Bollywood: ಅನುಷ್ಕಾ ಶರ್ಮಾ ಕೇಳಿದ 'ಆ' ಪ್ರಶ್ನೆಗೆ ಉತ್ತರಿಸಿದ ಸೋನಂ ಕಪೂರ್​! ನಾನು ನೋ ಅನ್ನಲ್ಲ ಅಂದಿದ್ಯಾಕೆ?

ಅನುಷ್ಕಾ ಶರ್ಮಾ (Anushka Sharma) ಅವರ ಇನ್‌ಸ್ಟಾಗ್ರಾಮ್ (Instagram) ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸೋನಂ ಕಪೂರ್, ನಾನು ನನ್ನ ಮಗುವಿಗೆ ಎಲ್ಲದಕ್ಕೂ ಹೌದು ಎನ್ನುವ ತಾಯಿ (Mother) ಆಗುತ್ತೇನೆ ಎಂದು ಹೇಳಿದ್ದಾರೆ.

ಸೋನಂ ಕಫೂರ್​, ಅನುಷ್ಕಾ ಶರ್ಮಾ

ಸೋನಂ ಕಫೂರ್​, ಅನುಷ್ಕಾ ಶರ್ಮಾ

  • Share this:
ಪತಿ ಆನಂದ್ ಅಹುಜಾ (Anand Ahuja) ಅವರೊಂದಿಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ (Bollywood) ನಟಿ ಸೋನಂ ಕಪೂರ್ (Sonam Kapoor) ತಾನು ಯಾವ ರೀತಿಯ ತಾಯಿಯಾಗಲಿದ್ದೇನೆ ಎಂದು ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ (Anushka Sharma) ಅವರ ಇನ್‌ಸ್ಟಾಗ್ರಾಮ್ (Instagram) ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸೋನಂ ಕಪೂರ್, ನಾನು ನನ್ನ ಮಗುವಿಗೆ ಎಲ್ಲದಕ್ಕೂ ಹೌದು ಎನ್ನುವ ತಾಯಿ (Mother) ಆಗುತ್ತೇನೆ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ದಿನಕ್ಕೆ ಎಷ್ಟು ಬಾರಿ ಪೋಷಕರು ತಮ್ಮ ಮಕ್ಕಳಿಗೆ ‘ನೋ’(ಇಲ್ಲ) ಎಂದು ಹೇಳುತ್ತಾರೆ ಎಂಬುವುದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಕುತೂಹಲವಿದೆ.

ಮೊಬೈಲ್, ಟಿವಿ, ಊಟದ ಆಯ್ಕೆಯಿಂದ ಹಿಡಿದು ಆಟಿಕೆಗಳಲ್ಲಿನ ಕೆಮಿಕಲ್ ಸೇರಿ ಇನ್ನೂ ಅಂತ್ಯವಿಲ್ಲದ ಪಟ್ಟಿಯೇ ಇದೆ. ಮಕ್ಕಳಿಗೆ ಅದನ್ನು ಮಾಡಬೇಡ, ಇದನ್ನು ಮಾಡಬೇಡ, ನೋ ಎಂದು ಗದರುವ ಪೋಷಕರೇ, ನೀವು ಅಥವಾ ಎಲ್ಲದಕ್ಕೂ ಅನುಮತಿ ನೀಡುವ, ಮಕ್ಕಳಿಗೆ ಇಲ್ಲಾ ಎನ್ನದೇ ಅರ್ಥ ಮಾಡಿಸಿ ಹೌದು ಎನ್ನುವ ಪೋಷಕರೇ ನೀವು ಎಂಬುವ ಪ್ರಶ್ನೆಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು.

ಅನುಷ್ಕಾ ಶರ್ಮಾ ಪೋಸ್ಟ್​ಗೆ ಸೋನಂ ರಿಪ್ಲೈ!

ಅನುಷ್ಕಾ ಶರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಸೋನಂ ಕಪೂರ್ "ನಾನು ಹೌದು ಎನ್ನುವ ತಾಯಿಯಾಗಲಿದ್ದೇನೆ ಎಂದು ನಾನು ಭಾವಿಸುತ್ತೇನೆ” ಎಂದು ಉತ್ತರಿಸುವ ಮೂಲಕ ಯಾವ ರೀತಿ ಮಾದರಿ ತಾಯಿ ಆಗಲು ಬಯಸುತ್ತಿದ್ದಾರೆ ಎಂಬುವುದನ್ನು ಬಹಿರಂಗಪಡಿಸಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸೋನಂ ಕಪೂರ್​!

ಈ ವರ್ಷ ಮಾರ್ಚ್‌ನಲ್ಲಿ ಸೋನಂ ಮತ್ತು ಆನಂದ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಖುಷಿ ಬಗ್ಗೆ ಘೋಷಿಸಿದ್ದರು. “ನಾಲ್ಕು ಕೈಗಳು, ಎರಡು ಹೃದಯ, ಒಂದು ಕುಟುಂಬ. ನಾವು ನಿನ್ನನ್ನು ಸಾಧ್ಯವಾದಷ್ಟು ಉತ್ತಮವಾಗಿ ಬೆಳೆಸಲು ಇಷ್ಟಪಡುತ್ತೇವೆ. ನಿನ್ನ ಪ್ರತಿ ಹೆಜ್ಜೆಯಲ್ಲೂ ನಾವಿರುತ್ತೇವೆ. ಪ್ರೀತಿ ಮತ್ತು ಬೆಂಬಲ ಸದಾ ನಿನ್ನೊಂದಿಗಿರುತ್ತದೆ. ನಿನ್ನ ಆಗಮನಕ್ಕೆ ಕಾಯುತ್ತಿದ್ದೇವೆ’ ಎಂದು ನಟಿ ಸೋನಂ ಕಪೂರ್ ತಮ್ಮ ಪತಿ ಆನಂದ್ ಅಹುಜಾ ಅವರ ಮಡಿಲಲ್ಲಿ ಮಲಗಿರುವ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಾಯಿಯಾಗುತ್ತಿರುವ ವಿಚಾರವನ್ನು ಹೇಳಿಕೊಂಡಿದ್ದರು.

ಸೋನಂ ಕಪೂರ್​ ರಿಪ್ಲೈ


ಇದನ್ನೂ ಓದಿ: ಅಯ್ಯೋ ಶಿವನೇ, ಏರ್​ಪೋರ್ಟ್​ನಲ್ಲಿ ಇದ್ಯಾಕ್​ ಹಿಂಗ್​ ಓಡ್ತಿದ್ದಾರೆ ಆಲಿಯಾ ಭಟ್​!

"ಅಜ್ಜನಾಗಲು ತಯಾರಿ ನಡೆಸುತ್ತಿದ್ದೇನೆ"

ಮಗಳು ತಾಯಿಯಾಗುತ್ತಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದ ಅನಿಲ್ ಕಪೂರ್ ಅಜ್ಜನಾಗುವ ತನ್ನ ಜೀವನದ ಅತ್ಯಂತ ರೋಮಾಂಚಕಾರಿ ಪಾತ್ರಕ್ಕಾಗಿ ನಾನು ತಯಾರಿ ನಡೆಸುತ್ತಿದ್ದೇನೆ. ತನ್ನ ಮಗಳು ಸೋನಂ ಪರಿಪೂರ್ಣ ತಾಯಿ ಮಾತ್ರವಲ್ಲದೆ, ಕೆಲಸ ಮಾಡುವ ತಾಯಿ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ಸುನೀತಾ ಕಪೂರ್, ಕವಿತಾ ಭಂಭಾನಿ ಸಿಂಘಾ ಮತ್ತು ಸೋನಂ ಅವರ ತಾಯಿಯ ಅಜ್ಜಿಯ ಉದಾಹರಣೆಗಳನ್ನು ನೀಡಿದ ಅನಿಲ್, ತಮ್ಮ ಮಗಳು ತನ್ನ ಹೆರಿಗೆಯ ನಂತರ ಕೆಲಸಕ್ಕೆ ಮರಳುತ್ತಾಳೆ ಎಂದು ಹೇಳಿದ್ದರು.

ಇದನ್ನೂ ಓದಿ: ವ್ಹಾ, ಕಿಲ್ಲರ್​​ ಲುಕ್ ಗುರೂ! ಮುಂದಿನ ಸಿನಿಮಾಗಾಗಿ ಅಜಿತ್​ ಕಸರತ್ತು ಜೋರು

“ಅವರೆಲ್ಲರೂ ಯಾವಾಗಲೂ ತಮ್ಮ ಜೀವನದುದ್ದಕ್ಕೂ ಕೆಲಸ ಮಾಡಿದ್ದಾರೆ. ನನ್ನ ಹೆಂಡತಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಳು. ಸೋನಂ ಅವರ ಮಾಸಿ ಅತ್ಯುತ್ತಮ ಇಂಟೀರಿಯರ್ ಡೆಕೋರೇಟರ್‌ ಮತ್ತು ನನ್ನ ಅತ್ತೆ ಕೂಡ ಸಾಕಷ್ಟು ಕೆಲಸ ಮಾಡುತ್ತಿದ್ದರು. ಸೋನಮ್ ಕೂಡ ಕೆಲಸ ಮಾಡಲು ಇಷ್ಟಪಡುತ್ತಾಳೆ ಮತ್ತು ಅವರು ತುಂಬಾ ಭಾವೋದ್ರಿಕ್ತ ನಟಿ, ಭಾವೋದ್ರಿಕ್ತ ಹೆಂಡತಿ ಮತ್ತು ಮಗಳು ಹಾಗೂ ಭಾವೋದ್ರಿಕ್ತ ತಾಯಿಯಾಗುತ್ತಾರೆ, ”ಎಂದು ಮಗಳ ಬಗ್ಗೆ ಅಪ್ಪ ಅನಿಲ್ ಕಪೂರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸೋನಂ ಕಪೂರ್ ಪ್ರೆಗ್ನೆನ್ಸಿ ಫೋಟೋಶೂಟ್

ಸೋನಂ ಕಪೂರ್ ಅವರು ಉದ್ಯಮಿ ಆನಂದ್ ಅಹುಜಾ ಅವರನ್ನು ಮೇ 8, 2018ರಂದು ಮುಂಬೈನಲ್ಲಿ ವಿವಾಹವಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ನಂತರ ತಾಯಿಯಾಗುತ್ತಿರುವ ಸೋನಂ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಈ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್ ಕೂಡ ಆಗಿದ್ದವು. ಬಿಳಿ ಬಣ್ಣದ ಸೀರೆಯುಟ್ಟು, ಕೆಲವು ಒಡವೆಗಳನ್ನು ಧರಿಸಿ ವಿಭಿನ್ನವಾಗಿ ಸೋನಂ ತನ್ನ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಹ ತಮ್ಮ ಬಂಪ್ ಫೋಟೋವನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ.
Published by:Vasudeva M
First published: