ಗಾಯಕ ಸೋನು ನಿಗಮ್​ ಆರೋಗ್ಯದಲ್ಲಿ ಏರುಪೇರು: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!

ಮುಂಗಾರು ಮಳೆ ಖ್ಯಾತಿಯ ಗಾಯಕ ಸೋನು ನಿಗಮ್​ ಆರೋಗ್ಯದಲ್ಲಿ ಏರುಪೇರು... ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಸೋನು.

Anitha E | news18
Updated:February 8, 2019, 12:44 PM IST
ಗಾಯಕ ಸೋನು ನಿಗಮ್​ ಆರೋಗ್ಯದಲ್ಲಿ ಏರುಪೇರು: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ..!
ಆಸ್ಪತ್ರೆಪಾಲಾದ ಸೋನು ನಿಗಮ್​
Anitha E | news18
Updated: February 8, 2019, 12:44 PM IST
ಖ್ಯಾತ ಗಾಯಕ ಸೋನು ನಿಗಮ್ ಇದ್ದಕ್ಕಿದಂತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದು ಏನೋ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಲ್ಲ. ಅವರ ಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್ ಅಭಿಮಾನಿಗಳ ಸಂಭ್ರಮ: ಫೆ.10ಕ್ಕೆ 'ಯಜಮಾನ' ಟ್ರೈಲರ್​ ಬಿಡುಗಡೆ..!

ಹೌದು, ಹಿಂದಿ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಹಾಡು ಹಾಡಿರುವ ಖ್ಯಾತ ಗಾಯಕ ಸೋನು. ಇವರು ಇತ್ತೀಚೆಗೆ ಇದ್ದಕ್ಕಿದಂತೆ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಅದು ಸಹ ಸಮುದ್ರ ಆಹಾರ ಸೇವಿಸಿದ್ದರಿಂದ ಆದ ಅಲರ್ಜಿಯಿಂದಾಗಿ ಅವರ, ಆರೋಗ್ಯದಲ್ಲಿ ಏರುಪೇರಾಗಿತ್ತು.

ಬುಧವಾರ ಸೋನು ತಮ್ಮ ಇನ್ಸ್​ಸ್ಟಾಗ್ರಾಂನಲ್ಲಿ ತಾವು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳನ್ನು ಪೋಸ್ಟ್​ ಮಾಡಿದ್ದಾರೆ. ಒಂದರಲ್ಲಿ ಅವರ ಕಣ್ಣಿನಲ್ಲಿ ಊತ ಕಾಣಿಸಿಕೊಂಡಿದರೆ, ಮತ್ತೊಂದು ಚಿತ್ರದಲ್ಲಿ ಅವರು ಆಕ್ಸಿಜನ್​ ಮಾಸ್ಕ್​ ಹಾಕಿಕೊಂಡಿದ್ದಾರೆ.

 


Loading...

 
View this post on Instagram
 

Thanks for your concern and love. Now that you know that I am returning back from Jeypore Orissa after managing a concert last night, I now don't mind sharing how I was the day before yesterday. 😇 Lesson for all of us, Never ever ever ever take a chance with allergies. Sea food in my case. If Nanavati Hospital wasn't near by, my trachea would have swollen up further and lead to asphyxiation. Happy and Healthy life to everyone. #health #lifeisbeautiful #goodfortune


A post shared by Sonu Nigam (@sonunigamofficial) on


 
'ಕಳೆದ ರಾತ್ರಿಯ ಒಂದು ಸಂಗೀತ ಕಾರ್ಯಕ್ರಮ ಮುಗಿಸಿಕೊಂಡು ಒರಿಸ್ಸಾದಿಂದ ಹಿಂತಿರುಗಿದ್ದೇನೆ. ಆದರೆ ಮೊನ್ನೆಯ ದಿನ ಹೇಗಿತ್ತು ಎಂದು ಹಂಚಿಕೊಳ್ಳಲು ಸಮಸ್ಯೆ ಇಲ್ಲ. ಸಮುದ್ರ ಆಹಾರ ತಿಂದು ಆರೋಗ್ಯ ಹಾಳಾಗಿತ್ತು. ಹತ್ತಿರದಲ್ಲೇ ನಾನಾವತಿ ಆಸ್ಪತ್ರೆ  ಇಲ್ಲವಾಗಿದ್ದರೆ ಉಸಿರುಗಟ್ಟಿ ಹೋಗುತ್ತಿತ್ತು' ಎಂದು ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇದೇನು ಸಮುದ್ರ ಆಹಾರದ ಅಲರ್ಜಿ ಅಂತೀರಾ..? ಹೌದು, ಕೆಲವರಿಗೆ ಕೆಲವೊಂದು ಆಹಾರ ಸೇವಿಸಿದರೆ ಅಲರ್ಜಿ ಆಗುತ್ತದೆ. ಹಾಗೇ ಅವರಿಗೆ ಸಮುದ್ರ ಆಹಾರ ಸೇವಿಸಿದರೆ ಆಗುವುದಿಲ್ಲ. ಆದರೆ ಇದು ಕೇವಲ ಅಲರ್ಜಿ ಎಂದು ನಿರ್ಲಕ್ಷಿಸಬಾರದು. ಅದರ ತೀವ್ರತೆ ತುಂಬಾ ಇರುತ್ತದೆ. ಇದಕ್ಕಾಗಿಯೇ ಸೋನು ಈ ಅಲರ್ಜಿಯನ್ನು ನಿರ್ಲಕ್ಷಿಸಬೇಡಿ ಎಂದು ಸಲಹೆ ಸಹ ನೀಡಿದ್ದಾರೆ. ಸದ್ಯ ಸೋನು ಇನ್ನೂ ಮೂರು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.

PHOTOS: 'ಚಂಬಲ್​' ರಾಣಿ ಸೋನುಗೌಡರ ಹೊಸ ಫೋಟೋಶೂಟ್​ನ ಚಿತ್ರಗಳು..!
First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...