View this post on Instagram
ವಿಪುಲ್ ಅವರು ತಾವು ಹೇಗೆ ಸೋನು ಸೂದ್ ಅವರ ಭಾವಚಿತ್ರವನ್ನು ಅಷ್ಟು ದೊಡ್ಡ ಜಾಗದಲ್ಲಿ ತಯಾರು ಮಾಡಿದ್ದಾರೆ ಎಂಬುದನ್ನು ವಿಡಿಯೋ ಮಾಡಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ವಿಪುಲ್ ಅವರು ಹೇಗೆ ತಾವು ದೊಡ್ಡದಾದ ಭೂಮಿಯಲ್ಲಿ ತಮ್ಮ ನೆಚ್ಚಿನ ನಟ ಸೋನು ಸೂದ್ ಅವರ ಭಾವಚಿತ್ರವನ್ನು ತಯಾರು ಮಾಡಿದ್ದಾರೆ ಎಂಬುದನ್ನು ತೋರಿಸಿದ್ದಾರೆ. ಇದು ನಿಜಕ್ಕೂ ತುಂಬಾ ಕಠಿಣವಾದ ಪರಿಶ್ರಮವಾಗಿದ್ದು, ಈ 3 ನಿಮಿಷ 19 ಸೆಕೆಂಡುಗಳ ವಿಡಿಯೋದಲ್ಲಿ ನಾವು ನೋಡಬಹುದಾಗಿದೆ.
ಈ ವಿಡಿಯೋದ ಮೇಲೆ ಚಿತ್ರ ಶೀರ್ಷಿಕೆಯಲ್ಲಿ ವಿಪುಲ್ ಅವರು "ಸೋನು ಅಣ್ಣ ನಿಮಗೆ ನಿಮ್ಮ ಹುಟ್ಟು ಹಬ್ಬದ ಉಡುಗೊರೆ ನಿಮ್ಮ ಭಾವಚಿತ್ರ" ಎಂದು ಬರೆದಿದ್ದಾರೆ. ಭಾವಚಿತ್ರದಲ್ಲಿ ಯಾವ ರೀತಿಯಲ್ಲಿ ಸೋನು ಕಾಣುತ್ತಾರೆಯೋ ಅದೇ ರೀತಿಯಲ್ಲಿ ವಿಪುಲ್ ಅವರು ತುಂಬಾ ಪರಿಶ್ರಮದಿಂದ ಭೂಮಿಯನ್ನು ಅಗೆದು ಅವರ ಭಾವಚಿತ್ರವನ್ನು ತಯಾರು ಮಾಡಿದ್ದು, ನೀವು ವಿಡಿಯೋದಲ್ಲಿ ಡ್ರೋನ್ ಕ್ಯಾಮೆರಾ ಮೂಲಕ ಎತ್ತರದಿಂದ ಈ ಭಾವಚಿತ್ರ ಹೇಗೆ ಕಾಣುತ್ತದೆ ಎಂದು ನೀವು ನೋಡಿದರೆ ಈ ಕಲಾವಿದನ ಕೈಚಳಕಕ್ಕೆ ಭೇಷ್ ಎನ್ನಲೇಬೇಕು.
ಎರಡು ದಿನಗಳ ಹಿಂದೆ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದುವರೆಗೂ 18,928 ಜನರು ಇದನ್ನು ವೀಕ್ಷಣೆ ಮಾಡಿದ್ದು, ಅದರಲ್ಲಿ ಖ್ಯಾತ ಛಾಯಾಗ್ರಾಹಕ ವೈರಲ್ ಭಯಾನಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯ ಪೇಜ್ನಲ್ಲಿ ಸಹ ವಿಪುಲ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದು ಈ ವಿಡಿಯೋ ಇನ್ನಷ್ಟು ವೈರಲ್ ಆಗಿದೆ.
View this post on Instagram
ನೆಟ್ಟಿಗರು ವಿಪುಲ್ ಅವರ ಕಲೆಯನ್ನು ನೋಡಿ ಮೂಕವಿಸ್ಮಿತರಾಗಿದ್ದಾರೆ. ಇನ್ಸ್ಟಾಗ್ರಾಂ ಬಳಕೆದಾರರು ಈ ವಿಡಿಯೋ ನೋಡಿ "ತುಂಬಾ ಉನ್ನತವಾದ ಕಲೆ ನಿಮ್ಮದು, ನಿಮಗೆ ಕೋಟಿ ನಮನ", "ಸೂಪರ್ ಕಲೆ ನಿಮ್ಮದು" ಎಂದು ಪ್ರತಿಕ್ರಿಯಿಸಿದ್ದಾರೆ. ವಿಪುಲ್ ತಾನು ಖುದ್ದಾಗಿ ಸೋನು ಸೂದ್ ಅವರನ್ನು ಭೇಟಿ ಮಾಡಿ ಕೇಕ್ ಅನ್ನು ಕಟ್ ಮಾಡಿದಂತಹ ವಿಡಿಯೋವನ್ನು ಸಹ ಇವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ