Bigg Boss OTT: ಮಧ್ಯರಾತ್ರಿ ಸೋನುಗೆ ಪೂಸಿ ಹೊಡೆಯಲು ಹೋದ ರಾಕೇಶ್; ಟ್ರೋಲ್ ರಾಣಿ ಸಿಟ್ಟಾಗಿದ್ಯಾಕೆ?

ಸೋನು ಗೌಡ ಅವರನ್ನು ಮಾತಾಡಿಸಲು ರಾಕೇಶ್​ ಅಡಿಗ ಬಂದರು. ನೀನು ದಯವಿಟ್ಟು ಹೋಗ್ಬಿಡು ಎಂದು ಸೋನು ಹೇಳಿದ್ದಾಳೆ. ನನ್ನ ಮತ್ತು ನಿನ್ನ ವಿಷಯವನ್ನು ಬೇರೆಯವರ ಮುಂದೆ ಜಡ್ಜ್​ ಮಾಡಬೇಡ. ನನಗೆ ಇಷ್ಟ ಆಗಲ್ಲ ಹೋಗು ಎಂದು ಸೋನು ಗೌಡ ಸರಿಯಾಗಿ ಬೈಯ್ದು ಕಳಿಸಿದರು.

ಸೋನು ಗೌಡ, ರಾಕೇಶ್​ ಗೌಡ

ಸೋನು ಗೌಡ, ರಾಕೇಶ್​ ಗೌಡ

  • Share this:

ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (Bigg Boss)​ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದುಜನರಲ್ಲಿ ಭಾರೀ ಕುತೂಹಲ ಮೂಡಿಸಿದೆಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು (Contestants) ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಮೊದಲ ವಾರ ಮುಗಿಸಿ ಸ್ಪರ್ಧಿಗಳು 2 ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಬಿಗ್​ಬಾಸ್ ಮನೆಯಲ್ಲಿ ಈಗಾಗಲೇ ಪ್ರೇಮಕಥೆಗಳು ಶುರುವಾಗಿದೆ.  ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ರೀಲ್ಸ್​ ಹಾಗೂ ಟಿಕ್​ಟಾಕ್ (Reels and Tiktok)​ ಮಾಡಿಕೊಂಡು ಫೇಮಸ್​ ಆಗಿದ್ದ ಸೋನು ಶ್ರೀನಿವಾಸ ಗೌಡ (Sonu Srinivasa Gowda), ಬಿಗ್​ಬಾಸ್​ ಮನೆಗೆ ಬಂದಾಗಿನಿಂದಲೂ ಫುಲ್​ ಸುದ್ದಿಯಾಗ್ತಿದ್ದಾರೆ. ದೊಡ್ಮನೆಯಲ್ಲಿ ಲವ್ ಸ್ಟೋರಿ ಆಟ ಶುರು ಮಾಡಿದ್ದಾರೆ. 


ರಾಕೇಶ್, ಸೋನು ಗೌಡ ನಡುವೆ ಲವ್​

ಬಿಗ್​ಬಾಸ್​ ಮನೆಯಲ್ಲಿ ಸಾಕಷ್ಟು ಲವ್​ ಸ್ಟೋರಿಗಳು ಹುಟ್ಟಿಕೊಂಡಿವೆ. ಕೆಲವರು ಬಿಗ್ ಬಾಸ್​ ಮನೆಯಲ್ಲಿ ಫೇಮಸ್​ ಆಗಲು ಪ್ರೀತಿ-ಪ್ರೇಮದ ಆಟ ಆಡಿದರೆ ಇನ್ನೂ ಕೆಲವರು, ನಿಜವಾಗಿ ಪ್ರೀತಿಸಿ ಮನೆಯಿಂದ ಹೊರಬಂದು ಮದುವೆ ಆಗಿದ್ದಾರೆ. ಇದೀಗ ಓಟಿಟಿಯಲ್ಲಿ ಪ್ರಸಾರವಾಗ್ತಿರೋ ಬಿಗ್​ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್​ ಗೌಡಗೆ ರಾಕೇಶ್​ ಮೇಲೆ ಲವ್​ ಆಗಿರುವುದಾಗಿ, ಹಾಗೂ ಟ್ರೂ ಫೀಲಿಂಗ್ಸ್​ ಇರುವುದಾಗಿ ಹೇಳಿದ್ದಾರೆ.

bigg boss kannada ott Sonu Srinivas Gowda Expressed Her Feelings On Rakesh Adiga
ಸೋನು ಗೌಡ, ರಾಕೇಶ್​ ಅಡಿಗ


ರಾಕೇಶ್ ಮೇಲೆ ಸೋನುಗೆ ಸಿಟ್ಟು

ಮಧ್ಯರಾತ್ರಿ 2.15ಕ್ಕೆ ರಾಕೇಶ್​ ಅವರು ಸೋನು ಗೌಡ ಅವರನ್ನು ಹುಡುಕಿಕೊಂಡು ಬಂದು ಮಾತಾಡಿಸಿದ್ದಾರೆ. ಚೈತ್ರಾ ಹಳ್ಳಿಕೇರಿ, ಜಯಶ್ರೀ ಆರಾಧ್ಯ ಜೊತೆ ಸೋನು ಗೌಡ ಮಾತನಾಡುತ್ತಿದ್ದರು.  ಆಗ ಸೋನು ಗೌಡ ಅವರನ್ನು ಮಾತಾಡಿಸಲು ರಾಕೇಶ್​ ಅಡಿಗ ಬಂದರು. ನೀನು ದಯವಿಟ್ಟು ಹೋಗ್ಬಿಡು ಎಂದು ಸೋನು ಹೇಳಿದ್ದಾಳೆ. ನನ್ನ ಮತ್ತು ನಿನ್ನ ವಿಷಯವನ್ನು ಬೇರೆಯವರ ಮುಂದೆ ಜಡ್ಜ್​ ಮಾಡಬೇಡ. ನನಗೆ ಇಷ್ಟ ಆಗಲ್ಲ ಹೋಗು ಎಂದು ಸೋನು ಗೌಡ ಸರಿಯಾಗಿ ಬೈಯ್ದು ಕಳಿಸಿದರು.

ಸೋನುಗೌಡ ಸಿಟ್ಟಿಗೆ ರಾಕೇಶ್ ಕೂಲ್​ ಆನ್ಸರ್​

ಸೋನು ಗೌಡ ಸಿಟ್ಟಾಗಿದ್ದು ಕಂಡು ರಾಕೇಶ್​ ಅಡಿಗ ಕೂಲ್​ ಆಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ವಿಷಯ ಬಿಡು. ಇನ್ಮೇಲೆ ನೀನು ಚೈತ್ರಾ ಅವರಿಗೆ ಹೋಗೆ ಬಾರೆ ಅಂತ ಕರೆಯಬೇಡ ಎಂದು ಬುದ್ಧಿಮಾತು ಹೇಳಿ ರಾಕೇಶ್​ ಜಾಗ ಬಿಗ್ ಬಾಸ್​ ಮನೆ ಒಳಗೆ ಹೋಗಿದ್ದಾರೆ. ಯಾರು ಎಷ್ಟೇ ಬುದ್ಧಿ ಹೇಳಿದರೂ ಅದನ್ನು ಸೋನು ಶ್ರೀನಿವಾಸ್​ ಗೌಡ ಕೇಳುತ್ತಿಲ್ಲ.

ಇದನ್ನೂ ಓದಿ: Bigg Boss OTT: ಮೂಡ್ ಇಲ್ಲ ಅಂದ್ರೆ 3 ದಿನ ಸ್ನಾನನೇ ಮಾಡಲ್ವಂತೆ ಸೋನು ಗೌಡ; ಟ್ರೋಲ್ ಹುಡುಗಿ ಮೇಲೆ ಸಾನ್ಯಾ ಕಂಪ್ಲೇಂಟ್


ಸೋನು ಗೌಡ ಸ್ನಾನ ಮಾಡಲ್ಲ ಎಂದ ಸಾನ್ಯಾ
ಮನೆಯನ್ನು ಕೊಳಕಾಗಿ ಇಟ್ಟುಕೊಳ್ಳುವವರು ಯಾರು, ತಮ್ಮ ವಸ್ತುಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ ಗಲೀಜು ಮಾಡೋದು ಯಾರು ಎಂದು ಕಿಚ್ಚ ಸುದೀಪ್​ ಅವರು ಬಿಗ್​ ಸ್ಪರ್ಧಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಸ್ಪರ್ಧಿಗಳು ಅನೇಕ ಹೆಸರು ಹೇಳಿದ್ದಾರೆ. ಬಳಿಕ ಸ್ನಾನದ ಬಗ್ಗೆಯೂ ಚರ್ಚೆ ನಡೆದ ವೇಳೆ, ಸೋನು ಗೌಡ ಸ್ನಾನ ಮಾಡುವುದಿಲ್ಲ ಎಂದು ಸಾನ್ಯಾ ಅಯ್ಯರ್​ ಆರೋಪಿಸಿದರು. ನಾನು ಇವತ್ತು ಸ್ನಾನ ಮಾಡಿಲ್ಲ ಎಂದು ಸುದೀಪ್​ ಎದುರು ಸೋನು ಗೌಡ ಒಪ್ಪಿಕೊಂಡಿದ್ದಾರೆ.





ಇಲ್ಲಿ ಎಷ್ಟೋ ಜನರು ಸ್ನಾನದ ವಿಚಾರದಲ್ಲಿ ಡ್ರಾಮಾ ಮಾಡುತ್ತಾರೆ. ಎಲ್ಲರೂ ಪ್ರತಿ ದಿನ ಸ್ನಾನ ಮಾಡ್ತಾರೆ. ನಮ್ಮ ಮನೆಯಲ್ಲಿ ಒಮ್ಮೊಮ್ಮೆ ಮೂಡ್​ ಇಲ್ಲ ಅಂದರೆ ಮೂರು ದಿನಕ್ಕೊಮ್ಮೆ ಸ್ನಾನ ಮಾಡ್ತೀನಿ ಎಂದು ಸೋನು ಹೇಳಿದ್ದಾರೆ. ಅವರ ಮಾತು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ.
Published by:Pavana HS
First published: