ಬಹುತೇಕ ಭಾರಿ ಕಷ್ಟದ ಸಂದರ್ಭಗಳಲ್ಲಿ ಸಿಲುಕಿರುವ ಅನೇಕ ಭಾರತೀಯರಿಗೆ (Indians) ಸಹಾಯ ಮಾಡಿದ ನಟ ಮತ್ತು ಸಮಾಜ ಸೇವಕ ಸೋನು ಸೂದ್ (Sonu Sood) , ಇದೀಗ ಥೈಲ್ಯಾಂಡ್ನಿಂದ (Thailand) ಭಾರತಕ್ಕೆ ಹಿಂತಿರುಗಲು ವ್ಯಕ್ತಿಯೊಬ್ಬರಿಗೆ ಸಹಾಯ ಮಾಡಿದ್ದಾರೆ. ಹೌದು, ಸಾಹಿಲ್ ಖಾನ್ ಎಂಬ ವ್ಯಕ್ತಿ ಟ್ವೀಟ್ ಮಾಡಿ ಥಾಯ್ಲೆಂಡ್ನಿಂದ ಹೊರಬರಲು ಸಹಾಯ ಮಾಡುವಂತೆ ನಟ ಸೋನು ಸೂದ್ಗೆ ಮನವಿ ಮಾಡಿದ್ದರು. ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದ ಸೂದ್ ಅವರು, ಸಾಹಿಲ್ ಖಾನ್ಗೆ ಟಿಕೆಟ್ಗಳನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ. ಕೆಲವು ಗಂಟೆಗಳ ನಂತರ, ಖಾನ್ ವಿಮಾನ ನಿಲ್ದಾಣದಿಂದ ವೀಡಿಯೊವನ್ನು ಟ್ವೀಟ್ ಮಾಡಿದ್ದು, ಸೋನು ಸೂದ್ ಅವರ ಸಹಾಯಕ್ಕಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಟಿಕೆಟ್ ಕಳುಹಿಸಿಕೊಟ್ಟ ಸೋನು
ನಾನು ಥೈಲ್ಯಾಂಡ್ನಲ್ಲಿ ಸಿಲುಕಿಕೊಂಡಿದ್ದೇನೆ ಮತ್ತು ಇಲ್ಲಿಂದ ಹೊರಬರಲು ಯಾವುದೇ ಆಯ್ಕೆಯಿಲ್ಲ, ಸೋನು ಸರ್ ದಯವಿಟ್ಟು ಸಹಾಯ ಮಾಡಲು ನಾನು ನಿಮ್ಮನ್ನು ವಿನಂತಿಸುತ್ತೇನೆ. @ಸೋನುಸೂದ್ ಎಂದು ಅವರ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟ, ನಿಮಗೆ ಟಿಕೆಟ್ಗಳನ್ನು ಕಳುಹಿಸಲಾಗುತ್ತಿದೆ. ನಿಮ್ಮ ಕುಟುಂಬವನ್ನು ಭೇಟಿ ಮಾಡುವ ಸಮಯ ಹತ್ತಿರವಿದೆ ಎಂದು ತಿಳಿಸಿದ್ದರು.
ಕೊಟ್ಟ ಮಾತಿನಂತೆ ಸೋನು ಸೂದ್ ಟಿಕೆಟ್ ಕಳುಹಿಸಿದ್ದು, ಅದಕ್ಕೆ ಸಂತೋಷಗೊಂಡ ಸಾಹಿಲ್, ಕೊನೆಗೆ ಭಾರತ ತಲುಪಿದೆ. ಸಂತೋಷ ವರ್ಣಿಸಲು ಪದಗಳಿಲ್ಲ, @ಸೋನುಸೂದ್ ನಿಜಕ್ಕೂ ದೇವರು. ಸೋನು ಸೂದ್ ಸರ್ ನಿಮಗೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ನಾನು ಯಾವಾಗಲೂ ಪ್ರಾರ್ಥಿಸುತ್ತೇನೆ. ನೀವು ನನಗೆ ಮಾಡಿದ ಸಹಾಯವನ್ನು ಈ ದಿನಗಳಲ್ಲಿ ಯಾರೂ ಮಾಡುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೇ, ಉದ್ಯೋಗ ವಂಚನೆಗೆ ಬಲಿಯಾಗಿದ್ದೇನೆ ಎಂದು ಖಾನ್ ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದು, ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಥೈಲ್ಯಾಂಡ್, ಫುಕೆಟ್ ಅಂತ ಬ್ಯುಸಿ ಇದ್ದಾರೆ ಅನುಪಮಾ ಗೌಡ, ಸೋಲೋ ಟ್ರಿಪ್ನಲ್ಲಿ ಮೂಗುತಿ ಸುಂದರಿ ಫುಲ್ ಮಸ್ತಿ
ಅವರು ಹಗರಣ ನಡೆಸುತ್ತಿದ್ದಾರೆ ಮತ್ತು ಅವರು ನಿಮ್ಮ ಬಳಿ ಆಳಿನಂತೆ ಕೆಲಸ ಮಾಡಿಸಿಕೊಳ್ಳುತ್ತಾರೆ, ಅಲ್ಲದೇ ಅವರು ನನ್ನ ಪಾಸ್ಪೋರ್ಟ್ ತೆಗೆದುಕೊಂಡರು, ಇಂಟರ್ನೆಟ್ ಸಂಪರ್ಕವಿಲ್ಲ. ಅವರ ಅನುಮತಿಯಿಲ್ಲದೆ ಆವರಣದಿಂದ ಹೊರಗೆ ಹೋಗುವಂತಿರಲಿಲ್ಲ. @SonuSood ಕಾರಣ ನಾನು ಆ ಬಲೆಯಿಂದ ಹೊರಬಂದೆ ಎಂದು ಅಲ್ಲಿ ಪಟ್ಟ ಕಷ್ಟವನ್ನು ವಿವರಿಸಿದ್ದಾರೆ.
ಕೆಲವು ವಾರಗಳ ಹಿಂದೆ, ಸೋನು ಸೂದ್ ಎಂಟು ಅಂಗಗಳೊಂದಿಗೆ ಜನಿಸಿದ ಬಾಲಕಿಯ ಶಸ್ತ್ರ ಚಿಕಿತ್ಸೆಗೆ ಸಹಾಯ ಮಾಡಿದರು. ಅಂಗವಿಕಲ ಬಾಲಕಿ ಬಿಹಾರದ ನವಾಡ ಜಿಲ್ಲೆಯ ಬಡ ಮಹಾದಲಿತ ಕುಟುಂಬಕ್ಕೆ ಸೇರಿದವಳಾಗಿದ್ದು, ಆ ಬಾಲಕಿ 2019 ರಲ್ಲಿ ಎಂಟು ಅಂಗಗಳೊಂದಿಗೆ ಜನಿಸಿದ್ದಳು, ಅದರಲ್ಲಿ ನಾಲ್ಕು ಹೆಚ್ಚು ತೋಳುಗಳು ಮತ್ತು ಕಾಲುಗಳನ್ನು ಅವಳ ಹೊಟ್ಟೆಗೆ ಹೊಕ್ಕುಳಿನಿಂದ ಜೋಡಿಸಿದಂತೆ ಇತ್ತು.
ಇದನ್ನೂ ಓದಿ: ಎಲ್ಲೆಲ್ಲೂ ಅಪ್ಪು ನೆನಪು, ಕಾರ ಹುಣ್ಣಿಮೆ ಆಚರಣೆಯಲ್ಲಿ ಎತ್ತಿನ ಮೇಲೆ ಪುನೀತ್ ಫೋಟೋ
ಪುಟ್ಟ ಬಾಲಕಿ ಅಪರೂಪದ ಪರಿಸ್ಥಿತಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವೈರಲ್ ಆಗಿದೆ. ಇದು ನಟ ಸೋನು ಸೂದ್ಗೆ ತಲುಪುತ್ತಿದ್ದಂತೆ, ಅವರು ತಕ್ಷಣ ಹುಡುಗಿಗೆ ಸಹಾಯ ಮಾಡಲು ಮುಂದಾಗಿ, ಆ ಬಗ್ಗೆ ಟ್ವಿಟರ್ನಲ್ಲಿ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದರು. “ಟೆನ್ಶನ್ ಮತ್ ಲಿಜಿಯೇ ಇಲಾಜ್ ಶುರು ಕರ್ವಾ ದಿಯಾ ಹೈ. ಬಸ್ ದುವಾ ಕರಿಯೇ (ಚಿಂತೆ ಮಾಡಬೇಡಿ. ಚಿಕಿತ್ಸೆ ಪ್ರಾರಂಭವಾಗಿದೆ, ಕೇವಲ ಪ್ರಾರ್ಥನೆ ಮಾಡಿ) ಎಂದು ಸೋನು ಅವರು ವೀಡಿಯೊವನ್ನು ಟ್ವೀಟ್ ಮಾಡುವಾಗ ಬರೆದುಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ