ಶಾಹೀನ್ ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಅಲ್ಲಿ ನಡೆದ ಘಟನೆ ಕುರಿತಾಗಿ ಸೋನಮ್ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಅವರು ಪ್ರತಿಕ್ರಿಯಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಟ್ರೋಲ್ ಮಾಡಲಾಗಿತ್ತು.
ಸೋನಮ್ ಕಪೂರ್ ಅವನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಂತೆಯೇ ಕೆಲವರು ಅವರ ತಂದೆ ಅನಿಲ್ ಕಪೂರ್ ಹಾಗೂ ದಾವೂದ್ ಇಬ್ರಾಹಿಂ ಒಟ್ಟಿಗೆ ಇರುವ ಫೋಟೋವನ್ನು ಟ್ಯಾಗ್ ಮಾಡಲಾರಂಭಿಸಿದರು.
![Sonam Kapoor enjoying her vacation with husband and shares a intimate pic on her Instagram]()
ನಟಿ ಸೋನಮ್ ಕಪೂರ್
ಈ ಫೋಟೋವನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಪ್ರಶ್ನೆಗಳು ಏಳುತ್ತಿವೆ. ಅವುಗಳಿಗೆಲ್ಲ ಈಗ ಸೋನಮ್ ಉತ್ತರ ಕೊಟ್ಟಿದ್ದಾರೆ.
ಇದನ್ನೂ ಓದಿ: ಅಕ್ಷಯ್ ಕುಮಾರ್ಗೆ ಪೊರಕೆಯಲ್ಲಿ ಹೊಡೆದ ಕತ್ರಿನಾ ಕೈಫ್: ವಿಡಿಯೋ ಇಲ್ಲಿದೆ..!
ಅಶೋಕ್ ಶ್ರೀವಾಸ್ತವ್ ಎಂಬುವರು ಸೋನಮ್ ಅವರಿಗೆ ಈ ರೀತಿ ಕೇಳಿದ್ದಾರೆ. 'ನೀವು ತುಂಬಾ ಗಟ್ಟಿಯಾಗಿ ಎಲ್ಲ ವಿಷಯಗಳ ಕುರಿತು ದನಿ ಎತ್ತುತ್ತೀರಿ. ಸ್ವಲ್ಪ ನಿಮ್ಮ ತಂದೆ ಅನಿಲ್ ಹಾಗೂ ಭೂಗತ ಪಾತಕಿ ದಾವೂದ್ ಅವರು ಜೊತೆಯಲ್ಲಿರುವ ಚಿತ್ರದ ಕುರಿತು ಏನು ಹೇಳುತ್ತೀರಿ. ನಿಮ್ಮ ತಂದೆಯ ಸಂಬಂಧ ಕರ್ಮದೊಂದಿಗೆ ಇದೆಯಾ ಅಥವಾ ಧರ್ಮದ ಜೊತೆ ಇದೆಯಾ' ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಸೋನಮ್ ಕಪೂರ್, 'ನಮ್ಮ ಭಾರತ ದೇಶದಲ್ಲಿ ಹೀಗೆಲ್ಲ ಆಗುತ್ತೆ ಅಂತ ನಾನು ಹೂಹಿಸಿಯೂ ಇರಲಿಲ್ಲ. ಭಯಾನಕಾರಿಯಾದ ರಾಜಕೀಯವನ್ನು ನಿಲ್ಲಿಸಿ. ಇದು ದ್ವೇಷಕ್ಕೆ ಉತ್ತೇಜನ ನೀಡುತ್ತದೆ. ನೀವೂ ನಿಮ್ಮನ ನೀವು ಹಿಂದೂ ಎಂದು ನಂಬಿದರೆ ನಿಮಗೆ ಧರ್ಮ-ಕರ್ಮ ಅರ್ಥವಾಗುತ್ತದೆ. ಇದು ಅದರ ಹೊರತಾಗಿಲ್ಲ' ಎಂದು ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
This is something that I never imagined would happen in India. Stop this divisive dangerous politics. It fuels HATE. If you believe yourself to be a Hindu then understand that the religion is about Karma and dharma and this is not either of those. https://t.co/nAZcUX6p7o
'ನನ್ನ ತಂದೆ ರಾಜ್ ಕಪೂರ್ ಹಾಗೂ ಕೃಷ್ಣಾ ಕಪೂರ್ ಅವರೊಂದಿಗೆ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋಗಿದ್ದರು. ಅವರು ಅಲ್ಲೇ ಕುಳಿತಿರುವುದನ್ನು ನೋಡಬಹುದು. ನೀವು ಬೆರಳು ಮಾಡುವುದನ್ನು ನಿಲ್ಲಿಸಿ, ನಿಮ್ಮ ಕಡೆಯೂ ಮೂರು ಬೆರಳುಗಳು ಪ್ರಶ್ನಿಸುತ್ತಿವೆ. ನೀವು ಹಿಂದೆಯನ್ನು ಹರಡುತ್ತಿರುವ ನಿಮ್ಮನ್ನು ಆ ದೇವರು ರಾಮನೇ ಕ್ಷಮಿಸಬೇಕು' ಎಂದು ಸೋನಮ್ ಪ್ರತಿಕ್ರಿಯಿಸಿದ್ದಾರೆ.
He went to a cricket match with raj kapoor and krishna Kapoor. And was in a box to see it. I think you need to stop pointing fingers and there are three that point back at you . I hope lord Ram can forgive you for being evil and spreading violence.
ಆದರೆ ಸೋನಮ್ ಶಾಹೀನ್ ಬಾಗ್ನಲ್ಲಿ ನಡೆದ ಘಟನೆ ಕುರಿತು ಮಾತನಾಡಿದ ನಂತರ ಇಷ್ಟೆಲ್ಲ ನಡೆದಿದೆ. ಆದರೆ ಟ್ರೋಲ್ ಮಾಡಿದವರಿಗೆ ಹಾಗೂ ಪ್ರಶ್ನಿಸುತ್ತಿದ್ದವರಿಗೆ ಕಡೆಗೂ ಸೋನಮ್ ಉತ್ತರ ಕೊಟ್ಟಿದ್ದಾರೆ.
Sudha Murthy-Narayana Murthy Biopic: ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಸೆಟ್ಟೇರಲಿದೆ ನಾರಾಯಣ ಮೂರ್ತಿ-ಸುಧಾ ಮೂರ್ತಿ ಜೀವನಾಧಾರಿತ ಸಿನಿಮಾ ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ