ಸೋನು ಸೂದ್ ಹೆಸರು ಕೇಳದವರಿಲ್ಲ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ದೇಶಾದ್ಯಂತ ಲಕ್ಷಾಂತರ ಜನರಿಗೆ ಸಂರಕ್ಷಕನಾಗಿ ಕೆಲಸ ಮಾಡಿದ ಸೋನು ಸೂದ್ (Sonu Sood) ಭಯಂಕರ ಹೆಸರು ಗಳಿಸಿದ್ದಾರೆ. ಸೂಪರ್ ಹೀರೋ (Super Hero Sonu Sood) ಆಗಿ ಹೋದರು. ಮಾರ್ಚ್ 2020 ರಲ್ಲಿ ಕೊರೊನಾ ಸಾಂಕ್ರಾಮಿಕ ತಡೆಯಲು ವಿಧಿಸಲಾದ ಲಾಕ್ಡೌನ್ ((Covid Lockdown) ಸಮಯದಲ್ಲಿ ದೇಶದ ನಾಗರಿಕರು ಸುರಕ್ಷಿತವಾಗಿ ಮನೆಗೆ ತಲುಪಿಸಲು ಸೋನು ಸೂದ್ ಬಹಳ ಕಷ್ಟಪಟ್ಟಿದ್ದರು. ತಮ್ಮ ಲೋಕೋಪಕಾರಿ ಕೆಲಸಕ್ಕಾಗಿ ಮನೆಮಾತಾಗಿರುವ ಸೋನು, ದಿ ಮ್ಯಾನ್ಗೆ ನೀಡಿದ ಇತ್ತೀಚಿನ ಸಂದರ್ಶನದ ಬಗ್ಗೆ ಮತ್ತೆ ಸುದ್ದಿಯಲ್ಲಿದ್ದಾರೆ.
ತಾವು ಎಂಡಾರ್ಸ್ಮೆಂಟ್ಗಳಿಂದ ಮಾಡಿದ ಎಲ್ಲಾ ಹಣವನ್ನು ಚಾರಿಟಿಗೆ ನೀಡಲಾಗಿದೆ ಎಂದು ಸೋನು ಸೂದ್ ಬಹಿರಂಗಪಡಿಸಿದರು. ಕೆಲವು ಸಂದರ್ಭಗಳಲ್ಲಿ ಅಗತ್ಯವಿರುವವ ಕೈಗೇ ಹಣವನ್ನು ನೀಡುವ ಬದಲು ಸಂಬಂಧಪಟ್ಟು ಶಾಲೆ ಅಥವಾ ಆಸ್ಪತ್ರೆಗಳು ಅಥವಾ ಸಂಸ್ಥೆಗಳಿಗೆ ನೇರವಾಗಿ ಪಾವತಿಸಲಾಗುತ್ತದೆ.
ಸೋನು ಸೂದ್ ಕೊಟ್ಟ ಉದಾಹರಣೆ ಏನು? ಇದೇ ವೇಳೆ ಮಾತನಾಡಿದ ಸೋನು ಅವರು ತಮ್ಮ ಪರೋಪಕಾರಿ ಕಾರ್ಯದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊನೆಗೂ ಬಹಿರಂಗಪಡಿಸಿದ್ದಾರೆ. "ನಾನು ನಿಮಗೆ ಒಂದು ಸಣ್ಣ ಉದಾಹರಣೆಯನ್ನು ನೀಡುತ್ತೇನೆ: ಆಸ್ಟರ್ ಹಾಸ್ಪಿಟಲ್ಸ್ನ ವಿಲ್ಸನ್ ಎಂಬ ವ್ಯಕ್ತಿ ಇತ್ತೀಚೆಗೆ ದುಬೈಗೆ ಪ್ರವಾಸ ಹೋದಾಗ ಸಿಕ್ಕಿದ್ದರು. ಜನರಿಗೆ ಅವರ ವೈದ್ಯಕೀಯ ಅಗತ್ಯಗಳಿಗೆ ಸಹಾಯ ಮಾಡಲು ಅವರ ಗುಂಪು ನನ್ನೊಂದಿಗೆ ಸಹಕರಿಸಲು ಬಯಸುತ್ತದೆ ಎಂದು ಅವರು ತಿಳಿಸಿದರು.
50 ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆ ಮಾಡಿಸಲು ಬೇಡಿಕೆ ಅವರಿಂದ 50 ಯಕೃತ್ತಿನ ಕಸಿ ಶಸ್ತ್ರಚಿಕಿತ್ಸೆ ಮಾಡಿಕೊಟ್ಟರೆ ನಾನು ನಿಮ್ಮ ಆಸ್ಪತ್ರೆಗಳ ಪರವಾಗಿ ಕಾಣಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದೆ. ಯಕೃತ್ತಿನ ಕಸಿ ಚಿಕಿತ್ಸೆಗೆ ಸುಮಾರು 12 ಕೋಟಿ ವೆಚ್ಚ ತಗುಲುತ್ತಿತ್ತು. ನಾವು ಏನಾದರೂ ಮಾಡಬಯಸಿದರೆ ಏನಾದರೂ ಭಿನ್ನವಾಗಿ ಮಾಡಬೇಕು ಅಂತಿರುವ ಜನರೂ ನಮ್ಮನ್ನು ಸಂಪರ್ಕಿಸುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ ಎಂದು ಸೋನು ಸೂದ್ ಉದಾಹರಣೆ ಸಮಏತ ವಿವರಿಸಿದರು.
ಸೋನು ಸೂದ್ ಅವರು ಬಾಬು ಯೋಗೇಶ್ವರನ್ ನಿರ್ದೇಶನದ ಮುಂಬರುವ ತಮಿಳು ಚಲನಚಿತ್ರ ತಮೇಝರಸನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ವಿಜಯ್ ಆಂಟೋನಿ ಮತ್ತು ಸುರೇಶ್ ಗೋಪಿ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಅಕ್ಷಯ್ ಕುಮಾರ್ ಜೊತೆ ನಟನೆ ಚಂದ್ರಪ್ರಕಾಶ್ ದ್ವಿವೇದಿ ಅವರ ನಿರ್ದೇಶನದ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ಪೃಥ್ವಿರಾಜ್ನ ಭಾಗವಾಗಲಿದ್ದಾರೆ ಸೋನು ಸೂದ್. ಈ ಚಿತ್ರವು 2017 ರ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಅವರನ್ನು ಬಾಲಿವುಡ್ಗೆ ಪದಾರ್ಪಣೆ ಮಾಡಿಸಲಿದೆ.
ನಾಗ್ಪುರದ ಇಂಜಿನಿಯರಿಂಗ್ ಪದವೀಧರರಾಗಿರುವ ಸೋನು ಸೂದ್ ಅವರು ಕೋವಿಡ್ - 19 ಪ್ರಾರಂಭವಾದಾಗಿನಿಂದ ಜನರ ಜೀವನಕ್ಕೆ ಹತ್ತರಿವಾಗುತ್ತಿದ್ದಾರೆ. ರಸ್ತೆಗಳಲ್ಲಿ ಸಿಕ್ಕಿಬಿದ್ದವರಿಗೆ ತಮ್ಮ ಮನೆಯನ್ನು ತಲುಪಲು ಸಹಾಯ ಮಾಡುವುದರಿಂದ ಹಿಡಿದು, ವೈದ್ಯಕೀಯ ಚಿಕಿತ್ಸೆ ಮತ್ತು ಅಗತ್ಯವಿರುವವರಿಗೆ ಇತರ ಸಹಾಯವನ್ನು ಒದಗಿಸುತ್ತಿದ್ದಾರೆ.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ