ಪುನೀತ್​ ಧ್ವನಿಯಲ್ಲಿ 'ವಾಸು ಪಕ್ಕಾ ಕಮರ್ಷಿಯಲ್' ಸಿನಿಮಾದ ಹಾಡು!

news18
Updated:July 13, 2018, 3:06 PM IST
ಪುನೀತ್​ ಧ್ವನಿಯಲ್ಲಿ 'ವಾಸು ಪಕ್ಕಾ ಕಮರ್ಷಿಯಲ್' ಸಿನಿಮಾದ ಹಾಡು!
news18
Updated: July 13, 2018, 3:06 PM IST
ಓಂ ಸಕಲೇಶಪುರ, ನ್ಯೂಸ್ 18 ಕನ್ನಡ

ಇತ್ತೀಚೆಗೆ 'ವಾಸು ಪಕ್ಕಾ ಕಮರ್ಷಿಯಲ್' ಚಿತ್ರತಂಡ ಒಂದು ಪೋಲಿಸ್ ಠಾಣೆ ಒಳಗೆ ಇಡೀ ದಿನ ಒಂದು ಹಾಡಿನಹೊಸ  ಪ್ರಯೋಗದ ಮೂಲಕ ಗಮನ ಸೆಳೆದಿತ್ತು. ಈಗ 'ವಾಸು ಪಕ್ಕಾ ಕಮರ್ಷಿಯಲ್' ಸಿನಿಮಾದ ಪಕ್ಕಾ ಕಮರ್ಷಿಯಲ್ ಹಾಡೊಂದನ್ನ ಬಿಡುಗಡೆ ಮಾಡಿದೆ. ನಾಯಕ-ನಾಯಕಿಯ ಡ್ಯುಯೆಟ್ ಝಲಕ್ ಇರೋ ಹಾಡಿಗೆ ಕಮರ್ಷಿಯಲ್ ಟಚ್ ಕೊಟ್ಟಿರೋದು ಪವರಸ್ಟಾರ್ ಕಂಠ.

ಪವರ್​ಸ್ಟಾರ್​ಗೆ ಹಾಡೋದು ಅಂದರೆ ಇಷ್ಟ ಅಂತ ಅವರೇ ಹೇಳಿಕೊಂಡಿದ್ದರು. ಇನ್ನು ಹೊಸಬರ ಚಿತ್ರಕ್ಕೆ ಪ್ರೋತ್ಸಾಹ ಕೊಡೋಕೆ ಪುನೀತ್​ ಸದಾ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಇಲ್ಲಿ ಕೂಡ ಅನೀಶ್ ತೇಜೇಶ್ವರ್​ಗೆ ನಿಶ್ವಿಕಾ ನಾಯ್ಡು ಜೋಡಿಯಾಗಿರೋ ಚಿತ್ರಕ್ಕೆ ಪುನೀತ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಮತ್ತೊಮ್ಮೆ ತಾವೊಬ್ಬ ರೊಮ್ಯಾಂಟಿಕ್ ಹೀರೋ ಅನ್ನೋದನ್ನು ಸಾಬೀತು ಮಾಡುವಂತಿದೆ ಈ ಡ್ಯುಯೆಟ್ ಹಾಡು.ಪವರ್​ಸ್ಟಾರ್​ ಡಾನ್ಸ್ ಮಾಡಿದರೂ ಸೊಗಸು, ಫೈಟ್ ಮಾಡಿದರೂ ಸೊಗಸು. ಅಷ್ಟೆಅಲ್ಲ ಹಾಡಿದರೂ ಅಷ್ಟೇ. ಅನೀಶ್‍ರ ಈ ಹಿಂದಿನ ಸಿನಿಮಾ 'ಅಕಿರಾ'ಗೂ ಕೂಡ ಪವರ್​ಸ್ಟಾರ್​ ಒಂದು ಕಲರ್​ಫುಲ್​ ಡ್ಯುಯೆಟ್ ಹಾಡಿದ್ದರು. ಆ ಹಾಡು ಕೂಡ ಚಿತ್ರಪ್ರೇಮಿಗಳ ಮನಸ್ಸು ಗೆದ್ದಿತ್ತು.

ನಟನಾಗಿ, ನಿರ್ಮಾಪಕನಾಗಿ ಅನೀಶ್ ಕಾಣಿಸಿಕೊಂಡಿರೋ ಚಿತ್ರವನ್ನು ಅಜಿತ್‍ವಾಸನ್ ಉಗ್ಗಿನ ನಿರ್ದೇಶನ ಮಾಡಿದ್ದಾರೆ. ಆರಂಭದಲ್ಲಿ ಪವರ್​ಸ್ಟಾರ್​ ಕಂಠಾನಾ ಇದು ಅಂತ ಅನುಮಾನ ಮೂಡಿಸೋ ಹಾಡನ್ನು ಸುಂದರ ತಾಣಗಳಲ್ಲಿ ಚಿತ್ರೀಕರಿಸಿದ್ದಾರೆ.

ಹೀಗೆ ಒಂದಷ್ಟು ವಿಶೇಷತೆಗಳೊಂದಿಗೆ ಬಿಡುಗಡೆಗೆ ತಯಾರಾಗುತ್ತಿರೋ 'ವಾಸು ಪಕ್ಕಾ ಕಮರ್ಷಿಯಲ್' ಚಿತ್ರ ಜುಲೈ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ.
Loading...

 

 
First published:July 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...