ತೆರಿಗೆ ವಂಚನೆ ಆರೋಪದ ಬಗ್ಗೆ Sonam Kapoor ಪತಿ ಆನಂದ ಅಹುಜಾ ಹೇಳಿದ್ದೇನು?

Anand Ahuja: ಟ್ವೀಟ್‌ನಲ್ಲಿ "ಇದು ಗ್ರಾಹಕ ಸೇವೆಯ ಗುಣಮಟ್ಟ, ಹೊಸ ನೀತಿಗಳು ಅಥವಾ ಟ್ವೀಟ್ ಮಾಡಿದಂತೆ ವಸ್ತುಗಳನ್ನು ಅನುಚಿತವಾಗಿ ಹಿಡಿದಿಟ್ಟುಕೊಳ್ಳುವ ವಿಷಯವಲ್ಲ. ಇ-ಬೇ ನಲ್ಲಿ ಖರೀದಿಸಿದ ಸ್ನೀಕರ್‌ಗಳಿಗೆ ಅವರು ಪಾವತಿಸಿದ ಬೆಲೆಯನ್ನು ಅಹುಜಾ ಅವರು ತಪ್ಪಾಗಿ ತೋರಿಸಿದ್ದಾರೆ, ಇದು ಅವರು ಕಡಿಮೆ ಸುಂಕ ಮತ್ತು ತೆರಿಗೆಗಳನ್ನು ಪಾವತಿಸಲು ಹೀಗೆ ಮಾಡಿದ್ದಾರೆ" ಎಂದು ಬರೆಯಲಾಗಿದೆ.

ಸೋನಮ್​ ಕಪೂರ್- ಆನಂದ್​ ಅಹುಜಾ

ಸೋನಮ್​ ಕಪೂರ್- ಆನಂದ್​ ಅಹುಜಾ

  • Share this:
ತುಂಬಾ ಶ್ರೀಮಂತರು (Rich People)  ಎನಿಸಿಕೊಂಡವರೇ ಅನೇಕ ಸಾರಿ ತಾವು ತೆರಿಗೆ (Tax)  ಮತ್ತು ಖರೀದಿ ಮಾಡಿದ ವಸ್ತುಗಳ ಬೆಲೆಗಳ ಮೇಲಿನ ಸುಂಕವನ್ನು ಕಡಿಮೆ ಮಾಡಿಕೊಳ್ಳಲು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸಿ ಸುದ್ದಿಯಾಗಿರುವ ವಿಚಾರಗಳನ್ನು ನಾವು ನೋಡಿರುತ್ತೇವೆ. ಇಲ್ಲಿಯೂ ಸಹ ಒಬ್ಬ ಬಾಲಿವುಡ್ ನಟಿಯ (Bollywood)  ಗಂಡನ ವಿರುದ್ಧ ಅದೇ ರೀತಿಯ ಆರೋಪ ಕೇಳಿ ಬಂದಿದೆ. ಬಾಲಿವುಡ್‌ನ ಹಿರಿಯ ನಟ ಅನಿಲ್ ಕಪೂರ್ (Anil Kapoor) ಅವರ ಮಗಳು ಮತ್ತು ನಟಿ ಸೋನಮ್ ಕಪೂರ್ (Sonam Kapoor) ಯಾರಿಗೆ ಗೊತ್ತಿರುವುದಿಲ್ಲ ಹೇಳಿ..? ಸೋನಮ್ ಪತಿ ಆನಂದ್ ಅಹುಜಾ (Anand Ahuja) ಅವರು ತೆರಿಗೆಯನ್ನು ತಪ್ಪಿಸಿಕೊಳ್ಳುವುದಕ್ಕೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ವರ್ಷದ ಜನವರಿ ತಿಂಗಳಲ್ಲಿ, ನಟಿ ಸೋನಮ್ ಅವರ ಪತಿ ಆನಂದ್ ಅಹುಜಾ ಅವರು ಒಂದು ಅಂತಾರಾಷ್ಟ್ರೀಯ ಶಿಪ್ಪಿಂಗ್ ಕಂಪನಿಯ ಗ್ರಾಹಕ ಸೇವೆಯ ವಿರುದ್ಧ ಒಂದು ಟ್ವೀಟ್ ಮಾಡಿದ್ದರು. ಈಗ ಅದೇ ಶಿಪ್ಪಿಂಗ್ ಕಂಪನಿಯವರು ಅವರ ಒಂದು ಇನ್‌ವಾಯ್ಸ್ ಅನ್ನು ಬದಲಾಯಿಸಿ ಬಳಸಿದ್ದಾರೆ ಎಂದು ಆನಂದ್ ಅವರ ಮೇಲೆ ಆರೋಪ ಮಾಡಿದ್ದಾರೆ. ಈ ಬಿಲ್ ಅನ್ನು ಅವರು ತಾವು ತೆರಿಗೆ ಪಾವತಿಸುವುದನ್ನು ಮತ್ತು ಕಸ್ಟಮ್ ಸುಂಕವನ್ನು ಪಾವತಿಸುವುದನ್ನು ತಪ್ಪಿಸಲು ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆನಂದ್ ಅವರು ಜನವರಿ 17ನೇ ತಾರೀಖು ಮಾಡಿದಂತಹ ಟ್ವೀಟ್‌ಗೆ ಫೆಬ್ರವರಿ 1ನೇ ತಾರೀಖಿನಂದು ಪ್ರತಿಕ್ರಿಯಿಸಿರುವ ಕಂಪನಿಯು, ಸಮಸ್ಯೆ ಆದದ್ದು ಅವರ ಸೇವೆಗಳಿಂದಲ್ಲ, ಆದರೆ ಸೋನಮ್ ಅವರ ಪತಿ ಒದಗಿಸಿದ ದಾಖಲೆಗಳೊಂದಿಗೆ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ. ಈ ಮಧ್ಯೆ, ಸೋನಮ್ ಈ ಹಿಂದೆ ಇ-ಕಾಮರ್ಸ್ ಸೈಟ್ ವಿರುದ್ಧ ಆನಂದ್ ಹಾಕಿದ ಟ್ವೀಟ್‌ಗೆ ಬೆಂಬಲಿಸಿದ್ದರು ಎಂದು ಹೇಳಲಾಗುತ್ತಿದೆ.

ಈಗ ಕಂಪನಿಯು ಆನಂದ್ ಹಂಚಿಕೊಂಡ ಇನ್‌ವಾಯ್ಸ್‌ಗಳು ಸರಕುಗಳಿಗೆ ಪಾವತಿಸಿದ ಬೆಲೆಗೆ ಹೋಲಿಸಿದರೆ ಶೇಕಡಾ 90 ಪ್ರತಿಶತದಷ್ಟು ಕಡಿಮೆ ಮೌಲ್ಯವನ್ನು ಹೊಂದಿವೆ ಎಂದು ಹೇಳಿದ್ದಾರೆ. "ಬದಲಾಯಿಸಿದ ಇನ್‌ವಾಯ್ಸ್‌ಗಳು ಸರಕುಗಳಿಗೆ ಅವರು ಪಾವತಿಸಿದ ಬೆಲೆಗಳಿಗಿಂತ 90 ಪ್ರತಿಶತದಷ್ಟು ಕಡಿಮೆ ಬೆಲೆಗಳನ್ನು ಅದರಲ್ಲಿ ಹಾಕಲಾಗಿದೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಗೆ ಪುನೀತ್​​ ರಾಜ್​ಕುಮಾರ್​ ಹೆಸ್ರು.. ಅಧಿಕೃತ ಮುದ್ರೆ ಒತ್ತಿದ ಬಿಬಿಎಂಪಿ!

ಯಾವುದೇ ಗ್ರಾಹಕರ ಸಮಸ್ಯೆಗಳನ್ನು ಸರಿಪಡಿಸಲು ನಮ್ಮ ಅತ್ಯುತ್ತಮ ಪ್ರಯತ್ನ ಮಾಡುವುದು ನಮ್ಮ ನೀತಿಯಾಗಿದ್ದರೂ, ನಿಯಂತ್ರಕ ಅನುಸರಣೆಯನ್ನು ಎತ್ತಿ ಹಿಡಿಯುವ ಕರ್ತವ್ಯ ನಮ್ಮದು” ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಟ್ವೀಟ್‌ನಲ್ಲಿ "ಇದು ಗ್ರಾಹಕ ಸೇವೆಯ ಗುಣಮಟ್ಟ, ಹೊಸ ನೀತಿಗಳು ಅಥವಾ ಟ್ವೀಟ್ ಮಾಡಿದಂತೆ ವಸ್ತುಗಳನ್ನು ಅನುಚಿತವಾಗಿ ಹಿಡಿದಿಟ್ಟುಕೊಳ್ಳುವ ವಿಷಯವಲ್ಲ. ಇ-ಬೇ ನಲ್ಲಿ ಖರೀದಿಸಿದ ಸ್ನೀಕರ್‌ಗಳಿಗೆ ಅವರು ಪಾವತಿಸಿದ ಬೆಲೆಯನ್ನು ಅಹುಜಾ ಅವರು ತಪ್ಪಾಗಿ ತೋರಿಸಿದ್ದಾರೆ, ಇದು ಅವರು ಕಡಿಮೆ ಸುಂಕ ಮತ್ತು ತೆರಿಗೆಗಳನ್ನು ಪಾವತಿಸಲು ಹೀಗೆ ಮಾಡಿದ್ದಾರೆ" ಎಂದು ಬರೆಯಲಾಗಿದೆ.

"ತುಂಬಾನೇ ಸರಳವಾಗಿ ಹೇಳುವುದಾದರೆ, ಅಂತಾರಾಷ್ಟ್ರೀಯ ಸಾಗಣೆಗಳನ್ನು ಕಳುಹಿಸುವಾಗ ನಿಖರವಾದ ಮಾಹಿತಿಯನ್ನು ಒದಗಿಸಲು ನಮಗೆ ಕಾನೂನು ಬದ್ಧ ಬಾಧ್ಯತೆ ಇದೆ. ಮೈಯೂಸ್ ಮತ್ತು ಅಹುಜಾ ಇಬ್ಬರೂ ಅಂತರರಾಷ್ಟ್ರೀಯ ರಫ್ತು ನಿಯಮಗಳಿಗೆ ಒಳಪಟ್ಟಿದ್ದಾರೆ ಮತ್ತು ನಾವು ಆ ಕಾನೂನುಗಳನ್ನು ಪಾಲಿಸಲೇಬೇಕು" ಎಂದು ಕಂಪನಿಯವರು ತಿಳಿಸಿದ್ದಾರೆ.

ಈಗ ಆನಂದ್ ಅಹುಜಾ ಅವರು ಆ ಟ್ವೀಟ್‌ಗೆ ಪ್ರತಿಕ್ರಿಯಿಸಿ, ಕಂಪನಿಯು ಪಿಡಿಎಫ್ ರಸೀದಿಗಳು ಮತ್ತು ಬ್ಯಾಂಕ್ ಹೇಳಿಕೆಗಳನ್ನು ಮಾನ್ಯ ಮಾಡಲು ನಿರಾಕರಿಸಿದೆ ಮತ್ತು ಅವರು ತಮ್ಮ ಸರಕುಗಳನ್ನು ಹೆಚ್ಚು ಶುಲ್ಕ ವಿಧಿಸಲು ಮತ್ತು ದೀರ್ಘಕಾಲ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು ಮತ್ತು ಅವರು ತಮ್ಮ ಈ ಖಾತೆಯನ್ನು ಮುಚ್ಚಿದರು ಎಂದು ಹೇಳಿದರು.

ಇದನ್ನೂ ಓದಿ: ಮದ್ವೆಯಾದ್ರೆ ಇವ್ರನ್ನೇ ಅಂತಿದ್ದಾರೆ ರಶ್ಮಿಕಾ.. `ಕಿರಿಕ್​ ಬ್ಯೂಟಿ’ ಮನಸ್ಸು ಗೆದ್ದ ಚೆಲುವ ಇವ್ರೇನಾ?

"ನೀವು ಮಾಡಿರುವ ಆಧಾರ ರಹಿತ ನಿಂದನೆಯನ್ನು ಒಮ್ಮೆ ನೋಡಿ, ನೀವು ಪಿಡಿಎಫ್ ರಸೀದಿಗಳನ್ನು ಮತ್ತು ಬ್ಯಾಂಕ್ ಹೇಳಿಕೆಗಳನ್ನು ಮೌಲ್ಯೀಕರಿಸಲು ನಿರಾಕರಿಸಿ, ಇದರಿಂದ ನೀವು ನನಗೆ ಹೆಚ್ಚಿನ ಶುಲ್ಕ ವಿಧಿಸಬಹುದು ಮತ್ತು ನನ್ನ ಸರಕುಗಳನ್ನು ನನಗೆ ಒದಗಿಸಲು ಹೆಚ್ಚು ಸಮಯ ಹಿಡಿದಿಟ್ಟು ಕೊಳ್ಳಬಹುದು ಎಂಬುದು ನಿಮ್ಮ ಪ್ರಯತ್ನವಾಗಿತ್ತು" ಎಂದು ಅವರು ಟ್ವೀಟ್ ಮಾಡಿದ್ದಾರೆ.
Published by:Sandhya M
First published: