Bigg Boss OTT: ಬಿಗ್​ಬಾಸ್​ ಮನೆಯಲ್ಲಿ ಮತ್ತೆ ಸೋನು ಗೌಡ ವಿಡಿಯೋ ಚರ್ಚೆ; 'ಅವಳಿಗೆ ಟ್ರೋಲ್ ಆಗಿ ಫೇಮಸ್ ಆಗೋ ಆಸೆ'

ನನ್ನ ಸ್ವಭಾವನೇ ಬೇರೆ, ಅವರು ಇವ್ರು ನೋಡಿದರೆ ಏನು ಅಂದುಕೊಳ್ಳುತ್ತಾರೋ ಎಂಬ ಸ್ವಭಾವದವಳು ನಾನಲ್ಲ. ಇಲ್ಲಿ ಯಾರಿಂದಲೂ ನಮಗೆ ಒಂದು ರೂಪಾಯಿಯೂ ಹೆಲ್ಪ್​ ಆಗಿಲ್ಲ. ನನ್ನ ಲೈಫ್​ ನನ್ನ ಇಷ್ಟ ಎಂದು ಸೋನು ಶ್ರೀನಿವಾಸ್​ ಗೌಡ ಹೇಳಿದ್ದಾರೆ.

ಸೋನು ಗೌಡ

ಸೋನು ಗೌಡ

  • Share this:
ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ರೀಲ್ಸ್​ ಹಾಗೂ ಟಿಕ್​ಟಾಕ್ (Reels and Tiktok)​ ಮಾಡಿಕೊಂಡು ಫೇಮಸ್​ ಆಗಿದ್ದ ಸೋನು ಶ್ರೀನಿವಾಸ ಗೌಡ (Sonu Srinivasa Gowda), ಬಿಗ್​ಬಾಸ್​ ಮನೆಗೆ ಬಂದಾಗಿನಿಂದಲೂ ಫುಲ್​ ಸುದ್ದಿಯಾಗ್ತಿದ್ದಾರೆ. 

ಬಿಗ್​ಬಾಸ್​ ಮನೆಯಲ್ಲೂ ವಿಡಿಯೋ ಚರ್ಚೆ

ಈ ಹಿಂದೆ ಸೋನು ಶ್ರೀನಿವಾಸ್​ ಗೌಡ ಅವರ ಖಾಸಗಿ ವಿಡಿಯೋ ಲೀಕ್​ ಆಗಿತ್ತು. ವಿಡಿಯೋ ವೈರಲ್ ಬಗ್ಗೆ ಬಿಗ್​ಬಾಸ್ ಮನೆಯಲ್ಲೂ ಸೋನು ಗೌಡ ಹಂಚಿಕೊಂಡ್ರು. ಮತ್ತೊಂದು ವಿಡಿಯೋ  ಅಂತನೂ ಬಿಗ್​ ಮನೆಯಲ್ಲಿ ಹೇಳಿದ್ರು. ವಿಡಿಯೋ ವಿಚಾರ ಬಿಗ್ ಬಾಸ್ ಮನೆಯಲ್ಲಿ ಚರ್ಚೆ ಆಗ್ತಾನೆ ಇದೆ.

ಟ್ರೋಲ್​ ವಿಚಾರದಲ್ಲಿ ಸಿಟ್ಟಾಗಿದ್ದಾರಾ ಸೋನು?

ಬಿಗ್​ ಬಾಸ್​ ಕನ್ನಡ ಒಟಿಟಿ ಶೋನಲ್ಲಿ ಎಲ್ಲಾ ಸ್ಪರ್ಧಿಗಳಿಗೆ ಒಂದು ಟಾಸ್ಕ್​ ನೀಡಲಾಗಿತ್ತು. ಈ ವೇಳೆ ಸೋನು ಗೌಡ ಅವರು ಒಂದಷ್ಟು ವಿಚಾರಗಳ ಬಗ್ಗೆ ಓಪನ್​ ಆಗಿ ಮಾತನಾಡಿದ್ದಾರೆ. ಟ್ರೋಲ್​  ವಿಚಾರದಲ್ಲಿ ತಮ್ಮ ನಿಲುವು ಏನು ಎಂಬುದನ್ನು ಅವರು ನೇರವಾಗಿ ಹೇಳಿದ್ದಾರೆ.

ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ

ಸೋನು ಶ್ರೀನಿವಾಸ್​ ಗೌಡ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಬಿಗ್​ಬಾಸ್​ ಮನೆಯಲ್ಲಿ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ. ಈ ರೀತಿ ಮುಕ್ತವಾಗಿ ಎಲ್ಲ ವಿಚಾರ ಹೇಳಿಕೊಂಡ್ರೆ, ಇದ್ರಿಂದ ನಿಮ್ಮ ಭವಿಷ್ಯಕ್ಕೆ  ತೊಂದರೆ ಆಗುವುದಿಲ್ಲವೇ ಎಂಬುದು ಸೋಮಣ್ಣ ಮಾಚಿಮಾಡ ಅವರ ಪ್ರಶ್ನೆ ಆಗಿತ್ತು. ಅದಕ್ಕೆ ಸೋನು ಗೌಡ ಅವರು ಉತ್ತರ ನೀಡಿದ್ದಾರೆ. ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

bigg boss kannada ott sonu srinivas gowda reveals about her Love and video leak
ಸೋನು ಶ್ರೀನಿವಾಸ್​ ಗೌಡ


ನನ್ನ ಲೈಫ್​ ನನ್ನ ಇಷ್ಟ

ನನ್ನ ಸ್ವಭಾವನೇ ಬೇರೆ, ಅವರು ಇವ್ರು ನೋಡಿದರೆ ಏನು ಅಂದುಕೊಳ್ಳುತ್ತಾರೋ ಎಂಬ ಸ್ವಭಾವದವಳು ನಾನಲ್ಲ. ಇಲ್ಲಿ ಯಾರಿಂದಲೂ ನಮಗೆ ಒಂದು ರೂಪಾಯಿಯೂ ಹೆಲ್ಪ್​ ಆಗಿಲ್ಲ. ನನ್ನ ಲೈಫ್​ ನನ್ನ ಇಷ್ಟ ಎಂದು ಸೋನು ಶ್ರೀನಿವಾಸ್​ ಗೌಡ ಉತ್ತರ ನೀಡಿದ್ದಾರೆ. ಅವರ ಬಗ್ಗೆ ದೊಡ್ಮನೆಯೊಳಗೆ ಗಾಸಿಪ್​ ಕೂಡ ಮಾಡಲಾಗಿದೆ.

ಇದನ್ನೂ ಓದಿ: Bigg Boss OTT: 'ನಂಗೆ ನಿನ್ನ ಮೇಲೆ ಫೀಲಿಂಗ್​ ಇದೆ; ಬೇಕು ಅಂದ್ರೆ ಒಪ್ಪಿಕೋ‘, ಸೋನು ಗೌಡ ಅಂಡ್​ ರಾಕೇಶ್ ಲವ್ ಸ್ಟೋರಿ

ಅವಳು ಫೇಮಸ್​ ಆಗಿದ್ದೇ ಟ್ರೋಲ್ ಇಂದ

ಅವಳು ಫೇಮಸ್​ ಆಗಿದ್ದೇ ಟ್ರೋಲ್​ ಇಂದ. ಅವಳು ನೆಗೆಟಿವ್​ ಕಮೆಂಟ್​ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದರಿಂದ ಅವಳಿಗೆ ಉಪಯೋಗವೇ ಆಗಿದೆ. ಫೇಮಸ್​ ಆದ್ರೆ ಸಾಕು ಅನ್ನೋ ಭಾವನೆ ಇದೆ. ಕೆಟ್ಟದ್ದೋ ಒಳ್ಳೇದೋ ಗೊತ್ತಿಲ್ಲ, ನ್ಯೂಸ್​ನಲ್ಲಿ ಇರಬೇಕು​ ಅಂದುಕೊಂಡಿದ್ದಾಳೆ’ ಎಂದು ಸೋನು ಬಗ್ಗೆ ಉದಯ್​ ಸೂರ್ಯ ಹೇಳಿದ್ದಾರೆ. ಅವರ ಮಾತಿಗೆ ಇನ್ನುಳಿದವರು ಧ್ವನಿ ಗೂಡಿಸಿದ್ದಾರೆ.

ಬಿಗ್​ಬಾಸ್​ ಮನೆಯಲ್ಲಿ ಮೊದಲ ಪ್ರೇಮಕಥೆ

ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಬಿಗ್ ಬಾಸ್​ ಮನೆಯಲ್ಲಿ ಫೇಮಸ್​ ಆಗಲು ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ. ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡಗೆ ರಾಕೇಶ್​ ಮೇಲೆ ಲವ್​ ಆಗಿರುವುದಾಗಿ, ಹಾಗೂ ಟ್ರೂ ಫೀಲಿಂಗ್ಸ್​ ಇರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Bigg Boss OTT: ರಾಕೇಶ್​ ಜೊತೆ ಬೇರೆ ಹುಡುಗಿ ಮಾತಾಡಿದ್ರೆ ಈಕೆಗೆ ಉರಿಯುತ್ತಂತೆ, ಜೋಶ್​ ಹುಡುಗನಿಗೆ ಜೋತುಬಿದ್ದ ಸೋನು!

 ರಾಕೇಶ್ ಎಲ್ಲರ ಜತೆ ಫ್ಲರ್ಟ್ ಮಾಡುತ್ತಿದ್ದಾರೆ

ಈ ಬಗ್ಗೆ ಸೋನು ಗೌಡ ತುಳು ನಟ ರೂಪೇಶ್ ಜೊತೆ ಹೇಳಿಕೊಂಡಿದ್ದು, ರಾಕೇಶ್ ಅವರು ಎಲ್ಲರ ಜತೆಯೂ ಫ್ಲರ್ಟ್ ಮಾಡುತ್ತಿದ್ದಾರೆ. ಸ್ಫೂರ್ತಿ ಗೌಡ ಅವರ ಜತೆ ಅವರು ಕ್ಲೋಸ್ ಆಗಿದ್ದಾರೆ. ಈ ವಿಚಾರಕ್ಕೆ ಸೋನು ಗೌಡ ಹೊಟ್ಟೆಕಿಚ್ಚು ಪಡುತ್ತಿದ್ದು. ಇದನ್ನು ಸೋನು ಅವರೇ ಓಪನ್ ಆಗಿಯೇ ಹೇಳಿಕೊಂಡಿದ್ದಾರೆ.
Published by:Pavana HS
First published: