Ranbir Kapoor ಗೆ ಸಿಕ್ತು 2.5 ಕೋಟಿ ವೆಡ್ಡಿಂಗ್ ಗಿಫ್ಟ್, ಅತಿಥಿಗಳಿಗೆ ಕೊಟ್ಟ ಉಡುಗೊರೆ ಏನು ಗೊತ್ತೇ?

ರಣಬೀರ್ ಕಪೂರ್ ಬ್ಯಾಂಡ್ ಮತ್ತು ಆಲಿಯಾ ಭಟ್ ಡೈಮಂಡ್ ರಿಂಗ್ ಪಡೆದರು. ಅಲಿಯಾಳ ತಾಯಿ ಸೋನಿ ರಜ್ದಾನ್ ತನ್ನ ಅಳಿಯ ರಣಬೀರ್ ಕಪೂರ್‌ಗೆ ದುಬಾರಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಆಲಿಯಾ ಮತ್ತು ರಣಬೀರ್ ದಂಪತಿ

ಆಲಿಯಾ ಮತ್ತು ರಣಬೀರ್ ದಂಪತಿ

  • Share this:
    ಸುದೀರ್ಘ ಕಾಯುವಿಕೆಯ (Waiting) ನಂತರ, ನಟ (Actor) ರಣಬೀರ್ ಕಪೂರ್ (Ranbir Kapoor) ಮತ್ತು ನಟಿ (Actress) ಆಲಿಯಾ ಭಟ್ (Alia Bhat) ದಾಂಪತ್ಯಕ್ಕೆ (Married) ಕಾಲಿಟ್ಟಿದ್ದಾರೆ. ಆಲಿಯಾ ಮತ್ತು ರಣಬೀರ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಡೀ ತಾರಾಗಣ, ಅಭಿಮಾನಿ ಬಳಗ ನವ ಜೋಡಿಗೆ ಶುಭಾಶಯ (Greetings) ಕೋರಿ, ಹರಸಿದೆ. ಈಗ ಅವರ ಮದುವೆಯ ಫೋಟೋಗಳು (Photos) ಮತ್ತು ಮದುವೆಯ ಒಳಗಿನ ವಿವರಗಳು ಎಲ್ಲೆಡೆ ಚರ್ಚೆಗೆ ಗ್ರಾಸವಾಗುತ್ತಿವೆ. ಆಲಿಯಾ-ರಣಬೀರ್ ಮದುವೆಯ ಲುಕ್‌ನ ವಿವರಗಳು ನಿಮಗೆ ಈಗಾಗಲೇ ತಿಳಿದಿದೆ. ಆದರೆ ಮದುವೆಯ ದಿನದಂದು ದಂಪತಿಗೆ ಮದುವೆಗೆ ಬಂದಿದ್ದ ಅತಿಥಿಗಳು ಯಾವ ಉಡುಗೊರೆ ನೀಡಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಇಲ್ಲ ಪರವಾಗಿಲ್ಲ. ಇಲ್ಲಿ ನಾವು ಆಲಿಯಾ ಮತ್ತು ರಣಬೀರ್ ಗೆ ಬಂದಿರುವ ಉಡುಗೊರೆಗಳ ಬಗ್ಗೆ ತಿಳಿಯೋಣ.

    ರಣಬೀರ್ ಗೆ ಅತ್ತೆಯಿಂದ ಅಮೂಲ್ಯ ಉಡುಗೊರೆ ಸಿಕ್ಕಿದೆ

    ಹಿಂದೂಸ್ತಾನ್ ಟೈಮ್ಸ್ ತನ್ನ ವರದಿ ಮೂಲದ ಪ್ರಕಾರ, ಆಲಿಯಾ ಮತ್ತು ರಣಬೀರ್ ದಂಪತಿ ಪಡೆದ ಉಡುಗೊರೆಗಳ ಬಗ್ಗೆ ಮಾಹಿತಿ ನೀಡಿದೆ. ರಣಬೀರ್ ಮತ್ತು ಆಲಿಯಾ ಮದುವೆಯ ಒಂದೇ ದಿನದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಎಂದು ಹೇಳಲಾಗಿದೆ.

    ರಣಬೀರ್ ಕಪೂರ್ ಬ್ಯಾಂಡ್ ಮತ್ತು ಆಲಿಯಾ ಭಟ್ ಡೈಮಂಡ್ ರಿಂಗ್ ಪಡೆದರು. ಅಲಿಯಾಳ ತಾಯಿ ಸೋನಿ ರಜ್ದಾನ್ ತನ್ನ ಅಳಿಯ ರಣಬೀರ್ ಕಪೂರ್‌ಗೆ ದುಬಾರಿ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಇದನ್ನೂ ಓದಿ: Aindrita Ray Birthday ಚಂದನವನಕ್ಕೆ ‘ಮೆರವಣಿಗೆ’ ಮೂಲಕ ಕಾಲಿಟ್ಟ ‘ಪಾರಿಜಾತ’ ಗುಳಿಕೆನ್ನೆ ಚೆಲುವೆಗೆ ಹುಟ್ಟುಹಬ್ಬದ ಸಂಭ್ರಮ

    ಸುಲಭವಾಗಿ ಸಿಗುವುದು ಕಷ್ಟವಾಗಿರುವ ಇಂತಹ ಬ್ರಾಂಡ್ ನ ವಾಚ್ ಅನ್ನು ಸೋನಿ ನೀಡಿದ್ದಾರೆ.  ರಣಬೀರ್ ತನ್ನ ಅತ್ತೆಯಿಂದ ಉಡುಗೊರೆಯಾಗಿ ಪಡೆದ ವಾಚ್‌ನ ಮೌಲ್ಯ 2.50 ಕೋಟಿ ಎಂದು ಮೂಲಗಳು ಬಹಿರಂಗಪಡಿಸಿವೆ.

    ಮದುವೆಗೆ ಬಂದ ಅತಿಥಿಗಳಿಗೆ ಉಡುಗೊರೆ

    ಸಂಪ್ರದಾಯಗಳ ಪ್ರಕಾರ, ಮದುವೆಗೆ ಬಂದ ಅತಿಥಿಗಳಿಗೆ ಉಡುಗೊರೆಗಳನ್ನು ಸಹ ನೀಡಲಾಗುತ್ತದೆ. ಎಲ್ಲಾ ಅತಿಥಿಗಳಿಗೆ ಆಲಿಯಾ ಭಟ್ ಆಯ್ಕೆ ಮಾಡಿದ ಕಾಶ್ಮೀರಿ ಶಾಲನ್ನು ಉಡುಗೊರೆಯಾಗಿ ನೀಡಲಾಯಿತು.

    ಈ ಶಾಲುಗಳ ವಸ್ತು ಅತ್ಯುತ್ತಮವಾಗಿತ್ತು. ಮದುವೆಗೆ ಬಂದ ಅತಿಥಿಗಳೆಲ್ಲ ಈ ಬೆಲೆ ಬಾಳುವ ಶಾಲು ಪಡೆದು ಖುಷಿಪಟ್ಟರು. ಶೂ ಬಚ್ಚಿಡುವ ಸಮಾರಂಭವು ತುಂಬಾ ತಮಾಷೆಯಾಗಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ.

    ತುಂಬಾ ಮಜಾ ಇತ್ತು. ಭಟ್ ಹುಡುಗಿಯರು ರಣಬೀರ್ ಕಪೂರ್ ಬಳಿ 11.5 ಕೋಟಿ ಕೇಳಿದ್ದಾರೆ. ಸಾಕಷ್ಟು ಮೋಜು-ಮಸ್ತಿಗಳ ನಂತರ ರಣಬೀರ್ ಕಪೂರ್ ತನ್ನ ಸೊಸೆಯಂದಿರಿಗೆ 1 ಲಕ್ಷ ರೂಪಾಯಿಯ ಲಕೋಟೆಯನ್ನು ನೀಡಿದರು.

    ಯೂಸುಫ್ ಇಬ್ರಾಹಿಂ ಯಾರು? ಆಲಿಯಾ-ರಣಬೀರ್ ಮದುವೆಯ ಭದ್ರತೆಯ ಜವಾಬ್ದಾರಿ ಯಾರಿಗೆ ಸಿಕ್ಕಿದೆ

    ಆಲಿಯಾಳ ಬಳೆ ಸಮಾರಂಭ ನಡೆಯಲಿಲ್ಲ. ಆಲಿಯಾಳ ಬಳೆ ಸಮಾರಂಭ ನಡೆದಿಲ್ಲ ಎಂಬ ವರದಿಗಳಿವೆ. ಇದಕ್ಕೆ ಕಾರಣವೂ ಬಯಲಿಗೆ ಬಂದಿದೆ. ಆಲಿಯಾಗೆ ಬಳೆ ಸಮಾರಂಭವಿದ್ದರೆ ಕನಿಷ್ಠ 40 ದಿನಗಳ ಕಾಲ ಬಳೆ ತೊಡಬೇಕಾಗಿತ್ತು.

    ಮತ್ತು ಆಲಿಯಾಗೆ ಹಾಗೆ ಮಾಡುವುದು ಕಷ್ಟವಾಗಿತ್ತು. ಆಲಿಯಾ ಶೀಘ್ರದಲ್ಲೇ ತನ್ನ ಹೊಸ ಚಿತ್ರದ ಚಿತ್ರೀಕರಣವನ್ನು ಮಾಡಬೇಕಾಗಿದೆ. ಇದು ಅವರ ಹಾಲಿವುಡ್ ಚೊಚ್ಚಲ ಪ್ರಾಜೆಕ್ಟ್ ಆಗಿರುವ ಸಾಧ್ಯತೆ ಇದೆ. ಇದರಿಂದಾಗಿ 40 ದಿನಗಳ ಕಾಲ ಆಲಿಯಾ ಬಳೆಗಳನ್ನು ತೊಡಲು ಸಾಧ್ಯವಾಗುತ್ತಿಲ್ಲ.

    ಸಪ್ತಪದಿ ಬದಲು ಕೇವಲ ನಾಲ್ಕು ಸುತ್ತು!

    ಆಲಿಯಾ ಮತ್ತು ರಣಬೀರ್‌ ಮದುವೆಯ ಕುರಿತ ವಿವಿಧ ಸುದ್ದಿಗಳು ಹರಿದಾಡುತ್ತಿರುವ ಈ ಸಂದರ್ಭದಲ್ಲಿ, ಅಚ್ಚರಿಯ ಸಂಗತಿಯೊಂದು ಗಮನ ಸೆಳೆಯುತ್ತಿದೆ. ಸಪ್ತಪದಿಗೆ ಸಂಬಂಧಿಸಿದ ಸುದ್ದಿಯದು. ಸಾಮಾನ್ಯವಾಗಿ ಮದುವೆಯಲ್ಲಿ ವಧುವರರು ಆಗ್ನಿಗೆ ಏಳು ಸುತ್ತು ಸುತ್ತಿದ್ದರೆ, ಆಲಿಯಾ ಮತ್ತು ರಣ್‍ಬೀರ್ ತಮ್ಮ ಮದುವೆಯಲ್ಲಿ ಕೇವಲ ನಾಲ್ಕು ಸುತ್ತನ್ನಷ್ಟೇ ಸುತ್ತಿದ್ದಾರೆ..!

    ಇದನ್ನೂ ಓದಿ: Ranbir Kapoor-Alia Bhatt: ಸಪ್ತಪದಿ ಬದಲು ನಾಲ್ಕು ಹೆಜ್ಜೆ ಇಟ್ಟ ರಣ್ ಬೀರ್-ಆಲಿಯಾ; ಕಾರಣ ತಿಳಿಸಿದ ಸೋದರ

    ಆಲಿಯಾ ಭಟ್ ಮಲ ಸಹೋದರ ರಾಹುಲ್ ಭಟ್ , ಮಾಧ್ಯಮ ಒಂದಕ್ಕೆ ಈ ಮಾಹಿತಿಯನ್ನು ನೀಡಿದರು. ಅವರು , ಅದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, ಕಪೂರ್ ಕುಟುಂಬಕ್ಕೆ ವಿಶೇಷವಾದ ಪಂಡಿತರೊಬ್ಬರು ಇದ್ದಾರೆ ಮತ್ತು ಕಪೂರ್ ಸಹೋದರರು ಕೈಗೊಂಡಿರುವ ಎಲ್ಲಾ ಧಾರ್ಮಿಕ ಆಚರಣೆಗಳಲ್ಲಿ ಆ ಪಂಡಿತರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿಸಿದರು.
    Published by:renukadariyannavar
    First published: