• Home
  • »
  • News
  • »
  • entertainment
  • »
  • Sonu Nigam: 16 ವರ್ಷವಿದ್ದಾಗ ಸೋನು ನಿಗಮ್​ ಹಾಡಿದ್ದ ಮಹಾಭಾರತದ ಹಾಡಿನ ವಿಡಿಯೋ ಈಗ ವೈರಲ್​..!

Sonu Nigam: 16 ವರ್ಷವಿದ್ದಾಗ ಸೋನು ನಿಗಮ್​ ಹಾಡಿದ್ದ ಮಹಾಭಾರತದ ಹಾಡಿನ ವಿಡಿಯೋ ಈಗ ವೈರಲ್​..!

ಗಾಯಕ ಸೋನು ನಿಗಮ್​

ಗಾಯಕ ಸೋನು ನಿಗಮ್​

Old Video Of Sonu Nigam's Mahabharat Song: ತಮ್ಮ ವೈಯಕ್ತಿಕ ವಿಷಯ ಕುರಿತಾಗಿ ಆಗಾಗ ಪೋಸ್ಟ್​ ಮಾಡುವ ಸೋನು ನಿಗಮ್​ ಲಾಕ್​ಡೌನ್​ನಲ್ಲಿ ಹಳೇ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದರೆ ಯೂಟ್ಯೂಬ್​ ಇಲ್ಲದ ಕಾಲದಲ್ಲಿ ರೆಕಾರ್ಡ್​ ಮಾಡಿರುವ ಅವರ ಸ್ಟೇಜ್​ ಶೋ ಸೇರಿದಂತೆ ಹಾಡಿರುವ ಹಾಡಿನ ಹಳೇ ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಮುಂದೆ ಓದಿ ...
  • Share this:

ಸೋನು ನಿಗಮ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ಗಾಯಕ. ಕೆಲವೊಂದು ವಿಷಯಗಳ ಕುರಿತಾಗಿ ತಮ್ಮ ನಿಲುವನ್ನೂ ಸಾಮಾಜಿಕ ಜಾಲತಾಣದ ಮೂಲಕ ವ್ಯಕ್ತಪಡಿಸುತ್ತಿರುತ್ತಾರೆ. ಸದ್ಯ ಲಾಕ್​ಡೌನ್​ನಲ್ಲಿ ಸೋನು ನಿಗಮ್​ ಅವರ ಹಳೇ ವಿಡಿಯೋ ಒಂದು ವೈರಲ್​ ಆಗುತ್ತಿದೆ.


ತಮ್ಮ ವೈಯಕ್ತಿಕ ವಿಷಯ ಕುರಿತಾಗಿ ಆಗಾಗ ಪೋಸ್ಟ್​ ಮಾಡುವ ಸೋನು ನಿಗಮ್​ ಲಾಕ್​ಡೌನ್​ನಲ್ಲಿ ಹಳೇ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಂದರೆ ಯೂಟ್ಯೂಬ್​ ಇಲ್ಲದ ಕಾಲದಲ್ಲಿ ರೆಕಾರ್ಡ್​ ಮಾಡಿರುವ ಅವರ ಸ್ಟೇಜ್​ ಶೋ ಸೇರಿದಂತೆ ಹಾಡಿರುವ ಹಾಡಿನ ಹಳೇ ವಿಡಿಯೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ.









View this post on Instagram





Here is a performance from Natraj Awards ceremony held at Talkatora Indore Stadium in January, 1989. From being a child artist on stage since 1977 to this in Jan 1989 when I had just emerged as an adolescent in the Delhi music scenario and had started making waves as a proper male singer, those were life changing days. You can see Mr. Anu Malik ji and Mr. Shabbir Kumar ji standing at the back. Just 6 months before this program, I had won my second biggest competition at Yaadgar E Rafi society in Siri fort where I had sung 'Chal Ud Jaa Re Panchi' and then after 2 months in September, 1988, there was a night in the name of Shankar Jaikishan where I had sung 'Kahaan Jaa Raha Hai Tu Aye Jaane Vaale ' which was a massive hit. That is the song that I'm singing here again on popular demand. This was my 2nd time rendition of 'Kahaan Jaa Raha Hai Tu Aye Jaane vaale ' after the Shankar Jaikishan night rendition of September, 1988. The program was organised by Ambassador Cultural Society. Courtesy : Mr. Amarjit Singh Kohli and Mr. Prem Bhatia


A post shared by Sonu Nigam (@sonunigamofficial) on





ಸೋನು ನಿಗಮ್​ 16 ವರ್ಷದ ಬಾಲಕನಿದ್ದಾಗ ಹಾಡಿದ್ದ ಮಹಾಭಾರತದ ಟೈಟಲ್​ ಟ್ರ್ಯಾಕ್​ನ  ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದು, ಅದು ಈಗ ವೈರಲ್​ ಆಗುತ್ತಿದೆ.



'ತಾಲ್​ಕಟೋರ ಇನ್​ಡೋರ್​ ಸ್ಟೇಡಿಯಂನಲ್ಲಿ ನಾನು ಹಾಡಿದ್ದ ಮಹಾಭಾರತದ ಹಾಡು. ಸಂಪೂರ್ಣವಾಗಿ ಹಾಡನ್ನು ನೆನಪಿನಲ್ಲಿಟ್ಟುಕೊಂಡು ಹಾಡಿದ್ದೆ. ಆಗ ವಿಡಿಯೋಗಳನ್ನು ಹಂಚಿಕೊಳ್ಳಲು ಯೂಟ್ಯೂಬ್​ನಂತಹ ವೇದಿಕೆ ಇರಲಲಿಲ್ಲ' ಎಂದು ಸೋನು ನಿಗಮ್​ ಬರೆದುಕೊಂಡಿದ್ದಾರೆ.


16 ವರ್ಷದ ಸೋನು ಹಾಡಿರುವ ಮಹಾಭಾರತದ ಹಾಡಿನ ವಿಡಿಯೋ ನೋಡಿದ ಅಭಿಮಾನಿಗಳು ಈಗ 'ವಾವ್...​ ಲೆಜೆಂಡ್....'​ ಎಂದೆಲ್ಲ ಕಮೆಂಟ್​ ಮಾಡುತ್ತಾ ವಿಡಿಯೋವನ್ನು ಶೇರ್​ ಮಾಡುತ್ತಿದ್ದಾರೆ.


Sonu Nigam singing the Mahabharat title song as a 16 year old is so heart warming ❤️ pic.twitter.com/KhhwcSHx2h



#SonuNigam ने #Mahabharat का टाइटल गाना ग़या था सितंबर 1989 मे जब इनकी उम्र मात्र 16 साल थी


ಸೋನು ನಿಗಮ್​ 10ನೇ ತರಗತಿಯಲ್ಲಿರುವಾಗ ತಮ್ಮ ಶಾಲಾ ಶಿಕ್ಷಿಯೊಬ್ಬರ ಮೊಮ್ಮಗನ ಮುಡಿ ಕೊಡುವ ಕಾರ್ಯಕ್ರಮದಲ್ಲಿ ಸ್ನೇಹಿತರೊಂದಿಗೆ ಹಾಡಿದ್ದ ವಿಡಿಯೋ. ಅಮೀರ್​ ಖಾನ್​ ನಟನೆಯ ಸಿನಿಮಾದ 'ಪಾಪ ಕೆಹತೆ ಹೈ ಬಡಾ ನಾಮ್​ ಕರೂಂಗಾ...' ಹಾಡನ್ನು ಹಾಡಿದ್ದರು. ಅದರ ವಿಡಿಯೋ ಇಲ್ಲಿದೆ.



ತಮ್ಮ ಹಾಗೂ ತಂದೆ ಆಗಮ್​ ಕುಮಾರ್​ ನಿಗಮ್​ ಅವರ ಹಳೇ ವಿಡಿಯೋಗಳನ್ನು ಸೋನು ಹಂಚಿಕೊಳ್ಳುತ್ತಿದ್ದಾರೆ.  ಅವುಗಳಲ್ಲಿ ಕೆಲವು ನಿಮಗಾಗಿ...







ಗಾಯಕ ಸೋನು ನಿಗಮ್​ ಕನ್ನಡದ ಸಿನಿಮಾಗಳಲ್ಲೂ ಹಾಡು ಹಾಡಿದ್ದಾರೆ. ಮುಂಗಾರು ಮಳೆ ಸಿನಿಮಾದಲ್ಲಿ ಸೋನು ಹಾಡಿದ್ದ ಹಾಡು ಇಂದಿಗೂ ಸಂಗೀತ ಪ್ರಿಯರ ನಾಲಗೆ ಮೇಲೆ ನಲಿಯುತ್ತದೆ. ಸೋನು ವಿದೇಶಗಳಲ್ಲಿ ಎಲ್ಲೇ ಕಾರ್ಯಕ್ರಮ ಕೊಡಲು ಹೋದರೂ ಕನ್ನಡದ ಪ್ರೇಕ್ಷಕರಿದ್ದರೆ ಕನ್ನಡ ಹಾಡುಗಳನ್ನು ಹಾಡದೆ ಕಾರ್ಯಕ್ರಮಕ್ಕೆ ತೆರೆ ಎಳೆಯುವುದೇ ಇಲ್ಲವಂತೆ.


Kichcha Sudeep: ರಿವೀಲ್​ ಆಯ್ತು ಕಿಚ್ಚನ ಸ್ಟನ್ನಿಂಗ್​ ಲುಕ್​: ಹೊಸ ಚಿತ್ರಕ್ಕಾಗ ಈ ತಯಾರಿ..!


Published by:Anitha E
First published: