಲ್ಲಿ ಒಂದು ತುರ್ತು ಪರಿಸ್ಥಿತಿಯನ್ನು ಗಮನಿಸಿದ್ದಾರೆ. ನಟ ಆಗ ತೆಗೆದುಕೊಂಡ ದಿಢೀರ್ ನಿರ್ಧಾರ ವ್ಯಕ್ತಿಯ ಜೀವ ಉಳಿಸುವಲ್ಲಿ ನೆರವಾಗಿದೆ.
ಪ್ರಜ್ಞಾಹೀನರಾಗಿ ಬಿದ್ದ ವ್ಯಕ್ತಿ


ಸೋನು ಸೂದ್ ಅವರು ಇಮ್ಮಿಗ್ರೇಷನ್ ಕೌಂಟರ್​ನಲ್ಲಿ ಕ್ಯೂನಲ್ಲಿ ನಿಂತಿದ್ದರು. ಆ ಸಂದರ್ಭ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬರು ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ಈ ಸಂದರ್ಭ ತಕ್ಷಣ ಎಚ್ಚೆತ್ತುಕೊಂಡ ಸೋನು ಸೂದ್ ಅವರು ವ್ಯಕ್ತಿಗೆ ಸಿಪಿಆರ್ ಕೊಟ್ಟಿದ್ದಾರೆ. ನಟ ತಕ್ಷಣ ಸ್ಪಂದಿಸಿದ ಕಾರಣ ವ್ಯಕ್ತಿಯ ಜೀವ ಉಳಿದಿದೆ.


ಅನುಪಮ್ ಖೇರ್ ಅವರು ಸೋನು ಸೂದ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ತೋರಿಸಿದ್ದರು. ನಟನ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು. ಹಿರಿಯ ನಟ ಸೋನು ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.


Bollywood Actor Sonu Sood Travel in Mumbai Local Train
ರಿಯಲ್ ಹೀರೋ ಸೋನು ಸೂದ್


ದಯೆ ಮತ್ತು ಉದಾರ ವ್ಯಕ್ತಿ ಸೋನು ಸೂದ್ ಅವರನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು. ಸಣ್ಣ ಪಟ್ಟಣಗಳಿಂದ ಬಂದ ಇಬ್ಬರು ಕಷ್ಟಪಟ್ಟು ದುಡಿಯುವ ಸ್ನೇಹಿತರು ಎಂದು ಅವರು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಸೋನು ಪ್ರತಿಕ್ರಿಯಿಸಿ ಸಂತೋಷವಾಯಿತು ಸರ್. ಸಣ್ಣ ಪಟ್ಟಣದ ಜನರು ದೊಡ್ಡ ಕನಸುಗಳನ್ನು ಹೊಂದಿರುತ್ತಾರೆ ಎಂದಿದ್ದಾರೆ.


ಇದನ್ನೂ ಓದಿ: Amala Paul: ನಟಿ ಅಮಲಾ ಪೌಲ್​ಗೆ ದೇವಸ್ಥಾನ ಪ್ರವೇಶಕ್ಕೆ ತಡೆ! ಆಗಿದ್ದೇನು?


ನಟನ ಮುಂದಿನ ಸಿನಿಮಾ ಕೆಲಸಗಳ ಬಗ್ಗೆ ನೋಡುವುದಾದರೆ ಸೋನು ಸೂದ್ ಶೀಘ್ರದಲ್ಲೇ 'ಫತೇಹ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೈಭವ್ ಮಿಶ್ರಾ ಅವರ ಮೊದಲ ನಿರ್ದೇಶನದ ಸಿನಿಮಾದಲ್ಲಿ ಸೋನು ಸೂದ್ ಕೂಡಾ ಕಾಣಿಸಿಕೊಳ್ಳಲಿದೆ.


ಚಿತ್ರದ ಬಗ್ಗೆ ಮಾತನಾಡಿದ ಸೋನು, ಕಥೆಯು ನನ್ನ ಆಸಕ್ತಿಯನ್ನು ಕೆರಳಿಸಿತು. ಇದು ನಮ್ಮ ಗಮನಕ್ಕೆ ಅಗತ್ಯವಿರುವ ಅತ್ಯಂತ ನಿರ್ಣಾಯಕ ವಿಷಯಗಳಲ್ಲಿ ಒಂದಾಗಿದೆ. ನಾನು ಸ್ಕ್ರಿಪ್ಟ್ ಅನ್ನು ಓದಿದ ತಕ್ಷಣ, ಈ ಪ್ರಾಜೆಕ್ಟ್​ ಭಾಗವಾಗಲು ಒಪ್ಪಿಕೊಂಡೆ ಎಂದಿದ್ದಾರೆ.


ರೈಲ್ವೇ ಸ್ಟೇಷನ್ ನೀರು ಹೊಗಳಿದ್ದ ನಟ


ರೈಲು ಮತ್ತು ರೈಲು ನಿಲ್ದಾಣದ ಜೀವನ ಹೇಗಿರುತ್ತದೆ ಅನ್ನೋದನ್ನ ತಾವೇ ಅಲ್ಲಿಗೆ ಹೋಗಿ ಎಂಜಾಯ್ ಮಾಡಿದ್ದಾರೆ. ರೈಲು ನಿಲ್ದಾಣದಲ್ಲಿರೋ ನಲ್ಲಿಗಳಲ್ಲಿಯ ನೀರು ಕುಡಿಯಲು ಯೋಗ್ಯವೇ? ಈ ಪ್ರಶ್ನೆ ಸ್ವತಃ ಸೋನು ಸೂದ್ ಉತ್ತರ ಕೊಟ್ಟಿದ್ದಾರೆ. ಸೋನು ಇರೋದೇ ಹಾಗೇನೆ ಅನಿಸುತ್ತದೆ. ಜನರ ಬಗ್ಗೆ ಅದೇನೋ ಒಂದು ಕಳಕಳಿ ಈ ನಟನಿಗೆ ಇದೆ. ಈ ಕಾರಣಕ್ಕೋ ಏನೋ. ಸೋನು ಸೂದ್ ಚಿತ್ರೀಕರಣ ಮುಗಿಸಿ ಕೆಲ ಹೊತ್ತು ರೇಲ್ವೆ ನಿಲ್ದಾಣದ ಆಸನದ ಮೇಲೂ ಮಲಗಿಕೊಂಡಿದ್ದಾರೆ. ಹೊಸ ಅನುಭವ ಕೂಡ ಪಡೆದಿದ್ದಾರೆ.

Published by:Divya D
First published: